
ನವದೆಹಲಿ, ಮೇ 5: ಜನಸಾಮಾನ್ಯರಿಗೆ, ಅದರಲ್ಲೂ ರೈತರಿಗೆ ಹವಾಮಾನದ ಸಮಸ್ಯೆ ಬಹಳ ಕಾಡುತ್ತದೆ. ಯಾವಾಗ ಮಳೆ ಬರುತ್ತೆ, ಯಾವಾಗ ಮಳೆ ನಿಲ್ಲುತ್ತೆ ಇತ್ಯಾದಿ ಸಂಗತಿಗಳು ಗೊತ್ತಾಗುವುದಿಲ್ಲ. ಹವಾಮಾನ ಮುನ್ಸೂಚನೆಗಳು ನಿಖರವಾಗಿರುವುದಿಲ್ಲ. ಕೇಂದ್ರದ ಹವಾಮಾನ ಇಲಾಖೆ (ಐಎಂಡಿ) ಅಭಿವೃದ್ಧಿಪಡಿಸಿದ ಮೌಸಮ್ ಎನ್ನುವ ಆ್ಯಪ್ (Mausam App) ಜನಪ್ರಿಯವಾಗುತ್ತಿದೆ. ಇದರಲ್ಲಿ ಮಳೆ, ಗಾಳಿ ಇತ್ಯಾದಿ ಹವಾಮಾನ ಮುನ್ಸೂಚನೆಗಳನ್ನು ಹೆಚ್ಚು ನಿಖರವಾಗಿ ನೀಡಬಲ್ಲುದು. ಇದೀಗ ಮೌಸಮ್ ಆ್ಯಪ್ ಇತರ ಆ್ಯಪ್ಗಳಾದ ಮೇಘದೂತ್, ದಾಮಿನಿಯೊಂದಿಗೆ ಮಿಳಿತವಾಗಿ ಹೆಚ್ಚಿನ ಸೇವೆಗಳನ್ನು ನೀಡಬಲ್ಲುದು.
ಮೌಸಮ್ ಆ್ಯಪ್‌ನಲ್ಲಿ ಹವಾಮಾನ ಮುನ್ಸೂಚನೆ ಮಾತ್ರವಲ್ಲ, ಗುಡುಗು, ಮಿಂಚು, ಸಿಡಿಲು ಇತ್ಯಾದಿ ಮಳೆ ಸಂಬಂಧಿ ಹವಾಮಾನ ವೈಪರೀತ್ಯಗಳ ಮುನ್ಸೂಚನೆ ನೀಡಬಲ್ಲುದು. ಹಾಗೆಯೇ ಕೃಷಿ ಮಾರ್ಗದರ್ಶಕನಾಗಿಯೂ ನೆರವಾಗಬಲ್ಲುದು.
ಐಎಂಡಿ ಟ್ವೀಟ್
2020ರ ಜುಲೈ 27ರಂದು ಭೂ ವಿಜ್ಞಾನ ಸಚಿವಾಲಯ (Ministry of Earth Sciences) ಮತ್ತು ಭಾರತೀಯ ಹವಾಮಾನ ಇಲಾಖೆ (IMD) ಸೇರಿ, ‘ಮೌಸಮ್’ (Mausam) ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದವು. ಅದರಲ್ಲಿ ಹಲವು ಫೀಚರ್ಗಳಿವೆ. ‘ನೌಕಾಸ್ಟ್’ (Nowcast) ಎಂಬ ವೈಶಿಷ್ಟ್ಯವು ಮುಂದಿನ 3 ಗಂಟೆಗಳಲ್ಲಿ ಒಂದು ಪ್ರದೇಶದ ಸುತ್ತಮುತ್ತ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡುತ್ತದೆ. ಅಷ್ಟೇ ಅಲ್ಲದೆ, ಆ್ಯಪ್‌ನಲ್ಲಿ ಮಳೆ ಸಾಧ್ಯತೆ ಆಧರಿಸಿ ವಿವಿಧ ಬಣ್ಣದ ಅಲರ್ಟ್ಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು
ಈ ಆ್ಯಪ್ ಅನ್ನು IMD (ಭಾರತೀಯ ಹವಾಮಾನ ಇಲಾಖೆ), ಪುಣೆಯ IITM ಮತ್ತು ICRISAT ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ತಾಂತ್ರಿಕ ಭಾಷೆ ತಿಳಿಯದ ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್‌ನ ಕೆಲ ಪ್ರಮುಖ ಫೀಚರ್ಗಳು ಮತ್ತು ಯುಟಿಲಿಟಿಗಳ ಮಾಹಿತಿ ಇಲ್ಲಿದೆ:
ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?
ರಾಡಾರ್ ಚಿತ್ರಗಳು (Radar Products): ಹವಾಮಾನ ಇಲಾಖೆಯ ಅತ್ಯಾಧುನಿಕ ರಾಡಾರ್‌ಗಳು ಸೆರೆಹಿಡಿಯುವ ಚಿತ್ರಗಳನ್ನು ಪ್ರತಿ 10 ನಿಮಿಷಕ್ಕೊಮ್ಮೆ ಇಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. ಇದರಿಂದ ಮೋಡಗಳ ಚಲನೆಯನ್ನು ನಾವೇ ನೇರವಾಗಿ ನಕ್ಷೆಯಲ್ಲಿ ನೋಡಬಹುದು.
ಮೌಸಮ್ ಆ್ಯಪ್ ಆಂಡ್ರಾಯ್ಡ್ (Google Play Store) ಮತ್ತು ಐಫೋನ್ (Apple App Store) ಎರಡರಲ್ಲೂ ಉಚಿತವಾಗಿ ಲಭ್ಯವಿದೆ. ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಜೀವ ಮತ್ತು ಆಸ್ತಿ ಪಾಸ್ತಿ ನಷ್ಟವನ್ನು ತಡೆಯುವುದು ಮತ್ತು ರೈತರು, ಮೀನುಗಾರರು ಹಾಗೂ ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ