
ನವದೆಹಲಿ, ಏಪ್ರಿಲ್ 6: ದೇಶದಲ್ಲಿ ಉದ್ಯಮಶೀಲತೆ, ಸೃಜನಶೀಲತೆ ಮತ್ತು ಸ್ಟಾರ್ಟಪ್ಗಳ ನಿರ್ಮಾಣಕ್ಕೆ ಉತ್ತೇಜಿಸಲು ಮುಂದಾಗಿರುವ ಸರ್ಕಾರ ಆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದಯೋನ್ಮುಖ ಆಂಟ್ರಪ್ರನ್ಯೂರ್ಗಳಿಗೆ (budding entrepreneurs) ಸರ್ಕಾರ ಹೆಲ್ಪ್ಲೈನ್ ಸ್ಥಾಪಿಸಲು ಮುಂದಾಗಿದೆ. ಹಾಗೆಯೇ, ಸ್ಟಾರ್ಟಪ್ಗಳ ನೆರವಿಗಾಗಿ ದೊಡ್ಡ ಮೊತ್ತದ ಫಂಡ್ ಅನ್ನೂ ಸರ್ಕಾರ ಪ್ರಕಟಿಸಿದೆ. ಕೇಂದ್ರ ಉದ್ಯಮ ಸಚಿವ ಪೀಯುಶ್ ಗೋಯಲ್ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಸ್ಟಾರ್ಟಪ್ ಇಂಡಿಯಾ ಡೆಸ್ಕ್ ಎನ್ನುವ ಈ ಹೆಲ್ಪ್ಲೈನ್ 4 ಡಿಜಿಟ್ ನಂಬರ್ ಹೊಂದಿರುತ್ತದೆ. ಇದು ಟೋಲ್ ಫ್ರೀ ಸಂಖ್ಯೆಯಾಗಿದ್ದು, ಉದ್ದಿಮೆದಾರರ ಅಳಲನ್ನು ಕೇಳಲು ಬಳಕೆಯಾಗಲಿದೆ.
ಸ್ಟಾರ್ಟಪ್ಗಳಿಗೆ 10,000 ಕೋಟಿ ರೂ ಮೊತ್ತದ ಮಹಾಫಂಡ್ಗೆ ಈ ವರ್ಷ ಅನುಮೋದನೆ ಸಿಕ್ಕಿದೆ. ಇದು ಎರಡನೇ ಮಹಾಫಂಡ್ ಎನ್ನಲಾಗಿದ್ದು, 10,000 ಕೋಟಿ ರೂ ಪೈಕಿ ಮೊದಲ ಕಂತಿನಲ್ಲಿ 2,000 ಕೋಟಿ ರೂ ಹಣವನ್ನು ಸಿಡ್ಬಿಗೆ ವಿತರಿಸಲಾಗುವುದು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆರ್ಬಿಐನಿಂದ ಸದ್ಯದಲ್ಲೇ ಹೊಸ 10 ರೂ ಮತ್ತು 500 ರೂ ನೋಟುಗಳ ಬಿಡುಗಡೆ; ಏನಿವುಗಳ ವಿಶೇಷತೆ?
ಫಂಡ್ಗಳ ಫಂಡ್ ಎನ್ನಲಾದ ಈ ಮಹಾಫಂಡ್ನಲ್ಲಿ ಹೆಚ್ಚಿನ ಭಾಗವು ಸೀಡ್ ಫಂಡಿಂಗ್ಗೆ ಮೀಸಲಾಗಿರುತ್ತದೆ. ಸೀಡ್ ಫಂಡಿಂಗ್ ಎಂದರೆ ಒಂದು ಸ್ಟಾರ್ಟಪ್ ಅಥವಾ ಉದ್ದಿಮೆ ಆರಂಭಿಸಲು ಉಪಯೋಗ ಮಾಡುವ ಫಂಡ್ ಅಗಿರುತ್ತದೆ. ಡೀಪ್ ಟೆಕ್ ಸ್ಟಾರ್ಟಪ್ಗಳಿಗೆ ಉತ್ತೇಜಿಸಲೂ ಈ ಫಂಡ್ ಅನ್ನು ಬಳಸಲಾಗುತ್ತದೆ.
‘ಎಐ, ರೋಬೋಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್, ಮೆಷಿನ್ ಲರ್ನಿಂಗ್, ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್, ಬಯೋಟೆಕ್ ಇತ್ಯಾದಿ ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಗೆ ಎಡೆ ಮಾಡಿಕೊಡುವುದು ನಮ್ಮ ಗುರಿ’ ಎಂದು ಪೀಯೂಶ್ ಗೋಯಲ್ ತಿಳಿಸಿದ್ದಾರೆ.
‘ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅಥವಾ ಇಕೋಸಿಸ್ಟಂ ಉತ್ತಮ ಪಡಿಸಲು ಯಾವುದಾದರೂ ಕ್ರಮದ ಅವಶ್ಯಕತೆ ಇದೆ ಎನಿಸಿದರೆ ಹೆಲ್ಪ್ಲೈನ್ ಡೆಸ್ಕ್ ಮೂಲಕ ಅದನ್ನು ವ್ಯಕ್ತಪಡಿಸಬಹುದು’ ಎಂದೂ ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ: ಸ್ಟಾರ್ಟಪ್ ಅಂದ್ರೆ ಐಸ್ಕ್ರೀಮ್ ರೀಪ್ಯಾಕೇಜ್ ಮಾಡೋದಲ್ಲ ಎಂದ ಸಚಿವ ಗೋಯಲ್; ಉದ್ಯಮಿಗಳ ಅಸಮಾಧಾನ
ಹೊಸದಾಗಿ ಉದ್ದಿಮೆ ಸ್ಥಾಪಿಸುತ್ತಿರುವವರಿಗೆ ಬಂಡವಾಳದ ವ್ಯವಸ್ಥೆ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಸರಿಯಾದ ಬಂಡವಾಳ ಸಿಗದೇ ಆರಂಭ ಹಂತದಲ್ಲೇ ಮುರುಟಿಹೋದ ಹಲವು ಸ್ಟಾರ್ಟಪ್ಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಫಂಡ್ ಆಫ್ ಫಂಡ್ ಮತ್ತು ಹೆಲ್ಪ್ಲೈನ್ ಮುಖಾಂತರ ಈ ಆರಂಭಿಕ ಬಂಡವಾಳ ಸಮಸ್ಯೆಯನ್ನು ನೀಗಿಸಲು ಯತ್ನಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ