ಕೆನಡಾದಲ್ಲಿ ಭಾರತ ಹಾಗೂ ಇತರ ವಿದೇಶೀ ವಿದ್ಯಾರ್ಥಿಗಳಿಗೆ ಕೆಲಸದ ಮಿತಿ 24 ಗಂಟೆಗಳಿಗೆ ಏರಿಕೆ
Canada work hours limit for international students: ಕೆನಡಾದಲ್ಲಿ ಓದುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಕ್ಯಾಂಪಸ್ ಆಚೆ ಮಾಡುವ ಕೆಲಸದ ಅವಧಿಯ ಮಿತಿಯನ್ನು 20ರಿಂದ 24 ಗಂಟೆಗೆ ಅಲ್ಲಿನ ಸರ್ಕಾರ ಹೆಚ್ಚಿಸಿದೆ. ಕೆನಡಾದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಭಾರತೀಯರೇ ಅಗಿದ್ದಾರೆ. ಆಫ್ ಕ್ಯಾಂಪಸ್ ಕೆಲಸದಿಂದ ವಿದ್ಯಾರ್ಥಿಗಳು ಓದುವುದರ ಜೊತೆಜೊತೆಗೆ ಕೆಲಸದ ಅನುಭವವನ್ನೂ ಪಡೆಯಬಹುದು.
ನವದೆಹಲಿ, ನವೆಂಬರ್ 19: ಓದಲು ಕೆನಡಾಗೆ ಹೋದ ಭಾರತೀಯರು ಹಾಗೂ ಇತರ ವಿದೇಶೀ ವಿದ್ಯಾರ್ಥಿಗಳಿಗೆ ಅನುಕೂಲ ತರುವಂತಹ ಒಂದು ನಿಯಮವನ್ನು ಕೆನಡಾ ಸರ್ಕಾರ ಅಪ್ಡೇಟ್ ಮಾಡಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಕ್ಯಾಂಪಸ್ ಆಚೆ ಮಾಡಬಹುದಾದ ಕೆಲಸದ ಮಿತಿಯನ್ನು ವಾರಕ್ಕೆ 20 ಗಂಟೆಯಿಂದ 24 ಗಂಟೆಗೆ ಏರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಓದುವುದರ ಜೊತೆಜೊತೆಗೆ ಹೆಚ್ಚು ಅವಧಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಓದುವುದರ ಜೊತೆಗೆ ಕೆಲಸದ ಅನುಭವವೂ ಸಿಗುತ್ತದೆ.
‘ವಿದ್ಯಾರ್ಥಿಗಳು ಓದುವುದರತ್ತ ಗಮನ ಹರಿಸಲು ಮತ್ತು ಕೆಲಸದ ಅನುಭವ ಪಡೆಯಲು ಎರಡರ ನಡುವೆ ಸಮತೋಲನ ತರುವ ರೀತಿಯಲ್ಲಿ ನಿಯಮ ಬದಲಿಸಲಾಗಿದೆ’ ಎಂದು ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಖಾತೆ ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ.
ಇದನ್ನೂ ಓದಿ: ಚಿಪ್ ತಯಾರಿಕೆಯಲ್ಲಿ ರಾಸಾಯನಿಕ, ಖನಿಜ, ಅನಿಲಗಳ ಬಳಕೆ; ಭಾರತಕ್ಕೆ ಭರ್ಜರಿ ಅವಕಾಶ
ಕೆನಡಾದಲ್ಲಿ ಉದ್ಯೋಗ ಮಾಡಲು ಪ್ರತ್ಯೇಕವಾಗಿ ವರ್ಕ್ ಪರ್ಮಿಟ್ ಪಡೆಯಬೇಕು. ಸ್ಟುಡೆಂಟ್ ವೀಸಾದಲ್ಲಿ ಓದವರೆಲ್ಲರಿಗೂ ವರ್ಕ್ ಪರ್ಮಿಟ್ ಸಿಗುವುದಿಲ್ಲ. ಓದುವುದರ ಜೊತೆ ಜೊತೆಗೆ ಕ್ಯಾಂಪಸ್ ಆಚೆ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಇರುವುದಿಲ್ಲ. ಯಾರಿಗೆ ಈ ಅವಕಾಶ ಇದೆ ಎನ್ನುವ ವಿವರ ಇಲ್ಲಿದೆ:
- ನಿಗದಿತ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣಾವಧಿ ಕೋರ್ಸ್ಗೆ ಎನ್ರೋಲ್ ಆಗಿರಬೇಕು.
- ಪದವಿ, ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್ ಇತ್ಯಾದಿಗೆ ಪೂರಕವಾಗಿರುವ ಮತ್ತು ಕನಿಷ್ಠ 6 ತಿಂಗಳ ಅವಧಿ ಇರುವ ಸ್ಟಡಿ ಪ್ರೋಗ್ರಾಮ್ಗೆ ಸೇರಿರಬೇಕು.
- ಸ್ಟಡಿ ಪರ್ಮಿಟ್ನ ನಿಯಮವು ಆಫ್-ಕ್ಯಾಂಪಸ್ ವರ್ಕ್ಗೆ ಅವಕಾಶ ನೀಡಬೇಕು.
- ವಿದ್ಯಾರ್ಥಿಗಳು ಓದಿನ ಹೊರಗೆ ಕೆಲಸ ಆರಂಭಿಸುವ ಮುನ್ನ ಸೋಷಿಯಲ್ ಇನ್ಷೂರೆನ್ಸ್ ನಂಬರ್ಗೆ ಅರ್ಜಿ ಹಾಕಿ ಪರ್ಮಿಟ್ ಪಡೆಯಬೇಕು.
ಈ ಮೇಲಿನ ನಿಯಮಗಳನ್ನು ಪಾಲಿಸದೇ ಇದ್ದರೆ ಆಗ ಕ್ಯಾಂಪಸ್ ಆಚೆ ವಿದ್ಯಾರ್ಥಿಗಳು ಕೆಲಸ ಮಾಡಲು ಅವಕಾಶ ಇರುವುದಿಲ್ಲ. ಸಾಮಾನ್ಯ ವಿಷಯದ ಕೋರ್ಸ್ ಮಾಡುತ್ತಿರುವವರು, ಇಂಗ್ಲೀಷ್ ಅಥವಾ ಫ್ರೆಂಚ್ ಅನ್ನು ಸೆಕೆಂಡ್ ಲ್ಯಾಂಗ್ವೇಜ್ ಆಗಿ ತೆಗೆದುಕೊಂಡ ಕೋರ್ಸ್ ಅನ್ನು ಓದುತ್ತಿರುವವರಿಗೆ ಕೆಲಸದ ಪರ್ಮಿಟ್ ಇರುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ