ಕರೆನ್ಸಿ ಹರಿವನ್ನು ಮುಕ್ತವಾಗಿ ಬಿಡಿ: ಭಾರತಕ್ಕೆ ಐಎಂಎಫ್ ಸಲಹೆ; ರುಪಾಯಿ ಕುಸಿತ ತಡೆದರೆ ಆರ್ಥಿಕತೆಗೆ ಅಪಾಯ ಸಾಧ್ಯತೆ

ಕರೆನ್ಸಿ ಮೌಲ್ಯ ಕುಸಿತ ತಡೆಯಲು ಡಾಲರ್ ಮಾರಾಟ ಇತ್ಯಾದಿ ಕ್ರಮಗಳನ್ನು ಆರ್​ಬಿಐ ಕೈಗೊಂಡಿದೆ. ಪರಿಣಾಮವಾಗಿ ರುಪಾಯಿ ಮೌಲ್ಯ ಶೇ 2ರಷ್ಟು ಚೇತರಿಸಿಕೊಂಡಿದೆ. ಆದರೆ, ಐಎಂಎಫ್ ಇಂಥ ಕ್ರಮಗಳು ಬೇಡ ಎಂದು ಭಾರತಕ್ಕೆ ಸಲಹೆ ನೀಡಿದೆ. ವಿನಿಮಯ ದರಗಳು ಮುಕ್ತವಾಗಿರಬೇಕು. ಬಾಹ್ಯ ಆಘಾತಗಳನ್ನು ತಡೆಯಲು ಈ ನಡೆ ಸರಿ ಎಂದು ಐಎಂಎಫ್ ಅಧಿಕಾರಿ ಕೃಷ್ಣ ಶ್ರೀನಿವಾಸನ್ ಹೇಳಿದ್ದಾರೆ.

ಕರೆನ್ಸಿ ಹರಿವನ್ನು ಮುಕ್ತವಾಗಿ ಬಿಡಿ: ಭಾರತಕ್ಕೆ ಐಎಂಎಫ್ ಸಲಹೆ; ರುಪಾಯಿ ಕುಸಿತ ತಡೆದರೆ ಆರ್ಥಿಕತೆಗೆ ಅಪಾಯ ಸಾಧ್ಯತೆ
ರುಪಾಯಿ
Image Credit source: Getty Images

Updated on: Oct 22, 2026 | 2:02 PM

ನವದೆಹಲಿ, ಅಕ್ಟೋಬರ್ 22: ಭಾರತ ಸರ್ಕಾರವು ರುಪಾಯಿ ರಕ್ಷಣೆಗೆ ಮುಂದಾಗದೆ, ಕರೆನ್ಸಿಯ ಮುಕ್ತ ಹರಿವಿಗೆ ಅವಕಾಶ ನೀಡಬೇಕು ಎಂದು ಐಎಂಎಫ್ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ. ರುಪಾಯಿ ಕರೆನ್ಸಿ ಮೌಲ್ಯ ಕುಸಿಯಲು ಡಾಲರ್ ಸ್ವತ್ತುಗಳ ಮಾರಾಟ ಸೇರಿದಂತೆ ಆರ್​ಬಿಐ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಐಎಂಎಫ್​ನ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಈ ಅಭಿಪ್ರಾಯ ನೀಡಿದ್ದಾರೆ. ಅವರ ಪ್ರಕಾರ, ಆರ್ಥಿಕತೆಗಳು ಬಾಹ್ಯ ಆಘಾತಗಳನ್ನು ಎದುರಿಸುವಾಗ ವಿನಿಮಯ ದರಗಳು ಮುಖ್ಯ ಪಾತ್ರ ವಹಿಸುತ್ತವೆ.

‘ಜಾಗತಿಕ ಆಘಾತಗಳನ್ನು ಎದುರಿಸಲು ಯಾವುದೇ ದೇಶವು ತನ್ನ ಕರೆನ್ಸಿ ವಿನಿಮಯ ದರವನ್ನು ಮೊದಲ ರಕ್ಷಣಾ ಹಂತವಾಗಿ ಬಳಸಬೇಕು ಎಂಬುದು ನಮ್ಮ ಸಲಹೆ. ಭಾರತವು ಕರೆನ್ಸಿ ವಿನಿಮಯ ದರದ ಹರಿವನ್ನು ಬಿಡಬೇಕು ಎಂಬುದು ಭಾರತಕ್ಕೆ ನಾವು ನೀಡುವ ಸಲಹೆ’ ಎಂದು ಕೃಷ್ಣ ಶ್ರೀನಿವಾಸನ್ ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಷಾಂತರ ವೆಬ್​ಸೈಟ್​ಗಳಿಗೆ ಸೆಕ್ಯೂರಿಟಿ ಅಲರ್ಟ್; PHP ಪ್ರೋಗ್ರಾಮಿಂಗ್ ಭಾಷೆಯಲ್ಲಿ ತಲೆದೋರಿದ ದೋಷ; PHP2Shell ಅಪಾಯ

ರುಪಾಯಿ ಕುಸಿತ ತಡೆಯಲು ಆರ್​ಬಿಐ ಕೈಗೊಂಡ ಕ್ರಮವೇನು?

ಕೆಲ ದಿನಗಳ ಹಿಂದಷ್ಟೇ ಡಾಲರ್ ಎದುರು ರುಪಾಯಿ 97ರ ಸಮೀಪಕ್ಕೆ ಹೋಗಿತ್ತು. ಕಚ್ಚಾ ತೈಲ ಬೆಲೆ ಹೆಚ್ಚಳ, ಆಮದು ಏರಿಕೆಯು ರುಪಾಯಿ ಮೇಲೆ ಬಹಳ ಒತ್ತಡ ತಂದ ಫಲ ಅದು. ರುಪಾಯಿ ಇನ್ನಷ್ಟು ಕುಸಿಯುವುದನ್ನು ತಪ್ಪಿಸಲು ಆರ್​ಬಿಐ ತನ್ನ ಫಾರೆಕ್ಸ್ ನಿಧಿಯಲ್ಲಿರುವ ಕೆಲ ಡಾಲರ್ ಸ್ವತ್ತುಗಳನ್ನು ಮಾರಾಟ ಮಾಡಿದೆ. ಇದರಿಂದ ರುಪಾಯಿ ಮೌಲ್ಯ ಕೃತಕವಾಗಿ ಹೆಚ್ಚಳಗೊಂಡಿದೆ.

ಕರೆನ್ಸಿಯ ಸ್ವಾಭಾವಿಕ ಹರಿವು ತಡೆದರೆ ಆರ್ಥಿಕತೆ ಮೇಲೆ ಪರಿಣಾಮ ಎನ್ನುತ್ತಾರೆ ತಜ್ಞರು…

ಒಂದು ಕರೆನ್ಸಿಯ ಮೌಲ್ಯವನ್ನು ಆ ದೇಶದ ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟುಗಳು ನಿರ್ಧರಿಸುತ್ತವೆ. ಹೆಚ್ಚಿನ ಅಂತರರಾಷ್ಟ್ರೀಯ ವಹಿವಾಟುಗಳು ಡಾಲರ್ ಕರೆನ್ಸಿಯಲ್ಲೇ ನಡೆಯುವುದರಿಂದ ತೈಲ ಹಾಗೂ ಇತರ ಸರಕುಗಳ ಆಮದು ಹೆಚ್ಚಾದರೆ, ಅದು ರುಪಾಯಿ ಮೌಲ್ಯವನ್ನು ಸಹಜವಾಗಿ ಕಡಿಮೆ ಮಾಡುತ್ತದೆ.

ರುಪಾಯಿ ಮೌಲ್ಯ ಕಡಿಮೆ ಆದರೆ ಆಂತರಿಕವಾಗಿ ಹಣದುಬ್ಬರ ಹೆಚ್ಚುತ್ತದೆ. ಇದರಿಂದ ಬಡ್ಡಿದರಗಳನ್ನು ಏರಿಸಬೇಕಾಗಬಹುದು. ಇದು ಕರೆನ್ಸಿ ದುರ್ಬಲಗೊಂಡಿದ್ದರ ಪರಿಣಾಮ.

ಇದನ್ನೂ ಓದಿ: ಇ-ಮುದ್ರಾ ಭದ್ರತಾ ಲೋಪದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ; ನಿಜಕ್ಕೂ ಏನಾಯ್ತು?

ಆದರೆ, ಕರೆನ್ಸಿಯ ಸಹಜ ಕುಸಿತಕ್ಕೆ ಅವಕಾಶ ಕೊಡದೆ, ಕೃತಕವಾಗಿ ಅದನ್ನು ಉಬ್ಬಿಸಿದರೆ ಅದು ಆರ್ಥಿಕತೆಗೆ ದುಷ್ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ರಫ್ತು ಉದ್ಯಮಕ್ಕೆ ಅನನುಕೂಲವಾಗುತ್ತದೆ. ಫಾರೆಕ್ಸ್ ಮೀಸಲು ನಿಧಿಗೆ ಸಂಚಕಾರವಾಗುತ್ತದೆ. ಭಾರತದ ಮಾರುಕಟ್ಟೆ ಬಗ್ಗೆ ವಿದೇಶೀ ಹೂಡಿಕೆದಾರರಿಗೆ ಭೀತಿ ಉಂಟಾಗಬಹುದು.

ರುಪಾಯಿ ಮೌಲ್ಯ ಸಹಜವಾಗಿ ಇಳಿದರೆ ರಫ್ತು ಮಾರುಕಟ್ಟೆಗೆ ಅನುಕೂಲವಾಗುತ್ತದೆ. ಭಾರತದ ಐಟಿ ಸರ್ವಿಸ್, ಜವಳಿ, ಫಾರ್ಮಾ, ಕೃಷಿ ಕ್ಷೇತ್ರಗಳಿಗೆ ಅದು ಪಾಸಿಟಿವ್ ಆಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us