Indian Economy: ಮುಂದಿನ 3 ವರ್ಷವೂ ಅತಿವೇಗದಲ್ಲಿ ಭಾರತದ ಆರ್ಥಿಕವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಅಂದಾಜು

S&P Global Ratings: ಸದ್ಯ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿರುವ ದೇಶಗಳ ಪೈಕಿ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೇಳಿರುವ ಎಸ್ ಅಂಡ್ ಪಿ, 2023-24ರ ಹಣಕಾಸು ವರ್ಷದಲ್ಲಿ ಶೇ. 6ರ ದರದಲ್ಲಿ ಜಿಡಿಪಿ ಬೆಳೆಯಬಹುದು ಎಂದು ಅಂದಾಜು ಮಾಡಿದೆ.

Indian Economy: ಮುಂದಿನ 3 ವರ್ಷವೂ ಅತಿವೇಗದಲ್ಲಿ ಭಾರತದ ಆರ್ಥಿಕವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಅಂದಾಜು
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2023 | 5:41 PM

ನವದೆಹಲಿ: ವಿಶ್ವದ ಆರ್ಥಿಕತೆಯ ಬೆಳವಣಿಗೆಯ ವೇಗ ಕುಂಠಿತಗೊಳ್ಳುತ್ತಿರುವ ಹೊತ್ತಿನಲ್ಲೇ ಭಾರತದ ಆರ್ಥಿಕತೆ ಉತ್ತಮವಾಗಿ ದಾಪುಗಾಲಿಕ್ಕುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಬೆಳೆದಿದ್ದ ಭಾರತದ ಆರ್ಥಿಕತೆ (Indian Economic Growth) ಈ ಹಣಕಾಸು ವರ್ಷದಲ್ಲೂ ಗಮನಾರ್ಹವಾಗಿ ಮುನ್ನಡೆಯುವ ನಿರೀಕ್ಷೆ ಇದೆ. ಆರ್​ಬಿಐ ಮಾತ್ರವಲ್ಲ, ಐಎಂಎಫ್ ಇತ್ಯಾದಿ ಜಾಗತಿಕ ರೇಟಿಂಗ್ಸ್ ಸಂಸ್ಥೆಗಳು ಭಾರತದ ಆರ್ಥಿಕತೆಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಈಗ ಈ ಪಟ್ಟಿಗೆ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆಯೂ (S & P Global Ratings) ಸೇರಿದೆ. ಸದ್ಯ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿರುವ ದೇಶಗಳ ಪೈಕಿ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೇಳಿರುವ ಎಸ್ ಅಂಡ್ ಪಿ, 2023-24ರ ಹಣಕಾಸು ವರ್ಷದಲ್ಲಿ ಶೇ. 6ರ ದರದಲ್ಲಿ ಜಿಡಿಪಿ ಬೆಳೆಯಬಹುದು ಎಂದು ಅಂದಾಜು ಮಾಡಿದೆ.

ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತದಂತೆ ವಿಯೆಟ್ನಾಂ ಮತ್ತು ಫಿಲಿಪ್ಪೈನ್ಸ್ ದೇಶಗಳ ಆರ್ಥಿಕತೆಗಳೂ ಶೇ. 6ರ ದರದಲ್ಲಿ ಬೆಳೆಯಬಹುದು. ಚೀನಾದ ಬೆಳವಣಿಗೆ ಶೇ. 5.2ಕ್ಕೆ ಹೋಗಿ ನಿಲ್ಲಬಹುದು ಎಂದು ಅಮೆರಿಕ ಮೂಲದ ಎಸ್ ಅಂಡ್ ಪಿ ಅಭಿಪ್ರಾಯಪಟ್ಟಿದೆ. ಮುಂದಿನ ಮೂರು ವರ್ಷಗಳಲ್ಲೂ ಭಾರತ ಅತ್ಯಂತ ವೇಗದ ಆರ್ಥಿಕತೆಯ ಪಟ್ಟ ಕಳೆದುಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿAdani Prediction: ಭಾರತದ ಆರ್ಥಿಕತೆ: 2030ಕ್ಕೆ ನಂ. 3, 2050ಕ್ಕೆ ನಂ. 2- ಗೌತಮ್ ಅದಾನಿ ಭವಿಷ್ಯ

ಇನ್ನು 2022-23ರ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟು ಇದ್ದ ಹಣದುಬ್ಬರವು ಈ ಹಣಕಾಸು ವರ್ಷದಲ್ಲಿ ಶೇ. 5ಕ್ಕೆ ಇಳಿಯಬಹುದು. ಕಚ್ಛಾ ತೈಲ ಬೆಲೆ ಕಡಿಮೆ ಇರುವುದು ಹಾಗೂ ಸಹಜ ಮುಂಗಾರು ನಿರೀಕ್ಷೆ ಇರುವುದು ಹಣದುಬ್ಬರ ಇಳಿಕೆಗೆ ಪೂರಕವಾಗಿ ಪರಿಣಮಿಸಬಹುದು. ಹಣದುಬ್ಬರವನ್ನು ಶೇ. 4ಕ್ಕೆ ತಂದುನಿಲ್ಲಿಸುವ ಗುರಿ ಹೊಂದಿರುವ ಆರ್​ಬಿಐ 2024ರ ಆರಂಭದಲ್ಲಿ ಬಡ್ಡಿ ದರ ಇಳಿಸಲು ನಿರ್ಧರಿಸಬಹುದು ಎಂದೂ ಎಸ್ ಅಂಡ್ ಪಿ ಹೇಳಿದೆ.

ಆರ್​ಬಿಐ, ವಿಶ್ವಬ್ಯಾಂಕ್ ಹೇಳುವುದೇನು?

ಆರ್​ಬಿಐ ಇದೇ ಜೂನ್ ತಿಂಗಳ 8ರಂದು ಹೇಳಿದ ಪ್ರಕಾರ ಭಾರತದ ಜಿಡಿಪಿ 2023-24ರಲ್ಲಿ ಶೇ. 6.5ರಷ್ಟು ಬೆಳೆಯಬಹುದು ಎಂದಿದೆ. ಹಣದುಬ್ಬರ ಕೂಡ ಶೇ. 5.1ಕ್ಕೆ ಇಳಿಯಬಹುದು ಎಂದು ಅದು ಅಂದಾಜು ಮಾಡಿದೆ.

ಇದನ್ನೂ ಓದಿIndia GDP: ಈ ವರ್ಷದ ಭಾರತದ ಆರ್ಥಿಕತೆ ಎಷ್ಟು ಬೆಳೆಯಬಲ್ಲುದು? ಫಿಚ್ ರೇಟಿಂಗ್ಸ್ ಪ್ರಕಾರ ಶೇ. 6.3; ಆರ್​ಬಿಐ ಅಂದಾಜಿಗಿಂತ ಎಷ್ಟು ಭಿನ್ನ?

ವಿಶ್ವಬ್ಯಾಂಕ್ ಮಾಡಿರುವ ಅಂದಾಜು ಪ್ರಕಾರ 2024, 2025 ಮತ್ತು 2026ರ ಹಣಕಾಸು ವರ್ಷಗಳಲ್ಲಿ ಕ್ರಮವಾಗಿ ಭಾರತದ ಜಿಡಿಪಿ ಶೇ. 6.3, ಶೇ. 6.4 ಮತ್ತು ಶೇ. 6.5ರಷ್ಟು ಬೆಳೆಯಬಹುದು ಎಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ