ಭಾರತ-ನ್ಯೂಜಿಲ್ಯಾಂಡ್ ವ್ಯಾಪಾರ ಒಪ್ಪಂದ ಜಾರಿ; ಭಾರತದ ಸರಕುಗಳಿಗೆ ಸುಂಕರಹಿತ ಪ್ರವೇಶ

ಭಾರತ ಮತ್ತು ನ್ಯೂಜಿಲೆಂಡ್ ಎಫ್​ಟಿಎ ಜಾರಿಗೆ ಬಂದಿದೆ. ಎರಡೂ ದೇಶಗಳಿಗೂ ಲಾಭ ತರುವ ವ್ಯಾಪಾರ ಒಪ್ಪಂದ ಇದಾಗಿದೆ. ಭಾರತ ನ್ಯೂಜಿಲೆಂಡ್ ನಡುವೆ ಸದ್ಯ 2.4 ಬಿಲಿಯನ್ ಡಾಲರ್ ವ್ಯಾಪಾರ ನಡೆಯುತ್ತಿದೆ. 2030ರೊಳಗೆ ಇದು 7 ಬಿಲಿಯನ್ ಡಾಲರ್​ಗೆ ಏರುವ ನಿರೀಕ್ಷೆ ಇದೆ. ಭಾರತದಿಂದ ನ್ಯೂಜಿಲೆಂಡ್​ಗೆ ಆಗುವ ರಫ್ತು ಮತ್ತಷ್ಟು ಏರಿಕೆಯಾಗಿದೆ. ನ್ಯೂಜಿಲೆಂಡ್​ನಿಂದ ಭಾರತದಲ್ಲಿ 20 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಆಗುವ ನಿರೀಕ್ಷೆ ಇದೆ.

ಭಾರತ-ನ್ಯೂಜಿಲ್ಯಾಂಡ್ ವ್ಯಾಪಾರ ಒಪ್ಪಂದ ಜಾರಿ; ಭಾರತದ ಸರಕುಗಳಿಗೆ ಸುಂಕರಹಿತ ಪ್ರವೇಶ
ಸರಕು ಸಾಗಣೆ
Image Credit source: Getty Images

Updated on: Oct 19, 2026 | 9:26 PM

ನವದೆಹಲಿ, ಅಕ್ಟೋಬರ್ 19: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್​ಟಿಎ) ನಿನ್ನೆ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಉಭಯ ರಾಷ್ಟ್ರಗಳಿಗೂ ವಿನ್ ವಿನ್ ಎನ್ನುವಂತಿರುವ ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು 2-3 ಪಟ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಭಾರತದ ಹೆಚ್ಚಿನ ಸರಕುಗಳ ಆಮದಿಗೆ ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಶೂನ್ಯ ಸುಂಕ ಇರುತ್ತದೆ. ಭಾರತಕ್ಕೆ ಬರುವ ನ್ಯೂಜಿಲೆಂಡ್​ನ ಬಹಳಷ್ಟು ಸರಕುಗಳಿಗೆ ಸುಂಕ ರಿಯಾಯಿತಿ ಸಿಗುತ್ತದೆ.

ಈ ಒಪ್ಪಂದವು ಭಾರತದಲ್ಲಿ ನ್ಯೂಜಿಲೆಂಡ್​ನಿಂದ 20 ಬಿಲಿಯನ್ ಡಾಲರ್​ನಷ್ಟು ಹೂಡಿಕೆಗೆ ಎಡೆ ಮಾಡಿಕೊಡಲಿದೆ.

Loading...

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸರಕು ಮತ್ತು ಸೇವೆಗಳಿಂದ ಸೇರಿ ಒಟ್ಟು ವ್ಯಾಪಾರವು 2.4 ಬಿಲಿಯನ್ ಡಾಲರ್ನಷ್ಟು ಇದೆ. ಎಫ್​ಟಿಎಯಿಂದಾಗಿ ಈ ವ್ಯಾಪಾರವು 2030ರಷ್ಟರೊಳಗೆ 7 ಬಿಲಿಯನ್ ಡಾಲರ್ ಅಥವಾ 35,000 ಕೋಟಿ ರೂ ಆಗುವ ಗುರಿ ಇದೆ. ಇದು ಎರಡೂ ದೇಶಗಳ ಆರ್ಥಿಕತೆಗೆ ಉತ್ತಮ ಟಾನಿಕ್ ಆಗಬಹುದು.

ಇದನ್ನೂ ಓದಿ: ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ; 8,100 ಕೋಟಿ ರೂ ಆಂಕರ್ ಬುಕ್​ಗೆ 2.5 ಲಕ್ಷ ಕೋಟಿ ರೂ ಬಿಡ್ಡಿಂಗ್

ನ್ಯೂಜಿಲೆಂಡ್​ನೊಂದಿಗಿನ ಎಫ್​ಟಿಎಯಿಂದ ಭಾರತಕ್ಕೆ ಭರಪೂರ ಲಾಭ

ನ್ಯೂಜಿಲೆಂಡ್ ಜೊತೆಗಿನ ಈಗಿನ ವ್ಯಾಪಾರದಲ್ಲಿ ಭಾರತ ಹೆಚ್ಚಿನ ಪಾಲು ಹೊಂದಿದೆ. ಭಾರತದಿಂದಲೇ ಹೆಚ್ಚು ಸರಕುಗಳು ನ್ಯೂಜಿಲೆಂಡ್​ಗೆ ರಫ್ತಾಗುತ್ತವೆ. ಆದರೆ, ನ್ಯೂಜಿಲೆಂಡ್​ನಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವುದು ಕಡಿಮೆಯೇ. ಈಗ ಎಫ್​ಟಿಎ ಬಂದ ಬಳಿಕ ಭಾರತದ ಸರಕುಗಳಿಗೆ ಸುಂಕರಹಿತ ಪ್ರವೇಶ ಸಿಗುವುದರಿಂದ ರಫ್ತು ಇನ್ನಷ್ಟು ಹೆಚ್ಚಲಿದೆ.

ಜವಳಿ, ಉಡುಪು, ಲೆದರ್, ಪಾದರಕ್ಷೆ, ಕಾರ್ಪೆಟ್ ಉತ್ಪಾದನೆಯಂತಹ ಕಾರ್ಮಿಕ ಅಗತ್ಯತೆಯ ಸೆಕ್ಟರ್​ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಫಾರ್ಮಾ, ಪ್ಲಾಸ್ಟಿಕ್, ಎಂಜಿನಿಯರಿಂಗ್ ಸರಕು, ರಬ್ಬರ್, ಎಲೆಕ್ಟ್ರಿಕಲ್, ಕೆಮಿಕಲ್ಸ್, ಆಹಾರ ಸಂಸ್ಕರಣೆ ಇತ್ಯಾದಿ ಸರಕುಗಳಿಗೂ ಮಾರುಕಟ್ಟೆ ಅವಕಾಶ ಸುಲಭಗೊಳ್ಳಲಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್; 24ನೇ ಕಂತಿನ ಹಣ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಸಾಧ್ಯತೆ

ನ್ಯೂಜಿಲೆಂಡ್​ನಿಂದ ಮರದ ದಿಮ್ಮಿಗಳು, ಕೋಕಿಂಗ್ ಕೋಲ್, ಮೆಟಲ್ ಸ್ಕ್ರಾಪ್​ಗಳು ಕಡಿಮೆ ಬೆಲೆಗೆ ಭಾರತಕ್ಕೆ ಪೂರೈಕೆಯಾಗಲಿವೆ. ಇದರಿಂದ ಭಾರತದ ಮ್ಯಾನುಫ್ಯಾಕ್ಚರಿಂಗ್ ಉದ್ಯಮಕ್ಕೆ ಅನುಕೂಲವಾಗುತ್ತದೆ.

ಇನ್ನು, ಸರ್ವಿಸ್ ಸೆಕ್ಟರ್​ಗಳಲ್ಲೂ ಭಾರತಕ್ಕೆ ಬಹಳಷ್ಟು ಲಾಭಗಳಿವೆ. 118 ಸರ್ವಿಸ್ ಸೆಕ್ಟರ್​ಗಳಲ್ಲಿ ನ್ಯೂಜಿಲೆಂಡ್​ನ ಮಾರುಕಟ್ಟೆಯೊಳಗೆ ಪ್ರವೇಶ ಸುಲಭಗೊಳ್ಳಲಿದೆ. 2024ರಲ್ಲಿ ಭಾರತದಿಂದ ನ್ಯೂಜಿಲೆಂಡ್​ಗೆ ಸರ್ವಿಸ್ ರಫ್ತು 634 ಮಿಲಿಯನ್ ಡಾಲರ್. ಎಫ್​ಟಿಎ ಬಂದ ಬಳಿಕ ಇದು ಬಹಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us