Labour Codes: ಹೊಸ ಕಾರ್ಮಿಕ ಕಾನೂನಿಂದ ಟೇಕ್ ಹೋಮ್ ವೇತನದಲ್ಲಿ ಇಳಿಕೆ; ಮಾಲೀಕರ ಪಿಎಫ್ ಕೊಡುಗೆ ಏರಿಕೆ

| Updated By: Digi Tech Desk

Updated on: Jun 07, 2021 | 4:44 PM

ಕೇಂದ್ರ ಸರ್ಕಾರದಿಂದ ಹೊಸ ಕಾರ್ಮಿಕ ಕಾನೂನು ಪ್ರಕಾರ ಉದ್ಯೋಗಿಗಳ ಕೈಗೆ ಸಿಗುವ ವೇತನದಲ್ಲಿ ಕಡಿಮೆ ಆಗಲಿದೆ. ಉದ್ಯೋಗದಾತರು ಪಾವತಿಸುವ ಪಿಎಫ್ ಮೊತ್ತವು ಹೆಚ್ಚಲಿದೆ. ಈ ಬಗ್ಗೆ ವಿವರಗಳು ಇಲ್ಲಿವೆ.

Labour Codes: ಹೊಸ ಕಾರ್ಮಿಕ ಕಾನೂನಿಂದ ಟೇಕ್ ಹೋಮ್ ವೇತನದಲ್ಲಿ ಇಳಿಕೆ; ಮಾಲೀಕರ ಪಿಎಫ್ ಕೊಡುಗೆ ಏರಿಕೆ
ಈ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.
Follow us on

ಇನ್ನೇನು ಕೆಲವು ತಿಂಗಳಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರವು ಈ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರಿಂದಾಗಿ ಉದ್ಯೋಗಿಗಳ ಟೇಕ್- ಹೋಮ್ (ಕೈಗೆ ಸಿಗುವುದು) ಸಂಬಳ ಕಡಿಮೆ ಆಗಲಿದೆ. ಕಂಪೆನಿಗಳು ಪಾವತಿ ಮಾಡಬೇಕಾದ ಪ್ರಾವಿಡೆಂಟ್ ಫಂಡ್ ಮೊತ್ತವು ಹೆಚ್ಚಲಿದೆ. ಒಂದು ಸಲ ವೇತನ ಸಂಹಿತೆ ಜಾರಿಯಾದಲ್ಲಿ ಉದ್ಯೋಗಿಯ ಬೇಸಿಕ್ ಪೇ (ಮೂಲವೇತನ) ಮತ್ತು ಪ್ರಾವಿಡೆಂಟ್ ಫಂಡ್ (ಪಿಎಫ್) ಲೆಕ್ಕಾಚಾರದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ. ಕೈಗಾರಿಕೆ ವ್ಯವಹಾರಗಳು, ವೇತನ, ಸಾಮಾಜಿಕ ಭದ್ರತೆ ಮತ್ತು ಔದ್ಯೋಗಿಕ ಆರೋಗ್ಯ ಸುರಕ್ಷತೆ ಮತ್ತು ಉದ್ಯೋಗ ನಿರ್ವಹಣೆ ವಾತಾವರಣ ಇವುಗಳಲ್ಲಿ ಏಪ್ರಿಲ್ 1, 2021ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿತ್ತು. ಈ ನಾಲ್ಕು ಕಾನೂನಿನ ಮೂಲಕವಾಗಿ 44 ಕೇಂದ್ರೀಯ ಕಾರ್ಮಿಕ ಕಾನೂನುಗಳು ಕೊನೆಯಾಗಲಿವೆ.

ಈ ನಾಲ್ಕು ಸಂಹಿತೆ ಅಡಿಯಲ್ಲಿ ಸಚಿವಾಲಯದಿಂದ ನಿಯಮಗಳನ್ನು ಅಂತಿಮಗೊಳಿಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಅಧಿಸೂಚನೆ ಹೊರಡಿಸುವುದಕ್ಕೆ ಸಾಧ್ಯವಾಗಿಲ್ಲವಾದ್ದರಿಂದ ಎಷ್ಟೋ ರಾಜ್ಯಗಳಲ್ಲಿ ಜಾರಿಗೆ ತರುವುದಕ್ಕೆ ಇನ್ನೂ ಆಗಿಲ್ಲ. ಕಾರ್ಮಿಕರಿಗೆ ಸಂಬಂಧಿಸಿದಂತೆ ಕಾನೂನುಗಳು ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಅಧಿಸೂಚನೆ ಹೊರಡಬೇಕು. ಈ ನಾಲ್ಕು ಸಂಹಿತೆಗಳ ಅಡಿಯಲ್ಲಿ ರಾಜ್ಯಗಳಲ್ಲಿ ಅಧಿಸೂಚನೆ ಹೊರಡಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಕಾನೂನಾಗಿ ತರಬೇಕಾಗಿದೆ. “ಹಲವು ಪ್ರಮುಖ ರಾಜ್ಯಗಳು ನಾಲ್ಕು ಸಂಹಿತೆಯ ಕಾನೂನನ್ನು ಅಂತಿಮಗೊಳಿಸಿಲ್ಲ. ಕೆಲವು ರಾಜ್ಯಗಳಲ್ಲಿ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಆ ಪ್ರಕ್ರಿಯೆ ಕೊನೆಗೊಳ್ಳುವ ತನಕ ಕೇಂದ್ರ ಸರ್ಕಾರವು ದೀರ್ಘ ಕಾಲ ಕಾಯುವುದಕ್ಕೆ ಸಾಧ್ಯವಿಲ್ಲ. ಆದರೆ ಕೆಲವು ತಿಂಗಳು ಸಂಸ್ಥೆಗಳು ಮತ್ತು ಕಂಪೆನಿಗಳಿಗೆ ಕಾನೂನು ಜಾರಿಗೆ ಸಮಯ ನೀಡಲಿದೆ,” ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಮೂಲಗಳು ತಿಳಿಸಿರುವಂತೆ, ಹಲವು ರಾಜ್ಯಗಳು ಕಾನೂನಿನ ಕರಡನ್ನು ಈಗಾಗಲೇ ವಿತರಿಸಿವೆ. ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಹರಿಯಾಣ, ಒಡಿಶಾ, ಪಂಜಾಬ್, ಗುಜರಾತ್, ಕರ್ನಾಟಕ ಮತ್ತು ಉತ್ತರಾಖಂಡ್ ಈಗಾಗಲೇ ವಿತರಿಸಿವೆ. ಹೊಸ ವೇತನ ಸಂಹಿತೆ ಅಡಿಯಲ್ಲಿ ಭತ್ಯೆಗಳು ಗರಿಷ್ಠ ಪ್ರಮಾಣ ಅಂದರೆ ಶೇ 50ಕ್ಕೆ ಮಿತಿಗೊಳಿಸಲಾಗಿದೆ. ಇದರರ್ಥ ಏನೆಂದರೆ, ಒಟ್ಟಾರೆ ವೇತನದಲ್ಲಿ ಅರ್ಧದಷ್ಟು ಬೇಸಿಕ್ ಪೇ ಆಗಿರುತ್ತದೆ. ಅದರ ಆಧಾರದಲ್ಲಿ ಪಿಎಫ್ ಲೆಕ್ಕಾಚಾರ ಮಾಡಲಾಗುತ್ತದೆ. ಅದರಲ್ಲಿ ಬೇಸಿಕ್ ಪೇ ಮತ್ತು ಡಿಎ ಒಳಗೊಂಡಿರುತ್ತದೆ. ಬೇಸಿಕ್ ಪೇ ಕಡಿಮೆ ಇರಲಿ ಎಂಬ ಕಾರಣಕ್ಕೆ ಭತ್ಯೆಗಳನ್ನು ಹೆಚ್ಚಿಸುವುದಕ್ಕೆ ಉದ್ಯೋಗದಾತರಿಗೆ ಸಾಧ್ಯವಿಲ್ಲ.

ಈ ಹೊಸ ಸಂಹಿತೆ ಜಾರಿ ಆದ ಮೇಲೆ ಉದ್ಯೋಗಿಗಳ ಟೇಕ್ ಹೋಮ್ ವೇತನ ಕಡಿಮೆ ಆಗುತ್ತದೆ. ಹಲವು ಪ್ರಕರಣಗಳಲ್ಲಿ ಉದ್ಯೋಗದಾತರು ಪಾವತಿಸಬೇಕಾದ ಪಿಎಫ್ ಮೊತ್ತ ಹೆಚ್ಚಾಗಲಿದೆ. ಒಂದು ಸಲ ಇದು ಜಾರಿ ಆಗುತ್ತಿದ್ದಂತೆ ವೇತನದ ರೀಸ್ಟ್ರಕ್ಚರ್ ಮಾಡಬೇಕಾಗುತ್ತದೆ. ಇನ್ನು 300 ಕಾರ್ಮಿಕರವರೆಗೆ ಇರುವಂಥ ಉದ್ಯಮಗಳನ್ನು ಮುಚ್ಚಲು, ಕಾರ್ಮಿಕರನ್ನು ತೆಗೆಯಲು ಹಾಗೂ ಕಾರ್ಯ ನಿರ್ವಹಣೆ ನಿಲ್ಲಿಸಲು ಈಗ ಇರುವ ಕಾನೂನು ಸಡಿಲ ಆಗಲಿದೆ. ಸರ್ಕಾರದ ಅನುಮತಿ ಇಲ್ಲದೆ ಇವನ್ನೆಲ್ಲ ಮಾಡಬಹುದಾಗಿದೆ. ಸದ್ಯಕ್ಕೆ 100 ಕಾರ್ಮಿಕರೊಳಗೆ ಇರುವ ಉದ್ಯಮಗಳಲ್ಲಿ ಮಾತ್ರ ಈ ರೀತಿ ಸರ್ಕಾರದ ಅನುಮತಿ ಇಲ್ಲದೆ ಮಾಡಬಹುದಿತ್ತು.

ಇದನ್ನೂ ಓದಿ: New Labour Laws: ಕೆಲಸಗಾರರಿಗೆ ಸಿಹಿಸುದ್ದಿ; 15 ನಿಮಿಷ ಹೆಚ್ಚು ದುಡಿದರೂ ಓಟಿ ಪರಿಗಣನೆಗೆ ಸಿದ್ಧವಾಗ್ತಿದೆ ಹೊಸ ಕಾಯ್ದೆ

(Union government new labour codes implemented in India employees take home salary will decrease and employer contribution to pf will increase know the reason why?)

Published On - 2:43 pm, Mon, 7 June 21