ಇಸ್ರೋದಲ್ಲಿ ಕೆಲಸ ಕೊಡ್ತೀವಿ ಎಂದು ಕರೆದರೆ ಐಐಟಿಯವರು ಹೋಗೋದೇ ಇಲ್ವಂತೆ; ಕಟುಸತ್ಯ ಬಿಚ್ಚಿಟ್ಟ ಇಸ್ರೋ ಮುಖ್ಯಸ್ಥ ಸೋಮನಾಥ್

ISRO Chairman Somanath Reveals Hard Truth: ಇಸ್ರೋದಲ್ಲಿ ಮುಖ್ಯಸ್ಥರಿಗೆ ಸಿಗುವ ಸಂಬಳ ಎರಡೂವರೆ ಲಕ್ಷ. ಐಐಟಿಯಲ್ಲಿ ಈಗಷ್ಟೇ ಓದು ಮುಗಿಸಿ ಮೊದಲ ಕೆಲಸ ಸೇರುವ ವಿದ್ಯಾರ್ಥಿಗಳ ಸರಾಸರಿ ಸಂಬಳವೇ ಎರಡು ಲಕ್ಷಕ್ಕೂ ಹೆಚ್ಚಿರುತ್ತದೆ. ಈ ಪರಿಸ್ಥಿತಿಯಲ್ಲಿ ಐಐಟಿ ಪದವೀಧರರು ಇಸ್ರೋ ಸೇರುವ ಸಾಧ್ಯತೆ ಎಷ್ಟು? ಇಸ್ರೋ ಛೇರ್ಮನ್ ಎಸ್ ಸೋಮನಾಥ್ ಅವರು ಮೊನ್ನೆ ಈ ವಿಚಾರದ ಬಗ್ಗೆ ಮಾತನಾಡುತ್ತಾ ಒಂದು ಘಟನೆಯನ್ನು ಸ್ಮರಿಸಿದ್ದಾರೆ.

ಇಸ್ರೋದಲ್ಲಿ ಕೆಲಸ ಕೊಡ್ತೀವಿ ಎಂದು ಕರೆದರೆ ಐಐಟಿಯವರು ಹೋಗೋದೇ ಇಲ್ವಂತೆ; ಕಟುಸತ್ಯ ಬಿಚ್ಚಿಟ್ಟ ಇಸ್ರೋ ಮುಖ್ಯಸ್ಥ ಸೋಮನಾಥ್
ಇಸ್ರೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 13, 2023 | 3:53 PM

ಇಸ್ರೋ ಎಂಬುದು ಇಡೀ ಜಗತ್ತಿನ ಗಮನ ಸೆಳೆದಿರುವ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. ಬಹಳ ಕಡಿಮೆ ಬಜೆಟ್​ನಲ್ಲಿ ಚಂದ್ರಯಾನ (Chandrayaana) ಮಾಡಿದಂತಹ ದಾಖಲೆ ಹೊಂದಿದೆ. ಇಸ್ರೋದಲ್ಲಿ ಕೆಲಸ ಮಾಡುವುದಿರಲಿ, ಅದರೊಂದಿಗೆ ಜೋಡಿತವಾದ ಸಂಸ್ಥೆಯಲ್ಲಿ ಕೆಲಸ ಸಿಕ್ಕರೆ ಜೀವನ ಧನ್ಯ ಎಂದು ಭಾವಿಸುವ ವಿಜ್ಞಾನ ವಿದ್ಯಾರ್ಥಿಗಳನ್ನು ನಾವು ನೀವು ಕಂಡಿದ್ದೇವೆ. ಆದರೆ, ಇದು ಐಐಟಿಯಂತಹ ಮಹೋನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳ ವಿಚಾರದಲ್ಲಿ ನಿಜ ಅಲ್ಲ. ಐಐಟಿ ವಿದ್ಯಾರ್ಥಿಗಳಿಗೆ ಇಸ್ರೋ ಕೆಂಪು ಹಾಸು (red carpet) ಹಾಕಿ ಸ್ವಾಗತಿಸಿದರೂ ರೋಮಾಂಚನ ಆಗುವುದಿಲ್ಲ. ಐಐಟಿ ಕ್ಯಾಂಪಸ್​ನಲ್ಲಿ ಇಸ್ರೋ ರೆಕ್ರೂಟ್ಮೆಂಟ್ ಡ್ರೈವ್ ಮಾಡಿದಾಗ (isro recruitment drive) ಶೇ. 6ರಷ್ಟು ವಿದ್ಯಾರ್ಥಿಗಳು ಓಡಿ ಹೋದ ಘಟನೆಯನ್ನು ಇಸ್ರೋ ಮುಖ್ಯಸ್ಥ ಡಾ. ಎಸ್ ಸೋಮನಾಥ್ ಹಂಚಿಕೊಂಡಿದ್ದಾರೆ.

‘ಇಸ್ರೋಗೆ ಬೇಕಾದ ಕೌಶಲ್ಯವಂತರು ಎಂಜಿನಿಯರುಗಳಾಗಿರುತ್ತಾರೆ. ಈ ಎಂಜಿನಿಯರುಗಳು ಐಐಟಿಯವರಾಗಿರಬೇಕು. ಆದರೆ, ಇವರು ಮಾತ್ರ ಇಸ್ರೋಗೆ ಸೇರುವುದಿಲ್ಲ. ನಾವು ಐಐಟಿಗೆ ಹೋಗಿ ನೇಮಕಾತಿ ಮಾಡಲು ಯತ್ನಿಸಿದರೆ ಯಾರೂ ಬರುವುದಿಲ್ಲ’ ಎಂದು ಹೇಳಿದ ಎಸ್ ಸೋಮನಾಥ್, ಅಂಥದ್ದೊಂದು ಪ್ರಸಂಗವನ್ನು ವಿವರಿಸಿದ್ದಾರೆ.

‘ಐಐಟಿ ಕ್ಯಾಂಪಸ್​ಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳಿಗೆ ಇಸ್ರೋದಲ್ಲಿ ವೃತ್ತಿ ಆರಂಭಿಸುವ ಅವಕಾಶದ ಬಗ್ಗೆ ಮಾಹಿತಿಯನ್ನು ನಮ್ಮ ತಂಡದವರು ನೀಡುತ್ತಿದ್ದರು. ಕರಿಯರ್ ಆಪೋರ್ಚೂನಿಟಿ ಮತ್ತು ಕೆಲಸದ ಬಗ್ಗೆ ಪ್ರೆಸೆಂಟೇಶನ್ ಆದ ಬಳಿಕ ಇಸ್ರೋದ ಸ್ಯಾಲರಿ ವ್ಯವಸ್ಥೆಯನ್ನು ವಿವರಿಸಲಾಯಿತು. ಇಸ್ರೋದಲ್ಲಿ ಕೆಲಸ ಮಾಡಿದರೆ ಗರಿಷ್ಠ ಸಂಬಳ ಎಷ್ಟು ಸಿಗಬಹುದು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯಿತು. ಅಲ್ಲಿಗೆ ಮುಗಿಯಿತು. ಅ ಪ್ರೆಸೆಂಟೇಶನ್ ಬಳಿಕ ಶೇ 60ರಷ್ಟು ಮಕ್ಕಳು ಹೊರಗೆ ಹೋದರು,’ ಎಂದು ಡಾ. ಎಸ್ ಸೋಮನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್​ನಿಂದ ಭಾರತದ ಆರ್ಥಿಕತೆಗೆ 22,000 ಕೋಟಿ ರೂ ಹರಿದುಬರುತ್ತಾ? ಇದು ಹೇಗೆ ಸಾಧ್ಯ?

ಬಾಹ್ಯಾಕಾಶ ಕ್ಷೇತ್ರ ಮುಖ್ಯ ಎಂದು ಅನಿಸಿದ ಕೆಲವೇ ಮಂದಿ ಮಾತ್ರ ಇಸ್ರೋಗೆ ಸೇರುತ್ತಾರೆ. ಈ ಪ್ರಮಾಣವು ಶೇ. 1ಕ್ಕಿಂತಲೂ ಕಡಿಮೆಯೇ ಎಂದು ಇಸ್ರೋ ಛೇರ್ಮನ್ ಅಭಿಪ್ರಾಯಪಟ್ಟಿದ್ದಾರೆ.

ಇಸ್ರೋ ಮುಖ್ಯಸ್ಥರ ಸಂಬಳ ಸಂಬಳಕ್ಕೆ ಸಮ ಐಐಟಿ ಪದವೀದರರ ಮೊದಲ ವೇತನ?

ಇತ್ತೀಚೆಗೆ ಉದ್ಯಮಿ ಹರ್ಷ್ ಗೋಯಂಕಾ ಅವರ ಒಂದು ಟ್ವೀಟ್ ಅನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಇಸ್ರೋದ ಅತ್ಯುನ್ನತ ಹುದ್ದೆಯಾದ ಛೇರ್ಮನ್ ಆಗಿರುವ ಸೋಮನಾಥ್ ಅವರು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಹೌದು. ಇವರಿಗೆ ಸಿಗುವ ಸಂಬಳ ತಿಂಗಳಿಗೆ 2.5 ಲಕ್ಷ ರೂ.

ಐಟಿ ಕ್ಷೇತ್ರದಲ್ಲಿ ಐದಾರು ವರ್ಷ ಕೆಲಸ ಮಾಡಿದ ಎಂಜಿನಿಯರುಗಳು ಈ ಸಂಬಳ ಪಡೆಯುತ್ತಾರೆ. ಐಐಟಿಯಲ್ಲಿ ತೇರ್ಗಡೆಯಾದ ಎಂಜಿನಿಯರುಗಳ ಸರಾಸರಿ ಆರಂಭಿಕ ಸಂಬಳ ಬಹುತೇಕ ಇಷ್ಟೇ ಇರುತ್ತದೆ.

ಮೇಲಾಗಿ ಇಸ್ರೋ ಎಂಬುದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ್ದರಿಂದ ಐಐಟಿ ಪದವೀಧರರಿಗೆ ಅದು ಅಷ್ಟು ಆಕರ್ಷಣೀಯ ಅನಿಸದೇ ಹೋಗಬಹುದು.

ಇದನ್ನೂ ಓದಿ: ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಎಚ್​ಸಿಎಲ್ ಷೇರಿಗೆ ಬೇಡಿಕೆ, ಇನ್ಫೋಸಿಸ್ ಷೇರುಬೆಲೆ ಕುಸಿತ

ಐಐಟಿಗರು ಸಿಲಿಕಾನ್ ವ್ಯಾಲಿಗೆ ಓಡಿದರೆ, ಸಿಇಟಿಗರು ಚಂದ್ರನಲ್ಲಿಗೆ ತಲುಪಿಸಿದರು

ಭಾರತದ ಚಂದ್ರಯಾನ ಯಶಸ್ವಿಯಾದಾಗ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಒಂದು ಟ್ವೀಟ್ ಬಹಳ ಗಮನ ಸೆಳೆದಿತ್ತು. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರು ಓದಿದ ಶಿಕ್ಷಣ ಸಂಸ್ಥೆಯನ್ನು ತರೂರ್ ಉಲ್ಲೇಖಿಸಿ ಐಐಟಿಗರನ್ನು ಛೇಡಿಸಿದ್ದರು.

‘ಇಸ್ರೋ ಮುಖ್ಯಸ್ಥ ಡಾ. ಸೋಮನಾಥ್ ಕೇರಳದ ಕೊಲ್ಲಂಗ ಟಿಕೆಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದಾರೆ. ಅವರ ಹಲವು ಸಹೋದ್ಯೋಗಿಗಳು ತಿರುವನಂತಪುರಂನ ಸಿಇಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ…

ಇದನ್ನೂ ಓದಿ: Israel Hamas Conflict Explained: ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಣರಂಗವಾಗಿರುವ ಗಾಜಾ ಪಟ್ಟಿ ಯಾವುದು? ಏನಿದರ ಇತಿಹಾಸ?

‘ಭಾರತೀಯರಿಗೆ ಐಐಟಿಗಳ ಬಗ್ಗೆ ವ್ಯಾಮೋಹ ಹೆಚ್ಚು. ಆದರೆ, ಪಬ್ಲಿಕ್ ಸೆಕ್ಟರ್​ನಲ್ಲಿ ಕೆಲಸ ಮಾಡುವ, ಮತ್ತು ಇಸ್ರೋದಂತಹ ಸಂಸ್ಥೆಗಳಿಗೆ ಬೆನ್ನೆಲುಬುಗಳಾಗಿರುವ ಎಂಜಿನಿಯರುಗಳನ್ನು ಕೊಟ್ಟ ಕಾಲೇಜುಗಳಿಗೆ ನಮ್ಮ ನಮನ ಇರಲಿ. ಐಐಟಿಗರು ಸಿಲಿಕಾನ್ ವ್ಯಾಲಿಗೆ ಹೋದರೆ, ಸಿಇಟಿಗರು ನಮ್ಮನ್ನು ಚಂದ್ರನಲ್ಲಿಗೆ ಕರೆದೊಯ್ದರು,’ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು.

ಇಲ್ಲಿ ಭಾರತದ ಅತಿಮೇದಾವಿಗಳೆಲ್ಲರೂ ಐಐಟಿಗಳಲ್ಲೇ ಇರುತ್ತಾರೆಂದು ಅಲ್ಲ. ಬಹಳ ಮಂದಿ ಪ್ರತಿಭೆಗಳು ಐಐಟಿ ಸೇರಸಲು ಪ್ರವೇಶ ಪರೀಕ್ಷೆಯನ್ನೇ ಬರೆಯುವುದಿಲ್ಲ. ಅತ್ಯುತ್ತಮ ಪ್ರತಿಭೆಗಳೆಲ್ಲರಿಗೂ ಐಐಟಿಗಳಲ್ಲಿ ಸ್ಥಳಾವಕಾಶ ಇಲ್ಲ. ಈ ಬಗ್ಗೆ ಇಸ್ರೋ ಮುಖ್ಯಸ್ಥರು ಇತ್ತೀಚೆಗೆ ಹೇಳಿಕೊಂಡಿದ್ದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್