ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (LIC) ಹಲವಾರು ಪಾಲಿಸಿಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಸರಳ್ ಪೆನ್ಷನ್ ಎಂಬುದು ತಕ್ಷಣದ ಪಿಂಚಣಿ ಯೋಜನೆಯಾಗಿದೆ. ಇದು ಖಚಿತವಾದ ರಿಟರ್ನ್ ದರದಲ್ಲಿ ಪಿಂಚಣಿಯನ್ನು ಪಾವತಿಸುತ್ತದೆ. ಪಿಂಚಣಿ ಜೀವಮಾನ ಪೂರ್ತಿ ಇರುತ್ತದೆ ಮತ್ತು ಒಬ್ಬರು ಹೂಡಿಕೆ ಮಾಡುವ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ. ಇದು ಸ್ಟ್ಯಾಂಡರ್ಡ್, ವೈಯಕ್ತಿಕ, ಒಂದೇ ಪ್ರೀಮಿಯಂ, ವರ್ಷಾಶನ (Annuity) ಯೋಜನೆ. ಈ ವರ್ಷಾಶನ ಯೋಜನೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ಮಾರ್ಗಸೂಚಿಗಳ ಪ್ರಕಾರ ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲ ಜೀವ ವಿಮೆದಾರರಿಗೂ ಒಂದೇ ರೀತಿಯ ನಿಯಮಗಳು ಮತ್ತು ಷರತ್ತುಗಳನ್ನು ಅನ್ವಯ ಮಾಡುತ್ತದೆ.
ವೈಶಿಷ್ಟ್ಯಗಳು
ಪ್ರವೇಶದ ಕನಿಷ್ಠ ವಯಸ್ಸು: 40 ವರ್ಷಗಳು
ಪ್ರವೇಶದ ಗರಿಷ್ಠ ವಯಸ್ಸು: 80 ವರ್ಷಗಳು
ಕನಿಷ್ಠ ವರ್ಷಾಶನ: ತಿಂಗಳಿಗೆ ರೂ 1,000 (ವರ್ಷಕ್ಕೆ ರೂ. 12,000)
ಗರಿಷ್ಠ ವರ್ಷಾಶನ: ಮಿತಿಯಿಲ್ಲ
ಕನಿಷ್ಠ ಖರೀದಿ ಬೆಲೆ: ಕನಿಷ್ಠ ವರ್ಷಾಶನವನ್ನು ಅವಲಂಬಿಸಿರುತ್ತದೆ
ಗರಿಷ್ಠ ಖರೀದಿ ಬೆಲೆ: ಮಿತಿಯಿಲ್ಲ
ವರ್ಷಾಶನದ ವಿಧ
ಯೋಜನೆಯು ತಕ್ಷಣದ ವರ್ಷಾಶನ ಯೋಜನೆ ಮೂಲಕ ಎರಡು ಬಗೆಯ ಆಯ್ಕೆಗಳನ್ನು ನೀಡುತ್ತದೆ. ಖರೀದಿ ಬೆಲೆ (ಆರಂಭದಲ್ಲಿ ಹೂಡಿಕೆ ಮಾಡಿದ ಮೊತ್ತ) ಮತ್ತು ಜಂಟಿ-ಲೈಫ್ (ಕೊನೆಯ ಬದುಕುಳಿದವರ ವರ್ಷಾಶನ) ವಾಪಸಾತಿಯೊಂದಿಗೆ ಜೀವಮಾನವಿಡೀ ಪಿಂಚಣಿ ಪಡೆಯಬಹುದು.
ರಿಬೇಟ್
ಈ ಯೋಜನೆಯ ಅಡಿಯಲ್ಲಿ ಎಲ್ಐಸಿ ಹೆಚ್ಚಿನ ಖರೀದಿ ಬೆಲೆಗಳಿಗೆ ಪ್ರೋತ್ಸಾಹವನ್ನು ಘೋಷಿಸಿದೆ. ಏಜೆಂಟ್ ಅಥವಾ ಮಧ್ಯವರ್ತಿ ಅಥವಾ ಪಾಯಿಂಟ್ ಆಫ್ ಸೇಲ್ಸ್ ಪರ್ಸನ್ ಲೈಫ್ ಇನ್ಷೂರೆನ್ಸ್ (POSP LI) ಯಾವುದೇ ಪಾಲ್ಗೊಳ್ಳುವಿಕೆ ಇಲ್ಲದೆ ಗ್ರಾಹಕರು ಅದನ್ನು ಆನ್‌ಲೈನ್ ವಿಧಾನ ಮೂಲಕ ಖರೀದಿಸಿದರೆ ವಿನಾಯಿತಿ ಪಡೆಯುವ ಅವಕಾಶವೂ ಇದೆ.
ಅನುಕೂಲಗಳು
ಆಯ್ಕೆ 1 (ಸಿಂಗಲ್ ಲೈಫ್): ಖರೀದಿದಾರರು ಜೀವಂತವಾಗಿರುವವರೆಗೂ ವರ್ಷಾಶನಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಅವರ ಮರಣದ ನಂತರ ನಾಮಿನಿ/ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸಂಪೂರ್ಣ ಖರೀದಿ ಬೆಲೆಯನ್ನು ನೀಡಲಾಗುತ್ತದೆ.
ಆಯ್ಕೆ 2 (ಜಾಯಿಂಟ್ ಲೈಫ್): ಜಾಯಿಂಟ್ ಲೈಫ್ ಸಂದರ್ಭದಲ್ಲಿ ಎರಡು ಬಗೆಯ ಸಾವಿನ ಅನುಕೂಲಗಳ ಆಯ್ಕೆಗಳಿವೆ:
ಎ) ಮೊದಲನೆಯದು: ಶೇ 100ರಷ್ಟು ವರ್ಷಾಶನ ಪಾವತಿಗಳನ್ನು ವರ್ಷಾಶನದಾರರಲ್ಲಿ ಒಬ್ಬರು ಜೀವಂತ ಇರುವವರೆಗೆ ಪಾವತಿಸುವುದನ್ನು ಮುಂದುವರಿಸಲಾಗುತ್ತದೆ.
ಬಿ) ಕೊನೆಯದಾಗಿ ಬದುಕುಳಿದವರು ಮೃತಪಟ್ಟರೆ: ವರ್ಷಾಶನ ಪಾವತಿಯನ್ನು ನಿಲ್ಲಿಸಲಾಗುತ್ತದೆ ಮತ್ತು ಖರೀದಿ ಬೆಲೆಯ ಶೇ 100ರಷ್ಟನ್ನು ನಾಮಿನಿ ಅಥವಾ ಕಾನೂನು ಪ್ರಕಾರದ ಉತ್ತರಾಧಿಕಾರಿಗಳಿಗೆ ಪಾವತಿಸಲಾಗುತ್ತದೆ.
ಮೆಚ್ಯೂರಿಟಿ ಅನುಕೂಲಗಳು
ಈ ಯೋಜನೆಯಡಿ ಯಾವುದೇ ಮೆಚ್ಯೂರಿಟಿ ಪ್ರಯೋಜನವಿಲ್ಲ.
ಹೋಲಿಕೆ
ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ಬ್ರೋಷರ್ ಪ್ರಕಾರ, ಒಬ್ಬ ವ್ಯಕ್ತಿಯು ಎಲ್‌ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ರೂ. 10 ಲಕ್ಷ ಹೂಡಿಕೆ ಮಾಡಿದರೆ ಆತ ಅಥವಾ ಆಕೆಗೆ ವಾರ್ಷಿಕ ರೂ. 51,650 ಪಿಂಚಣಿ ಪಡೆಯುತ್ತಾರೆ ಅದು ತಿಂಗಳಿಗೆ ರೂ. 4,304 ಆಗಿರುತ್ತದೆ. ಜಾಯಿಂಟ್ ಲೈಫ್ ಸಂದರ್ಭದಲ್ಲಿ ವಾರ್ಷಿಕ ಪಿಂಚಣಿ 51,150 ರೂ. ಆಗುತ್ತದೆ.
ಇತರ ರೀತಿಯ ಪಿಂಚಣಿ ಯೋಜನೆಗಳು ಸರಿಸುಮಾರು ಅದೇ ಪ್ರಮಾಣದ ಪಿಂಚಣಿಯನ್ನು ನೀಡುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು 5,000 ಪಿಂಚಣಿ ಮಾಸಿಕ ತಕ್ಷಣದ ಪಿಂಚಣಿ ಪಡೆಯಲು ಒಮ್ಮೆ 11 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.
ಪಾಲಿಸಿ ಸಾಲ
ಪಾಲಿಸಿ ಆರಂಭದ ದಿನಾಂಕದಿಂದ ಆರು ತಿಂಗಳ ನಂತರ ಸಾಲ ಸೌಲಭ್ಯವೂ ಲಭ್ಯವಿದೆ.
ಇದನ್ನೂ ಓದಿ: LIC Jeevan Umang Policy: ಈ ಎಲ್ಐಸಿ ಪಾಲಿಸಿಯಲ್ಲಿ ದಿನಕ್ಕೆ ರೂ. 43 ಪಾವತಿಸಿ, ರೂ. 27.60 ಲಕ್ಷ ಪಡೆಯಿರಿ