World’s Powerful Passports: ವಿಶ್ವದ ಪ್ರಬಲ ಪಾಸ್​ಪೋರ್ಟ್ಸ್ ಟಾಪ್ ಟೆನ್ ದೇಶಗಳಿವು; ಭಾರತಕ್ಕೆ ಎಷ್ಟನೇ ಸ್ಥಾನ

ವಿಶ್ವದ ಪ್ರಬಲ ಪಾಸ್​ಪೋರ್ಟ್​ಗಳ ಟಾಪ್​ 10 ಪಟ್ಟಿ ನಿಮ್ಮೆದುರು ಇದೆ. ಅಂದಹಾಗೆ ಈ ಪಟ್ಟಿಯಲ್ಲಿ ಭಾರತದ ಪಾಸ್​ಪೋರ್ಟ್​ಗೆ ಯಾವ ಸ್ಥಾನ ಇದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

World's Powerful Passports: ವಿಶ್ವದ ಪ್ರಬಲ ಪಾಸ್​ಪೋರ್ಟ್ಸ್ ಟಾಪ್ ಟೆನ್ ದೇಶಗಳಿವು; ಭಾರತಕ್ಕೆ ಎಷ್ಟನೇ ಸ್ಥಾನ
ಭಾರತೀಯ ಪಾಸ್​ಪೋರ್ಟ್

ಮುಂಚಿತವಾಗಿಯೇ ವೀಸಾದ ಅಗತ್ಯ ಇಲ್ಲದೆ ಎಷ್ಟು ದೇಶಗಳಿಗೆ ಹೋಗುವುದಕ್ಕೆ ಒಂದು ದೇಶದ ಪಾಸ್​ಪೋರ್ಟ್​ ಹೊಂದಿದ ವ್ಯಕ್ತಿಗೆ ಸಾಧ್ಯವಿರುತ್ತದೋ ಅದು ಆ ಪಾಸ್​ಪೋರ್ಟ್​ನ ಸಾಮರ್ಥ್ಯ ಎಂದು ಅಳೆಯಲಾಗುತ್ತದೆ. ಹೆನ್ಲೆ ಪಾಸ್​ಪೋರ್ಟ್ ಸೂಚ್ಯಂಕ ಎಂಬುದು ಆ ರೀತಿ ವಿಶ್ವದ ಎಲ್ಲ ಪಾಸ್​​ಪೋರ್ಟ್​ಗಳನ್ನು ಅಳೆದು, ಅದಕ್ಕೊಂದು ಶ್ರೇಯಾಂಕ ನೀಡುವಂಥ ಒರಿಜಿನಲ್, ಅಧಿಕಾರಯುತ ಸೂಚ್ಯಂಕವಾಗಿದೆ. ಈ ಸೂಚ್ಯಂಕವು ಅಂತರರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟದ (IATA) ಎಕ್ಸ್​ಕ್ಲೂಸಿವ್ ಆದ ಡೇಟಾ ಆಧಾರದಲ್ಲಿ ನಿಂತಿದೆ. ಇತ್ತೀಚಿನ ಶ್ರೇಯಾಂಕವು ಗ್ಲೋಬಲ್ ಮೊಬಿಲಿಟಿ ರಿಪೋರ್ಟ್ 2021 Q4ದಲ್ಲಿ ದೊರೆಯುತ್ತದೆ. ಇದು 199 ಪಾಸ್​ಪೋರ್ಟ್​ಗಳು ಮತ್ತು 227 ಸ್ಥಳಗಳಲ್ಲಿ ಕಾಣುತ್ತದೆ. ಈ ಲೇಖನದಲ್ಲಿ ಟಾಪ್ 10 ಸ್ಥಾನದಲ್ಲಿ ಇರುವ ಶಕ್ತಿಯುತ ಪಾಸ್​ಪೋರ್ಟ್​ಗಳು ಮತ್ತು ಭಾರತ ಯಾವ ಸ್ಥಾನದಲ್ಲಿದೆ ಎಂಬುದನ್ನು ತಿಳಿಯಿರಿ.

-ಜಪಾನ್ ಮತ್ತು ಸಿಂಗಾಪೂರ್ ತಲಾ 192 ಪಾಯಿಂಟ್​ಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
– ಜರ್ಮನಿ ಮತ್ತು ದಕ್ಷಿಣ ಕೊರಿಯಾ 190 ಪಾಯಿಂಟ್ಸ್​ನೊಂದಿಗೆ ಎರಡನೇ ಸ್ಥಾನ
– ಫಿನ್​ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ ತಲಾ 189 ಪಾಯಿಂಟ್ಸ್​ನೊಂದಿಗೆ ಮೂರನೇ ಸ್ಥಾನ
– ಆಸ್ಟ್ರಿಯಾ, ಡೆನ್ಮಾರ್ಕ್ ತಲಾ 188 ಪಾಯಿಂಟ್ಸ್​ನೊದಿಗೆ ನಾಲ್ಕನೇ ಸ್ಥಾನ
– ಫ್ರಾನ್ಸ್, ಐರ್ಲೆಂಡ್, ನೆದರ್​ಲ್ಯಾಂಡ್ಸ್, ಪೋರ್ಚುಗಲ್ ಮತ್ತು ಸ್ವೀಡನ್ ತಲಾ 187 ಪಾಯಿಂಟ್ಸ್​ನೊಂದಿಗೆ ಐದನೇ ಸ್ಥಾನ
– ಬೆಲ್ಜಿಯಂ, ನ್ಯೂಜಿಲ್ಯಾಂಡ್, ಸ್ವಿಟ್ಜರ್ಲೆಂಡ್ ತಲಾ 186 ಪಾಯಿಂಟ್ಸ್​ – ಆರನೇ ಸ್ಥಾನ
– ಜೆಕ್ ರಿಪಬ್ಲಿಕ್, ಗ್ರೀಸ್, ಮಾಲ್ಟಾ, ನಾರ್ವೆ, ಯುನೈಟೆಡ್ ಕಿಂಗ್​ಡಮ್ ಮತ್ತು ಯುನೈಟೆಡ್​ ಸ್ಟೇಟ್ಸ್ ಆಫ್​ ಅಮೆರಿಕಾ 185 ಪಾಯಿಂಟ್ಸ್- ಏಳನೇ ಸ್ಥಾನ
– ಆಸ್ಟ್ರೇಲಿಯಾ, ಕೆನಡಾ ತಲಾ 184 ಪಾಯಿಂಟ್ಸ್ ಜತೆ ಎಂಟನೇ ಸ್ಥಾನ
– 183 ಪಾಯಿಂಟ್ಸ್​ನೊಂದಿಗೆ ಹಂಗೇರಿ 9ನೇ ಸ್ಥಾನ
-ಲಿಥುವೇನಿಯಾ, ಪೋಲೆಂಡ್, ಸ್ಲೊವಾಕಿಯಾ ಹತ್ತನೇ ಸ್ಥಾನದಲ್ಲಿದ್ದು, ತಲಾ 182 ಪಾಯಿಂಟ್ಸ್ ಇದೆ
– ಕಳೆದ ವರ್ಷ 84 ಸ್ಥಾನದಲ್ಲಿ ಇದ್ದ ಭಾರತ ಈ ವರ್ಷ 90ನೇ ಸ್ಥಾನಕ್ಕೆ ಇಳಿದಿದೆ. 58 ಪಾಯಿಂಟ್ಸ್​ನೊಂದಿಗೆ ಬುರ್ಕಿನಾ ಫಾಸೋ, ತಜಕಿಸ್ತಾನ್​ ಜತೆ ಹಂಚಿಕೊಂಡಿದೆ.

ಇಲ್ಲಿ ಪಾಯಿಂಟ್ಸ್ ಅಂದರೆ, 1 ಪಾಯಿಂಟ್ಸ್​ಗೆ 1 ದೇಶ. ಮೊದಲ ಸ್ಥಾನದಲ್ಲಿ ಇರುವ ಜಪಾನ್ ಮತ್ತು ಸಿಂಗಾಪೂರ್​ ಪಾಸ್​ಪೋರ್ಟ್ ಇದ್ದಲ್ಲಿ 192 ದೇಶಗಳಿಗೆ ವೀಸಾ ಮುಂಚಿತವಾಗಿಯೇ ಪಡೆಯಬೇಕು ಅಂತೇನಿಲ್ಲ.

ಇದನ್ನೂ ಓದಿ: DigiLocker: ಡಿಜಿಲಾಕರ್ ಬಳಸಿ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಲು ಸುಲಭ ವಿಧಾನ ಇಲ್ಲಿದೆ

Read Full Article

Click on your DTH Provider to Add TV9 Kannada