ಎಚ್​ಡಿಎಫ್​ಸಿ ಖಾತೆ ಬಳಸಿ ನಡೆಯುವ ಅಲ್ಪ ಮೊತ್ತದ ಯುಪಿಐ ವಹಿವಾಟಿಗೆ ಎಸ್ಸೆಮ್ಮೆಸ್ ಬರಲ್ಲ

HDFC Bank alert messages for UPI transactions: ಎಚ್​ಡಿಎಫ್​ಸಿ ಬ್ಯಾಂಕ್​ನ ಖಾತೆ ಬಳಸಿ ನಡೆಯುವ ಅಲ್ಪಮೊತ್ತದ ಯುಪಿಐ ವಹಿವಾಟಿನಲ್ಲಿ ಗ್ರಾಹಕರಿಗೆ ಅಲರ್ಟ್ ಮೆಸೇಜ್ ಸಿಗುವುದಿಲ್ಲ. ಯುಪಿಐ ವಹಿವಾಟಿನಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಖಾತೆಯಿಂದ 100 ರೂ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಹಣ ಪಾವತಿಯಾದರೆ ಅದರ ಗ್ರಾಹಕರಿಗೆ ಬ್ಯಾಂಕ್​ನಿಂದ ಎಸ್ಸೆಮ್ಮೆಸ್ ಮೆಸೇಜ್ ಬರಲ್ಲ. ಹಾಗೆಯೇ, ಖಾತೆಗೆ 500 ರೂ ಒಳಗಿನ ಮೊತ್ತದ ಹಣ ಜಮೆ ಆದರೂ ಕೂಡ ಎಸ್ಸೆಮ್ಮೆಸ್ ಅಲರ್ಟ್ ಬರಲ್ಲ. ಯುಪಿಐ ವಹಿವಾಟು ಬಹಳ ಹೆಚ್ಚು ನಡೆಯುತ್ತಿರುವುದರಿಂದ ಎಸ್ಸೆಮ್ಮೆಸ್ ವೆಚ್ಚ ಹೆಚ್ಚುತ್ತಿದ್ದು, ಅದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಎಚ್​ಡಿಎಫ್​ಸಿ ಖಾತೆ ಬಳಸಿ ನಡೆಯುವ ಅಲ್ಪ ಮೊತ್ತದ ಯುಪಿಐ ವಹಿವಾಟಿಗೆ ಎಸ್ಸೆಮ್ಮೆಸ್ ಬರಲ್ಲ
ಯುಪಿಐ ವಹಿವಾಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2024 | 6:07 PM

ನವದೆಹಲಿ, ಮೇ 29: ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಖಾತೆಯಲ್ಲಿ ಅಲ್ಪ ಮೊತ್ತದ ವಹಿವಾಟಿಗೆ (low value UPI transactions) ನಡೆದಲ್ಲಿ ಅದರ ಅಲರ್ಟ್ ಮೆಸೇಜ್ ಖಾತೆದಾರರ ಮೊಬೈಲ್​ಗೆ ಬರುವುದಿಲ್ಲ. ಎಚ್​ಡಿಎಫ್​ಸಿ ಬ್ಯಾಂಕ್ ಈ ವಿಚಾರವನ್ನು ತಿಳಿಸಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಖಾತೆಯಿಂದ ನೂರು ರೂ ಪಾವತಿಯಾದಲ್ಲಿ, ಮತ್ತು ಖಾತೆಗೆ ಐನ್ನೂರು ರೂ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಹಣ ಜಮೆ ಆದಲ್ಲಿ ಅಲರ್ಟ್ ಮೆಸೇಜ್ ಬರುವುದಿಲ್ಲ. ಜೂನ್ 25ರಿಂದ ಇದು ಜಾರಿಗೆ ಬರಲಿದೆ.

ನೂರು ರೂ ಮೇಲ್ಪಟ್ಟ ಪಾವತಿ ಹಾಗೂ 500 ರೂ ಮೇಲ್ಪಟ್ಟ ಸ್ವೀಕೃತಿಗೆ ಮಾತ್ರವೇ ಮೆಸೇಜ್ ಬರುತ್ತದೆ. ಒಟ್ಟಿಗೆ ಮಸೇಜ್​ಗಳನ್ನು ಕಳುಹಿಸಲು ಸಾಕಷ್ಟು ವೆಚ್ಚವಾಗುವುದರಿಂದ ಬ್ಯಂಕ್ ಈ ನಿರ್ಧಾರ ಕೈಗೊಂಡಿದೆ. ಅದು ಮಾಹಿತಿ ನೀಡಿರುವ ಪ್ರಕಾರ, ಈ ರೀತಿಯ ಎಸ್ಸೆಮ್ಮೆಸ್​ಗಾಗಿ ನಿತ್ಯವೂ ಕೋಟ್ಯಂತರ ರೂ ವೆಚ್ಚವಾಗುತ್ತದೆ. ಯುಪಿಐ ವಹಿವಾಟು ಬಹಳ ಅಧಿಕ ಇರುವುದರಿಂದ ಅಲರ್ಟ್ ಮೆಸೇಜ್​ಗಳಿಗಾಗಿ ಎಚ್​ಡಿಎಫ್​ಸಿ ಬ್ಯಾಂಕ್ ದಿನಕ್ಕೆ ಸುಮಾರು 40 ಕೋಟಿ ರೂ ವ್ಯಯಿಸುತ್ತದೆ.

ಇದನ್ನೂ ಓದಿ: ಪೇಟಿಎಂ ಖರೀದಿಸಲು ಮುಂದಾದ್ರಾ ಅದಾನಿ? ಇಲ್ಲ ಎನ್ನುತ್ತಿವೆ ಎರಡೂ ಸಂಸ್ಥೆಗಳು

ಕಡಿಮೆ ಮೊತ್ತದ ವಹಿವಾಟಿಗೆ ಎಚ್​ಡಿಎಫ್​ಸಿಯಿಂದ ಎಸ್ಸೆಮ್ಮೆಸ್ ಬರದೇ ಹೋದರೂ ಇಮೇಲ್ ಅಲರ್ಟ್ ಮುಂದುವರಿಯುತ್ತದೆ. ಹಾಗೆಯೇ, ಯುಪಿಐ ವಹಿವಾಟು ನಡೆಯುವ ಪ್ಲಾಟ್​ಫಾರ್ಮ್​ಗಳೂ ಕೂಡ ಅಲರ್ಟ್ ಮೆಸೇಜ್ ಕಳುಹಿಸುತ್ತವೆ. ಉದಾಹರಣೆಗೆ, ಫೋನ್ ಪೆ ವ್ಯಾಲಟ್​ನಿಂದ ಹಣ ಪಾವತಿಯಾದರೆ ಅದರ ಅಲರ್ಟ್ ಮೆಸೇಜ್ ಯುಪಿಐ ಬಳಕೆದಾರರಿಗೆ ಹೋಗುತ್ತದೆ.

ಯುಪಿಐ ವಹಿವಾಟು ಬಳಕೆ ಆಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 2016ರಲ್ಲಿ ಮೊದಲ ಬಾರಿಗೆ ಯುಪಿಐ ಚಾಲನೆಗೆ ಬಂದಿತ್ತು. ಕೋವಿಡ್ ಕಾಲಘಟ್ಟದಲ್ಲಿ ಯುಪಿಐ ವಹಿವಾಟು ಬಹಳ ವ್ಯಾಪಕ ಬಳಕೆಗೆ ಬಂದಿತ್ತು. 2023ರಲ್ಲಿ 11,768 ಕೋಟಿ ರೂ ಮೊತ್ತದ ವಹಿವಾಟು ಯುಪಿಐನಲ್ಲಿ ಆಗಿರುವುದು ಗೊತ್ತಾಗಿದೆ. ಒಟ್ಟಾರೆ ನಡೆಯುವ ಹಣ ವಹಿವಾಟಿನಲ್ಲಿ ಯುಪಿಐನದ್ದು ಸಿಂಹಪಾಲು.

ಇದನ್ನೂ ಓದಿ: ಗೃಹಜ್ಯೋತಿ ಸ್ಕೀಮ್: ಕರೆಂಟ್ ಬಿಲ್​ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?

ಯುಪಿಐ ಸೇವೆ ಒದಗಿಸುವ ಪ್ರಮುಖ ಆ್ಯಪ್​ಗಳಲ್ಲಿ ಫೋನ್​ಪೆ ಅಗ್ರಸ್ಥಾನ ಇದೆ. ಗೂಗಲ್ ಪೇ ಮತ್ತು ಪೇಟಿಎಂ ನಂತರದ ಸ್ಥಾನದಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ