AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಪ್ ತಯಾರಿಕೆಯಲ್ಲಿ ರಾಸಾಯನಿಕ, ಖನಿಜ, ಅನಿಲಗಳ ಬಳಕೆ; ಭಾರತಕ್ಕೆ ಭರ್ಜರಿ ಅವಕಾಶ

India and Semiconductor industry: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಾಕಷ್ಟು ಸಂಕೀರ್ಣವಾದ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆ ಇದೆ. ಚಿಪ್ ತಯಾರಿಕೆಯ ಪ್ರಕ್ರಿಯೆಯಲ್ಲಿ 150ಕ್ಕೂ ಹೆಚ್ಚು ರಾಸಾಯನಿಕಗಳು ಹಾಗೂ 30ಕ್ಕೂ ಹೆಚ್ಚು ಗ್ಯಾಸ್ ಮತ್ತು ಮಿನರಲ್​ಗಳ ಅವಶ್ಯಕತೆ ಇದೆ. ಇದರಲ್ಲಿ ಪ್ರಮುಖ ವಸ್ತು ನಿಯಾನ್ ಗ್ಯಾಸ್. ಭಾರತವು ಈ ಸಪ್ಲೈ ಚೈನ್​ನಲ್ಲಿ ಪ್ರಮುಖ ಭಾಗವಾಗಲು ಅವಕಾಶ ಇದೆ.

ಚಿಪ್ ತಯಾರಿಕೆಯಲ್ಲಿ ರಾಸಾಯನಿಕ, ಖನಿಜ, ಅನಿಲಗಳ ಬಳಕೆ; ಭಾರತಕ್ಕೆ ಭರ್ಜರಿ ಅವಕಾಶ
ಸೆಮಿಕಂಡಕ್ಟರ್ ಚಿಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 19, 2024 | 3:32 PM

Share

ನವದೆಹಲಿ, ನವೆಂಬರ್ 19: ಸೆಮಿಕಂಡಕ್ಟರ್ ಚಿಪ್​ಗಳ ತಯಾರಿಕಾ ಕ್ಷೇತ್ರ ಈಗ ಬಹಳ ಮುಖ್ಯ ಎನಿಸಿದೆ. ಭಾರತ ಈ ಕ್ಷೇತ್ರದಲ್ಲಿ ನೆಲೆಯೂರಲು ಸಕಲ ಪ್ರಯತ್ನ ಹಾಕುತ್ತಿದೆ. ವಿವಿಧ ಸೆಮಿಕಂಡಕ್ಟರ್ ಘಟಕಗಳು ಭಾರತದಲ್ಲಿ ಸ್ಥಾಪನೆಯಾಗುತ್ತಿವೆ. ಆದರೆ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬಹಳ ಸಂಕೀರ್ಣವಾದ ಸರಬರಾಜು ಸರಪಳಿ ವ್ಯವಸ್ಥೆ ಇದೆ. ಅಂದರೆ, ಒಂದು ಸೆಮಿಕಂಡಕ್ಟರ್ ಚಿಪ್ ತಯಾರಿಕೆಯಲ್ಲಿ ಕಚ್ಛಾ ಪದಾರ್ಥಗಳಿಂದ ಹಿಡಿದು ಬಿಡಿಭಾಗಗಳವರೆಗೆ ಹಲವು ದೇಶಗಳು ಸರಬರಾಜು ವ್ಯವಸ್ಥೆಯಲ್ಲಿ ಇವೆ. ಈ ಸಪ್ಲೈ ಚೈನ್​ನ ಪ್ರಮುಖ ಭಾಗವಾಗಲು ಭಾರತಕ್ಕೆ ಈಗ ಒಳ್ಳೆಯ ಅವಕಾಶ ಇದೆ. ಭಾರತದಲ್ಲಿರುವ ರಾಸಾಯನಿಕ ಮತ್ತು ಉಕ್ಕು ಕ್ಷೇತ್ರವನ್ನು ಬಳಸಿಕೊಂಡು ಭಾರತವು ಈ ಸರಬರಾಜು ಸರಪಳಿಯ ಪ್ರಮುಖ ಕೊಂಡಿಯಾಗಬಹುದು ಎನ್ನುತ್ತಾರೆ ಪರಿಣಿತರು.

ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ಪ್ರಕ್ರಿಯೆಗಳಲ್ಲಿ 150 ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತದೆ. 30ಕ್ಕೂ ಹೆಚ್ಚು ವಿಧದ ಅನಿಲ ಮತ್ತು ಖನಿಜಗಳ ಬಳಕೆ ಆಗುತ್ತದೆ. ಭಾರತದಲ್ಲಿ ರಾಸಾಯನಿಕ ಉದ್ಯಮ ಪ್ರಬಲವಾಗಿದೆ. ವಿಶ್ವದ ಆರನೇ ಅತಿದೊಡ್ಡ ಹಾಗೂ ಏಷ್ಯಾದ ಮೂರನೇ ಅತಿದೊಡ್ಡ ರಾಸಾಯನಿಕ ಉದ್ಯಮ ಭಾರತದ್ದು. ಹಾಗೆಯೇ, ಭಾರತದ ಉಕ್ಕು ಮಾರುಕಟ್ಟೆಯೂ ಬೃಹತ್ ಆಗಿದೆ. ಹೀಗಾಗಿ, ಭಾರತವು ಸೆಮಿಕಂಡಕ್ಟರ್​ನ ಗ್ಲೋಬಲ್ ಸಪ್ಲೈ ಚೈನ್​ನ ಭಾಗವಾಗುವುದು ಸುಲಭವಾಗುತ್ತದೆ.

ಇದನ್ನೂ ಓದಿ: ಅಸಹಾಯಕವಾಗಿ ನಿಂತ ವೊಡಾಫೋನ್ ಐಡಿಯಾ; ಸರ್ಕಾರದಿಂದ ನೆರವಿನ ಸಾಧ್ಯತೆ

ಸೆಮಿಕಂಡಕ್ಟರ್ ಚಿಪ್ ತಯಾರಿಕೆಗೆ ಬಳಸಬಲ್ಲಂತಹ ರಾಸಾಯನಿಕಗಳನ್ನು ಭಾರತದಲ್ಲಿ ತಯಾರಿಸಲು ಸಾಧ್ಯ. ಹಾಗೆಯೇ, ಉಕ್ಕು ಘಟಕಗಳಲ್ಲಿ ಸಿಗುವ ಉಪಉತ್ಪನ್ನಗಳಲ್ಲಿ ನಿಯಾನ್ ಗ್ಯಾಸ್ ಬಹಳ ಮುಖ್ಯ. ನಿಯಾನ್ ಅಪರೂಪದ ಅನಿಲವಾಗಿದ್ದು, ಲೇಸರ್, ಲೈಟ್ ಇತ್ಯಾದಿ ಹಲವು ಕಡೆ ಇದನ್ನು ಬಳಸಲಾಗುತ್ತದೆ. ಸೆಮಿಕಂಡಕ್ಟರ್ ಚಿಪ್ ತಯಾರಿಕೆಯಲ್ಲಿ ಇದರ ಪಾತ್ರ ಪ್ರಮುಖವಾಗಿದೆ.

ಆದರೆ, ಸೆಮಿಕಂಡಕ್ಟರ್ ತಯಾರಿಕೆಯ ಪ್ರಕ್ರಿಯೆಗೆ ನಿಯಾನ್ ಗ್ಯಾಸ್ ಅನ್ನು ಬಳಕೆ ಮಾಡಬೇಕಾದರೆ ಅದರ ಪ್ಯೂರಿಫಿಕೇಶನ್ ಆಗಬೇಕು. ಈ ತಂತ್ರಜ್ಞಾನವು ಸದ್ಯ ವಿಶ್ವದ ಕೆಲವೇ ಕಂಪನಿಗಳ ಬಳಿ ಇದೆ. ಹೀಗಾಗಿ, ನಿಯಾನ್​ಗೆ ಬೇಡಿಕೆ ಬಹಳ ಹೆಚ್ಚಿದೆ. ಸೆಮಿಕಂಡಕ್ಟರ್ ಗ್ರೇಡ್ ಇರುವ ವಿಶ್ವದ ಶೇ. 50ರಷ್ಟು ನಿಯಾನ್ ಅನ್ನು ಉಕ್ರೇನ್ ದೇಶದಿಂದ ಸರಬರಾಜು ಮಾಡಲಾಗುತ್ತದೆ.

ಇದನ್ನೂ ಓದಿ: ಬ್ಯಾಂಕುಗಳಲ್ಲಿ ಸಾಲದರ ಹೆಚ್ಚಾಯಿತು; ಇನ್ನೂ ಬಹಳಷ್ಟು ಕಡಿಮೆ ಆಗಬೇಕು: ನಿರ್ಮಲಾ ಸೀತಾರಾಮನ್

ಭಾರತದಲ್ಲೂ ನಿಯಾನ್ ಗ್ಯಾಸ್ ಅನ್ನು ಪ್ಯೂರಿಫೈ ಮಾಡಿ ಸೆಮಿಕಂಡಕ್ಟರ್ ಗ್ರೇಡ್​ಗೆ ಪರಿವರ್ತಿಸುವ ಘಟಕಗಳು ಸ್ಥಾಪನೆಯಾಗಬೇಕು ಎಂಬ ಸಲಹೆಗಳು ಕೇಳಿಬರುತ್ತಿವೆ. ಉಕ್ರೇನ್, ರಷ್ಯಾ ಮತ್ತು ಚೀನಾದ ಪ್ರಾಬಲ್ಯ ಇರುವ ನಿಯೋನ್ ಗ್ಯಾಸ್ ಪೂರೈಕೆಯ ಸರಪಳಿಯಲ್ಲಿ ಭಾರತವೂ ಒಂದು ಭಾಗವಾಗಲು ಸಾಧ್ಯವಾಗಬಹುದು. ಪರಿಣಿತರ ಪ್ರಕಾರ, ಸೆಮಿಕಂಡಕ್ಟರ್​ನ ಗ್ಲೋಬಲ್ ಸಪ್ಲೈ ಚೈನ್​ನಲ್ಲಿ ಭಾರತ ಶೇ. 8ರಷ್ಟು ಪಾಲು ಹೊಂದುವ ಅವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು