ಚುನಾವಣೆಯ ವರ್ಷವೂ ಭಾರತದ ಹಣಕಾಸು ಶಿಸ್ತು ಮೆಚ್ಚಿಕೊಂಡ ಐಎಂಎಫ್

IMF Praises India for maintaining fiscal discipline: ಚುನಾವಣೆಯ ವರ್ಷದಲ್ಲಿ ಬಹಳ ದೇಶಗಳು ಹಣಕಾಸು ಶಿಸ್ತು ಗಾಳಿಗೆ ತೂರುತ್ತವೆ. ಆದರೆ, ಭಾರತದಲ್ಲಿ ಸರ್ಕಾರ ಉತ್ತಮವಾಗಿ ಆರ್ಥಿಕ ಶಿಸ್ತು ಕಾಯ್ದುಕೊಂಡಿದೆ ಎಂದು ಐಎಂಎಫ್​ನ ನಿರ್ದೇಶಕರಲ್ಲೊಬ್ಬರಾದ ಕೃಷ್ಣ ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಭಾರತದ ಸ್ಥೂಲ ಆರ್ಥಿಕತೆಯ ಮೂಲಾಂಶಗಳು ಬಹಳ ಪ್ರಬಲವಾಗಿವೆ. ಇವು ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸುತ್ತವೆ ಎಂದು ಹೇಳಿದ್ದಾರೆ.

ಚುನಾವಣೆಯ ವರ್ಷವೂ ಭಾರತದ ಹಣಕಾಸು ಶಿಸ್ತು ಮೆಚ್ಚಿಕೊಂಡ ಐಎಂಎಫ್
ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 19, 2024 | 2:25 PM

ನವದೆಹಲಿ, ಏಪ್ರಿಲ್ 19: ಚುನಾವಣೆಯ ವರ್ಷದಲ್ಲೂ ಭಾರತ ಆರ್ಥಿಕ ಶಿಸ್ತು (fiscal discipline) ಕಾಯ್ದುಕೊಂಡಿದೆ. ಭಾರತದ ಆರ್ಥಿಕತೆ ಉತ್ತಮವಾಗಿ ಸಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ (IMF) ಶ್ಲಾಘಿಸಿದೆ. ‘ಈ ಹಂತದಲ್ಲಿ ಭಾರತದ ಆರ್ಥಿಕತೆ ಉತ್ತಮವಾಗಿ ಹೋಗುತ್ತಿದೆ. ಶೇ. 6.8ರಷ್ಟು ಬೆಳವಣಿಗೆ ಬಹಳ ಉತ್ತಮ. ಹಣದುಬ್ಬರವೂ ಕಡಿಮೆ ಆಗುತ್ತಿದೆ. ನಿಗದಿತ ಗುರಿಗೆ ಹಣದುಬ್ಬರ ಇಳಿಯುವುದನ್ನು ಖಚಿತಪಡಿಸಿಕೊಳ್ಳಬೇಕು. ಸ್ಥೂಲ ಆರ್ಥಿಕತೆಯ ಅಂಶಗಳು ಬಹಳ ಉತ್ತಮವಾಗಿ ಕಾಣುತ್ತಿವೆ,’ ಎಂದು ಐಎಂಎಫ್​ನಲ್ಲಿನ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಹೇಳಿದ್ದಾರೆ.

‘ಹಣಕಾಸು ವರ್ಷದಲ್ಲಿ, ಅದರಲ್ಲೂ ಚುನಾವಣೆಯ ವರ್ಷದಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು ನಿಜಕ್ಕೂ ಗಮನಾರ್ಹ ಸಂಗತಿ. ಯಾಕೆಂದರೆ ಚುನಾವಣೆಯ ವರ್ಷ ಬಂದರೆ ದೇಶಗಳು ಆರ್ಥಿಕ ಶಿಸ್ತನ್ನು ಗಾಳಿಗೆ ತೂರುತ್ತವೆ. ಈ ಸರ್ಕಾರ ಶಿಸ್ತು ಕಾಯ್ದುಕೊಂಡಿದೆ. ಅಂತಿಮವಾಗಿ, ಸ್ಥೂಲ ಆರ್ಥಿಕ ಅಂಶಗಳು ಬೆಳವಣಿಗೆಗೆ ಪೂರಕವಾಗಿ ಪರಿಣಮಿಸುತ್ತವೆ,’ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೃಷ್ಣ ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕೋರಮಂಗಲದಲ್ಲಿದೆ ಕುಬೇರರ ಏರಿಯಾ; ದಾಖಲೆ ಬೆಲೆಗೆ ಮಾರಾಟವಾಗಿದೆ ನಿವೇಶನ

‘ಸ್ಥೂಲ ಮೂಲಾಂಶಗಳನ್ನು ಗಮನಿಸಿ ನೋಡಿ… ಚುನಾವಣಾ ವರ್ಷವಾದರೂ ಅವು ಬಹಳ ಗಟ್ಟಿಯಾಗಿವೆ. ಸರ್ಕಾರ ಹಣಕಾಸು ಶಿಸ್ತು ಕಾಯ್ದುಕೊಂಡಿದೆ. ಮೀಸಲು ಸ್ಥಾನ ಪ್ರಬಲವಾಗಿದೆ. ಒಟ್ಟಾರೆ ಅಂಶಗಳು ಉತ್ತಮವಾಗಿ ತೋರುತ್ತಿವೆ.

ಕಳೆದ ಹಲವು ವರ್ಷಗಳಲ್ಲಿ ಘಟಿಸಿದ ವಿವಿಧ ಆಘಾತಗಳನ್ನು ಭಾರತ ಯಶಸ್ವಿಯಾಗಿ ದಾಟಿದೆ. ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೂ ಇದೆ. ಖಾಸಗಿ ಅನುಭೋಗ ಮತ್ತು ಸಾರ್ವಜನಿಕ ಹೂಡಿಕೆಯಿಂದ ಭಾರತದ ಆರ್ಥಿಕ ಬೆಳೆವಣಿಗೆ ಆಶಾದಾಯಕವಾಗಿದೆ. ಹಣದುಬ್ಬರ ಹಂತ ಹಂತರವಾಗಿ ಕಡಿಮೆ ಆಗುತ್ತಿದ್ದು ಈಗ ಶೇ. 5ಕ್ಕಿಂತ ಕಡಿಮೆಗೆ ಬಂದಿದೆ ಎಂದು ಹೇಳಿದ್ದಾರೆ.

ಭಾರತದ ಫಾರೆಕ್ಸ್ ಮೀಸಲು ನಿಧಿ ಏಪ್ರಿಲ್ 5ರಂದು ಹೊಸ ಎತ್ತರವಾದ 648.562 ಬಿಲಿಯನ್ ಡಾಲರ್​ಗೆ ಏರಿದೆ. 2021ರ ಸೆಪ್ಟಂಬರ್​ನಲ್ಲಿ 642 ಬಿಲಿಯನ್ ಡಾಲರ್​ನಷ್ಟು ವಿದೇಶೀ ವಿನಿಮಯ ಮೀಸಲು ನಿಧಿ ಇದ್ದದ್ದು ದಾಖಲೆಯಾಗಿತ್ತು. ಈಗ ಅದನ್ನೂ ಮೀರಿಸಿ ಫಾರೆಕ್ಸ್ ಸಂಪತ್ತು ಹೆಚ್ಚಿದೆ.

ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಬೇಕಾದರೆ ಈ ನಾಲ್ಕು ಅಂಶಗಳು ಮುಖ್ಯ: ಮಾಜಿ ಆರ್​ಬಿಐ ಗವರ್ನರ್ ಸುಬ್ಬಾರಾವ್ ಸಲಹೆ

ಭಾರತದ ಜಿಡಿಪಿ ದರ ಕೂಡ ಕಳೆದ ಹಲವು ತ್ರೈಮಾಸಿಕಗಳಿಂದ ಉತ್ತಮವಾಗಿದೆ. 2023-24ರ ಮೊದಲ ಮೂರು ತ್ರೈಮಾಸಿಕದಲ್ಲಿ ಸರಾಸರಿ ಶೇ. 8ರ ದರದಲ್ಲಿ ಆರ್ಥಿಕತೆ ಬೆಳೆದಿದೆ. ಕೊನೆಯ ತ್ರೈಮಾಸಿಕವೂ ಕೂಡ ಶೇ. 7ಕ್ಕಿಂತಲೂ ಹೆಚ್ಚೇ ಇರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್