AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google I/O 2023: ಇಂದು ಗೂಗಲ್ ವಾರ್ಷಿಕ ಸಮ್ಮೇಳನ: ಪಿಕ್ಸೆಲ್ 7a, ಪಿಕ್ಸೆಲ್ ಫೋಲ್ಡ್ ಬಿಡುಗಡೆ ಸಾಧ್ಯತೆ: ಲೈವ್ ವೀಕ್ಷಿಸುವುದು ಹೇಗೆ?

Google I/O 2023 ಈವೆಂಟ್ ಅನ್ನು ಗೂಗಲ್ ಕಂಪನಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಗೂಗಲ್​ನ ಇತರ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಸ್ಟ್ರೀಮ್ ಸಹ ಲಭ್ಯವಿರುತ್ತದೆ. Google I/O 2023 ಈವೆಂಟ್ ಅನ್ನು ಗೂಗಲ್ ಕಂಪನಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಗೂಗಲ್​ನ ಇತರ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಸ್ಟ್ರೀಮ್ ಸಹ ಲಭ್ಯವಿರುತ್ತದೆ.

Google I/O 2023: ಇಂದು ಗೂಗಲ್ ವಾರ್ಷಿಕ ಸಮ್ಮೇಳನ: ಪಿಕ್ಸೆಲ್ 7a, ಪಿಕ್ಸೆಲ್ ಫೋಲ್ಡ್ ಬಿಡುಗಡೆ ಸಾಧ್ಯತೆ: ಲೈವ್ ವೀಕ್ಷಿಸುವುದು ಹೇಗೆ?
Google IO 2023
Vinay Bhat
| Edited By: |

Updated on:Oct 13, 2026 | 5:03 PM

Share

ಮುಖ್ಯಾಂಶಗಳು

  • ಇಂದು ಗೂಗಲ್ ವಾರ್ಷಿಕ ಸಮ್ಮೇಳನ
  • ಪಿಕ್ಸೆಲ್ 7a, ಪಿಕ್ಸೆಲ್ ಫೋಲ್ಡ್ ಬಿಡುಗಡೆ ಸಾಧ್ಯತೆ
  • AI ಗೆ ಸಂಬಂಧಿಸಿದ ಬಗ್ಗೆ ಕೆಲವು ಮಾಹಿತಿ ಹೊರಬೀಳುಬಹುದು

ಗೂಗಲ್​ನ (Google) ವಾರ್ಷಿಕ ಡೆವಲಪರ್ ಸಮ್ಮೇಳನ, Google I/O 2023 ಇಂದು (ಮೇ. 10) ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿರುವ ಶೋರ್‌ಲೈನ್ ಆಂಫಿಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ. ಕೋವಿಡ್-19 ಬಳಿಕ ಆಯೋಜಿಸುತ್ತಿರುವ ಮೊದಲ I/O ಇದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಮಾರಂಭದಲ್ಲಿ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 7a (Pixel 7a), ಗೂಗಲ್ ಪಿಕ್ಸೆಲ್ ಫೋಲ್ಡ್ (Pixel Fold) ಸ್ಮಾರ್ಟ್​ಫೋನ್ ಬಿಡುಗಡೆ ಆಗಲಿದೆ. ಇದರ ಜೊತೆಗೆ AI ಗೆ ಸಂಬಂಧಿಸಿದ ಬಗ್ಗೆ ಕೆಲವು ಮಾಹಿತಿ ಹೊರಬೀಳುವ ಸಂಭವವಿದೆ.

Google I/O 2023 ಈವೆಂಟ್ ಅನ್ನು ಗೂಗಲ್ ಕಂಪನಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಗೂಗಲ್​ನ ಇತರ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಸ್ಟ್ರೀಮ್ ಸಹ ಲಭ್ಯವಿರುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಈ ಕಾರ್ಯಕ್ರಮ ರಾತ್ರಿ 10:30ಕ್ಕೆ ಆರಂಭವಾಗಲಿದೆ. ಈ ಸಮಾರಂಭದಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನ ಹೊಸ ಆವೃತ್ತಿಯನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಕಂಪನಿಯು ಈಗಾಗಲೇ ಆಂಡ್ರಾಯ್ಡ್ 14 ರ ಡೆವಲಪರ್ ಹೊರತಂದಿದೆ, ಆದರೆ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.

ಇನ್ನು ಸಾಕಷ್ಟು ರೋಚಕತೆ ಸೃಷ್ಟಿಸಿರುವ ಗೂಗಲ್​ನ ಚೊಚ್ಚಲ ಮಡಚುವ ಫೋನ್ ಪಿಕ್ಸೆಲ್ ಫೋಲ್ಡ್ ಮಾರುಕಟ್ಟೆಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. ಆದರೆ, ಕಂಪನಿ ಈ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಮೂಲಗಳ ಪ್ರಕಾರ ಈ ಸ್ಮಾರ್ಟ್‌ಫೋನ್ 7.6-ಇಂಚಿನ ಪ್ರಾಥಮಿಕ ಡಿಸ್ ಪ್ಲೇ ಮತ್ತು 5.8-ಇಂಚಿನ ಕವರ್ ಡಿಸ್ ಪ್ಲೇಯೊಂದಿಗೆ ಅನಾವರಣಗೊಳ್ಳುವ ನಿರೀಕ್ಷೆಯಿದೆ.

ಇದರ ಜೊತೆಗೆ ಗೂಗಲ್‌ ಪಿಕ್ಸೆಲ್‌ 7 ಸರಣಿಯ ಮುಂದುವರೆದ ಭಾಗವಾಗಿ ಪಿಕ್ಸೆಲ್ 7a ಫೋನ್ ಇಂದು ರಿಲೀಸ್ ಆಗಲಿದೆ. ಭಾರತದಲ್ಲಿ ಇದರ ಬೆಲೆ 46,000 ರೂ. ಇರಬಹುದು ಎಂದು ಹೇಳಲಾಗಿದೆ. ಲೀಕ್‌ ಆಗಿರುವ ಮಾಹಿತಿ ಪ್ರಕಾರ ಈ ಫೋನ್‌ 6.1 ಇಂಚಿನ FHC+ ಡಿಸ್‌ಪ್ಲೇ ಜೊತೆಗೆ, 90hz OLED ಡಿಸ್‌ಪ್ಲೇ ಹೊಂದಿರಲಿದೆ. ಟೆನ್ಸರ್ G2 ಚಿಪ್‌ಸೆಟ್‌ನಲ್ಲೇ ಕಾರ್ಯನಿರ್ವಹಿಸುವಸ ಸಾಧ್ಯತೆ ಇದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ 64 ಮೆಗಾ ಪಿಕ್ಸೆಲ್​ನ ಸೋನಿ IMX787 ಸೆನ್ಸರ್‌ ಹಾಗೂ 12 ಮೆಗಾ ಪಿಕ್ಸೆಲ್​ನ ಸೆಕೆಂಡರಿ ಸೆನ್ಸರ್​ನೊಂದಿಗೆ ರಿಯರ್‌ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿರಲಿದೆ. ಇದರ ಜೊತೆಗೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10.8MP ಕ್ಯಾಮೆರಾ ಆಯ್ಕೆ ಹೊಂದಿರುವುದು ಬಹುತೇಕ ಖಚಿತವಂತೆ. ಈ ಕ್ಯಾಮೆರಾಗಳು ಅನೇಕ ಆಯ್ಕೆಗಳನ್ನ ಹೊಂದಿದೆ. 4,335mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಆಗಬಹುದು. 5W ವಾಯರ್‌ಲೆಸ್‌ ಚಾರ್ಜಿಂಗ್ ಬೆಂಬಲ ಪಡೆದಿರಬಹುದು. ಇದರ ಜೊತೆಗೆ ಟ್ರೀಮ್ ಬ್ಯಾಟರಿ ಸೇವರ್ ಮೋಡ್ ಎಂಬ ವಿಶೇಷ ಆಯ್ಕೆಯನ್ನು ಅಳವಡಿಸಲಾಗಿದೆ ಎಂಬ ಸುದ್ದಿಯಿದೆ.

Published On - 11:41 am, Wed, 10 May 23

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More