
ನವದೆಹಲಿ, ಮೇ 8: ಶತ್ರುಗಳ ಚಲನ ವಲನ ಇತ್ಯಾದಿಯನ್ನು ವೀಕ್ಷಿಸಲು ಭಾರತವು ಮುಂದಿನ 5 ವರ್ಷದಲ್ಲಿ 52 ಉಪಗ್ರಹಗಳ ಜಾಲವನ್ನು (Constellation of spy satellites) ಆಗಸದಲ್ಲಿ ಕೂರಿಸಲಿದೆ. ಇನ್-ಸ್ಪೇಸ್ (IN-SPACe – Indian National Space Promotion and Authorisation Centre) ಛೇರ್ಮನ್ ಪವನ್ ಕುಮಾರ್ ಗೋಯಂಕಾ ಈ ವಿಷಯವನ್ನು ತಿಳಿಸಿದ್ದಾರೆ. ಅವರ ಪ್ರಕಾರ, ಈ 52 ಗುಪ್ತಚರ ಉಪಗ್ರಹಗಳ ತಯಾರಿಕೆಯಲ್ಲಿ ಖಾಸಗಿ ವಲಯವೂ ಭಾಗವಹಿಸಲಿದೆ.
ಇಂಥ ಮಿಲಿಟರಿ ಮತ್ತು ಸ್ಪೈ ಸೆಟಿಲೈಟ್ಗಳನ್ನು ಇಸ್ರೋದಿಂದ ತಯಾರಿಸಲಾಗುತ್ತದೆ. ಆದರೆ, ಈ ಖಾಸಗಿ ಸಂಸ್ಥೆಗಳಿಗೂ ಇದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ ಎಂದು ಗೋಯಂಕಾ ಹೇಳಿದ್ದಾರೆ.
ಇದನ್ನೂ ಓದಿ: ಹಾವಿಗೆ ಹಾಲೆರದರೇನು ಫಲ..! ಟರ್ಕಿ ಜೊತೆ ಎಂಥ ಫ್ರೆಂಡ್ಶಿಪ್? ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡ ತಜ್ಞರು
52 ಸೆಟಿಲೈಟ್ಗಳಲ್ಲಿ 26 ಉಪಗ್ರಹಗಳನ್ನು ಖಾಸಗಿಯವರು ತಯಾರಿಸಿಕೊಡಲಿದ್ದಾರೆ. ಉಳಿದವನ್ನು ಇಸ್ರೋ ತಯಾರಿಸಲಿದೆ. ಶತ್ರುಗಳ ಚಲನ ವಲನದ ಮೇಲೆ ಕಣ್ಣಿಡಲು, ಗಡಿಗಳನ್ನು ಗಮನಿಸಲು ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಸಂಘಟಿತವಾಗಿ ನಡೆಸಲು ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳಿಗೆ ಈ ಸ್ಪೈ ಸೆಟಿಲೈಟ್ಗಳು ಸಹಾಯವಾಗಲಿವೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವ ಈ ಸಂದರ್ಭದಲ್ಲಿ ಭಾರತವು ಸ್ಪೈ ಸೆಟಿಲೈಟ್ಗಳ ಯೋಜನೆ ಘೋಷಿಸಿರುವುದು ಕುತೂಹಲ ಮೂಡಿಸಿದೆ.
ಭಾರತದಲ್ಲಿ ಸದ್ಯ ಸುಮಾರು 9-10 ಸ್ಪೈ ಸೆಟಿಲೈಟ್ಗಳಿರಬಹುದು. ಈಗ 52 ಸೆಟಿಲೈಟ್ಗಳು ಸಿದ್ಧವಾದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಬಹುದು. ಅಮೆರಿಕದಲ್ಲಿ 247 ಸ್ಪೈ ಸೆಟಿಲೈಟ್ಗಳಿವೆ. ಚೀನಾ ಬಳಿ 157, ರಷ್ಯಾ ಬಳಿ 110 ಸ್ಪೈ ಉಪಗ್ರಹಗಳಿವೆ. ಫ್ರಾನ್ಸ್, ಇಸ್ರೇಲ್ ಮತ್ತು ಇಟಲಿ ಬಳಿ 10-20 ಸ್ಪೈ ಸೆಟಿಲೈಟ್ಗಳಿವೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ನಲ್ಲಿ 80 ಭಾರತೀಯ ಯುದ್ಧವಿಮಾನಗಳಿಂದ ದಾಳಿ: ಟ್ರೋಲ್ ಆದ ಪಾಕ್ ಪ್ರಧಾನಿ ಹೇಳಿಕೆ
ಇಸ್ರೋ ಸಂಸ್ಥೆ ಎಸ್ಎಸ್ಎಲ್ವಿ ಮತ್ತು ಜಿಎಸ್ಎಲ್ವಿ ತಂತ್ರಜ್ಞಾನಗಳ ಆಧಾರಿತವಾಗಿ ರಾಕೆಟ್ಗಳನ್ನು ತಯಾರಿಸುತ್ತದೆ. ಇದರಲ್ಲಿ ಎಸ್ಎಸ್ಎಲ್ವಿ ಸರಣಿಯ ರಾಕೆಟ್ಗಳು 500 ಕಿಲೋವರೆಗಿನ ತೂಕದ ಸಣ್ಣ ಸೆಟಿಲೈಟ್ಗಳನ್ನು ನಭಕ್ಕೆ ಸೇರಿಸಲು ಬಳಕೆ ಆಗುತ್ತವೆ. ಈ ರಾಕೆಟ್ ತಂತ್ರಜ್ಞಾನವನ್ನು ಖಾಸಗಿಯವರಿಗೂ ನೀಡಲು ಇಸ್ರೋ ಮುಂದಾಗಿದೆ. ಇನ್ಮುಂದೆ, ಭಾರತದ ಖಾಸಗಿ ಸಂಸ್ಥೆಗಳು ಎಸ್ಎಸ್ಎಲ್ವಿ ರಾಕೆಟ್ಗಳನ್ನು ತಯಾರಿಸಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ