Economy: ಜಗತ್ತು ಅಲುಗಾಡಿದರೂ ಭಾರತ ನಿಶ್ಚಲ; 2023ರಲ್ಲಿ ಭಾರತದಿಂದ ನಿರೀಕ್ಷೆಮೀರಿದ ಆರ್ಥಿಕವೃದ್ಧಿ: ಐಎಂಎಫ್ ಅಂದಾಜು

IMF On Global Economy: 2023ರಲ್ಲಿ ಜಾಗತಿಕ ಆರ್ಥಿಕ ವೃದ್ಧಿದರ ಶೇ. 3.5ರಿಂದ ಶೇ. 3ಕ್ಕೆ ಇಳಿಯಬಹುದು. ಭಾರತದ ಆರ್ಥಿಕತೆ ಶೇ. 6.1ರಷ್ಟು ಬೆಳೆಯಬಹುದು ಎಂದು ಐಎಂಎಫ್ ತನ್ನ ಇತ್ತೀಚಿನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

Economy: ಜಗತ್ತು ಅಲುಗಾಡಿದರೂ ಭಾರತ ನಿಶ್ಚಲ; 2023ರಲ್ಲಿ ಭಾರತದಿಂದ ನಿರೀಕ್ಷೆಮೀರಿದ ಆರ್ಥಿಕವೃದ್ಧಿ: ಐಎಂಎಫ್ ಅಂದಾಜು
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 26, 2023 | 3:53 PM

ನವದೆಹಲಿ, ಜುಲೈ 26: ಕೆಸರಿನಲ್ಲಿ ಕಮಲ ಅರಳುವಂತೆ ಜಾಗತಿಕ ಆರ್ಥಿಕತೆಯ ಡೋಲಾಯಮಾನ ಪರಿಸ್ಥಿತಿಯ ಮಧ್ಯೆ ಭಾರತದ ಆರ್ಥಿಕತೆ ಗಮನೀಯವೆನಿಸುವ ರೀತಿಯಲ್ಲಿ ಬೆಳೆಯುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈ ವರ್ಷದ ಜಾಗತಿಕ ಆರ್ಥಿಕ ಬೆಳವಣಿಗೆ ಬಗ್ಗೆ ಅಂದಾಜು ಮಾಡಿದ್ದು, ಭಾರತದ ಪ್ರಗತಿ ಬಗ್ಗೆ ಆಶಾದಾಯಕವಾಗಿದೆ. 2023ರ ಕ್ಯಾಲಂಡರ್ ವರ್ಷದಲ್ಲಿ ಭಾರತ ಶೇ. 6.1ರಷ್ಟು ಆರ್ಥಿಕವೃದ್ಧಿ ಕಾಣಬಹುದು ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. 2023ರಲ್ಲಿ ಶೇ. 5.9ರಷ್ಟು ಮಾತ್ರ ಭಾರತದ ಆರ್ಥಿಕತೆ ಬೆಳೆಯಬಹುದು ಎಂದು ಐಎಂಎಫ್ ಏಪ್ರಿಲ್​ನಲ್ಲಿ ಅಂದಾಜು ಮಾಡಿತ್ತು. ಈಗ ಭಾರತದಲ್ಲಿ ಹೂಡಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಎಂಎಫ್ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಂತಾಗಿದೆ.

ವರ್ಲ್ಡ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ಈ ಸಂಗತಿಗಳನ್ನು ಪ್ರಸ್ತಾಪಿಸಿರುವ ಇಂಟರ್ನ್ಯಾಷನಲ್ ಮಾನಿಟರಿ ಫಂಡ್, 2022ರ ಕೊನೆಯ ಕ್ವಾರ್ಟರ್​ನಲ್ಲಿ ಭಾರತ ನಿರೀಕ್ಷೆಮೀರಿದ ಬೆಳವಣಿಗೆ ಕಂಡಿತ್ತು. ಅದೇ ಹಾದಿ ಮುಂದುವರಿದು 2023ರಲ್ಲಿ ಉತ್ತಮ ಪ್ರಗತಿ ಕಾಣಬಹುದು ಎಂದು ಹೇಳಿದೆ.

ಇದನ್ನೂ ಓದಿ: Indian Economy: ಮೂರ್ನಾಲ್ಕು ದಶಕದಲ್ಲಿ ಭಾರತವೇ ವಿಶ್ವದ ನಂಬರ್ ಒನ್: ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ

ಜಾಗತಿಕ ಆರ್ಥಿಕತೆ ಕುಂಠಿತಗೊಳ್ಳಬಹುದು ಎಂದ ಐಎಂಎಫ್

ಐಎಂಎಫ್ ವರದಿ ಪ್ರಕಾರ, 2022ರಲ್ಲಿ ಶೇ. 3.5ರಷ್ಟು ಇರುವ ಜಾಗತಿಕ ಆರ್ಥಿಕತೆ ಬೆಳವಣಿಗೆ 2023ರಲ್ಲಿ ಶೇ. 3ಕ್ಕೆ ಇಳಿಯಬಹುದು. 2024ರಲ್ಲೂ ಶೇ. 3ರಷ್ಟು ಮಾತ್ರ ಜಾಗತಿಕ ಆರ್ಥಿಕತೆ ವೃದ್ಧಿಸಬಹುದು ಎನ್ನಲಾಗಿದೆ.

ಜಾಗತಿಕ ಆರ್ಥಿಕತೆ ನಿರೀಕ್ಷೆಗಿಂತಲೂ ಮಂದಗತಿಯಲ್ಲಿರುವುದಾದರೂ ಹಣದುಬ್ಬರ ಮುಂಬರುವ ದಿನಗಳಲ್ಲಿ ತಹಬದಿಗೆ ಬರಬಹುದು ಎಂದು ಐಎಂಎಫ್ ಭಾವಿಸಿದೆ. ಜಾಗತಿಕ ಸಮಗ್ರ ಹಣದುಬ್ಬರ (ಹೆಡ್​ಲೈನ್ ಇನ್​ಫ್ಲೇಷನ್) 2022ರಲ್ಲಿ ಶೇ. 8.7ರಷ್ಟು ಇತ್ತು. ಅದು 2023ರಲ್ಲಿ ಶೇ. 6.8ಕ್ಕೆ ಮತ್ತು 2024ರಲ್ಲಿ ಶೇ. 5.2ಕ್ಕೆ ಇಳಿಯಬಹುದು. ಮುಖ್ಯ ಹಣದುಬ್ಬರ ಇನ್ನೂ ಹೆಚ್ಚು ವೇಗದಲ್ಲಿ ಕಡಿಮೆ ಆಗಬಹುದು. ಜಾಗತಿಕವಾಗಿ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುತ್ತಿವೆ. ಇದು ಜಾಗತಿಕ ಹಣದುಬ್ಬರ ತಗ್ಗಲು ಸಹಾಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ