ಕೊರೊನಾ ಕಾಟದ ಮಧ್ಯೆಯೂ ಅಬ್ಬಬ್ಬಾ ಅನ್ನೋಷ್ಟು, ಬಜೆಟ್ ಅಂದಾಜಿಗಿಂತ ಹೆಚ್ಚು ನೇರ ತೆರಿಗೆ-ಪರೋಕ್ಷ ತೆರಿಗೆ ಸಂಗ್ರಹ!

ಕೇಂದ್ರ ಸರ್ಕಾರವು ಬಜೆಟ್ ನಲ್ಲಿ 2021-22 ನೇ ಹಣಕಾಸು ವರ್ಷದಲ್ಲಿ 22.17 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುವ ಅಂದಾಜು ಮಾಡಿತ್ತು. ಬಜೆಟ್ ಅಂದಾಜು ಅನ್ನು ಮೀರಿ ಐದು ಲಕ್ಷ ಕೋಟಿ ರೂಪಾಯಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ

ಕೊರೊನಾ ಕಾಟದ ಮಧ್ಯೆಯೂ ಅಬ್ಬಬ್ಬಾ ಅನ್ನೋಷ್ಟು, ಬಜೆಟ್ ಅಂದಾಜಿಗಿಂತ ಹೆಚ್ಚು ನೇರ ತೆರಿಗೆ-ಪರೋಕ್ಷ ತೆರಿಗೆ ಸಂಗ್ರಹ!
ಕೊರೊನಾ ಅಲೆಗಳ ಮಧ್ಯೆಯೂ ಅಬ್ಬಾ ಅನ್ನುವಷ್ಟು ಬಜೆಟ್ ಅಂದಾಜಿಗಿಂತ ಹೆಚ್ಚು ಪ್ರಮಾಣದಲ್ಲಿ ನೇರ ತೆರಿಗೆ, ಪರೋಕ್ಷ ತೆರಿಗೆ ಸಂಗ್ರಹ!
Follow us
S Chandramohan
| Updated By: ಸಾಧು ಶ್ರೀನಾಥ್​

Updated on:Apr 08, 2022 | 4:41 PM

ಭಾರತದಲ್ಲಿ 2021-22ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆಯು ದಾಖಲೆಯ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಬಜೆಟ್ ಅಂದಾಜಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆ ಸಂಗ್ರಹವಾಗಿರುವುದು ವಿಶೇಷ. ದೇಶದಲ್ಲಿ ಕೊರೊನಾದ 2ನೇ ಅಲೆಯ ಮಧ್ಯೆಯೂ ಆರ್ಥಿಕತೆಯು ಹಳಿಗೆ ಬಂದಿರುವುದು ತೆರಿಗೆ ಸಂಗ್ರಹದ ಏರಿಕೆಯಿಂದ ಸ್ಪಷ್ಟವಾಗಿದೆ.

ದೇಶದಲ್ಲಿ 2021-22ರಲ್ಲಿ 27.07 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹ! ಆದಾಯ ತೆರಿಗೆ ಮತ್ತು ಇತರ ನೇರ ತೆರಿಗೆಗಳು ಮತ್ತು ಪರೋಕ್ಷ ತೆರಿಗೆಗಳು 2021-22 ರಲ್ಲಿ ದಾಖಲೆಯ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಭಾರತದ ತೆರಿಗೆ ಸಂಗ್ರಹವು ದಾಖಲೆಯ ಗರಿಷ್ಠ 27.07 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಕೇಂದ್ರದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಶುಕ್ರವಾರ ಹೇಳಿದ್ದಾರೆ.

ಏಪ್ರಿಲ್ 2021 ರಿಂದ ಮಾರ್ಚ್ 2022 ರ ಅವಧಿಯಲ್ಲಿ 27.07 ಲಕ್ಷ ಕೋಟಿ ರೂಪಾಯಿಗಳ ಒಟ್ಟು ತೆರಿಗೆ ಸಂಗ್ರಹವಾಗಿದೆ. ಕೇಂದ್ರ ಸರ್ಕಾರವು ಬಜೆಟ್ ನಲ್ಲಿ 2021-22 ನೇ ಹಣಕಾಸು ವರ್ಷದಲ್ಲಿ 22.17 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುವ ಅಂದಾಜು ಮಾಡಿತ್ತು. ಬಜೆಟ್ ಅಂದಾಜು ಅನ್ನು ಮೀರಿ ಐದು ಲಕ್ಷ ಕೋಟಿ ರೂಪಾಯಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ ಎಂದು ತರುಣ್ ಬಜಾಜ್‌ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವ್ಯಕ್ತಿಗಳು ಪಾವತಿಸುವ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯನ್ನು ಒಳಗೊಂಡಿರುವ ನೇರ ತೆರಿಗೆಯು 14.10 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಬಜೆಟ್ ಅಂದಾಜಿಗಿಂತ 3.02 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಅಬಕಾರಿ ಸುಂಕದಂತಹ ಪರೋಕ್ಷ ತೆರಿಗೆಗಳು ಬಜೆಟ್ ಅಂದಾಜಿಗಿಂತ 1.88 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಅಬಕಾರಿ ಸುಂಕವು 11.02 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುವ ಬಗ್ಗೆ ಬಜೆಟ್ ನಲ್ಲಿ ಅಂದಾಜು ಮಾಡಲಾಗಿತ್ತು. ಆದರೆ, ಪರೋಕ್ಷ ತೆರಿಗೆಯ ಸಂಗ್ರಹವು 12.90 ಲಕ್ಷ ಕೋಟಿ ರೂಪಾಯಿಯಾಗಿದೆ ಎಂದು ತರುಣ್ ಬಜಾಜ್ ಹೇಳಿದರು.

ವಿತ್ತೀಯ ಕೊರತೆ ತಗ್ಗಿಸಲು ಸಾಧ್ಯವಾಗಲಿದೆ! ನೇರ ತೆರಿಗೆಗಳು ಶೇಕಡಾ 49 ರಷ್ಟು ಬೆಳವಣಿಗೆಯನ್ನು ತೋರಿಸಿದರೆ, ಕಳೆದ ಆರ್ಥಿಕ ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರಹವು ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ತೆರಿಗೆ-ಜಿಡಿಪಿ ಅನುಪಾತವು 2020-21ರಲ್ಲಿ ಶೇಕಡಾ 10.3 ರಿಂದ 2021-22 ರಲ್ಲಿ ಶೇ. 11.7 ಕ್ಕೆ ಏರಿದೆ. ಇದು 1999 ರಿಂದ ಅತಿ ಹೆಚ್ಚು ತೆರಿಗೆ-ಜಿಡಿಪಿ ಅನುಪಾತದ ಏರಿಕೆಯಾಗಿದೆ.

ಕೊರೊನಾ ವೈರಸ್ ಹಾಗೂ ಕೊರೊನಾದ ಎರಡನೇ ಅಲೆಯ ಕಾರಣದಿಂದ ಆರ್ಥಿಕ ವ್ಯವಹಾರಗಳಿಗೆ ಹೊಡೆತ ಬಿದ್ದಿತ್ತು. ಆದರೂ, ಆರ್ಥಿಕತೆಯು ಚೇತರಿಸಿಕೊಂಡು ಹೆಚ್ಚಿನ ನೇರ, ಪರೋಕ್ಷ ತೆರಿಗೆ ಸಂಗ್ರಹವಾಗಿದೆ. ಇದರಿಂದ ದೇಶದ ಅಭಿವೃದ್ದಿಗೆ ಹಣ ಖರ್ಚು ಮಾಡಲು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣ ಸಿಗುತ್ತೆ. ಈ ಹಣವನ್ನು ದೇಶದ ಮೂಲಸೌಕರ್ಯ ಅಭಿವೃದ್ದಿ, ಜನ ಕಲ್ಯಾಣ ಯೋಜನೆಗಳಿಗೆ ಖರ್ಚು ಮಾಡಲು ಅವಕಾಶ ಸಿಗಲಿದೆ. ವಿತ್ತೀಯ ಕೊರತೆಯನ್ನು ತಗ್ಗಿಸಲು ಕೂಡ ಸಾಧ್ಯವಾಗಲಿದೆ.

Published On - 4:40 pm, Fri, 8 April 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ