Two Wheeler Loan: ಟೂ ವ್ಹೀಲರ್ ಸಾಲ ಶೇ 6.85ರಿಂದ ಶುರು; ಉತ್ತಮ ಬಡ್ಡಿ ದರಕ್ಕೆ ಸಾಲ ನೀಡುವ 20 ಬ್ಯಾಂಕ್ಗಳಿವು
ಟೂ ವ್ಹೀಲರ್ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ 20 ಬ್ಯಾಂಕ್ಗಳ ಬಗ್ಗೆ ವಿವರ ಇಲ್ಲಿದೆ. ಬಡ್ಡಿ ದರವು ಶೇ 6.85ರಿಂದ ಶುರುವಾಗುತ್ತದೆ.
ಕೊವಿಡ್-19 ಲಾಕ್ಡೌನ್ ದೇಶದ ಹಲವು ಭಾಗಗಳಲ್ಲಿ ತೆರವು ಮಾಡಲಾಗಿದೆ. ಆದರೆ ಕೊರೊನಾ ಇನ್ನೂ ಕೊನೆ ಆಗಿಲ್ಲ. ಆದ್ದರಿಂದ ಸುರಕ್ಷತಾ ಪ್ರೊಟೋಕಾಲ್ ಅನುಸರಿಸುವುದು ಅಗತ್ಯ. ಇಂಥ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ಬಳಸುವುದಕ್ಕಿಂತ ವಯಕ್ತಿಕ ವಾಹನ ಸುರಕ್ಷಿತ ಎಂದು ಭಾವಿಸಿ, ಆ ಕಡೆಗೆ ಜನರು ಹೆಚ್ಚು ಸಾಗುತ್ತಿದ್ದಾರೆ. ದ್ವಿಚಕ್ರ ವಾಹನ ಖರೀದಿ ಮಾಡುವುದು ಸುಲಭ ಹಾಗೂ ಕೈಗೆಟುಕುವಂಥದ್ದು. ಈ ಮೂಲಕ ದೈನಂದಿನ ಸಂಚಾರ ಸಲೀಸಾಗುತ್ತದೆ. ಒಂದು ವೇಳೆ ಟೂ ವ್ಹೀಲರ್ ಖರೀದಿ ಮಾಡಬೇಕು ಅಂತ ಉದ್ದೇಶ ಇದ್ದು, ಅದಕ್ಕೆ ಹಣದ ಕೊರತೆ ಇದ್ದಲ್ಲಿ ಸಾಲ ಪಡೆಯಬಹುದು. ದ್ವಿಚಕ್ರ ವಾಹನ ಸಾಲ ಅನ್ನೋದು ಸ್ಕೂಟರ್ ಅಥವಾ ಬೈಕ್ ಖರೀದಿಸುವುದಕ್ಕೆ ಅತ್ಯಂತ ಸರಳ ಮಾರ್ಗ. ಈ ಮೂಲಕ ಸರಳವಾದ ಇಎಂಐ ಮೂಲಕವಾಗಿ ಅದನ್ನು ಹಿಂತಿರುಗಿಸಬಹುದು. ಈಗಾಗಲೇ ಸಾಲಕ್ಕಾಗಿ ಪ್ರಯತ್ನವನ್ನೇ ಆರಂಭಿಸಿರುವವರು ಸಾಲ ನೀಡುವ ವಿವಿಧ ಸಂಸ್ಥೆಗಳ ಬಗ್ಗೆ ಹೋಲಿಕೆ ಮಾಡುವುದು ಉತ್ತಮ.
ಅರ್ಹತೆಯ ಮಾನದಂಡ, ಬಡ್ಡಿ ದರ, ಪ್ರೊಸೆಸಿಂಗ್ ಶುಲ್ಕ, ಮರುಪಾವತಿ ಅವಧಿ, ಲೋನ್ ಟು ವ್ಯಾಲ್ಯೂ (LTV) ಅನುಪಾತ ಮತ್ತು ಶುಲ್ಕಗಳು ಇತ್ಯಾದಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಇನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಎಷ್ಟು ಸಾಲ ಕೊಡಲಾಗುತ್ತದೆ ಮತ್ತು ಡೌನ್ಪೇಮೆಂಟ್ ಎಷ್ಟು ಹೊಂದಿಸಿಕೊಳ್ಳಬೇಕಾಗುತ್ತದೆ ಎಂಬ ಬಗ್ಗೆಯೂ ತಿಳಿಯಬೇಕು. ಇನ್ನು ಸಾಲಕ್ಕೆ ಅರ್ಜಿ ಸಲ್ಲಿಸುವ ಮುಂಚೆ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಉತ್ತಮವಾದ ಕ್ರೆಡಿಟ್ ಸ್ಕೋರ್ ಇದ್ದಲ್ಲಿ ಬಡ್ಡಿ ದರ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಸದ್ಯಕ್ಕೆ ಇರುವ ಅತ್ಯಂತ ಕಡಿಮೆ ಬಡ್ಡಿ ದರ ಅಂದರೆ ಅದು ಶೇ 6.85ರಿಂದ ಶುರುವಾಗುತ್ತದೆ. ಬ್ಯಾಂಕ್ ಆಫ್ ಇಂಡಿಯಾ ಒದಗಿಸುತ್ತಿದೆ. ವಯಸ್ಸು, ಆದಾಯ, ಗುರುತು ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಎನ್ನುತ್ತದೆ ಬ್ಯಾಂಕ್ಬಜಾರ್.
ದ್ವಿಚಕ್ರ ವಾಹನ ಸಾಲಕ್ಕಾಗಿ ಎದುರು ನೋಡುತ್ತಿರುವವರಿಗೆ ಪ್ರಮುಖ 20 ಬ್ಯಾಂಕ್ಗಳಲ್ಲಿನ ಬಡ್ಡಿ ದರ ಹಾಗೂ 1 ಲಕ್ಷ ರೂಪಾಯಿ ಸಾಲವನ್ನು ಮೂರು ವರ್ಷದ ಅವಧಿಗೆ ಪಡೆದರೆ ಬರುವ ಅಂದಾಜು ಇಎಂಐ ಮೊತ್ತ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ:
ಬ್ಯಾಂಕ್ ವಾರ್ಷಿಕ ಬಡ್ಡಿ ದರ (ಶೇಕಡಾ) ಇಎಂಐ (ರೂ.) ಬ್ಯಾಂಕ್ ಆಫ್ ಇಂಡಿಯಾ 6.85 3,081 ಸೆಂಟ್ರಲ್ ಬ್ಯಾಂಕ್ 7.25 3,099 ಪಂಜಾಬ್ ನ್ಯಾಷನಲ್ ಬ್ಯಾಂಕ್ 8.65 3,164 ಜೆಅಂಡ್ಕೆ ಬ್ಯಾಂಕ್ 8.70 3,166 ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 8.80 3,171 ಕೆನರಾ ಬ್ಯಾಂಕ್ 9.00 3,180 ಐಡಿಬಿಐ ಬ್ಯಾಂಕ್ 9.80 3,217 ಯೂನಿಯನ್ ಬ್ಯಾಂಕ್ 9.90 3,222 ಇಂಡಿಯನ್ ಓವರ್ಸೀಸ್ ಬ್ಯಾಂಕ್ 10.05 3,229 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 10.25 3,238 ಯೆಸ್ ಬ್ಯಾಂಕ್ 10.39 3,245 ಬ್ಯಾಂಕ್ ಆಫ್ ಬರೋಡ 10.75 3,262 ಬ್ಯಾಂಕ್ ಆಫ್ ಮಹಾರಾಷ್ಟ್ರ 10.80 3,264 ಆಕ್ಸಿಸ್ ಬ್ಯಾಂಕ್ 10.80 3,264 ಸೌತ್ ಇಂಡಿಯನ್ ಬ್ಯಾಂಕ್ 10.95 3,272 ಯುಕೋ ಬ್ಯಾಂಕ್ 11.70 3,307 ಎಚ್ಡಿಎಫ್ಸಿ ಬ್ಯಾಂಕ್ 12.00 3,321 ಕರ್ಣಾಟಕ ಬ್ಯಾಂಕ್ 12.45 3,343 ಧನಲಕ್ಷ್ಮೀ ಬ್ಯಾಂಕ್ 12.50 3,345 ಫೆಡರಲ್ ಬ್ಯಾಂಕ್ 12.50 3,345 ಕರೂರ್ ವೈಶ್ಯ ಬ್ಯಾಂಕ್ 14.00 3,418
(ಮಾಹಿತಿ ಮೂಲ: ಆಯಾ ಬ್ಯಾಂಕ್ ವೆಬ್ಸೈಟ್ಗಳು ನವೆಂಬರ್ 16, 2021ಕ್ಕೆ ಅನ್ವಯ ಆಗುವಂತೆ)
ಇದನ್ನೂ ಓದಿ: Car Loans: ಅಗ್ಗದ ಬಡ್ಡಿ ದರದಲ್ಲಿ ಕಾರು ಸಾಲ ಒದಗಿಸುತ್ತಿವೆ ಈ 9 ಬ್ಯಾಂಕ್ಗಳು