AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ದೇಶಗಳ ಗೂಗಲ್ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಚಕಾರ; ವಾಲಂಟರಿ ಎಕ್ಸಿಟ್ ಆಫರ್​ನ ಸಂಕಟ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿರುವ ಗೂಗಲ್, ತನ್ನ ವೆಚ್ಚ ನಿಯಂತ್ರಣದ ಭಾಗವಾಗಿ ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಉದ್ಯೋಗಿಗಳಿಗೆ ವಾಲಂಟರಿ ಎಕ್ಸಿಟ್ ಆಫರ್ ಅನ್ನು ವಿಸ್ತರಿಸಿದೆ. ಅಮೆರಿಕ ಮತ್ತು ಬ್ರಿಟನ್​ನಲ್ಲಿರುವ ಗೂಗಲ್ ಉದ್ಯೋಗಿಗಳಿಗೆ ಈಗಾಗಲೇ ಈ ಸ್ವಯಂಪ್ರೇರಿತ ರಾಜೀನಾಮೆ ಸ್ಕೀಮ್ ಜಾರಿಯಲ್ಲಿದೆ.

ಐದು ದೇಶಗಳ ಗೂಗಲ್ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಚಕಾರ; ವಾಲಂಟರಿ ಎಕ್ಸಿಟ್ ಆಫರ್​ನ ಸಂಕಟ
ಗೂಗಲ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2026 | 12:09 PM

Share

ನವದೆಹಲಿ, ನವೆಂಬರ್ 5: ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್ 60,000 ಉದ್ಯೋಗಿಗಳನ್ನು ಲೇ ಆಫ್ ಮಾಡುವ ಆಘಾತಕಾರಿ ಯೋಜನೆ ಪ್ರಕಟಿಸಿರುವ ಬೆನ್ನಲ್ಲೇ ಗೂಗಲ್ ಐದು ದೇಶಗಳಲ್ಲಿ ಉದ್ಯೋಗಕಡಿತ ಕಾರ್ಯಕ್ಕೆ ಕೈಹಾಕುತ್ತಿರುವುದಾಗಿ ತಿಳಿಸಿದೆ. ಗೂಗಲ್ ಈಗ ವಾಲಂಟರಿ ಎಕ್ಸಿಟ್ ಆಯ್ಕೆ ಮೂಲಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಕೆಲಸ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ (AI) ರಂಗದಲ್ಲಿನ ತೀವ್ರ ಸ್ಪರ್ಧೆ ಮತ್ತು ಮೂಲಭೂತ ಸೌಕರ್ಯಗಳಿಗೆ ಭಾರಿ ಪ್ರಮಾಣದ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗೂಗಲ್‌ನ ಮಾತೃ ಸಂಸ್ಥೆಯಾದ ಆಲ್ಫಾಬೆಟ್ (Alphabet) ವೆಚ್ಚ ಕಡಿತಕ್ಕೆ ಮುಂದಾಗಿದೆ. ಇದರ ಭಾಗವಾಗಿ ಕಂಪನಿಯು 5 ಪ್ರಮುಖ ದೇಶಗಳಲ್ಲಿನ ತನ್ನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ರಾಜೀನಾಮೆ/ನಿವೃತ್ತಿ (Voluntary Buyout/Exit) ಆಫರ್‌ಗಳನ್ನು ವಿಸ್ತರಿಸಿದೆ.

ಅಮೆರಿಕ ಮತ್ತು ಯುಕೆ ದೇಶಗಳಲ್ಲಿನ ತನ್ನ ಉದ್ಯೋಗಿಗಳಿಗೆ ವಾಲಂಟರಿ ಎಕ್ಸಿಟ್ ಆಫರ್ ನೀಡಲಾಗಿದೆ. ಗೂಗಲ್ ಈಗ ಈ ಆಫರ್ ಅನ್ನು ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಸ್ವಿಟ್ಜರ್‌ಲ್ಯಾಂಡ್ ದೇಶಗಳಲ್ಲಿರುವ ತನ್ನ ಉದ್ಯೋಗಿಗಳಿಗೆ ವಿಸ್ತರಿಸಿದೆ. ಆದರೆ, ಒಟ್ಟು ಎಷ್ಟು ಉದ್ಯೋಗಿಗಳನ್ನು ಗುರಿ ಮಾಡಲಾಗಿದೆ ಎಂಬ ಮಾಹಿತಿ ಗೊತ್ತಾಗಿಲ್ಲ.

ಇದನ್ನೂ ಓದಿ: Amazon Layoffs: ಮೈಕ್ರೋಸಾಫ್ಟ್​ನಲ್ಲಿ ಬ್ಲಡ್​ಬಾತ್; ಇನ್ನೋಡಾಟಾ ಬಳಿಕ ಅಮೇಜಾನ್​ನಲ್ಲಿ ದಿಢೀರ್ ಲೇ ಆಫ್; ಕಂಗಾಲಾದ ಟೆಕ್ಕಿಗಳು

ಹೊರಹೋಗುವ ಉದ್ಯೋಗಿಗಳಿಗೆ 12 ತಿಂಗಳವರೆಗೂ ವೇತನದ ಪರಿಹಾರ

ಈ ಆಫರ್ ಅನ್ನು ಸ್ವೀಕರಿಸುವ ಉದ್ಯೋಗಿಗಳಿಗೆ, ಅವರು ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ 1 ತಿಂಗಳ ವೇತನದಂತೆ (ಗರಿಷ್ಠ 12 ತಿಂಗಳ ವೇತನದ ಮಿತಿಯೊಂದಿಗೆ) ಪರಿಹಾರ ನೀಡಲು ನಿರ್ಧರಿಸಲಾಗಿದೆ. ಅಂದರೆ, ಐದು ವರ್ಷ ಕೆಲಸ ಮಾಡಿದವರಿಗೆ 5 ತಿಂಗಳ ವೇತನ ಪರಿಹಾರ ಸಿಗುತ್ತದೆ. 12 ವರ್ಷ ಕೆಲಸ ಮಾಡಿದವರಿಗೆ 12 ತಿಂಗಳ ವೇತನ ಸಿಗುತ್ತದೆ. 13 ವರ್ಷ ಕೆಲಸ ಮಾಡಿದವರಿಗೆ 12 ತಿಂಗಳ ವೇತನವಷ್ಟೇ ಸಿಗುತ್ತದೆ.

ಪ್ರಮುಖ ವಿಭಾಗಗಳಿಗೆ ವಿನಾಯಿತಿ: ಗೂಗಲ್‌ನ ಅತ್ಯಂತ ಪ್ರಮುಖ ಆದ್ಯತೆಯ ವಿಭಾಗಗಳಾದ ಗೂಗಲ್ ಕ್ಲೌಡ್ (Google Cloud) ಮತ್ತು ಆಲ್ಫಾಬೆಟ್ ಡೀಪ್‌ಮೈಂಡ್ (DeepMind) ವಿಭಾಗಗಳ ಉದ್ಯೋಗಿಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.

ಇದನ್ನೂ ಓದಿ: ಕ್ಯಾನ್ವಾ ಸಂಸ್ಥೆಯಿಂದ ಭಾರೀ ಉದ್ಯೋಗ ಕಡಿತ; ಶೇ. 22ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ

ಎಐ ಹಾರ್ಡ್‌ವೇರ್, ಡೇಟಾ ಸೆಂಟರ್‌ಗಳು ಹಾಗೂ ಸಂಶೋಧನೆಗಳಿಗೆ ಬಿಲಿಯನ್‌ಗಟ್ಟಲೆ ಡಾಲರ್ ವೆಚ್ಚ ಮಾಡಬೇಕಿರುವುದರಿಂದ, ಇತರ ವಿಭಾಗಗಳಲ್ಲಿನ ಸಿಬ್ಬಂದಿ ವೆಚ್ಚವನ್ನು ಸರಳಗೊಳಿಸಿ ಸಂಪನ್ಮೂಲಗಳನ್ನು ಎಐ ವಲಯಕ್ಕೆ ಮರುಹಂಚಿಕೆ ಮಾಡುವುದು ಗೂಗಲ್‌ನ ಮುಖ್ಯ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More