HDFC Home Loan: ಎಚ್​ಡಿಎಫ್​ಸಿಯಿಂದ ಗೃಹ ಸಾಲ ಬಡ್ಡಿ ದರ ಏರಿಕೆ

| Updated By: Srinivas Mata

Updated on: May 07, 2022 | 8:46 PM

ಖಾಸಗಿ ಸಾಲದಾತ ಸಂಸ್ಥೆಯಾದ ಎಚ್​ಡಿಎಫ್​ಸಿಯಿಂದ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

HDFC Home Loan: ಎಚ್​ಡಿಎಫ್​ಸಿಯಿಂದ ಗೃಹ ಸಾಲ ಬಡ್ಡಿ ದರ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಹೌಸಿಂಗ್ ಡೆವಲಪ್​ಮೆಂಟ್​ ಫೈನಾನ್ಸ್ ಕಾರ್ಪೊರೇಷನ್ ಅಥವಾ ಎಚ್​ಡಿಎಫ್​ಸಿ (HDFC) ಲಿಮಿಟೆಡ್​ ಘೋಷಣೆ ಮಾಡಿರುವ ಪ್ರಕಾರ, ಮೇ 9, 2022ರಿಂದ ಅನ್ವಯ ಆಗುವಂತೆ ಗೃಹ ಸಾಲದ ಮೇಲಿನ ರೀಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) 30 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಈ ದರವು ಈಗಾಗಲೇ ಇರುವ ಮತ್ತು ಹೊಸ ಸಾಲಗಾರರಿಗೆ ಅನ್ವಯ ಆಗುತ್ತದೆ. ಇದರ ಪ್ರಕಾರವಾಗಿ ಎಚ್​ಡಿಎಫ್​ಸಿಯಿಂದ ಗೃಹ ಸಾಲ ಪಡೆದ ಸಾಲಗಾರರು ಇಎಂಐ ಹೆಚ್ಚು ಪಾವತಿಸಬೇಕಾಗುತ್ತದೆ. “ಎಚ್​ಡಿಎಫ್​ಸಿ ಅದರ ಗೃಹಸಾಲದ ಮೇಲಿನ ರೀಟೇಲ್ ಪ್ರೈಮ್ ಲೆಂಡಿಂಗ್ ರೇಟ್ (ಆರ್​ಪಿಎಲ್​ಆರ್​), ಅದರ ಮೇಲೆ ಅಡ್ಜಸ್ಟಬಲ್ ರೇಟ್ ಹೋಮ್ ಲೋನ್ಸ್ (ARHL) ಬೆಂಚ್​ಮಾರ್ಕ್ 30 ಬೇಸಿಸ್​ ಪಾಯಿಂಟ್ಸ್​ ಅನ್ನು ಮೇ 9, 2022ರಿಂದ ಏರಿಕೆ ಮಾಡಿದೆ,” ಎಂದು ಶನಿವಾರ ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.

ಎಚ್​ಡಿಎಫ್​ಸಿ ಹೇಳಿಕೆ ಪ್ರಕಾರ, ಮೇ 9ನೇ ತಾರೀಕಿನಿಂದ ಬಡ್ಡಿ ದರ 7ರಿಂದ 7.45ರ ರೇಂಜ್​ನಲ್ಲಿ ಇರುತ್ತದೆ. ಈ ಹಿಂದೆ, ಈಗಾಗಲೇ ಸಾಲ ಪಡೆದವರಿಗೆ ಮೇ 1, 2022ರಿಂದ ಆರ್​ಪಿಎಲ್​ಆರ್​ ಅನ್ನು ಮೇ 1, 2022ರಿಂದ ಎಚ್​ಡಿಎಫ್​ಸಿ ಏರಿಕೆ ಮಾಡಿತ್ತು. ಕಳೆದ ಒಂದು ತಿಂಗಳಿಂದ ಹಲವು ಬ್ಯಾಂಕ್​ಗಳು ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿವೆ. ಈಚೆಗಷ್ಟೇ ಆರ್​ಬಿಐನಿಂದ ರೆಪೋ ದರವನ್ನು ಏರಿಕೆ ಮಾಡಲಾಗಿದೆ.

ವಿವಿಧ ವರ್ಗದಡಿ ಬರುವವರಿಗೆ ಹೊಸ ಬಡ್ಡಿ ದರ ಎಷ್ಟಿದೆ ಎಂಬ ಮಾಹಿತಿ ಹೀಗಿದೆ:
30 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ
ಕ್ರೆಡಿಟ್​ ಸ್ಕೋರ್​ 750ಕ್ಕಿಂತ ಹೆಚ್ಚಿದ್ದಲ್ಲಿ- ಶೇ 7
ಮಹಿಳೆಯರು- ಶೇ7.05
ಇತರರು- ಶೇ 7.10

30 ಲಕ್ಷ ರೂಪಾಯಿ ಮೇಲ್ಪಟ್ಟು 75 ಲಕ್ಷದ ತನಕ ಮೊತ್ತಕ್ಕೆ
ಮಹಿಳೆಯರು- ಶೇ7.30
ಇತರರು- ಶೇ 7.35

75 ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತಕ್ಕೆ
ಮಹಿಳೆಯರು- ಶೇ 7.40
ಇತರರು- ಶೇ 7.45

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Repo Rate: ರೆಪೋ ದರ ಏರಿಕೆಯೊಂದಿಗೆ ಸಾಲದ ಕಂತು ಆಗಲಿದೆ ಭಾರಿ, ಬಡ್ಡಿ ದರ ದುಬಾರಿ; ಗೃಹ, ವಾಹನ ಮೊದಲಾದ ಸಾಲ ವಜ್ಜೆ

Published On - 8:46 pm, Sat, 7 May 22