AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yes Bank: ಯೆಸ್ ಬ್ಯಾಂಕ್ ಎರಡನೇ ತ್ರೈಮಾಸಿಕ ಲಾಭ ಶೇ 74ರಷ್ಟು ಹೆಚ್ಚಳವಾಗಿ ರೂ. 225 ಕೋಟಿಗೆ

ಖಾಸಗಿ ವಲಯದ ಬ್ಯಾಂಕ್ ಆದ ಯೆಸ್ ಬ್ಯಾಂಕ್​ನ ಹಣಕಾಸು ವರ್ಷ 2022 ಎರಡನೇ ತ್ರೈಮಾಸಿಕ ಲಾಭವು ಶೇ 74ರಷ್ಟು ಹೆಚ್ಚಳವಾಗಿ ರೂ. 225 ಕೋಟಿ ಆಗಿದೆ.

Yes Bank: ಯೆಸ್ ಬ್ಯಾಂಕ್ ಎರಡನೇ ತ್ರೈಮಾಸಿಕ ಲಾಭ ಶೇ 74ರಷ್ಟು ಹೆಚ್ಚಳವಾಗಿ ರೂ. 225 ಕೋಟಿಗೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 22, 2021 | 4:26 PM

Share

ಖಾಸಗಿ ವಲಯದ ಯೆಸ್​ ಬ್ಯಾಂಕ್ ಅಕ್ಟೋಬರ್ 22ನೇ ತಾರೀಕಿನ ಶುಕ್ರವಾರದಂದು 2021ರ ಜುಲೈನಿಂದ ಸೆಪ್ಟೆಂಬರ್ ತನಕದ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 74.3ರಷ್ಟು ಏಕೀಕೃತ ಲಾಭದಲ್ಲಿ ಹೆಚ್ಚಳವಾಗಿ, 225.50 ಕೋಟಿ ರೂಪಾಯಿ ಲಾಭವಾಗಿದೆ. ಪ್ರಾವಿಷನ್​ಗಳಲ್ಲಿ ಗಮನಾರ್ಹ ಇಳಿಕೆ ಹಾಗೂ ಇತರ ಆದಾಯದಲ್ಲಿ ಹೆಚ್ಚಳದಿಂದಾಗಿ ಈ ಬೆಳವಣಿಗೆ ಆಗಿದೆ. ವರ್ಷದ ಹಿಂದೆ ಯೆಸ್​ ಬ್ಯಾಂಕ್​ಗೆ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರೂ. 129.37 ಕೋಟಿ ರೂಪಾಯಿ ಲಾಭ ಬಂದಿತ್ತು. ಬಡ್ಡಿ ಗಳಿಕೆಯಲ್ಲಿ ಬಡ್ಡಿ ವೆಚ್ಚವನ್ನು ಕಳೆದರೆ ಉಳಿದಂಥ ವ್ಯತ್ಯಾಸವಾದ ನಿವ್ವಳ ಬಡ್ಡಿ ಆದಾಯದಲ್ಲಿ ಕಳೆದ ವರ್ಷಕ್ಕಿಂತ ಶೇ 23.4ರಷ್ಟು ಕಡಿಮೆ ಆಗಿದ್ದು, Q2FY22ರಲ್ಲಿ 1512.24 ಕೋಟಿ ರೂಪಾಯಿ ಮುಟ್ಟಿದೆ. ಅಡ್ವಾನ್ಸಸ್​ನಲ್ಲಿ ಶೇ 3.5ರಷ್ಟು ಹೆಚ್ಚಳವಾಗಿದ್ದರೆ, ಠೇವಣಿಯಲ್ಲಿ ಶೇ 30.1ರಷ್ಟು ಮೇಲೇರಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಮುಂಗಡವು (ಅಡ್ವಾನ್ಸಸ್) 1,72,839 ಕೋಟಿ ರೂಪಾಯಿ ಇದೆ. FY21Q2ನಲ್ಲಿ 1,66,923 ಕೋಟಿ ರೂಪಾಯಿ ಇತ್ತು. ಇನ್ನು ಠೇವಣಿ ವಿಚಾರಕ್ಕೆ ಬಂದರೆ, ವರ್ಷದಿಂದ ವರ್ಷಕ್ಕೆ 1,35,815 ಕೋಟಿ ರೂಪಾಯಿಯಿಂದ 1,76,672 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಪ್ರಾವಿಷನ್ಸ್ ಮತ್ತು ಕಂಟಿಜೆನ್ಸೀಸ್ (ಅನಿರೀಕ್ಷಿತ ವೆಚ್ಚಕ್ಕಾಗಿ ಮೀಸಲಿರಿಸಿದ್ದು) ವರ್ಷದ ಹಿಂದಿನಕ್ಕಿಂತ ಶೇ 65ರಷ್ಟು ಇಳಿಕೆಯಾಗಿ 377 ಕೋಟಿ ರೂಪಾಯಿ ಮುಟ್ಟಿದೆ. ಇನ್ನು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 17.4ರಷ್ಟು ಕುಸಿದಿದೆ.

ಆಸ್ತಿಯ ಗುಣಮಟ್ಟವು ಸುಧಾರಣೆ ಕಂಡಿದೆ. ಅನುತ್ಪಾದಕ ಆಸ್ತಿ (NPAs) ಸಗಟು ಮುಂಗಡಕ್ಕೆ ಹೋಲಿಸಿದರೆ ಪ್ರಸಕ್ತ ತ್ರೈಮಾಸಿಕದಲ್ಲಿ ಶೇ 14.97ರಷ್ಟು ಕುಸಿದಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಶೇ 15.60 ಇತ್ತು. ನಿವ್ವಳ ಎನ್​ಪಿಎ ಕೂಡ ಶೇ 5.78ರಿಂದ ಶೇ 5.55ಕ್ಕೆ ಕುಸಿದಿದೆ. ಅಂದಹಾಗೆ ಯೆಸ್​ ಬ್ಯಾಂಕ್ ಷೇರಿನ ದರವು ಶುಕ್ರವಾರದಂದು ದಿನದ ಕೊನೆಗೆ ಶೇ 4.47ರಷ್ಟು ಕುಸಿತ ಕಂಡು ರೂ. 13.68ಕ್ಕೆ ವ್ಯವಹಾರ ಚುಕ್ತಾ ಮಾಡಿದೆ.

ಇದನ್ನೂ ಓದಿ: Yes Bank Housing Loan: ಇದೇ ಮೊದಲ ಬಾರಿಗೆ ಬ್ಯಾಂಕ್​ವೊಂದರಿಂದ 35 ವರ್ಷಗಳ ಅವಧಿಗೆ ಹೌಸಿಂಗ್ ಲೋನ್

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ