India Ranking: ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ: ಟಾಪ್-100 ಪಟ್ಟಿಗೆ ಸೇರಿದ ಭಾರತ

UN Sustainable Development Solutions Network's SDR 2025: ಸುಸ್ಥಿರ ಅಭಿವೃದ್ಧಿ ಸಾಧನೆಯಲ್ಲಿ ಭಾರತವು 167 ದೇಶಗಳ ಪಟ್ಟಿಯಲ್ಲಿ 99ನೇ ಸ್ಥಾನ ಪಡೆದಿದೆ. 2015ರಿಂದ ಜಾರಿಯಲ್ಲಿರುವ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಭಾರತವು ಟಾಪ್-100 ಪಟ್ಟಿಗೆ ಸೇರ್ಪಡೆಯಾಗಿದ್ದು ಇದೇ ಮೊದಲು. ವಿಶ್ವಸಂಸ್ಥೆಯ ಸಸ್ಟೈನಬಲ್ ಡೆವಲಪ್ಮೆಂಟ್ ಸಲ್ಯೂಶನ್ಸ್ ನೆಟ್ವರ್ಕ್ ಇಂದು ಬಿಡುಗಡೆ ಮಾಡಿದ ಎಸ್​​ಡಿಆರ್ ರಿಪೋರ್ಟ್​​ನಲ್ಲಿ ಈ ವಿವರ ಇದೆ.

India Ranking: ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ: ಟಾಪ್-100 ಪಟ್ಟಿಗೆ ಸೇರಿದ ಭಾರತ
ಭಾರತ

Updated on: Jun 25, 2025 | 12:11 PM

ನವದೆಹಲಿ, ಜೂನ್ 25: ಸುಸ್ಥಿರ ಅಭಿವೃದ್ಧಿಯಲ್ಲಿ (sustainable development) ಭಾರತವು 99ನೇ ಸ್ಥಾನ ಪಡೆದಿದೆ. ವಿಶ್ವ ಸಂಸ್ಥೆ ನಿಗದಿ ಮಾಡಿದ ಸುಸ್ಥಿರ ಅಭಿವೃದ್ಧಿ ಗುರಿ ಎಡೆಗೆ ಎಷ್ಟು ವೇಗದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ನೀಡಲಾದ ಶ್ರೇಯಾಂಕದಲ್ಲಿ ಭಾರತ ಈ ಮೈಲಿಗಲ್ಲು ಮುಟ್ಟಿದೆ. 167 ದೇಶಗಳ ಪೈಕಿ ಭಾರತ 99ನೇ ಸ್ಥಾನಕ್ಕೇರಿದೆ. ಈ ವಿಚಾರದಲ್ಲಿ ಭಾರತವು ಟಾಪ್-100 ಪಟ್ಟಿಗೆ ಸೇರಿದ್ದು ಇದೇ ಮೊದಲು.

ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಸಲ್ಯೂಶನ್ಸ್ ನೆಟ್ವರ್ಕ್ ಸಂಸ್ಥೆ ಇಂದು ತನ್ನ 10ನೇ ಎಸ್​​ಡಿಆರ್ ವರದಿಯನ್ನು ಬಿಡುಗಡೆ ಮಾಡಿದೆ. 2025ರ ಎಸ್​​ಡಿಜಿ ಇಂಡೆಕ್ಸ್​ನಲ್ಲಿ ಭಾರತವು 67 ಅಂಕಗಳೊಂದಿಗೆ 99ನೇ ಸ್ಥಾನ ಪಡೆದಿದೆ. ಅಮೆರಿಕ ಮತ್ತು ಚೀನಾ ದೇಶಗಳು 75.2 ಮತ್ತು 74.4 ಅಂಕಗಳೊಂದಿಗೆ ಕ್ರಮವಾಗಿ 44 ಮತ್ತು 49ನೇ ಸ್ಥಾನ ಪಡೆದಿವೆ.

ಇದನ್ನೂ ಓದಿ: ಜುಲೈ 1ರಿಂದ ಕಿಮೀಗೆ ಅರ್ಧಪೈಸೆಯಿಂದ 2 ಪೈಸೆಯವರೆಗೆ ರೈಲು ಟಿಕೆಟ್ ದರ ಏರಿಕೆ?

ಭಾರತದ ಕೆಲ ನೆರೆಹೊರೆಯ ದೇಶಗಳು ಹೆಚ್ಚಿನ ರ್ಯಾಂಕಿಂಗ್ ಪಡೆದಿವೆ. ಮಾಲ್ಡೀವ್ಸ್, ಭೂತಾನ್, ನೇಪಾಳ, ಶ್ರೀಲಂಕಾ ದೇಶಗಳು ಕ್ರಮವಾಗಿ 53, 74, 85 ಮತ್ತು 93ನೇ ಸ್ಥಾನ ಪಡೆದಿವೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನವು ಸಸ್ಟೈನಬಿಲಿಟಿ ಡೆವಲಪ್ಮೆಂಟ್ ಇಂಡೆಕ್ಸ್​​ನಲ್ಲಿ ಹಿಂದುಳಿದಿವೆ. ಇವೆರಡು ದೇಶಗಳು ಕ್ರಮವಾಗಿ 114 ಮತ್ತು 140ನೇ ಸ್ಥಾನದಲ್ಲಿವೆ.

ಭಾರತ ಮೊದಲ ಬಾರಿ ಟಾಪ್-100ನಲ್ಲಿ

ಪರಿಸರಸ್ನೇಹಿ ಕ್​ರಮಗಳ ಮೂಲಕ ಅಭಿವೃದ್ಧಿ ಸಾಧಿಸುವುದಕ್ಕೆ ಸುಸ್ಥಿರ ಅಭಿವೃದ್ಧಿ ಎನ್ನುತ್ತಾರೆ. ಮಾನವನ ಅಭಿವೃದ್ಧಿಯ ಹಾರಾಟದಲ್ಲಿ ಭೂಮಿಯ ಪರಿಸರ ಬಲಿಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ 2015ರಲ್ಲಿ ಜಗತ್ತಿನ ದೇಶಗಳಿಗೆ ಸುಸ್ಥಿರ ಅಭಿವೃದ್ಧಿಯ ಮಾನದಂಡಗಳನ್ನು ನೀಡಿತು. ಅದರಂತೆ ಪ್ರತೀ ವರ್ಷವೂ ವಿವಿಧ ದೇಶಗಳು ಈ ಗುರಿ ಎಡೆಗೆ ಹೇಗೆ ಪ್ರಗತಿ ಹೊಂದುತ್ತಿವೆ ಎಂದು ಅವಲೋಕಿಸಿ ರ್ಯಾಂಕಿಂಗ್ ನೀಡುವ ಕ್ರಮ ಜಾರಿಯಲ್ಲಿದೆ. ಪ್ರತೀ ದೇಶಕ್ಕೂ 100ರವರೆಗಿನ ಅಂಕಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಮುಂಬೈ ಏರ್​ಪೋರ್ಟ್ ವಿಸ್ತರಣೆ ಯೋಜನೆಗೆ ಜಾಗತಿಕ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಬಂಡವಾಳ ಪಡೆದ ಅದಾನಿ ಏರ್ಪೋರ್ಟ್ಸ್

ಭಾರತ 2017ರಲ್ಲಿ 116ನೇ ಸ್ಥಾನ ಪಡೆದಿತ್ತು. 2022ರಿಂದ ಅದರ ರ್ಯಾಂಕಿಂಗ್ ಗಣನೀಯವಾಗಿ ಏರುತ್ತಾ ಬಂದಿದೆ. 2024ರಲ್ಲಿ 109ನೇ ಸ್ಥಾನದಲ್ಲಿದ್ದ ಭಾರತ 2025ರಲ್ಲಿ 99ನೇ ಸ್ಥಾನಕ್ಕೆ ಜಿಗಿದಿದ್ದು ಗಮನಾರ್ಹ. ಸರ್ಕಾರ ಕೈಗೊಂಡಿರುವ ಸುಸ್ಥಿರ ಅಭಿವೃದ್ಧಿಪರ ಕ್ರಮಗಳು ಈ ರ್ಯಾಂಕಿಂಗ್ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ