AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಲಿವೆ ನೋಟು ಬದಲಿಸಿ ಚಿಲ್ಲರೆ ಕೊಡುವ ಹೈಬ್ರಿಡ್ ಎಟಿಎಂಗಳು

Govt plans Hybrid ATMs that dispense smaller denomination notes: ರೀಟೇಲ್ ವ್ಯಾಪಾರದಲ್ಲಿ ಚಿಲ್ಲರೆ ಸಮಸ್ಯೆ ಬಹಳ ಇರುತ್ತದೆ. ಇದನ್ನು ತಪ್ಪಿಸಲು ಸರಕಾರ ಹೊಸ ಐಡಿಯಾ ಮಾಡುತ್ತದೆ. ಹತ್ತು ರೂ, ಇಪ್ಪತ್ತು ರೂ ಮತ್ತು ಐವತ್ತು ರೂಗಳ ಸಣ್ಣ ನೋಟುಗಳನ್ನು ವಿತರಿಸುವ ಎಟಿಎಂಗಳು ಬರಲಿವೆ. ಹಾಗೆಯೇ 100 ರೂ ಮತ್ತು 500 ರೂ ನೋಟುಗಳ ಬದಲು ಚಿಲ್ಲರೆ ನೋಟುಗಳನ್ನು ಈ ಎಟಿಎಂಗಳು ಕೊಡುತ್ತವೆ.

ಬರಲಿವೆ ನೋಟು ಬದಲಿಸಿ ಚಿಲ್ಲರೆ ಕೊಡುವ ಹೈಬ್ರಿಡ್ ಎಟಿಎಂಗಳು
ಎಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 29, 2026 | 8:51 PM

Share

ನವದೆಹಲಿ, ಜನವರಿ 29: ಡಿಜಿಟಲ್ ಟ್ರಾನ್ಸಾಕ್ಷನ್ ವ್ಯಾಪಕವಾಗಿ ಹೆಚ್ಚಾಗಿದ್ದರೂ ಕ್ಯಾಷ್ ವಹಿವಾಟು (cash transactions) ಕೂಡ ಸಾಕಷ್ಟು ನಡೆಯುತ್ತದೆ. 10, 20, 50 ಇತ್ಯಾದಿ ಸಣ್ಣ ಸಣ್ಣ ಮೊತ್ತದ ನೋಟುಗಳು ಕೆಲವೊಮ್ಮೆ ಬಹಳ ಅಗತ್ಯ ಬೀಳುತ್ತವೆ. ಚಿಲ್ಲರೆ ಅಂಗಡಿಯಲ್ಲಿ 500 ರುಪಾಯಿಗೋ ಅಥವಾ ನೂರು ರುಪಾಯಿಗೋ ಚಿಲ್ಲರೆ ನೀಡಲು ನಿರಾಕರಿಸುತ್ತಾರೆ. ಯುಪಿಐ ಮೂಲಕ ಪಾವತಿಸಲಾಗದವರಿಗೆ ಈ ಸಂದರ್ಭ ಕಷ್ಟವಾಗಬಹುದು. ಇದನ್ನು ತಪ್ಪಿಸಲು ಸರ್ಕಾರ ಹೈಬ್ರಿಡ್ ಎಟಿಎಂ ಮೆಷೀನ್​ಗಳನ್ನು ಅಳವಡಿಸಲು ಯೋಜಿಸಿದೆ ಎಂದು ವರದಿಗಳು ಹೇಳುತ್ತಿವೆ.

ಈಗಿರುವ ಎಟಿಎಂ ಮೆಷೀನ್​ಗಳಲ್ಲಿ 500 ರೂ ಮತ್ತು 100 ರೂ ನೋಟುಗಳು ಸಿಗುತ್ತವೆ. ಸರ್ಕಾರ ಪ್ಲಾನ್ ಮಾಡಿರುವ ಹೊಸ ಎಟಿಎಂ ಮೆಷೀನ್​ಗಳು 10 ರೂ, 20 ರೂ ಮತ್ತು 50 ರೂ ನೋಟುಗಳನ್ನು ಡಿಸ್ಪೆನ್ಸ್ ಮಾಡುತ್ತವೆ.

ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ

ಹಾಗೆಯೇ, ಈ ಎಟಿಎಂಗಳಲ್ಲಿ ನೋಟು ವಿನಿಮಯಕ್ಕೂ ಅವಕಾಶ ಕೊಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ ಎನ್ನಲಾಗಿದೆ. ಈ ಪ್ರಸ್ತಾಪದ ಪ್ರಕಾರ, ನೀವು ನಿಮ್ಮಲ್ಲಿರುವ 100 ರೂ ಅಥವಾ 500 ರೂ ನೋಟುಗಳನ್ನು ಎಟಿಎಂಗೆ ಫೀಡ್ ಮಾಡಿದರೆ, ಆ ಮೌಲ್ಯದಷ್ಟು ಸಣ್ಣ ನೋಟುಗಳನ್ನು ಮರಳಿಸುತ್ತದೆ. ಇಂಥ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೆ ಇದೆ.

ವರದಿಗಳ ಪ್ರಕಾರ ಮುಂಬೈನಲ್ಲಿ ಈಗಾಗಲೇ ಈ ಹೈಬ್ರಿಡ್ ಎಟಿಎಂಗಳನ್ನು ಕೆಲವೆಡೆ ಪ್ರಾಯೋಗಿಕವಾಗಿ ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆ, ರೈಲ್ವೆ ಸ್ಟೇಷನ್, ಬಸ್ ಡಿಪೋ, ಆಸ್ಪತ್ರೆ, ಸರ್ಕಾರಿ ಕಚೇರಿ ಇತ್ಯಾದಿ ಕ್ಯಾಷ್ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಇಂಥ ಪ್ರಾಯೋಗಿಕ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್

ಹೈಬ್ರಿಡ್ ಎಟಿಎಂಗಳ ಬಳಕೆಗೆ ಶುಲ್ಕ ಇರುತ್ತದಾ?

ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕುಗಳಿಗೆ ವೆಚ್ಚವಾಗುತ್ತದೆ. ಸ್ಥಾಪನೆ ವೆಚ್ಚ ಹಾಗೂ ಮೈಂಟನೆನ್ಸ್ ವೆಚ್ಚವೂ ಇರುತ್ತದೆ. ಹೀಗಾಗಿ, ಗ್ರಾಹಕರಿಂದ ಇಂತಿಷ್ಟು ಶುಲ್ಕ ಪಡೆಯುವ ಸಾಧ್ಯತೆ ಇಲ್ಲದಿಲ್ಲ. ಸಣ್ಣ ಮೊತ್ತದ ನೋಟುಗಳನ್ನು ಸರ್ಕಾರ ಹೆಚ್ಚೆಚ್ಚು ಮುದ್ರಿಸಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?