AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು

China Court Rules AI Layoffs Illegal: ಚೀನಾ ನ್ಯಾಯಾಲಯವು AI ತಂತ್ರಜ್ಞಾನದ ಕಾರಣದಿಂದ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಅಥವಾ ಅವರ ಸಂಬಳ ಕಡಿತಗೊಳಿಸುವುದು ಕಾನೂನುಬಾಹಿರ ಎಂದು ಮಹತ್ವದ ತೀರ್ಪು ನೀಡಿದೆ. ಕಂಪನಿಗಳು AI ಅಳವಡಿಕೆಗಾಗಿ ಉದ್ಯೋಗಿಗಳ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ. ನೌಕರರ ಸಾಮಾಜಿಕ ಮತ್ತು ಆರ್ಥಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಗಳು ಜವಾಬ್ದಾರಿಯಾಗಿರಬೇಕು ಎಂದು ಈ ತೀರ್ಪು ಜಾಗತಿಕ ಸಂದೇಶ ನೀಡಿದೆ.

ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2026 | 4:46 PM

Share

ಬೀಜಿಂಗ್, ಮೇ 3: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ತೆಗೆದುಹಾಕಿ ಅವರ ಜಾಗಕ್ಕೆ AI ಅಳವಡಿಸಿಕೊಳ್ಳುತ್ತಿವೆ. ಆದರೆ ಚೀನಾದ ನ್ಯಾಯಾಲಯವೊಂದು ಈ ಬಗ್ಗೆ ಐತಿಹಾಸಿಕ ತೀರ್ಪು ನೀಡಿದ್ದು, “ಕಂಪನಿಗಳು ಲಾಭಕ್ಕಾಗಿ ಅಥವಾ ಕೆಲಸದ ವೇಗಕ್ಕಾಗಿ AI ಬಳಸಿಕೊಳ್ಳುವುದು ಅವರ ವೈಯಕ್ತಿಕ ನಿರ್ಧಾರ. ಆದರೆ ಈ ನಿರ್ಧಾರದ ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಅಥವಾ ಅವರ ಸಂಬಳ ಕಡಿತಗೊಳಿಸುವುದು ಕಾನೂನುಬಾಹಿರ” ಎಂದು ಹೇಳಿದೆ.

ಚೀನಾದ ಹ್ಯಾಂಗ್‌ಝೌ (Hangzhou) ನ್ಯಾಯಾಲಯದಿಂದ ಈ ತೀರ್ಪು ಬಂದಿದೆ. ವರದಿ ಪ್ರಕಾರ, ತಂತ್ರಜ್ಞಾನ ಕಂಪನಿಯೊಂದು ತನ್ನ ಹಿರಿಯ ಉದ್ಯೋಗಿಯೊಬ್ಬರ ಕೆಲಸವನ್ನು AI ಮೂಲಕ ಮಾಡಿಸಲು ಮುಂದಾಯಿತು. ಆ ಉದ್ಯೋಗಿಗೆ ನೀಡುತ್ತಿದ್ದ ಕೆಲಸವನ್ನು AI ಮಾಡಬಲ್ಲದು ಎಂಬ ಕಾರಣ ನೀಡಿ, ಕಂಪನಿಯು ಅವರ ಸಂಬಳವನ್ನು ಶೇ. 40 ರಷ್ಟು ಕಡಿತಗೊಳಿಸಿ ಕೆಳಮಟ್ಟದ ಹುದ್ದೆಗೆ ವರ್ಗಾಯಿಸಿತು. ಉದ್ಯೋಗಿ ಇದಕ್ಕೆ ಒಪ್ಪದಿದ್ದಾಗ ಅವರನ್ನು ಕೆಲಸದಿಂದಲೇ ತೆಗೆದುಹಾಕಲಾಯಿತು.

ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?

ಕಂಪನಿಯ ನಿರ್ಧಾರಕ್ಕೆ ನೌಕರರು ಬಲಿಪಶುವಾಗಬಾರದು

ಕಂಪನಿಯು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಉದ್ಯಮದ ಲಾಭಕ್ಕಾಗಿ ಮಾಡುವ ನಿರ್ಧಾರವೇ ಹೊರತು, ಅದು ಅನಿವಾರ್ಯ ಪರಿಸ್ಥಿತಿಯಲ್ಲ. ಇಂತಹ ಸಂದರ್ಭದಲ್ಲಿ ಉದ್ಯೋಗಿಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಚೀನಾದ ಕಾರ್ಮಿಕ ಕಾನೂನಿನ ಪ್ರಕಾರ, ಕಂಪನಿಯು ನಷ್ಟದಲ್ಲಿದ್ದಾಗ ಅಥವಾ ಸಂಪೂರ್ಣವಾಗಿ ಮುಚ್ಚುವ ಹಂತದಲ್ಲಿದ್ದಾಗ ಮಾತ್ರ ಉದ್ಯೋಗಿಗಳನ್ನು ತೆಗೆಯಬಹುದು. AI ಬಂದಿದೆ ಎಂಬುದು ಉದ್ಯೋಗಿಗಳನ್ನು ತೆಗೆಯಲು ಕಾನೂನುಬದ್ಧ ಕಾರಣವಾಗುವುದಿಲ್ಲ. AI ಬಳಕೆ ಮಾಡುವುದರಿಂದ ಉದ್ಯೋಗಿಯ ಜವಾಬ್ದಾರಿ ಕಡಿಮೆಯಾದರೂ, ಅವರ ಸಂಬಳವನ್ನು ಅಸಮಂಜಸವಾಗಿ ಕಡಿತಗೊಳಿಸುವುದು ತಪ್ಪು ಎಂದು ನ್ಯಾಯಾಲಯ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಇದರ ಮಹತ್ವ

ಪ್ರಪಂಚದಾದ್ಯಂತ AI ಕಾರಣದಿಂದ ಉದ್ಯೋಗ ನಷ್ಟವಾಗುವ ಭೀತಿ ಎದುರಾಗಿರುವ ಸಮಯದಲ್ಲಿ, ಚೀನಾ ನ್ಯಾಯಾಲಯದ ಈ ತೀರ್ಪು ಉದ್ಯೋಗಿಗಳ ಪರವಾಗಿ ದೊಡ್ಡ ಶಕ್ತಿಯಾಗಿ ನಿಂತಿದೆ. ಕಂಪನಿಗಳು ಕೇವಲ ತಂತ್ರಜ್ಞಾನದ ಹಿಂದೆ ಓಡದೆ, ತಮ್ಮ ಕೆಳಗೆ ಕೆಲಸ ಮಾಡುವ ಮನುಷ್ಯರ ಸಾಮಾಜಿಕ ಮತ್ತು ಆರ್ಥಿಕ ಸುರಕ್ಷತೆಯ ಜವಾಬ್ದಾರಿಯನ್ನೂ ಹೊರಬೇಕು ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.

ಇದನ್ನೂ ಓದಿ: ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಗಣನೀಯ ಏರಿಕೆ

ಸಂಕ್ಷಿಪ್ತವಾಗಿ ಹೇಳುವುದಾದರೆ, “ನೀವು AI ಬಳಸುವುದಾದರೆ ಬಳಸಿ, ಆದರೆ ಅದರ ಹೆಸರಿನಲ್ಲಿ ನೌಕರರ ಜೀವನದ ಜೊತೆ ಆಟವಾಡಬೇಡಿ” ಎಂದು ಚೀನಾ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More