ಅಮೆರಿಕದ ಗೂಗಲ್, ಆಪಲ್​ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?

| Updated By: Srinivas Mata

Updated on: Jul 21, 2021 | 2:59 PM

ಅಮೆರಿಕದ ಸ್ಟಾಕ್​ ಎಕ್ಸ್​ಚೇಂಜ್​ಗಳಿಂದ ಆಪಲ್, ಗೂಗಲ್, ಫೇಸ್​ಬುಕ್ ಕಂಪೆನಿಯ ಷೇರುಗಳನ್ನು ಭಾರತದಿಂದಲೇ ಖರೀದಿ ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಅಮೆರಿಕದ ಗೂಗಲ್, ಆಪಲ್​ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?
ಪ್ರಾತಿನಿಧಿಕ ಚಿತ್ರ
Follow us on

ಅಮೆರಿಕದ ಷೇರು ಮಾರುಕಟ್ಟೆ, ಅದರಲ್ಲೂ FAANG ಎಂದು ಕರೆಸಿಕೊಳ್ಳುವ ಟೆಕ್ ದೈತ್ಯ ಕಂಪೆನಿಗಳಾದ ಫೇಸ್​ಬುಕ್​, ಅಮೆಜಾನ್​, ಆಪಲ್, ನೆಟ್​ಫ್ಲಿಕ್ಸ್ ಮತ್ತು ಗೂಗಲ್ ಕಂಪೆನಿಯ ಷೇರುಗಳ ಬಗ್ಗೆ ಭಾರತೀಯ ಹೂಡಿಕೆದಾರರ ಆಕರ್ಷಣೆ ಹೆಚ್ಚು. ದೇಶೀಯ ಮಾರುಕಟ್ಟೆಗಳಿಂದ ಆಚೆಗೆ ಅವುಗಳಲ್ಲಿ ಕೂಡ ಹಣ ಹೂಡಬಹುದು ಎಂಬ ಸಂಗತಿ ನಿಮಗೆ ಗೊತ್ತಿದೆಯೇ? ದೇಶೀಯ ಹೂಡಿಕೆದಾರರ ಆಸಕ್ತಿ ಹೆಚ್ಚಾದ ಹಿನ್ನೆಲೆಯಲ್ಲಿ ಹಲವು ಆನ್​ಲೈನ್​ ಹೂಡಿಕೆ ಪ್ಲಾಟ್​ಫಾರ್ಮ್​ಗಳು ದೇಶೀ, ವಿದೇಶೀ ಸ್ಟಾಕ್​ಗಳು, ಮ್ಯೂಚುವಲ್ ಫಂಡ್​ಗಳಲ್ಲಿ ಟ್ರೇಡಿಂಗ್ ಮಾಡಲು ಆಫರ್ ನೀಡುತ್ತವೆ. ಅದೇ ರೀತಿ ಯುಎಸ್​ನ ಪ್ರಮುಖ ಷೇರು ಮಾರ್ಕೆಟ್​ನ ಲಿಸ್ಟೆಡ್​ ಇಟಿಎಫ್ ಹಾಗೂ ಸ್ಟಾಕ್​​ಗಳಲ್ಲಿ ವಹಿವಾಟು ನಡೆಸಬಹುದು.

ಅಮೆರಿಕ ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆಗೆ ಅವಕಾಶ ನೀಡುವ ಪ್ಲಾಟ್​ಫಾರ್ಮ್​ಗಳು
ಅಮೆರಿಕದ ಲಿಸ್ಟೆಡ್​ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಭಾರತ ಮತ್ತು ಮಧ್ಯಪ್ರಾಚ್ಯದ ಹೂಡಿಕೆದಾರರಿಗೆ Stockal ಅವಕಾಶ ಒದಗಿಸುತ್ತದೆ. ಈ ಜಾಗತಿಕ ಹೂಡಿಕೆ ಪ್ಲಾಟ್​ಫಾರ್ಮ್ ಹಲವು ಭಾರತೀಯ ಡಿಜಿಟಲ್ ಸ್ಟಾಕ್​ ಬ್ರೋಕಿಂಗ್, ಮ್ಯೂಚುವಲ್ ಫಂಡ್ ಪ್ಲಾಟ್​ಫಾರ್ಮ್​​ಗಳ ಸಹಯೋಗದಲ್ಲಿ ಇಂಥ ಸೇವೆಗಳನ್ನು ಒದಗಿಸುತ್ತದೆ.

ಈಚೆಗೆ Scripbox ಎಂಬ ಡಿಜಿಟಲ್ ವೆಲ್ತ್ ಮ್ಯಾನೇಜ್​ಮೆಂಟ್ ಸರ್ವೀಸಸ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಯುಎಸ್ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಅವಕಾಶ ನೀಡುತ್ತದೆ. Stockal ಜತೆಗೆ ಸಹಭಾಗಿತ್ವ ವಹಿಸಿದ್ದು, ನೇರವಾಗಿ ಅಮೆರಿಕ ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆಗೆ ಅವಕಾಶ ಸಿಗುತ್ತದೆ. ಈ ಹೊಸ ಸೇವೆ ಮೂಲಕ ಬಳಕೆದಾರರಿಗೆ ಅಮೆರಿಕದ ಎಕ್ಸ್​ಚೇಂಜ್​​ಗಳಲ್ಲಿನ ಪ್ರಮುಖ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಇದರ ಜತೆಗೆ ಸೂಚ್ಯಂಕ (Index) ಆಧಾರಿತ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ಗಳಲ್ಲಿ (ETF) ಹೂಡಿಕೆ ಮಾಡಲು ಸಹ ಅವಕಾಶ ದೊರೆಯುತ್ತದೆ.

ಆ್ಯಪ್ ಮೂಲಕ ಆಫರ್
ಕಳೆದ ವರ್ಷ ಸೆಕ್ಯೂರಿಟೀಸ್ ಸಂಸ್ಥೆ Emkay Global Financial Services ಕೂಡ Scripbox ಜತೆಗೆ ಸಹಭಾಗಿತ್ವ ವಹಿಸಿದ್ದು, ಆ ಮೂಲಕವಾಗಿ ತನ್ನ ಗ್ರಾಹಕರಿಗೆ ಅಮೆರಿಕದಲ್ಲಿ ಲಿಸ್ಟ್​ ಆದ ಸೆಕ್ಯೂರಿಟೀಸ್ ಮತ್ತು ಸ್ಟಾಕ್​ಗಳಲ್ಲಿ ಹೂಡಿಕೆ ಮಾಡಲು ನೆರವು ನೀಡುತ್ತದೆ. ಫಿನ್​ಟೆಕ್​ ಸಂಸ್ಥೆಯಾದ Cube Wealthನಿಂದಲೂ Scripbox ಜತೆಗೆ 2019ರಲ್ಲಿ ಸಹಭಾಗಿತ್ವ ಮಾಡಿಕೊಳ್ಳಲಾಗಿದೆ. ಅದು ಕೂಡ ಅಂಥದ್ದೇ ಅನುಕೂಲ ಒದಗಿಸುತ್ತದೆ. ಇದರ ಜತೆಗೆ ಆನ್​ಲೈನ್​ ಮ್ಯೂಚುವಲ್ ಫಂಡ್ ಹಾಗೂ ಸ್ಟಾಕ್ ಬ್ರೋಕಿಂಗ್ ಪ್ಲಾಟ್​ಫಾರ್ಮ್ Kuveraದಿಂದ US SEC ನೋಂದಾಯಿತ ಹಣಕಾಸು ಸಲಹೆಗಾರರು ತಮ್ಮ ಆ್ಯಪ್ ಮೂಲಕ ಈ ಆಫರ್ ಒದಗಿಸುತ್ತಿದ್ದಾರೆ.

ಅಂತರರಾಷ್ಟ್ರೀಯ/ಗ್ಲೋಬಲ್ ಮ್ಯೂಚುವಲ್ ಫಂಡ್​ಗಳು ಸಹ ಹೂಡಿಕೆದಾರರಿಗೆ ಜನಪ್ರಿಯ ಮೂಲಗಳಾಗಿವೆ. ವಿದೇಶೀ ಕಂಪೆನಿಗಳು ಮತ್ತು ಆರ್ಥಿಕತೆಗಳಲ್ಲಿ ಹೂಡಿಕೆ ಮಾಡುವುದಕ್ಕೆ, ಈಕ್ವಿಟಿ, ಈಕ್ವಿಟಿಗೆ ಸಂಬಂಧಿಸಿದ ಇನ್​ಸ್ಟ್ರುಮೆಂಟ್​ಗಳು ಮತ್ತು ಸಾಲಪತ್ರ ಸೆಕ್ಯೂರಿಟಿಗಳಲ್ಲಿ ಭಾರತೀಯ ಅಸೆಟ್​ ಮ್ಯಾನೇಜ್​ಮೆಂಟ್ ಕಂಪೆನಿಗಳು (ಎಎಂಸಿ) ಆಫರ್​ ನೀಡುತ್ತಿವೆ. ಕೆಲವು ಜಾಗತಿಕೆ ಫಂಡ್​ಗಳು ದೇಶೀ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳು, ಕೆಲವು ನಿರ್ದಿಷ್ಟ ಥೀಮ್ಸ್​ಗಳು, ಈ ಕೆಟಗಿರಿಯಲ್ಲಿ ಕೆಲವು ಫಂಡ್ ಆಫ್ ಫಂಡ್ಸ್​ (FoFs)ನಲ್ಲಿ ಹೂಡಿಕೆ ಮಾಡಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಲಿಬರಲೈಸ್ಡ್ ರೆಮಿಟನ್ಸ್ ಸ್ಕೀಮ್​ (LRS) ಅಡಿಯಲ್ಲಿ ಭಾರತೀಯರು ಒಂದು ವರ್ಷದಲ್ಲಿ 2,50,000 ಯುಎಸ್​ಡಿ ತನಕ ಜಾಗತಿಕ ಸ್ಟಾಕ್​ಗಳು ಮತ್ತು ಬಾಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ​​

ಇದನ್ನೂ ಓದಿ: 1 ವರ್ಷದಲ್ಲಿ 4 ಪಟ್ಟು ರಿಟನ್ಸ್ ನೀಡಿದ ಈ ಕಂಪೆನಿ ಷೇರಿನಲ್ಲಿ ಹಾಕಿದ ದುಡ್ಡು 10 ವರ್ಷದಲ್ಲಿ ಬೆಳೆದಿದ್ದು 25 ಪಟ್ಟು

(How To Buy Google Apple Shares Of US Stock Exchange From India)