AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICICI Prudential Life Insurance: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್ ಕಂಪೆನಿಯಿಂದ ದಾಖಲೆಯ ವಾರ್ಷಿಕ ಬೋನಸ್​

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್​ನಿಂದ 2020- 21ನೇ ಸಾಲಿನ ಹಣಕಾಸು ವರ್ಷದಲ್ಲಿ ದಾಖಲೆಯ 867 ಕೋಟಿ ರೂಪಾಯಿಯನ್ನು ಬೋನಸ್ ಆಗಿ ಘೋಷಣೆ ಮಾಡಲಾಗಿದೆ.

ICICI Prudential Life Insurance: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್ ಕಂಪೆನಿಯಿಂದ ದಾಖಲೆಯ ವಾರ್ಷಿಕ ಬೋನಸ್​
ಇವತ್ತಿಗೆ 1.61 ಕೋಟಿ ರೂಪಾಯಿ
TV9 Web
| Updated By: Srinivas Mata|

Updated on:Jun 07, 2021 | 9:21 PM

Share

ಖಾಸಗಿ ಲೈಫ್ ಇನ್ಷೂರರ್ ಆದ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್ ಕಂಪೆನಿಯಿಂದ ದಾಖಲೆಯ ವಾರ್ಷಿಕ ಬೋನಸ್​ ರೂ. 867 ಕೋಟಿಯನ್ನು ಅರ್ಹ ಪಾಲಿಸಿದಾರರಿಗೆ ಘೋಷಣೆ ಮಾಡಲಾಗಿದೆ. 2020- 21ನೇ ಸಾಲಿನ ಹಣಕಾಸು ವರ್ಷಕ್ಕಾಗಿ ಘೋಷಿಸಿದ ಬೋನಸ್ ಇದಾಗಿದೆ. 2019- 20ನೇ ಸಾಲಿನಲ್ಲಿ ಘೋಷಿಸಿದ್ದಕ್ಕಿಂತ ಶೇಕಡಾ 10ರಷ್ಟು ಹೆಚ್ಚು ಬೋನಸ್​ ಅನ್ನು ಈ ಬಾರಿ ನೀಡಲಾಗುತ್ತಿದೆ. ಅಂದಹಾಗೆ ಐಸಿಐಸಿಐ ಪ್ರುಡೆನ್ಷಿಯಲ್​ನ ಎಲ್ಲರೂ ಈ ಬೋನಸ್​ಗೆ ಅರ್ಹರು ಅಂತೇನೂ ಇಲ್ಲ. “ಮಾರ್ಚ್ 31, 2021ಕ್ಕೆ ಅನ್ವಯ ಆಗುವಂತೆ ಎಲ್ಲ ಪಾರ್ಟಿಸಿಪೇಟಿಂಗ್ ಪಾಲಿಸಿಗಳು ಈ ಬೋನಸ್ ಪಡೆಯಲು ಅರ್ಹ ಮತ್ತು ಈ ಬೆನಿಫಿಟ್ ಸೇರ್ಪಡೆ ಮಾಡಲಾಗುವುದು,” ಎಂದು ಕಂಪೆನಿ ಹೇಳಿದೆ. ಈಗಿನ ಬೋನಸ್ ಘೋಷಣೆಯಿಂದ 9.8 ಲಕ್ಷ ಪಾಲಿಸಿದಾರರು ಅನುಕೂಲ ಪಡೆಯಲಿದ್ದಾರೆ. ಸಾಂಪ್ರದಾಯಿಕ ಇನ್ಷೂರೆನ್ಸ್ ಪ್ಲಾನ್​ಗಳಾದ ಎಂಡೋಮೆಂಟ್ ಅಥವಾ ಮನಿ ಬ್ಯಾಕ್ ಪ್ಲಾನ್​ಗಳು ಒಂದೋ ಪಾರ್ಟಿಸಿಪೇಟರಿ ಪ್ಲಾನ್​ಗಳು ಆ ಮೂಲಕವಾಗಿ ಬೋನಸ್ ಪಡೆಯಲು ಅರ್ಹ ಇರುತ್ತವೆ ಅಥವಾ ನಾನ್ ಪಾರ್ಟಿಸಿಪೇಟರಿ ಪ್ಲಾನ್​ಗಳು ಎಂದಾದಲ್ಲಿ ಬೋನಸ್ ಪಡೆಯಲು ಅರ್ಹವಲ್ಲ.

ಇದು ಸತತ 15ನೇ ವರ್ಷ ಕಂಪೆನಿಯು ಬೋನಸ್ ಘೋಷಣೆ ಮಾಡಿದೆ. ಕಂಪೆನಿಯ ಕಠಿಣ ಸಿದ್ಧಾಂತ ಏನೆಂದರೆ, ಆರಂಭದಿಂದಲೂ ಎಲ್ಲ ಮಾರ್ಕೆಟ್ ಸೈಕಲ್​ನ ತನ್ನ ಪೋರ್ಟ್​ಫೋಲಿಯೋದಲ್ಲಿ ಶೂನ್ಯ ತಪ್ಪುಗಳನ್ನು ಖಾತ್ರಿ ಮಾಡುವುದಾಗಿದೆ. ಮಾರ್ಚ್ 31, 2021ಕ್ಕೆ ಶೇ 96.8ರಷ್ಟು ನಿಶ್ಚಿತ ಆದಾಯ ಪೋರ್ಟ್​ಫೋಲಿಯೋವನ್ನು ಸವರನ್ ಅಥವಾ AAA ರೇಟ್​ ಪೇಪರ್​ನಲ್ಲಿ ಹೂಡಲಾಗಿದೆ ಎಂದು ಐಸಿಐಸಿಐ ಪ್ರುಡೆನ್ಷಿಯಲ್ ಹೇಳಿದೆ. ಆದರೆ ಈ ಬೋನಸ್ ಪಡೆಯಲು ಪಾಲಿಸಿದಾರರು ಅರ್ಹರು ಹೌದೋ  ಅಲ್ಲವೋ ಅಂತ ತಿಳಿಯಲು ಪಾಲಿಸಿ ದಾಖಲೆಯನ್ನು ಪರಿಶೀಲಿಸಬೇಕು.

ಕಂಪೆನಿ ಕಾರ್ಯಾಚರಣೆಯ 20ನೇ ವಾರ್ಷಿಕೋತ್ಸವ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಎನ್​.ಎಸ್.ಕೃಷ್ಣನ್ ಮಾತನಾಡಿ, 2021ರ ಹಣಕಾಸು ವರ್ಷಕ್ಕೆ ವಾರ್ಷಿಕ ಬೋನಸ್ ಘೋಷಣೆ ಮಾಡುತ್ತಿರುವುದಕ್ಕೆ ಸಂತೋಷ ಆಗಿದೆ. ಇದು ಕಂಪೆನಿಯ ಇತಿಹಾಸದಲ್ಲೇ ಅತಿ ಹೆಚ್ಚಿನ ಬೋನಸ್ ಆಗಿದೆ. ನಮ್ಮ ಕಂಪೆನಿ ಕಾರ್ಯಾಚರಣೆಯ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಘೋಷಣೆಯು ಸಾಂದರ್ಭಿಕವಾಗಿ ಜತೆಯಾಗಿದೆ. ಗ್ರಾಹಕ ಕೇಂದ್ರಿತ ನಮ್ಮ ಧೋರಣೆಯನ್ನು ಇದು ಪ್ರದರ್ಶಿಸುತ್ತದೆ. ಈ ಹಿಂದೆಂದೂ ಕಾಣದ ಸವಾಲಿನ ಕೊರೊನಾ ಕಾಲದಲ್ಲಿ ಈಗ ಘೋಷಣೆ ಮಾಡಿರುವುದು ವಿಶೇಷ ಸಮಾಧಾನ ನೀಡಿದೆ. ನಮ್ಮ ಸಾಮರ್ಥ್ಯವನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಪಾಲಿಸಿದಾರರಿಗೆ ಈಗ ಒಂದೋ ಪ್ರತಿ ಒಂದು ಸಾವಿರ ರೂಪಾಯಿಗೆ ಇಂತಿಷ್ಟು ಮೊತ್ತ ಎಂದು ಬೋನಸ್ ಘೋಷಣೆ ಮಾಡಬಹುದು. ಅಥವಾ ಒಟ್ಟು ಎಷ್ಟು ಮೊತ್ತಕ್ಕೆ ಸಮ್ ಅಶ್ಯೂರ್ಡ್ ಇರುತ್ತದೋ ಅದಕ್ಕೆ ಇಂತಿಷ್ಟು ಪರ್ಸೆಂಟ್ ಅಂತಲೂ ನೀಡಬಹುದು. ಉದಾಹರಣೆಗೆ, ಪ್ರತಿ 1000 ರೂಪಾಯಿ ಸಮ್ ಅಶ್ಯೂರ್ಡ್ ಮೇಲೆ 60 ರೂಪಾಯಿ ಬೋನಸ್ ನೀಡಬಹುದು. ಆಗ 1 ಲಕ್ಷ ರೂಪಾಯಿ ಸಮ್ ಅಶ್ಯೂರ್ಡ್ ಇದಲ್ಲಿ ಅದಕ್ಕೆ 6000 ರೂಪಾಯಿ ಬೋನಸ್ ಬರುತ್ತದೆ. ಒಂದು ವೇಳೆ ಟರ್ಮ್ ಪಾಲಿಸಿ 10 ವರ್ಷಕ್ಕೆ ಆದಲ್ಲಿ ಒಟ್ಟಾರೆ ಬೋನಸ್ ಅಕ್ಯುಮುಲೇಟ್ ಆಗಿ, ಮೆಚ್ಯೂರಿಟಿ ವೇಳೆ 60 ಸಾವಿರ ರೂಪಾಯಿ ಆಗುತ್ತದೆ.

RWRP ಆಧಾರದಲ್ಲಿ ಖಾಸಗಿ ವಲಯದ ಪ್ರಮುಖ ಕಂಪೆನಿ ಯಾವಾಗ ಲೈಫ್​ ಇನ್ಷೂರೆನ್ಸ್ ಕಂಪೆನಿ ಲಾಭ ಮಾಡುತ್ತದೋ ಆಗ ಲಾಭದಲ್ಲಿ ಪಾಲಿಸಿದಾರರಿಗೆ ಭಾಗ ಹಂಚಲಾಗುತ್ತದೆ. ಅದು ಬೋನಸ್ ರೂಪದಲ್ಲಿ ಇರುತ್ತದೆ. ಇನ್ಷೂರೆರ್ ಆಸ್ತಿ ಹಾಗೂ ಜವಾಬ್ದಾರಿಯನ್ನು ಮೌಲ್ಯಮಾಪನ ಮಾಡಿದ ಮೇಲೆ ಆಸ್ತಿಯಲ್ಲಿ ಸಾಲವನ್ನು ಕಳೆದ ಮೇಲೆ ಉಳಿದದ್ದು ಸರ್​ಪ್ಲಸ್ (ಮಿಗತೆ). ಅದನ್ನು ಆರ್ಥಿಕ ವರ್ಷದ ಕೊನೆಗೆ ಪಾಲಿಸಿದಾರರಿಗೆ ಬೋನಸ್ ಎಂದು ವಿತರಿಸಲಾಗುತ್ತದೆ. ಅಂದಹಾಗೆ ಐಸಿಐಸಿಐ ಬ್ಯಾಂಕ್​ ಮತ್ತು ಪ್ರುಡೆನ್ಷಿಯಲ್ ಕಾರ್ಪೊರೇಷನ್ ಹೋಲ್ಡಿಂಗ್ಸ್ ಲಿಮಿಟೆಡ್​ನಿಂದ ಪ್ರಮೋಟ್ ಆಗಿರುವಂಥದ್ದು ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್. ಕಂಪೆನಿಯು ಕಾರ್ಯಾಚರಣೆ ಆರಂಭಿಸಿದ್ದು 2001ರಲ್ಲಿ. ರೀಟೇಲ್ ವೇಯ್ಟೆಡ್ ರಿಸೀವ್ಡ್ ಪ್ರೀಮಿಯಂ (RWRP) ಆಧಾರದಲ್ಲಿ ಪ್ರಮುಖ ಖಾಸಗಿ ವಲಯದ ಇನ್ಷೂರೆನ್ಸ್ ಕಂಪೆನಿ ಇದಾಗಿದೆ.

ಇದನ್ನೂ ಓದಿ: LIC Micro Bachat Plan: ದಿನಕ್ಕೆ 28 ರೂಪಾಯಿ ಉಳಿಸಿದರೂ 2 ಲಕ್ಷ ಇನ್ಷೂರೆನ್ಸ್ ದೊರಕಿಸುವ ಮೈಕ್ರೋ ಬಚತ್ ಬಗ್ಗೆ ಗೊತ್ತೆ?

(ICICI Prudential life insurance announces record bonus of Rs 867 crore to policy holders for FY21)

Published On - 9:11 pm, Mon, 7 June 21