NPS Swavalamban: ಎನ್​ಪಿಎಸ್​ ಸ್ವಾವಲಂಬನ್ ಮೊತ್ತ ರೂ. 1 ಲಕ್ಷದೊಳಗಿದ್ದರೆ ನಿರ್ಗಮನ ಸಲೀಸು; ನಿಯಮ ಪರಿಶೀಲಿಸಿ

ಸ್ವಾವಲಂಬನ್ ಚಂದಾದಾರರ ಸಂಚಿತ ಪಿಂಚಣಿ 1 ಲಕ್ಷ ರೂಪಾಯಿಗಿಂತ ಹೆಚ್ಚಿಲ್ಲದಿದ್ದಲ್ಲಿ ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ)ಗೆ ಅವರು ವಲಸೆ ಹೋಗಲು ಅರ್ಹರಲ್ಲದಿದ್ದರೆ ಒಟ್ಟು ಮೊತ್ತದ ಪಾವತಿಯೊಂದಿಗೆ ಅವಧಿಗೆ ಮುಂಚಿತವಾಗಿ ನಿರ್ಗಮಿಸಲು ಅವರು ಆಯ್ಕೆ ಮಾಡಿಕೊಳ್ಳಬಹುದು.

NPS Swavalamban: ಎನ್​ಪಿಎಸ್​ ಸ್ವಾವಲಂಬನ್ ಮೊತ್ತ ರೂ. 1 ಲಕ್ಷದೊಳಗಿದ್ದರೆ ನಿರ್ಗಮನ ಸಲೀಸು; ನಿಯಮ ಪರಿಶೀಲಿಸಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 13, 2021 | 11:49 PM

ಎನ್‌ಪಿಎಸ್ ಲೈಟ್ ಸ್ವಾವಲಂಬನ್ ಚಂದಾದಾರರು 18ರಿಂದ 40 ವರ್ಷ ವಯಸ್ಸಿನವರಿಗೆ ಕೇಂದ್ರ ಸರ್ಕಾರವು 2015ರ ಮೇನಲ್ಲಿ ಪ್ರಾರಂಭಿಸಿದ ಅಟಲ್ ಪಿಂಚಣಿ ಯೋಜನೆಗೆ ವಲಸೆ ಹೋಗಲು ಅವಕಾಶ ನೀಡಿತು. ಇದು ಚಂದಾದಾರರಿಗೆ ಕನಿಷ್ಠ ಖಾತ್ರಿ ಪಿಂಚಣಿ ನೀಡುತ್ತದೆ. 40 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಎಪಿವೈಗೆ ವಲಸೆ ಹೋಗಲು ಸಾಧ್ಯವಾಗದ ಎನ್‌ಪಿಎಸ್ ಲೈಟ್ ಸ್ವಾವಲಂಬನ್ ಚಂದಾದಾರರು 60 ವರ್ಷ ತುಂಬುವವರೆಗೆ ಸ್ವಾವಲಂಬನ್ ಯೋಜನೆಯಲ್ಲಿ ಮುಂದುವರಿಯಬಹುದು. ಅವರು ಬಯಸಿದರೆ ಯೋಜನೆಯಿಂದ ನಿರ್ಗಮಿಸಬಹುದು. ಹೊಸ ನಿಯಮಗಳ ಪ್ರಕಾರ, ಎನ್​ಪಿಎಸ್ ಸ್ವಾವಲಂಬನ್ ಚಂದಾದಾರರ ಸಂಚಿತ ಪಿಂಚಣಿ 1 ಲಕ್ಷ ರೂಪಾಯಿಗಿಂತ ಹೆಚ್ಚಿಲ್ಲದಿದ್ದಲ್ಲಿ ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ)ಗೆ ಅವರು ವಲಸೆ ಹೋಗಲು ಅರ್ಹರಲ್ಲದಿದ್ದರೆ ಒಟ್ಟು ಮೊತ್ತದ ಪಾವತಿಯೊಂದಿಗೆ ಅವಧಿಗೆ ಮುಂಚಿತವಾಗಿ ನಿರ್ಗಮಿಸಲು ಅವರು ಆಯ್ಕೆ ಮಾಡಿಕೊಳ್ಳಬಹುದು.

ಅರ್ಹ ಚಂದಾದಾರರು ಸ್ವಾವಲಂಬನ್ ಯೋಜನೆಯಲ್ಲಿ ಸರ್ಕಾರದ ಸಹ-ಕೊಡುಗೆಯನ್ನು ಸ್ವೀಕರಿಸದೆ ಕನಿಷ್ಠ 25 ವರ್ಷಗಳವರೆಗೆ ಮುಂದುವರಿಯುವ ಅಗತ್ಯವಿಲ್ಲ. ಆದರೂ ಸಂಪೂರ್ಣ ನಿಧಿಯನ್ನು ಹಿಂತೆಗೆದುಕೊಳ್ಳುವ ಮೂಲಕ ನಿರ್ಗಮಿಸುವ ಮೊದಲು ಒಂದು ಷರತ್ತು ಇದೆ. ಆ ಅರ್ಹ ಚಂದಾದಾರರಿಂದ ಸರ್ಕಾರದ ಸಹ-ಕೊಡುಗೆಯನ್ನು ಪಡೆದುಕೊಳ್ಳಲಾಗಿದ್ದರೆ, ಅವರು ನಿರ್ಗಮಿಸುವ ಸಮಯದಲ್ಲಿ ನಿಧಿಯಿಂದ ಬರುವ ಆದಾಯದೊಂದಿಗೆ ಅದನ್ನು ಕಡಿತಗೊಳಿಸಲಾಗುತ್ತದೆ. ಸ್ವಾವಲಂಬನ್ ಚಂದಾದಾರರ ಸಂಗ್ರಹವಾದ ನಿಧಿಯನ್ನು ಸರ್ಕಾರದ ಸಹ-ಕೊಡುಗೆಯನ್ನು ಕಡಿತಗೊಳಿಸಿದ ನಂತರ ಅದರ ಆದಾಯವನ್ನು ಲೆಕ್ಕ ಹಾಕಬೇಕು.

ಉದಾಹರಣೆಗೆ, 43 ವರ್ಷ ವಯಸ್ಸಿನ (ಎಪಿವೈಗೆ ವಲಸೆ ಹೋಗಲು ಸಾಧ್ಯವಾಗದ) ಸ್ವಾವಲಂಬನ್ ಚಂದಾದಾರರು ತಮ್ಮ ಸ್ವಾವಲಂಬನ್ PRANನಲ್ಲಿ 1,04,000 ರೂಪಾಯಿಗಳ ನಿಧಿಯನ್ನು ಹೊಂದಿದ್ದರೆ ಮತ್ತು ಅದರಲ್ಲಿ ಸರ್ಕಾರದ ಸಹ ಕೊಡುಗೆ ಮತ್ತು ಆದಾಯವು 4500 ರೂಪಾಯಿ ಆಗಿರುತ್ತದೆ. ಚಂದಾದಾರರು PRANನಲ್ಲಿ ಸಂಗ್ರಹವಾದ ನಿಧಿ 99,500 ರೂಪಾಯಿ (1,04,000- 4,500 = ರೂ. 99,500) ಆಗಿರುವುದರಿಂದ ಅವಧಿಗೆ ಪೂರ್ವವಾಗಿ ನಿರ್ಗಮನಕ್ಕೆ ಅರ್ಹರಾಗುತ್ತಾರೆ. ಮೇಲಿನ ಮಾನದಂಡಗಳನ್ನು ಪೂರೈಸುವ ಸ್ವಾವಲಂಬನ್ ಚಂದಾದಾರರು, ಮತ್ತು ಅವರು ಅವಧಿಗೆ ಪೂರ್ವವಾಗಿ ನಿರ್ಗಮಿಸಲು ಬಯಸಿದರೆ, ತಮ್ಮ ವಿಥ್​​ಡ್ರಾ ಕ್ಲೇಮ್​ಗಳಿಗೆ ಸಂಬಂಧಿತ ಪಿಒಪಿಗಳು/ಅಗ್ರಿಗೇಟರ್​ಗಳಿಗೆ ಸಲ್ಲಿಸಬಹುದು.

ಇತ್ತೀಚೆಗೆ ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಸಂಗ್ರಹವಾದ ಪಿಂಚಣಿ ಮೊತ್ತ 1 ಲಕ್ಷ ರೂಪಾಯಿಗಿಂತ ಹೆಚ್ಚಿಲ್ಲದಿದ್ದಲ್ಲಿ ಅಥವಾ ಪ್ರಾಧಿಕಾರವು ನಿಗದಿ ಮಾಡಿದ ಮೊತ್ತದ ಮಿತಿಯನ್ನು ಮೀರದಿದ್ದಲ್ಲಿ, ಪೂರ್ತಿ ಪಿಂಚಣಿ ಮೊತ್ತವನ್ನು ಯಾವುದೇ ಸ್ವಾವಲಂಬನ್ ಸಹ-ಕೊಡುಗೆಯನ್ನು ಪಡೆಯದ ಚಂದಾದಾರರಿಗೆ ಅನ್ಯುಟೈಸೇಶನ್ ಇಲ್ಲದೆ ಪಾವತಿಸಲಾಗುವುದು ಮತ್ತು ಸ್ವಾವಲಂಬನ್ ಸಹ ಕೊಡುಗೆಯನ್ನು ಪಡೆದಿದ್ದರೂ ಅಟಲ್ ಪಿಂಚಣಿ ಯೋಜನೆಗೆ ಸ್ವಯಂ ವಲಸೆಗೆ ಅರ್ಹರಲ್ಲದ ಚಂದಾದಾರರಿಗೆ, ಸರ್ಕಾರದ ಸಹ ಕೊಡುಗೆಯನ್ನು ಅದರ ಆದಾಯದೊಂದಿಗೆ ಕಡಿತಗೊಳಿಸಿದ ನಂತರ, ಕನಿಷ್ಠ 25 ವರ್ಷಗಳವರೆಗೆ ಯೋಜನೆಯಲ್ಲಿ ಮುಂದುವರಿಯುವ ಅಗತ್ಯವಿಲ್ಲ.

ಪ್ರಾಧಿಕಾರವು ಅನುಮೋದಿಸಿದಂತೆ ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಭಾರತ ಸರ್ಕಾರದ ಯಾವುದೇ ಪಿಂಚಣಿ ಯೋಜನೆಗೆ ಸ್ವಾವಲಂಬನ್ ಚಂದಾದಾರರು ವಲಸೆ ಹೋದರೆ ಅದನ್ನು ನಿರ್ಗಮನ ಮತ್ತು ಹಿಂತೆಗೆದುಕೊಳ್ಳುವಿಕೆ ಎಂದು ಪರಿಗಣಿಸುವುದಿಲ್ಲ.

ಇದನ್ನೂ ಓದಿ: NPS Or PPF: ನಿವೃತ್ತಿ ಯೋಜನೆಗೆ ಎನ್​ಪಿಎಸ್​ ಅಥವಾ ಪಿಪಿಎಫ್​ ಇವೆರಡರಲ್ಲಿ ಯಾವ ಹೂಡಿಕೆ ಉತ್ತಮ?

ಇದನ್ನೂ ಓದಿ: Tax Saving: ತೆರಿಗೆ ಉಳಿತಾಯದ 10 ಉತ್ತಮ ಯೋಜನೆಗಳು ಇಲ್ಲಿವೆ

(NPS Swavalamban scheme subscribers exit if corpus less than Rs 1 lakh. Here is the details)

Published On - 11:49 pm, Tue, 13 July 21