Financial Changes: ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆಯಿಂದ ಬ್ಯಾಂಕಿಂಗ್ ನಿಯಮಾವಳಿ ತನಕ ಮೇ 1ರಿಂದ ಜಾರಿಗೆ ಬಂದ ಬದಲಾವಣೆಗಳಿವು

| Updated By: Srinivas Mata

Updated on: May 02, 2022 | 2:18 PM

ಮೇ 1, 2022ರಿಂದ ಜಾರಿಗೆ ಬಂದಿರುವ ಹಣಕಾಸಿನ ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಬ್ಯಾಂಕಿಂಗ್, ವೈಯಕ್ತಿಕ ಹಣಕಾಸು ಮುಂತಾದ ವಿಚಾರದಲ್ಲಿ ಆದ ಬದಲಾವಣೆಗಳಿವು.

Financial Changes: ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆಯಿಂದ ಬ್ಯಾಂಕಿಂಗ್ ನಿಯಮಾವಳಿ ತನಕ ಮೇ 1ರಿಂದ ಜಾರಿಗೆ ಬಂದ ಬದಲಾವಣೆಗಳಿವು
ಸಾಂದರ್ಭಿಕ ಚಿತ್ರ
Follow us on

2023ನೇ ಇಸವಿಯಲ್ಲಿ ಅದಾಗಲೇ ನಾಲ್ಕು ತಿಂಗಳು ಕಳೆದುಹೋಗಿದೆ. ಈಗಾಗಲೇ ಮೇ ತಿಂಗಳು ಶುರುವಾಗಿದೆ. ಒಂದು ಹೊಸ ತಿಂಗಳ ಆರಂಭ ಅಂದರೆ ಹಣಕಾಸು ಸಂಗತಿಗಳಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳು ಅಂತಲೂ ಅರ್ಥ. ಮೇ ತಿಂಗಳ ಹಣಕಾಸು ವಿಚಾರದ ಬದಲಾವಣೆಗಳಲ್ಲಿ ಎಲ್​ಪಿಜಿ ಸಿಲಿಂಡರ್ (LPG Cylinder) ದರಗಳು, ಎಟಿಎಫ್ ಇಂಧನ ದರಗಳು ಮತ್ತು ಬ್ಯಾಂಕ್ ನಿಯಮಾವಳಿಗಳ ಬದಲಾವಣೆಗಳು ಒಳಗೊಂಡಿವೆ. ಸಿಲಿಂಡರ್ ಬೆಲೆ ಹೆಚ್ಚಳದಿಂದ ಮೊದಲುಗೊಂಡು, ಇಂಧನ ಬೆಲೆ ಏರಿಕೆ ತನಕ ಈ ಬದಲಾವಣೆಯ ನಿಯಮಗಳು ಜನಸಾಮಾನ್ಯ ಜೇಬಿಗೆ ವಜ್ಜೆ ಆಗುವಂಥವೆ. ಆದ್ದರಿಂದ ಈ ಬಗ್ಗೆ ವಿವರವಾಗಿಯೇ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ. 2022ರ ಮೇ ತಿಂಗಳಿಂದ ಆಗುವಂತಹ ಕೆಲವು ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ.

ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ
ಮೇ 1ನೇ ತಾರೀಕಿನಂದು ಸರ್ಕಾರಿ ಸ್ವಾಮ್ಯದ ಅನಿಲ ರೀಟೇಲರ್​ಗಳು 19 ಕೇಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆಯನ್ನು ರೂ. 102.50 ಏರಿಕೆ ಮಾಡಿದ್ದಾರೆ. ಆ ಮೂಲಕ ಸಿಲಿಂಡರ್ ಬೆಲೆ 2,355.50 ರೂಪಾಯಿ ಮುಟ್ಟಿದೆ. 5 ಕೇಜಿಉ ಎಲ್​ಪಿಜಿ ಸಿಲಿಂಡರ್ ಬೆಲೆ ಈಗ 655 ರೂಪಾಯಿ. ಆದರೆ 14.2 ಕೇಜಿಯ ಮನೆ ಬಳಕೆಯ ಸಿಲಿಂಡರ್​ ಬೆಲೆಯನ್ನು ಮೇ 1ನೇ ತಾರೀಕಿನಂದು ಬದಲಾವಣೆ ಮಾಡಿಲ್ಲ. ಸಾಮಾನ್ಯವಾಗಿ ಎಲ್​ಪಿಜಿ ಸಿಲಿಂಡರ್​ ದರಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಮಾಡಲಾಗುತ್ತದೆ. ದೆಹಲಿಯಲ್ಲಿ 19 ಕೇಜಿಯ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 2,355, ಮುಂಬೈನಲ್ಲಿ 2,307, ಕೋಲ್ಕತ್ತಾದಲ್ಲಿ 2455 ಮತ್ತು ಚೆನ್ನೈನಲ್ಲಿ 2508 ರೂಪಾಯಿ ಮುಟ್ಟಿದೆ.

ಎಟಿಎಫ್ ಬೆಲೆ ಏರಿಕೆ
ಜೆಟ್ ಫ್ಯುಯೆಲ್ ದರ ಭಾನುವಾರದಂದು ಶೇ 3.22ರಷ್ಟು ಮೇಲೇರಿ ಕಿಲೋಲೀಟರ್​ಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1,16,851.46 ರೂಪಾಯಿ ಮುಟ್ಟಿದೆ. ಈ ವರ್ಷದಲ್ಲಿ ಆಗುತ್ತಿರುವ ಸತತ ಒಂಬತ್ತನೇ ಏರಿಕೆ ಇದು. ಏರ್ ಟರ್ಬೈನ್ ಫ್ಯುಯೆಲ್ ಅಥವಾ ಎಟಿಎಫ್ ಇಂಧನ ದರವನ್ನು ಪ್ರತಿ ತಿಂಗಳ 1 ಮತ್ತು 14ನೇ ತಾರೀಕು ಪರಿಷ್ಕರಿಸಲಾಗುತ್ತದೆ. ಪರಿಷ್ಕರಣೆ ನಂತರ ದೆಹಲಿಯಲ್ಲಿ ಬೆಲೆ 1,16,851.46, ಮುಂಬೈನಲ್ಲಿ 1,15,617.24, ಕೋಲ್ಕತ್ತಾದಲ್ಲಿ 1,21,430.48 ಮತ್ತು ಚೆನ್ನೈನಲ್ಲಿ 1,20,728.03 ರೂಪಾಯಿ ಮುಟ್ಟಿದೆ.

ಕೊಟಕ್ ಮಹೀಂದ್ರಾ ಬ್ಯಾಂಕ್ ನಿಯಮ ಬದಲಾವಣೆ
ಮೇ 1ನೇ ತಾರೀಕಿನಿಂದ ಅನ್ವಯಿಸುವಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಉಳಿತಾಯ ಖಾತೆ ಮತ್ತು ವೇತನ ಖಾತೆದಾರರಿಗೆ ಹಲವು ನಿಯಮ ಬದಲಾವಣೆಗಳನ್ನು ಪರಿಚಯಿಸಿದೆ. ವಿವಿಧ ಸೇವೆಗಳಿಗೆ ಉಳಿತಾಯ ಖಾತೆದಾರರಿಗೆ ಶುಲ್ಕಗಳ ಪರಿಷ್ಕರಣೆ ಆಗಿದೆ. ಚೆಕ್ ವಿತರಣೆ ಮತ್ತು ಹಣಕಾಸೇತರ ಕಾರಣಗಳಿಗೆ ರಿಟರ್ನ್ ಆದಲ್ಲಿ ಅದಕ್ಕೆ ವಿಧಿಸುವ ಶುಲ್ಕದಲ್ಲಿ ಎಲ್ಲ ಉಳಿತಾಯ ಖಾತೆ ಮತ್ತು ವೇತನದಾರ ಖಾತೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಪೂರ್ಣ ಮತ್ತು ವ್ಯತ್ಯಾಸ ಅಥವಾ ಅಮಾನ್ಯ ಸಹಿ ಸಹ ಒಲಗೊಂಡಿದೆ. ಇನ್ನು ಮುಂದೆ ಪ್ರತಿ ಸಲಕ್ಕೆ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ಅಷ್ಟೇ ಅಲ್ಲ, ಚೆಕ್ ಡೆಪಾಸಿಟ್ ಮತ್ತು ರಿಟರ್ನ್ ಶುಲ್ಕ ಹಾಗೂ ಸ್ಟ್ಯಾಂಡಿಂಗ್ ಸೂಚನೆ ವೈಫಲ್ಯ ಶುಲ್ಕವನ್ನು ಪ್ರತಿ ಸಲಕ್ಕೆ 100ರಿಂದ 200 ರೂಪಾಯಿಗೆ ಹೆಚ್ಚಿಸಲಾಗಿದೆ.

ಪಿಎಂ ಕಿಸಾನ್ ಇ-ಕೆವೈಸಿ
ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ ಅನುಕೂಲ ಪಡೆಯುವ ರೈತರು ಕಡ್ಡಾಯವಾಗಿ ಮೇ 31ರೊಳಗಾಗಿ ಇ-ಕೆವೈಸಿ ಸೇರಿಸಬೇಕು. ಪಿಎಂ ಕಿಸಾನ್ ಇ-ಕೆವೈಸಿ ಆನ್​ಲೈನ್ ಮೂಲಕ ಮಾಡಬಹುದು. ಎಲ್ಲ ಅರ್ಹ ರೈತರಿಗೆ ಗಡುವನ್ನು ಮೇ 22ರಿಂದ 31ಕ್ಕೆ ವಿಸ್ತರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: PM Kisan Samman Nidhi: ಒಂದು ಕುಟುಂಬದಲ್ಲಿ ಎಷ್ಟು ಮಂದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಪ್ರಯೋಜನ ಪಡೆಯಬಹುದು?

Published On - 2:17 pm, Mon, 2 May 22