ಹುರುನ್ ಅಂಡರ್ 35 ಉದ್ಯಮಿಗಳ ಪಟ್ಟಿಯಲ್ಲಿ ಪಲ್ಲೋನ್ ಮಿಸ್ತ್ರಿ, ಅಲಖ್ ಪಾಂಡೆ ಮತ್ತಿತರರು; ಚಿಕ್ಕ ವಯಸ್ಸಿನ ಉದ್ಯಮಿಗಳು ಬೆಂಗಳೂರಲ್ಲೇ ಹೆಚ್ಚು

|

Updated on: Sep 26, 2024 | 6:28 PM

Hurun India U-35 entrepreneurs list 2024: ಹುರುನ್ ಇಂಡಿಯಾ 35 ವರ್ಷದೊಳಗಿನ ಯುವ ಉದ್ಯಮಿಗಳ ಪಟ್ಟಿ ಬಿಡುಗಡೆ ಆಗಿದೆ. ಇಶಾ ಅಂಬಾನಿ, ಆಕಾಶ್ ಅಂಬಾನಿ, ಪಲ್ಲೋನ್ ಮಿಸ್ಟ್ರಿ, ಪಾರ್ಥ್ ಜಿಂದಾಲ್ ಮೊದಲಾದ ಕುಟುಂಬ ದತ್ತವಾಗಿ ಬಿಸಿನೆಸ್ ಮುಂದುವರಿಸುತ್ತಿರುವವರು ಪಟ್ಟಿಯಲ್ಲಿದ್ದಾರೆ. ಹಾಗೆಯೇ, ಶೇರ್​ಚ್ಯಾಟ್​ನ ಅಂಕುಶ್ ಸಚ್​ದೇವ, ಅನ್ ಅಕಾಡೆಮಿಯ ರೋಮನ್ ಸೈನಿ, ಫಿಸಿಕ್ಸ್ ವಾಲಾದ ಅಲಖ್ ಪಾಂಡೆ ಮೊದಲಾದ ಅನೇಕ ಸ್ವನಿರ್ಮಿತ ಉದ್ಯಮಿಗಳೂ ಇದ್ದಾರೆ.

ಹುರುನ್ ಅಂಡರ್ 35 ಉದ್ಯಮಿಗಳ ಪಟ್ಟಿಯಲ್ಲಿ ಪಲ್ಲೋನ್ ಮಿಸ್ತ್ರಿ, ಅಲಖ್ ಪಾಂಡೆ ಮತ್ತಿತರರು; ಚಿಕ್ಕ ವಯಸ್ಸಿನ ಉದ್ಯಮಿಗಳು ಬೆಂಗಳೂರಲ್ಲೇ ಹೆಚ್ಚು
ರೋಮನ್ ಸೈನಿ
Follow us on

ನವದೆಹಲಿ, ಸೆಪ್ಟೆಂಬರ್ 26: ಪ್ರಸಕ್ತ ವರ್ಷದ ಹುರುನ್ ಇಂಡಿಯಾ ಅಂಡರ್-35 ಆಂಟ್ರಪ್ರನ್ಯೂರ್​ಗಳ ಪಟ್ಟಿ ಬಿಡುಗಡೆ ಆಗಿದೆ. ದೇಶದ 150 ಅಗ್ರಮಾನ್ಯ ಯುವ ಉದ್ಯಮಿಗಳನ್ನು ಗುರುತಿಸಿ ಪಟ್ಟಿಗೆ ಸೇರಿಸಲಾಗಿದೆ. ಹಿಂದಿನ ತಲೆಮಾರಿನಿಂದ ಕಂಪನಿಯ ಆಡಳಿತವನ್ನು ಪಡೆದವರು, ಹೊಸದಾಗಿ ಉದ್ದಿಮೆ ಕಟ್ಟಿದವರು ಮೊದಲಾದವರು ಈ ಪಟ್ಟಿಯಲ್ಲಿದ್ದಾರೆ. ನಿರೀಕ್ಷೆಯಂತೆ ಅಂಬಾನಿಯ ಇಬ್ಬರು ಮಕ್ಕಳಿದ್ದಾರೆ. ಅಂಬಾನಿ ಜೊತೆಗೆ, ಮಿಸ್ಟ್ರಿ, ಜಿಂದಾಲ್ ಕುಟುಂಬದ ಹೊಸ ತಲೆಮಾರಿನವರು ಇದರಲ್ಲಿದ್ದಾರೆ. ಫಿಸಿಕ್ಸ್ ವಾಲಾ ಸ್ಥಾಪಕ ಅಲಖ್ ಪಾಂಡೆ ಮೊದಲಾದ ಸ್ವಂತವಾಗಿ ಉದ್ಯಮಿಗಳಾದವರೂ ಇದ್ದಾರೆ.

ಶೇರ್​​​ಚ್ಯಾಟ್ ಸಂಸ್ಥೆಯ 31 ವರ್ಷದ ಅಂಕುಶ್ ಸಚ್​ದೇವ ಈ ಹುರುನ್ ಅಂಡರ್ 35 ಉದ್ಯಮಿಗಳ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿ ಎನಿಸಿದ್ದಾರೆ. ಒಟ್ಟು 150 ಮಂದಿ ಇರುವ ಈ ಪಟ್ಟಿಯಲ್ಲಿರುವವರ ಸರಾಸರಿ ವಯಸ್ಸು ಕೇವಲ 33 ವರ್ಷವಾಗಿದೆ.

ಆದರೆ, ಯುವ ಮಹಿಳಾ ಆಂಟ್ರನ್ಯೂರ್​ಗಳ ಸಂಖ್ಯೆ ಮಾತ್ರ ಶೋಚನೀಯ ಎನಿಸುತ್ತದೆ. 150 ಜನರ ಪೈಕಿ ಮಹಿಳೆಯರ ಸಂಖ್ಯೆ ಕೇವಲ ಏಳು ಮಾತ್ರ. ಅದರಲ್ಲಿ ಕುಟುಂಬದತ್ತವಾಗಿ ಬಂದ ಉದ್ದಿಮೆ ಹೊಂದಿರವ ಮಹಿಳೆಯರೇ ನಾಲ್ವರಿದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳ ಹಣಕಾಸು ಸುರಕ್ಷತೆ ತರುವ ಸುಕನ್ಯ ಸಮೃದ್ಧಿ ಸ್ಕೀಮ್; ಈ ಯೋಜನೆಯ ಲಭ ಇತ್ಯಾದಿ ಮುಖ್ಯಾಂಶಗಳಿವು

ಹುರುನ್ ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರಿಗರೇ ಹೆಚ್ಚು…

ಹುರುನ್ ಅಂಡರ್-35 ಉದ್ಯಮಿಗಳ ಪಟ್ಟಿಯಲ್ಲಿ ದೇಶದ ವಿವಿಧ 41 ನಗರಗಳ ವ್ಯಕ್ತಿಗಳಾಗಿದ್ದಾರೆ. ಈ ಪೈಕಿ ಬೆಂಗಳೂರು, ಮುಂಬೈ ಮತ್ತು ದೆಹಲಿ ನಗರವಾಸಿಗಳ ಸಂಖ್ಯೆಯೇ ಹೆಚ್ಚು. ಅದರಲ್ಲೂ ಬೆಂಗಳೂರು ನಂಬರ್ ಒನ್ ಎನಿಸಿದೆ. ಈ ಪಟ್ಟಿಯಲ್ಲಿ 29 ಆಂಟ್ರಪ್ರನ್ಯೂರ್​ಗಳು ಬೆಂಗಳೂರಿನವರೇ ಆಗಿದ್ದಾರೆ. ಮುಂಬೈನ 26 ಮಂದಿ ಇದ್ದಾರೆ.

ರೋಮನ್ ಸೈನಿ ನಂಬರ್ ಒನ್

ಹುರುನ್ ಪಟ್ಟಿಯಲ್ಲಿ ಅನ್​ಅಕಾಡೆಮಿ ಸಂಸ್ಥೆಯ ರೋಮನ್ ಸೈನಿ ಟಾಪ್​ನಲ್ಲಿದ್ದಾರೆ. ಅದೇ ಸಂಸ್ಥೆಯ ಹೇಮೇಶ್ ಸಿಂಗ್ ನಂತರದ ಸ್ಥಾನದಲ್ಲಿದ್ದಾರೆ. ಮೀಶೋ ಸಂಸ್ಥೆಯ ವಿದಿತ್ ಆತ್ರೆ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಟಾಟಾ ಗ್ರೂಪ್​ನಿಂದ ಭಾರತದ ಮೊದಲ ಸೆಮಿಕಂಡಕ್ಟರ್ ತಯಾರಿಕೆ ಘಟಕ ಸ್ಥಾಪನೆ ನಿಶ್ಚಿತ; ತೈವಾನ್​ನ ಪಿಎಸ್​​ಎಂಸಿ ಜೊತೆ ಒಪ್ಪಂದ

ರಿಲಾಯನ್ಸ್ ರೀಟೇಲ್ ನೋಡಿಕೊಳ್ಳುವ ಇಶಾ ಅಂಬಾನಿ, ರಿಲಾಯನ್ಸ್ ಜಿಯೋ ಜವಾಬ್ದಾರಿ ಹೊಂದಿರುವ ಆಕಾಶ್ ಅಂಬಾನಿ, ಜೆಎಸ್​ಡಬ್ಲ್ಯು ಸಿಮೆಂಟ್​ನ ಪಾರ್ಥ್ ಜಿಂದಾಲ್, ಶಾಪೂರ್​ಜಿ ಪಲ್ಲೋನ್​ಜಿ ಗ್ರೂಪ್​ನ ಪಲ್ಲೋನ್ ಮಿಸ್ತ್ರಿ ಅವರು ನಿರೀಕ್ಷೆಯಂತೆ ಈ ಪಟ್ಟಿಯಲ್ಲಿದ್ದಾರೆ.

ಮಮಾ ಅರ್ಥ್ ಸಂಸ್ಥೆಯ ಘಜಲ್ ಅಲಘ್, ಫಿಸಿಕ್ಸ್ ವಾಲಾ ಸಂಸ್ಥೆಯ ಅಲಖ್ ಪಾಂಡೆ ಮತ್ತಿತರರೂ ಕೂಡ ಇದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ