GST Council Meet: ದಿಲ್ಲಿಯಲ್ಲಿ ಜಿಎಸ್​ಟಿ ಕೌನ್ಸಿಲ್ ಸಭೆ; ನಿರೀಕ್ಷೆಗಳೇನು?

Agenda of 49th GST Council Meeting: ಸಿಮೆಂಟ್ ಮೇಲಿನ ತೆರಿಗೆ, ಮೇಲ್ಮನವಿ ನ್ಯಾಯಮಂಡಳಿಗಳ ಸ್ಥಾಪನೆ, ಆನ್​ಲೈನ್ ಗೇಮಿಂಗ್, ಕ್ಯಾಸಿನೋ, ಕುದರೆ ರೇಸಿಂಗ್ ಮೇಲೆ ತೆರಿಗೆ ಇತ್ಯಾದಿ ವಿಚಾರಗಳ ಬಗ್ಗೆ 49ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

GST Council Meet: ದಿಲ್ಲಿಯಲ್ಲಿ ಜಿಎಸ್​ಟಿ ಕೌನ್ಸಿಲ್ ಸಭೆ; ನಿರೀಕ್ಷೆಗಳೇನು?
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2023 | 12:30 PM

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ (New Delhi) ಇಂದು ಶನಿವಾರ ಜಿಎಸ್​ಟಿ ಮಂಡಳಿಯ 49ನೇ ಸಭೆ (GST Council Meet) ನಡೆಯಲಿದೆ. ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಕೆಲ ಪ್ರಮುಖ ವಿಚಾರಗಳ ಚರ್ಚೆ ಆಗಲಿದೆ. ವರದಿಗಳ ಪ್ರಕಾರ ಈ ಸಭೆಯಲ್ಲಿ ಮೇಲ್ಮನವಿ ನ್ಯಾಯಮಂಡಳಿಗಳ (Appellate Tribunal) ಸ್ಥಾಪನೆಗೆ, ಸಿಮೆಂಟ್ ಮೇಲಿನ ತೆರಿಗೆಯಲ್ಲಿ ಬದಲಾವಣೆ ಮಾಡುವ ಸಂಬಂಧ ಚರ್ಚೆಗಳಾಗಲಿವೆ. ಪಾನ್ ಮಸಾಲ ಮತ್ತು ಗುಟ್ಕಾ ವ್ಯವಹಾರಗಳಲ್ಲಿ ತೆರಿಗೆ ಕಳ್ಳತನ ತಪ್ಪಿಸುವ ವ್ಯವಸ್ಥೆ ರೂಪಿಸುವ ಬಗ್ಗೆಯೂ ವಿಚಾರ ವಿನಿಮಯಗಳಾಗಲಿವೆ.

ಇನ್ನು, ಮೇಲ್ಮನವಿ ನ್ಯಾಯಮಂಡಳಿಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಪ್ರಾತಿನಿಧ್ಯ ಸಿಗಲಿದೆ. ಈ ಟ್ರಿಬ್ಯುನಲ್​ಗಳಲ್ಲಿ ನ್ಯಾಯಾಂಗದ ಒಬ್ಬ ಸದಸ್ಯ ಮತ್ತು ಕೇಂದ್ರ ಹಾಗೂ ರಾಜ್ಯಗಳಿಂದ ಒಬ್ಬೊಬ್ಬ ತಾಂತ್ರಿಕ ಸದಸ್ಯರು ಇದರಲ್ಲಿರಲಿದ್ದಾರೆ.

ನಿನ್ನೆ ಶುಕ್ರವಾರ ಒಡಿಶಾದ ಭುವನೇಶ್ವರ್​ನಲ್ಲಿ ಮಾತನಾಡುತ್ತಿದ್ದ ನಿರ್ಮಲಾ ಸೀತಾರಾಮನ್ ಇಂದಿನ ಜಿಎಸ್​ಟಿ ಸಭೆಯ ವಿಚಾರಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: Adani Effect: ಅದಾನಿ ಷೇರು ಏನಾದರಾಗಲೀ, ಭಾರತದ ಬುಲ್​ಸ್ಟ್ರೀಟ್ ಜಗ್ಗೋದು ಕಷ್ಟ

ಸಿಮೆಂಟ್ ಮೇಲೆ ಜಿಎಸ್​ಟಿ ದರವನ್ನು ಕಡಿಮೆಗೊಳಿಸುವ ವಿಚಾರ ಸಂಬಂಧ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಿದರು. ಆನ್​ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲೆ ಜಿಎಸ್​ಟಿ ಹೇರಿಕೆ ಮಾಡಬಹುದು ಎಂದು ಬಂದಿರುವ ಮತ್ತೊಂದು ಪ್ರಸ್ತಾವದ ಬಗ್ಗೆ ಚರ್ಚೆಯಾಗಬಹುದು. ಅಪ್ಪೆಲೇಟ್ ಟ್ರಿಬ್ಯುನಲ್​ಗಳನ್ನು ಸ್ಥಾಪಿಸುವ ಬಗ್ಗೆ ಸಚಿವರ ಮಂಡಳಿ (ಜಿಒಎಂ) ರೂಪಿಸಿದ್ದ ವರದಿ ಬಗ್ಗೆಯೂ ಇಂದು ಚರ್ಚೆಯಾಗುತ್ತದೆ.

ಕಳೆದ ಬಾರಿ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ತೆರಿಗೆ ವಂಚನೆ ಪ್ರಕರಣಗಳನ್ನು ಅಪರಾಧ ಕೃತ್ಯವಾಗಿ ಪರಿಗಣಿಸದಂತೆ ಶಿಫಾರಸು ಮಾಡಲಾಗಿತ್ತು. ಒಂದು ಕೋಟಿ ರೂಗಿಂತ ಹೆಚ್ಚಿನ ತೆರಿಗೆ ಮೊತ್ತದ ವಂಚನೆಯನ್ನು ಕ್ರಿಮಿನಲ್ ಅಪರಾಧವಾಗಿ ಕ್ರಮ ಕೈಗೊಳ್ಳಲಾಗುತ್ತಿತ್ತು. ಅದನ್ನು 2 ಕೋಟಿ ರೂಗೆ ಹೆಚ್ಚಿಸಲಾಯತು. ಹಾಗೆಯೇ, 48ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕೆಲ ವಸ್ತುಗಳ ತೆರಿಗೆ ದರವನ್ನು ಪರಿಷ್ಕರಣೆ ಕೂಡ ಮಾಡಲಾಗಿತ್ತು.

ಮತ್ತಷ್ಟು ವ್ಯವಹಾರ ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ