ನಾಲ್ಕು ಸರ್ಕಾರಿ ಬ್ಯಾಂಕುಗಳಲ್ಲಿ ಕೆಲ ಪಾಲನ್ನು ಮಾರಲಿರುವ ಸರ್ಕಾರ; ಸೆಬಿ ನಿಯಮ ಕಾರಣ

|

Updated on: Nov 19, 2024 | 6:03 PM

Govt stakes to sold through OFS: ನಾಲ್ಕು ಸರ್ಕಾರಿ ಬ್ಯಾಂಕುಗಳಲ್ಲಿ ತಾನು ಹೊಂದಿರುವ ಕೆಲ ಷೇರುಪಾಲನ್ನು ಸರ್ಕಾರ ಮಾರುತ್ತಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಮತ್ತು ಪಂಜಾಬ್ ಅಂಡ್ ಸಿಂದ್ ಬ್ಯಾಂಕುಗಳಲ್ಲಿ ಸರ್ಕಾರದ ಸಾಕಷ್ಟು ಷೇರುಗಳು ಬಿಕರಿಯಾಗಲಿವೆ. ಲಿಸ್ಟೆಡ್ ಕಂಪನಿಗಳು ಕನಿಷ್ಠ ಶೇ. 25ರಷ್ಟಾದರೂ ಪಬ್ಲಿಕ್ ಶೇರ್​ಹೋಲ್ಡಿಂಗ್ ಹೊಂದಿರಬೇಕು ಎನ್ನುವ ಸೆಬಿ ನಿಯಮ ಇದಕ್ಕೆ ಕಾರಣವಾಗಿದೆ.

ನಾಲ್ಕು ಸರ್ಕಾರಿ ಬ್ಯಾಂಕುಗಳಲ್ಲಿ ಕೆಲ ಪಾಲನ್ನು ಮಾರಲಿರುವ ಸರ್ಕಾರ; ಸೆಬಿ ನಿಯಮ ಕಾರಣ
ಷೇರು
Follow us on

ನವದೆಹಲಿ, ನವೆಂಬರ್ 19: ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕುಗಳಲ್ಲಿ ಸರ್ಕಾರ ಹೊಂದಿರುವ ಕೆಲ ಷೇರುಪಾಲನ್ನು ಮಾರಲಾಗುತ್ತಿದೆ. ಸೆಬಿ ರೂಪಿಸಿರುವ ಪಬ್ಲಿಕ್ ಷೇರ್​ಹೋಲ್ಡಿಂಗ್ ನಿಯಮದಿಂದಾಗಿ ಸರ್ಕಾರವು ಈ ನಾಲ್ಕು ಬ್ಯಾಂಕುಗಳಲ್ಲಿರುವ ತನ್ನ ಪಾಲಿನ ಕೆಲ ಷೇರುಗಳನ್ನು ಮಾರುವುದು ಅನಿವಾರ್ಯ ಎನ್ನಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್​ಸೀಸ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಪಂಜಾಬ್ ಅಂಡ್ ಸಿಂದ್ ಬ್ಯಾಂಕ್​ನಲ್ಲಿ ಸರ್ಕಾರ ತನ್ನ ಕೆಲ ಷೇರುಗಳನ್ನು ಸಾರ್ವಜನಿಕರಿಗೆ ಆಫರ್ ಫಾರ್ ಸೇಲ್ (ಒಎಫ್​ಎಸ್) ಮೂಲಕ ಮಾರಲಿದೆ.

ಏನಿದು ಸೆಬಿಯ ಪಬ್ಲಿಕ್ ಶೇರ್​ಹೋಲ್ಡಿಂಗ್ ನಿಯಮ?

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ಕನಿಷ್ಠ ಶೇ. 25ರಷ್ಟು ಪಬ್ಲಿಕ್ ಶೇರ್​ಹೋಲ್ಡಿಂಗ್ ಹೊಂದಿರಬೇಕು. ಅಂದರೆ, ಕಂಪನಿಯ ಶೇ. 25ರಷ್ಟಾದರೂ ಷೇರುಗಳನ್ನು ಸಾರ್ವಜನಿಕರು (ಮಾಲೀಕರಲ್ಲದವರು) ಹೊಂದಿರಬೇಕು ಎನ್ನುತ್ತದೆ ಈ ಸೆಬಿ ನಿಯಮ.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿಟ್ 2024: ನಿಪುಣ ಕರ್ನಾಟಕ ಯೋಜನೆಗೆ ಕೈಜೋಡಿಸಿದ ಟೆಕ್ ಕಂಪನಿಗಳು; ಮೈಕ್ರೋಸಾಫ್ಟ್, ಇಂಟೆಲ್, ಐಬಿಎಂನಿಂದ 1 ಲಕ್ಷ ಯುವಕರಿಗೆ ತರಬೇತಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸರ್ಕಾರ ಶೇ. 93ರಷ್ಟು ಷೇರುಪಾಲು ಹೊಂದಿದೆ. ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನಲ್ಲಿ ಶೇ. 96.4, ಯುಕೋ ಬ್ಯಾಂಕ್​ನಲ್ಲಿ ಶೇ. 95.4, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್​ನಲ್ಲಿ ಶೇ. 98.3ರಷ್ಟು ಷೇರುಪಾಲು ಸರ್ಕಾರದ್ದಾಗಿದೆ.

ಷೇರು ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾದ ಸೆಬಿ ಈ ಪಬ್ಲಿಕ್ ಶೇರ್​ಹೋಲ್ಡಿಂಗ್ ನಿಯಮದಲ್ಲಿ ಸರ್ಕಾರಕ್ಕೆ 2026ರ ಆಗಸ್ಟ್​ವರೆಗೂ ವಿನಾಯಿತಿ ಕೊಟ್ಟಿದೆ. ಅಂದರೆ, 2026ರ ಆಗಸ್ಟ್ ನಂತರ ಯಾವ ಲಿಸ್ಟೆಡ್ ಸರ್ಕಾರಿ ಕಂಪನಿಗಳಲ್ಲಿ ಸರ್ಕಾರ ಶೇ. 75ಕ್ಕಿಂತ ಹೆಚ್ಚು ಷೇರುಪಾಲು ಹೊಂದಿರಲು ಆಗುವುದಿಲ್ಲ.

ಇದನ್ನೂ ಓದಿ: ಕೆನಡಾದಲ್ಲಿ ಭಾರತ ಹಾಗೂ ಇತರ ವಿದೇಶೀ ವಿದ್ಯಾರ್ಥಿಗಳಿಗೆ ಕೆಲಸದ ಮಿತಿ 24 ಗಂಟೆಗಳಿಗೆ ಏರಿಕೆ

ಈ ಪ್ರಕ್ರಿಯೆ ಆರಂಭಿಸಲು ಹಣಕಾಸು ಸಚಿವಾಲಯವು ಮುಂಬರುವ ದಿನಗಳಲ್ಲಿ ಸಂಪುಟದ ಅನುಮೋದನೆಗೆ ಪ್ರಯತ್ನಿಸಬಹುದು ಎಂದು ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ