Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Loan: ಭಾರತದ ಯಾವ ಬ್ಯಾಂಕ್​ನಲ್ಲಿ ಹೋಮ್ ಲೋನ್ ಬಡ್ಡಿ ಬಲು ಅಗ್ಗ? ಇಲ್ಲಿದೆ ಇಎಂಐ ಸಹಿತ ಲೆಕ್ಕಾಚಾರ

ಭಾರತದ ಪ್ರಮುಖ ಬ್ಯಾಂಕ್​ಗಳಲ್ಲಿ ಹೋಮ್ ಲೋನ್ ಮೇಲಿನ ಬಡ್ಡಿ ದರ ಎಷ್ಟಿದೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಅಷ್ಟೇ ಅಲ್ಲ, ಉದಾಹರಣೆಯೊಂದಿಗೆ ವಿವರಿಸಲಾಗಿದೆ.

Home Loan: ಭಾರತದ ಯಾವ ಬ್ಯಾಂಕ್​ನಲ್ಲಿ ಹೋಮ್ ಲೋನ್ ಬಡ್ಡಿ ಬಲು ಅಗ್ಗ? ಇಲ್ಲಿದೆ ಇಎಂಐ ಸಹಿತ ಲೆಕ್ಕಾಚಾರ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:May 31, 2021 | 8:06 PM

ಬಹಳ ದೀರ್ಘ ಕಾಲದ, ದೊಡ್ಡ ಮೊತ್ತದ ಸಾಲ ಅಂತ ಬಹುತೇಕರ ಜೀವನದಲ್ಲಿ ಅಂದುಕೊಳ್ಳುವುದಾದರೆ ಅದು ಗೃಹ ಸಾಲವೇ ಆಗಿರುತ್ತದೆ. ಹೋಮ್ ಲೋನ್ ಎಂದು ಪಡೆದುಕೊಂಡಿದ್ದಕ್ಕಿಂತ ಬಹುತೇಕರು ದುಪ್ಪಟ್ಟು ಮೊತ್ತವನ್ನು ಹಿಂತಿರುಗಿಸುತ್ತಾರೆ. ಆದರೆ ನಿಮಗೆ ಗೊತ್ತಿರಲಿ, ಇದ್ದುದರಲ್ಲೇ ಬಹಳ ಅಗ್ಗದ ಬಡ್ಡಿ ದರದಲ್ಲಿ ಸಿಗುವ ಸಾಲ ಅಂದರೆ ಅದು ಹೋಮ್ ಲೋನ್. ಇನ್ನು ಮನೆ ಖರೀದಿಗಾಗಿ ಯಾವುದೇ ವ್ಯಕ್ತಿಗೆ ಇರುವ ಅತ್ಯುತ್ತಮ ಆಯ್ಕೆ ಕೂಡ ಹೋಮ್ ಲೋನ್. ಜತೆಗೆ ಸಾಲ ಪಡೆದು, ಮನೆ ಕಟ್ಟಿದರೂ, ಖರೀದಿಸಿದರೂ ಆಸ್ತಿ ಮೌಲ್ಯ ಹೆಚ್ಚಾಗುತ್ತಾ ಒಂದು ಬಗೆಯ ಸಾರ್ಥಕ್ಯ ಭಾವವನ್ನು ಮೂಡಿಸುತ್ತದೆ. ಆದರೆ ರೆಡಿ ಟು ಮೂವ್, ವಾಸಕ್ಕೆ ಸಿದ್ಧವಿರುವ ಮನೆಗಳನ್ನೇ ಅಥವಾ ಫ್ಲ್ಯಾಟ್​ಗಳನ್ನೇ ಆರಿಸಿಕೊಳ್ಳಿ ಎಂದು ಆರ್ಥಿಕ ಸಲಹೆಗಾರರು ಹೇಳುತ್ತಾರೆ.

ಸದ್ಯದ ಮಟ್ಟಿಗೆ ಭಾರತದಲ್ಲಿ ಹೋಮ್ ಲೋನ್ ಬಡ್ಡಿ ದರ ಬಹಳ ಕಡಿಮೆ ಇದೆ. 30 ಲಕ್ಷ ರೂಪಾಯಿ ಮೊತ್ತವನ್ನು 20 ವರ್ಷದ ಅವಧಿಗೆ ಸಾಲ ತೆಗೆದುಕೊಂಡರೆ ಬಡ್ಡಿ ದರ ಎಷ್ಟಿರುತ್ತದೆ ಮತ್ತು ಇಎಂಐ ಎಷ್ಟು ಬರುತ್ತದೆ ಎಂಬ ವಿವರ ಇಲ್ಲಿದೆ. ಪ್ರೊಸೆಸಿಂಗ್ ಫೀ, ಅವಧಿಗೆ ಪೂರ್ವವಾಗಿ ಹಣ ಚುಕ್ತಾ ಅಥವಾ ಭಾಗಶಃ ಮರುಪಾವತಿ ಇಂಥ ವಿಚಾರಗಳಿಗೆ ಆಯಾ ಬ್ಯಾಂಕ್​ಗಳಲ್ಲಿ ಸಾಲ ಪಡೆದುಕೊಳ್ಳುವ ಮುಂಚೆ ವಿಚಾರಿಸಿಕೊಳ್ಳಬೇಕು. ಇಲ್ಲಿರುವ ಮಾಹಿತಿಯು ಮೇ 27, 2021ಕ್ಕೆ ಅನ್ವಯ ಆಗುವಂತೆ ಆಯಾ ಬ್ಯಾಂಕ್ ವೆಬ್​ಸೈಟ್​ನಲ್ಲಿ ದೊರೆತಿರುವುದು.

ಕೊಟಕ್ ಮಹೀಂದ್ರಾ ಬ್ಯಾಂಕ್= ಶೇ 6.65- 7.30; 22,633- 23,802 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ= ಶೇ 6.75- 8.05; 22,811- 25,187 ಬ್ಯಾಂಕ್ ಆಫ್ ಬರೋಡ= ಶೇ 6.75- 8.60; 22,811-26,225 ಐಸಿಐಸಿಐ ಬ್ಯಾಂಕ್= ಶೇ 6.75- 7.55; 22,811- 24,260 ಎಚ್​ಡಿಎಫ್​ಸಿ= ಶೇ 6.75- 7.65; 22,811- 24,444 ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ= ಶೇ 6.80- 7.40; 22,900- 23,802 ಪಂಜಾಬ್ ನ್ಯಾಷನಲ್ ಬ್ಯಾಂಕ್= ಶೇ 6.80- 9.00; 22,900-26,992 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ= ಶೇ 6.85- 7.30; 22,990- 23,802 ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ = ಶೇ 6.85- 7.60; 22,990- 24,352 ಬ್ಯಾಂಕ್ ಆಫ್ ಇಂಡಿಯಾ= ಶೇ 6.85- 8.85; 22,990- 26,703 ಇಂಡಿಯನ್ ಬ್ಯಾಂಕ್= ಶೇ 6.85- 8.00; 22,990- 25,093 ಐಡಿಎಫ್​ಸಿ ಬ್ಯಾಂಕ್= ಶೇ 6.90- 8.50; 23,079- 26,035 ಕೆನರಾ ಬ್ಯಾಂಕ್= ಶೇ 6.90- 8.90; 23,079- 26,799 ಬ್ಯಾಂಕ್ ಆಫ್ ಮಹಾರಾಷ್ಟ್ರ= ಶೇ 6.90- 9.65; 23,079- 28,258 ಆಕ್ಸಿಸ್ ಬ್ಯಾಂಕ್= ಶೇ 6.90- 8.40; 23,079- 25,845

ಇದನ್ನೂ ಓದಿ: Housing loan: ಹೋಮ್ ಲೋನ್ ಪ್ರಮಾಣದಲ್ಲಿ ಹೆಚ್ಚಳ, ಅಲ್ಪಾವಧಿಗೆ ಸಾಲ ತೆಗೆದುಕೊಳ್ಳೋರು ಜಾಸ್ತಿ ಇದ್ಯಾಕೆ ಹೀಗೆ? 

ಇದನ್ನೂ ಓದಿ: Home loan: ಗೃಹ ಸಾಲ ಪಡೆಯುವಾಗ ಈ 5 ತಪ್ಪುಗಳನ್ನು ಮಾಡದಿರಿ

(India major banks rate of interest on home loan and also explainer with calculation)

Published On - 8:05 pm, Mon, 31 May 21

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ