Bank Holidays in May 2022: ಮೇ ತಿಂಗಳಲ್ಲಿ 11 ಬ್ಯಾಂಕ್​ ರಜಾ ದಿನ; ಯಾವ್ಯಾವ ವಿಶೇಷ ಎಂಬ ಮಾಹಿತಿ ಇಲ್ಲಿದೆ

2022ರ ಮೇ ತಿಂಗಳಲ್ಲಿ ಇರುವ ಬ್ಯಾಂಕ್ ರಜಾ ದಿನಗಳ ವಿವರ ಇಲ್ಲಿದೆ. ಬ್ಯಾಂಕ್ ಶಾಖೆಗೆ ತೆರಳಿ ಮಾಡಬೇಕಾದ ವ್ಯವಹಾರಗಳಿದ್ದಲ್ಲಿ ಈ ದಿನಗಳಲ್ಲಿ ಸಾಧ್ಯವಿಲ್ಲ ಎಂಬುದನ್ನು ತಿಳಿಯಿರಿ.

Bank Holidays in May 2022: ಮೇ ತಿಂಗಳಲ್ಲಿ 11 ಬ್ಯಾಂಕ್​ ರಜಾ ದಿನ; ಯಾವ್ಯಾವ ವಿಶೇಷ ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Edited By:

Updated on: Apr 27, 2022 | 12:58 PM

ಈದ್-ಉಲ್-ಫಿತ್ರ್, ಬುದ್ಧ ಪೂರ್ಣಿಮಾ ಮತ್ತು ಭಗವಾನ್ ಶ್ರೀ ಪರಶುರಾಮ ಜಯಂತಿಯಂಥದ್ದು ಸೇರಿ ಮೇ ತಿಂಗಳಲ್ಲಿ 11 ಬ್ಯಾಂಕ್ ರಜೆಗಳು ಇರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿ ಪ್ರಕಾರ ವಾರಾಂತ್ಯ ಸೇರಿದಂತೆ ತಿಂಗಳಲ್ಲಿ ಒಟ್ಟು 11 ದಿನಗಳ ಕಾಲ ಭಾರತೀಯ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್, ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವ ಅಡಿಯಲ್ಲಿ ಕೇಂದ್ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ರಾಷ್ಟ್ರೀಯ ಮತ್ತು ಪ್ರಾದೇಶಿಕ ಎಂದು ವರ್ಗೀಕರಿಸುತ್ತದೆ. ಕೆಲವು ರಜಾದಿನಗಳು ಆಯಾ ಪ್ರದೇಶಕ್ಕೆ ನಿರ್ದಿಷ್ಟವಾಗಿರುತ್ತವೆ. ಅಂದರೆ ಅವು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು, ಇತರವು ರಾಷ್ಟ್ರೀಯವಾಗಿರುತ್ತವೆ.

2022ರ ಮೇ ರಜಾದಿನಗಳಲ್ಲಿ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದ ಜತೆಗೆ ಹಬ್ಬಗಳ 4 ರಜಾದಿನಗಳು ಸೇರಿವೆ. ರಜಾದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಡಬೇಕು.

ಮೇ 2022 ರ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಮೇ 1 (ಭಾನುವಾರ) – ಅಖಿಲ ಭಾರತ
ಮೇ 2 (ಸೋಮವಾರ) – ರಂಜಾನ್-ಈದ್ (ಈದ್-ಉಲ್-ಫಿತ್ರ್). ಕೇರಳದ ಕೊಚ್ಚಿ, ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಮೇ 3 (ಮಂಗಳವಾರ) – ಭಗವಾನ್ ಶ್ರೀ ಪರಶುರಾಮ ಜಯಂತಿ/ರಂಜಾನ್-ಈದ್ (ಈದ್-ಉಲ್-ಫಿತ್ರ್)/ಬಸವ ಜಯಂತಿ/ಅಕ್ಷಯ ತೃತೀಯ. ಕೊಚ್ಚಿ ಮತ್ತು ತಿರುವನಂತಪುರಂ ಹೊರತುಪಡಿಸಿ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಮೇ 8 (ಭಾನುವಾರ) – ಅಖಿಲ ಭಾರತ
ಮೇ 9 (ಸೋಮವಾರ) – ರವೀಂದ್ರನಾಥ ಟಾಗೋರ್ ಜನ್ಮದಿನ. ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ರಜೆ.
ಮೇ 14 (ಶನಿವಾರ) – ಅಖಿಲ ಭಾರತ
ಮೇ 15 (ಭಾನುವಾರ)- ಅಖಿಲ ಭಾರತ
ಮೇ 16 (ಸೋಮವಾರ) – ಬುದ್ಧ ಪೂರ್ಣಿಮಾ. ತ್ರಿಪುರಾ, ಬೇಲಾಪುರ್, ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣ, ಉತ್ತರಾಖಂಡ, ಜಮ್ಮು, ಉತ್ತರಪ್ರದೇಶ, ಮಹಾರಾಷ್ಟ್ರ, ನವದೆಹಲಿ ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಮೇ 22 (ಭಾನುವಾರ) – ಅಖಿಲ ಭಾರತ
ಮೇ 28 (ಶನಿವಾರ) – ಅಖಿಲ ಭಾರತ
ಮೇ 29 (ಭಾನುವಾರ)- ಅಖಿಲ ಭಾರತ

ಇದನ್ನೂ ಓದಿ: Stock Market Timings: ಏಪ್ರಿಲ್ 18ರಿಂದ ಬದಲಾಗಲಿದೆ ಆರ್​ಬಿಐ ನಿಯಂತ್ರಿಸುವ ಎಲ್ಲ ಮಾರುಕಟ್ಟೆಗಳ ವಹಿವಾಟಿನ ಸಮಯ