Tax Exemption Limit: 7 ಲಕ್ಷ ಅಲ್ಲ 7.27 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

|

Updated on: Jul 16, 2023 | 1:35 PM

Finance Minister Nirmala Sitharaman: 7 ಲಕ್ಷ ರೂಗಿಂತ ಕೆಲ ಸಾವಿರ ರೂಗಳಷ್ಟು ಆದಾಯ ಹೊಂದಿರುವವರು ಟ್ಯಾಕ್ಸ್ ಎಕ್ಸೆಂಪ್ಷನ್​ನಿಂದ ವಂಚಿತವಾಗುವುದನ್ನು ತಪ್ಪಿಸಲು ತೆರಿಗೆ ವಿನಾಯಿತಿ ಮಿತಿಯನ್ನು 27,000 ರೂನಷ್ಟು ಹೆಚ್ಚಿಸಲಾಗಿದೆ.

Tax Exemption Limit: 7 ಲಕ್ಷ ಅಲ್ಲ 7.27 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ: ಹೊಸ ಆದಾಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ 7.27 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ (Income Tax Exemption) ಇರುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಹೇಳಿದ್ದಾರೆ. ಇದರಿಂದ 7 ಲಕ್ಷ ರೂ ಆಸುಪಾಸಿನ ಮಧ್ಯಮ ಆದಾಯದ ವರ್ಗದ ಜನರಿಗೆ ಅನುಕೂಲ ಆಗಲಿದೆ. ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿಗೆ 7 ಲಕ್ಷ ಆದಾಯಮಿತಿ ಇದೆ. ಆದರೆ, 7 ಲಕ್ಷ ರೂಗಿಂತ ತುಸು ಹೆಚ್ಚು ಆದಾಯ ಹೊಂದಿರುವವರಿಗೆ ಟ್ಯಾಕ್ಸ್ ಎಕ್ಸೆಂಪ್ಷನ್ ಸೌಲಭ್ಯ ಸಿಗದೇ ಹೋಗುತ್ತದಲ್ಲಾ ಎಂದು ಕೆಲ ಗುಂಪುಗಳಿಂದ ಅಪಸ್ವರ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚುವರಿ 27,000 ರೂನಷ್ಟು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.

‘ಎಷ್ಟು ಹೆಚ್ಚುವರಿ ಹಣದವರೆಗೂ ತೆರಿಗೆ ವಿನಾಯಿತಿ ಕೊಡಬಹುದು ಎಂದು ನಾವು ಅವಲೋಕಿಸಿದೆವು. 7.27 ಲಕ್ಷ ರೂಗೆ ಮಿತಿ ಇರಿಸಿದೆವು. 7 ಲಕ್ಷ ರೂ ಮಿತಿಗಿಂತ ಹೆಚ್ಚುವರಿ 27,000 ರೂವರೆಗೂ ಮಿತಿ ಹೆಚ್ಚುತ್ತದೆ. ಅದಾದ ಬಳಿಕ ತೆರಿಗೆ ಪಾವತಿಸಲು ತೊಡಗುತ್ತೀರಿ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿIndia GDP: 2024-25ಕ್ಕೆ ಭಾರತದ ಜಿಡಿಪಿ 4 ಟ್ರಿಲಿಯನ್; ತಲಾದಾಯ 2,800 ಡಾಲರ್: ಪಿಎಚ್​ಡಿ ಚೇಂಬರ್ ಅಂದಾಜು

ಎಂಎಸ್​ಎಂಇ ವಲಯಕ್ಕೆ ಬಜೆಟ್ ಹೆಚ್ಚಳ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುತ್ತಾ, ಎಂಎಸ್​ಎಂಇ ವಲಯಕ್ಕೆ ಸಿಕ್ಕಿರುವ ಪ್ರಾಧಾನ್ಯತೆಯನ್ನು ಪ್ರಸ್ತಾಪಿಸಿದ್ದಾರೆ. ಮಧ್ಯ, ಸಣ್ಣ ಮತ್ತು ಅತಿಸಣ್ಣ ಉದ್ದಿಮೆ (ಎಂಎಸ್​ಎಂಇ) ವಲಯಕ್ಕೆ 2013-14ರಲ್ಲಿ ಇದ್ದ ಒಟ್ಟು ಬಜೆಟ್ 3,185 ಕೋಟಿ ರೂ. ಈಗ ಅದು 2023-24ರಲ್ಲಿ 22,138 ಕೋಟಿ ರೂಗೆ ಹೆಚ್ಚಾಗಿದೆ. 9 ವರ್ಷದಲ್ಲಿ ಏಳು ಪಟ್ಟು ಹೆಚ್ಚಾಗಿದೆ. ಎಂಎಸ್​ಎಂಇ ವಲಯದ ಬಗ್ಗೆ ಸರ್ಕಾರಕ್ಕೆ ಇರುವ ಬದ್ಧತೆಗೆ ಇದು ಕೈಗನ್ನಡಿಯಾಗಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ.

ಇದನ್ನೂ ಓದಿIndian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ

158 ಕೇಂದ್ರೀಯ ಸಾರ್ವಕಾಲಿಕ ವಲಯ ಉದ್ದಿಮೆಗಳು ಶೇ. 33ರಷ್ಟು ಖರೀದಿಯನ್ನು ಎಂಎಸ್​ಎಂಇಗಳಿಂದಲೇ ಮಾಡಿವೆ. ಇಷ್ಟು ಪ್ರಮಾಣದಲ್ಲಿ ಈ ಸರ್ಕಾರಿ ಉದ್ದಿಮೆಗಳು ಎಂಎಸ್​ಎಂಇ ವಲಯದಿಂದ ಖರೀದಿ ಮಾಡಿದ್ದು ಇದೇ ಮೊದಲು. ಸರ್ಕಾರ ಜಾರಿಗೆ ತಂದಿರುವ ಒಎನ್​ಡಿಸಿ ವ್ಯವಸ್ಥೆಯಿಂದಲೂ ಎಂಎಸ್​ಎಂಇ ವಲಯಕ್ಕೆ ಗ್ರಾಹಕರ ವ್ಯಾಪ್ತಿ ಹೆಚ್ಚಿಸುವ ಅವಕಾಶ ಒದಗಿಸಿದೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ