ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಡಿಜಿಟಲೈಸೇಷನ್ ಭಾರೀ ದೊಡ್ಡ ಮಟ್ಟದಲ್ಲಿ ಆಗಿದೆ. ಆದರೂ ನಮಗೆ ಈಗಲೂ ಕೆಲವೊಮ್ಮೆ ಕೈಯಲ್ಲಿ ನಗದು ಇರಲೇಬೇಕು. ಈಗ, ಬಳಕೆದಾರ ಸ್ನೇಹಿಯಾಗಿ ನಗದು ಪಡೆಯಲು ಒಂದೇ ಒಂದು ಮಾರ್ಗ ಅಂದರೆ ಅದು ಎಟಿಎಂನಿಂದ ಹಣ ಹಿಂತೆಗೆದುಕೊಳ್ಳುವುದು. ಆದರೆ ನೋಟುಗಳನ್ನು ಹಿಂಪಡೆದದ್ದು ಬದಿಗಳಿಂದ ಅಥವಾ ಮೂಲೆಗಳಿಂದ ಹರಿದು ಬಂದರೆ ಏನು ಮಾಡೋದು? ಈ ಬಗ್ಗೆ ಮಾರುಕಟ್ಟೆಯಲ್ಲಿ ಯಾರೂ ಒಪ್ಪಿಕೊಳ್ಳದ ಒಂದು ವಿಷಯ ಈ ಲೇಖನದ ಮೂಲಕ ಖಚಿತವಾಗಿ ತಿಳಿಸಲಾಗುವುದು. ಆದ್ದರಿಂದ ನೀವು ಚಿಂತಿಸಬೇಕಾಗಿಲ್ಲ, ವಿರೂಪಗೊಂಡ ಅಥವಾ ಹರಿದ ನೋಟು ಎಟಿಎಂನಲ್ಲಿ ಸಿಕ್ಕರೆ ಈಗ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
ಯಾವ ಎಟಿಎಂನಿಂದ ಹಣವನ್ನು ಹಿಂಪಡೆಯಲಾಗಿತ್ತೋ ಆ ವಿರೂಪಗೊಂಡ ನೋಟುಗಳನ್ನು ವಿನಿಮಯ ಮಾಡಲು ನೀವು ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕು. ನೀವು ಹಣವನ್ನು ಹಿಂಪಡೆದ ಎಟಿಎಂನ ದಿನಾಂಕ, ಸಮಯ ಮತ್ತು ಸ್ಥಳವನ್ನು ನಮೂದಿಸಬೇಕು ಮತ್ತು ವಿತ್‌ಡ್ರಾಲ್ ಸ್ಲಿಪ್ ಅನ್ನು ಲಗತ್ತಿಸಬೇಕು. ಸ್ಲಿಪ್ ಇಲ್ಲದಿದ್ದರೆ, ಮೊಬೈಲ್‌ನಲ್ಲಿ ಸ್ವೀಕರಿಸಿದ ಸಂದೇಶದ ವಿವರಗಳನ್ನು ನೀವು ನೀಡಬೇಕಾಗುತ್ತದೆ.
ಆರ್‌ಬಿಐ ನಿಯಮಗಳ ಪ್ರಕಾರ, ವಿರೂಪಗೊಂಡ ನೋಟುಗಳನ್ನು ವಿನಿಮಯ ಮಾಡಲಾಗುವುದಿಲ್ಲ. ಆದರೆ ಬಳಕೆದಾರರ ದೂರೊಂದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರವನ್ನು ತಿಳಿಸಿದ್ದು, ಇಂಥ ಪರಿಸ್ಥಿತಿಯಲ್ಲಿ ಗ್ರಾಹಕರು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಬ್ಯಾಂಕ್ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಹೇಳಿದ್ದು, “ನೋಟುಗಳನ್ನು ಅತ್ಯಾಧುನಿಕ ನೋಟು ವಿಂಗಡಿಸುವ ಯಂತ್ರಗಳ ಮೂಲಕ ನಮ್ಮ ಎಟಿಎಂಗಳಿಗೆ ಲೋಡ್ ಮಾಡುವ ಮೊದಲು ಚೆಕ್ ಮಾಡಲಾಗುತ್ತದೆ. ಆದ್ದರಿಂದ ಮಣ್ಣಾದ/ಹಾಳಾದ ನೋಟುಗಳ ವಿತರಣೆ ಅಸಾಧ್ಯ. ಆದರೂ ನಮ್ಮ ಯಾವುದೇ ಶಾಖೆಯಿಂದ ನೋಟು ವಿನಿಮಯ ಮಾಡಿಕೊಳ್ಳಬಹುದು,” ಎಂದು ತಿಳಿಸಿದೆ.
SBI ಪ್ರಕಾರ, ವಯಕ್ತಿಕವಾಗಿ ಆ ಬಗ್ಗೆ https://crcf.sbi.co.in/ccf/ ಈ ಲಿಂಕ್ನಲ್ಲಿ General Banking // Cash ಸಂಬಂಧಿತ ವರ್ಗದ ಅಡಿಯಲ್ಲಿ ದೂರು ಸಲ್ಲಿಸಬಹುದು. ಈ ಲಿಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ATMಗಾಗಿ. ಇಲ್ಲಿ ಉಲ್ಲೇಖಿಸಬೇಕಾದ ಅಂಶ ಏನೆಂದರೆ, ಯಾವುದೇ ಬ್ಯಾಂಕ್ ಎಟಿಎಂಗಳಿಂದ ವಿರೂಪವಾದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ. ಇದರ ಹೊರತಾಗಿಯೂ ಬ್ಯಾಂಕ್ಗಳು ನಿಯಮಗಳನ್ನು ಉಲ್ಲಂಘಿಸಿದರೆ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಗ್ರಾಹಕರ ದೂರಿನ ಆಧಾರದ ಮೇಲೆ ಬ್ಯಾಂಕ್ 10,000 ರೂಪಾಯಿಗಳವರೆಗೆ ಹಾನಿಯನ್ನು ಕಟ್ಟಿಕೊಡಬೇಕಾಗಬಹುದು.
ಇದನ್ನೂ ಓದಿ: ATM cash: ಸಮಯಕ್ಕೆ ಸರಿಯಾಗಿ ಹಣ ತುಂಬದೆ ಎಟಿಎಂ ಖಾಲಿಯಿದ್ದಲ್ಲಿ ಬ್ಯಾಂಕ್ಗಳಿಗೆ 10 ಸಾವಿರ ರೂ. ದಂಡ
(How To Exchange Damaged Notes Withdraw From ATM Here Is The Step By Step Details)