AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Pension Scheme: ಎನ್​ಪಿಎಸ್​ನಲ್ಲಿ ಆದ ಈ 6 ಬದಲಾವಣೆಗಳ ಬಗ್ಗೆ ನಿಮಗೆ ಗೊತ್ತಾಯಿತಾ?

ನ್ಯಾಷನಲ್ ಪೆನ್ಷನ್​ ಸ್ಕೀಮ್​ನಲ್ಲಿ ಈಚೆಗೆ 6 ಬದಲಾವಣೆಗಳನ್ನು ಮಾಡಲಾಗಿದೆ. ಯಾವುವು ಆ ಬದಲಾವಣೆಗಳು ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

National Pension Scheme: ಎನ್​ಪಿಎಸ್​ನಲ್ಲಿ ಆದ ಈ 6 ಬದಲಾವಣೆಗಳ ಬಗ್ಗೆ ನಿಮಗೆ ಗೊತ್ತಾಯಿತಾ?
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Oct 22, 2021 | 1:19 PM

Share

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಇತ್ತೀಚೆಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ಹಲವು ನಿಯಮಗಳ ಬದಲಾವಣೆ ಮಾಡಿದೆ. ಹೂಡಿಕೆದಾರರಿಗೆ ನಿವೃತ್ತಿ ಉಳಿತಾಯ ಯೋಜನೆಯು ಆಕರ್ಷಕವಾಗಿದೆ. ಎನ್‌ಪಿಎಸ್ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಉಪಕ್ರಮವಾಗಿದ್ದರೂ ಸಾರ್ವಜನಿಕ, ಖಾಸಗಿ ಮತ್ತು ಅಸಂಘಟಿತ ವಲಯಗಳ ಉದ್ಯೋಗಿಗಳಿಗೆ ಇದು ಮುಕ್ತವಾಗಿದೆ. ಈ ಯೋಜನೆಯು ಈಕ್ವಿಟಿ, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಸರ್ಕಾರಿ ಭದ್ರತೆಗಳು ಹೀಗೆ ಅದರ ಚಂದಾದಾರರಿಗೆ ಅನೇಕ ಹೂಡಿಕೆ ಆಯ್ಕೆಗಳನ್ನು ಒದಗಿಸುತ್ತದೆ. NPSನಲ್ಲಿ ಹಣವನ್ನು ನಿರ್ವಹಿಸಲು PFRDAನಲ್ಲಿ ನೋಂದಾಯಿಸಲಾದ ಹಲವು ಫಂಡ್​ ಮ್ಯಾನೇಜರ್​ಗಳು ಇದ್ದಾರೆ. NPS ಯೋಜನೆಯಲ್ಲಿ ನೋಂದಾಯಿಸುವ ಸಮಯದಲ್ಲಿ ಹೂಡಿಕೆದಾರರು ಒಬ್ಬ ಫಂಡ್ ಮ್ಯಾನೇಜರ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ಅವರ ಅಸೆಟ್ ಕ್ಲಾಸ್ ಆದ್ಯತೆಗೆ ಸಂಬಂಧಿಸಿದಂತೆ ತಮ್ಮ ಆಯ್ಕೆಗಳನ್ನು ಬಳಸಿಕೊಳ್ಳಬೇಕು. ಹೂಡಿಕೆದಾರರು ಈಕ್ವಿಟಿಗಳಲ್ಲಿ ತೆಗೆದುಕೊಳ್ಳಬಹುದಾದ ಗರಿಷ್ಠ ಎಕ್ಸ್​ಪೋಷರ್​ ಅನ್ನು ಶೇ 75ಕ್ಕೆ ಮಿತಿಗೊಳಿಸಲಾಗಿದೆ. ಅಂದಹಾಗೆ NPSನಲ್ಲಿ ಮಾಡಿದ ಇತ್ತೀಚಿನ ಆರು ಬದಲಾವಣೆಗಳು ಇಲ್ಲಿವೆ:

ಹೊಸ ಪ್ರವೇಶ ನಿಯಮ ನಿಯಂತ್ರಕರು ಇತ್ತೀಚೆಗೆ ಎನ್‌ಪಿಎಸ್‌ಗೆ ಪ್ರವೇಶ ವಯಸ್ಸನ್ನು 70 ವರ್ಷಗಳಿಗೆ ಹೆಚ್ಚಿಸಿದ್ದಾರೆ. ಮೊದಲು ಪ್ರವೇಶ ವಯಸ್ಸು 65 ವರ್ಷಗಳಿತ್ತು. ಈಗ, 18ರಿಂದ 70 ವರ್ಷ ವಯಸ್ಸಿನ ಯಾರಾದರೂ NPSಗೆ ಚಂದಾದಾರರಾಗಬಹುದು. ಹೊಸ ಪ್ರವೇಶ ವಯಸ್ಸಿನ ನಿಯಮದೊಂದಿಗೆ NPSನಿಂದ ನಿರ್ಗಮಿಸಿದ ಚಂದಾದಾರರು ಸಹ ತಮ್ಮ ಖಾತೆಗಳನ್ನು ಪುನಃ ತೆರೆಯಬಹುದು.

ಹೊಸ ನಿರ್ಗಮನ ನಿಯಮಗಳು ಈಗ 65 ವರ್ಷಗಳ ನಂತರ NPSಗೆ ಸೇರುವ ಹೊಸ ಚಂದಾದಾರರಿಗೆ 3 ವರ್ಷಗಳ ಲಾಕ್-ಇನ್ ಅವಧಿ ಇದೆ. ನಿರ್ಗಮನದ ಗರಿಷ್ಠ ವಯಸ್ಸು 75. ಚಂದಾದಾರರು ನಿಧಿಯ ಶೇ 60ರಷ್ಟನ್ನು ತೆರಿಗೆ ರಹಿತ ಒಟ್ಟು ಮೊತ್ತವಾಗಿ ಹಿಂಪಡೆಯಬಹುದು ಮತ್ತು ಉಳಿದ ಶೇ 40ರಷ್ಟು ಮೆಚ್ಯೂರಿಟಿ ನಿಧಿಯನ್ನು ವರ್ಷಾಶನ ಖರೀದಿಗೆ ಬಳಸಬೇಕಾಗುತ್ತದೆ. ಆದರೂ ಮೆಚ್ಯೂರಿಟಿ ನಿಧಿಯು 5 ಲಕ್ಷಕ್ಕಿಂತ ಕಡಿಮೆ ಇದ್ದರೆ ಚಂದಾದಾರರು ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು.

ಸರ್ಕಾರಿ ವಲಯದ NPS ಚಂದಾದಾರರಿಗೆ ಆನ್‌ಲೈನ್ ನಿರ್ಗಮನ ಪ್ರಕ್ರಿಯೆ ವಿಸ್ತರಣೆ ಪಿಎಫ್‌ಆರ್‌ಡಿಎ ಇತ್ತೀಚೆಗೆ ಆನ್‌ಲೈನ್ ಮತ್ತು ಕಾಗದರಹಿತ ನಿರ್ಗಮನ ಪ್ರಕ್ರಿಯೆಯನ್ನು ಸರ್ಕಾರಿ ವಲಯದ ಚಂದಾದಾರರಿಗೆ ಈಗಿರುವ ಭೌತಿಕ (Physical) ವಿಧಾನದ ಜೊತೆಗೆ ಒಂದು ಆಯ್ಕೆಯಾಗಿ ವಿಸ್ತರಿಸಿದೆ. ಅಕ್ಟೋಬರ್ 4, 2021ರ ಸುತ್ತೋಲೆಯಲ್ಲಿ ನಿಯಂತ್ರಕರು ಹೇಳಿದಂತೆ, “ಚಂದಾದಾರರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚು ಪರಿಣಾಮಕಾರಿ ಸೇವೆ ನೀಡುವ ಭಾಗವಾಗಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ, ಆನ್‌ಲೈನ್ ನಿರ್ಗಮನವನ್ನು ಶೀಘ್ರಗೊಳಿಸುವ ಉದ್ದೇಶದೊಂದಿಗೆ ಬ್ಯಾಂಕ್ ಖಾತೆ ಪರಿಶೀಲನೆಯೊಂದಿಗೆ ಸಂಯೋಜಿಸಲಾಗುವುದು. ಎನ್‌ಪಿಎಸ್‌ನಲ್ಲಿ ಒಳಗೊಂಡಿರುವ ಕೇಂದ್ರ/ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳಿಗೂ ಈ ಸೌಲಭ್ಯ ಲಭ್ಯವಿರುತ್ತದೆ.”

ಹೊಸ ಅಕಾಲಿಕ ನಿರ್ಗಮನ ನಿಯಮ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ (ಎನ್‌ಪಿಎಸ್) ಅಕಾಲಿಕ ನಿರ್ಗಮನವನ್ನು ಯೋಜಿಸುತ್ತಿದ್ದರೆ ಒಟ್ಟು ಸಂಪತ್ತಿನ ಶೇ 20ರಷ್ಟು ಮಾತ್ರ NPS ಅಡಿಯಲ್ಲಿ ಒಟ್ಟು ಮೊತ್ತವಾಗಿ ಪಡೆಯಬಹುದು. ಉಳಿದ ಮೊತ್ತದೊಂದಿಗೆ ವರ್ಷಾಶನವನ್ನು ಖರೀದಿಸಬೇಕು. ಈ 80:20 ನಿಯಮವು 18ರಿಂದ 60 ವರ್ಷಗಳ ನಡುವೆ NPSಗೆ ಸೇರುವ ಸರ್ಕಾರಿ ಮತ್ತು ಸರ್ಕಾರೇತರ ವಲಯದ ಚಂದಾದಾರರಿಗೆ ಅನ್ವಯಿಸುತ್ತದೆ. ಆದರೂ ಸರ್ಕಾರೇತರ ವಲಯದ ಸಂದರ್ಭದಲ್ಲಿ ಆ ವ್ಯಕ್ತಿಯು 10 ವರ್ಷಗಳವರೆಗೆ ಚಂದಾದಾರರಾಗಿರಬೇಕು.

NPS ಖಾತೆಯನ್ನು 75 ವರ್ಷಗಳವರೆಗೆ ಮುಂದೂಡಬಹುದು ಎನ್‌ಪಿಎಸ್ ಖಾತೆದಾರರಿಗೆ ತಮ್ಮ ಖಾತೆಯನ್ನು 75 ವರ್ಷಗಳವರೆಗೆ ಮುಂದೂಡಲು ಅನುಮತಿ ನೀಡಲಾಗಿದೆ.

ಆಸ್ತಿ ಹಂಚಿಕೆ ನಿಯಮಗಳ ಬದಲಾವಣೆ 65 ವರ್ಷಗಳ ನಂತರ ಎನ್‌ಪಿಎಸ್‌ಗೆ ಸೇರುವ ಚಂದಾದಾರರು ಪಿಂಚಣಿ ನಿಧಿಯ ಆಯ್ಕೆಯನ್ನು ಮತ್ತು ಸ್ವತ್ತು ಹಂಚಿಕೆಯನ್ನು (Asset Allocation) ಕ್ರಮವಾಗಿ ಗರಿಷ್ಠ ಶೇ 15 ಮತ್ತು ಶೇ 50 ರಷ್ಟು ಈಕ್ವಿಟಿ ಎಕ್ಸ್​ಪೋಷರ್​ ಆಟೋ ಮತ್ತು ಆ್ಯಕ್ಟಿವ್ ಆಯ್ಕೆ ಅಡಿಯಲ್ಲಿ ಚಲಾಯಿಸಬಹುದು. ಪಿಎಫ್‌ಆರ್‌ಡಿಎ ಪ್ರಕಾರ, 65 ವರ್ಷಗಳ ನಂತರ ಎನ್‌ಪಿಎಸ್‌ಗೆ ಸೇರುವ ಚಂದಾದಾರರು ಪಿಎಫ್ ಮತ್ತು ಸ್ವತ್ತು ಹಂಚಿಕೆಯ ಆಯ್ಕೆಯನ್ನು ಕ್ರಮವಾಗಿ ಆಟೋ ಮತ್ತು ಆ್ಯಕ್ಟಿವ್ ಚಾಯ್ಸ್ ಅಡಿಯಲ್ಲಿ ಶೇ 15 ಮತ್ತು ಶೇ 50 ಗರಿಷ್ಠ ಈಕ್ವಿಟಿ ಎಕ್ಸ್‌ಪೋಷರ್‌ನೊಂದಿಗೆ ಚಲಾಯಿಸಬಹುದು. ಪಿಂಚಣಿ ನಿಧಿಯನ್ನು ವರ್ಷಕ್ಕೊಮ್ಮೆ ಬದಲಾಯಿಸಬಹುದು. ಆದರೆ ಆಸ್ತಿ ಹಂಚಿಕೆಯನ್ನು ಎರಡು ಬಾರಿ ಬದಲಾಯಿಸಬಹುದು.

ಇದನ್ನೂ ಓದಿ: NPS Swavalamban: ಎನ್​ಪಿಎಸ್​ ಸ್ವಾವಲಂಬನ್ ಮೊತ್ತ ರೂ. 1 ಲಕ್ಷದೊಳಗಿದ್ದರೆ ನಿರ್ಗಮನ ಸಲೀಸು; ನಿಯಮ ಪರಿಶೀಲಿಸಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ