AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಕಿಸಾನ್ ಸ್ಕೀಮ್; 24ನೇ ಕಂತಿನ ಹಣ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಸಾಧ್ಯತೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರು 24ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಸುಮಾರು 9-10 ಕೋಟಿ ಫಲಾನುಭವಿ ರೈತರಿಗೆ 2,000 ರೂ ಹಣ ಸಿಗುತ್ತದೆ. ಜೂನ್​ನಲ್ಲಿ 23ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಅಕ್ಟೋಬರ್​ನಲ್ಲಿ 24ನೇ ಕಂತು ಬಿಡುಗಡೆ ಆಗಬಹುದು. ಕಳೆದ ವರ್ಷ ದೀಪಾವಳಿ ಹಬ್ಬದ ವೇಳೆ ಹಣ ವಿತರಿಸಲಾಗಿತ್ತು. ಈ ಬಾರಿ ಹಬ್ಬಕ್ಕೆ ಮುನ್ನ ರೈತರ ಬ್ಯಾಂಕ್ ಅಕೌಂಟ್​ಗೆ ಹಣ ತಲುಪಬಹುದು.

ಪಿಎಂ ಕಿಸಾನ್ ಸ್ಕೀಮ್; 24ನೇ ಕಂತಿನ ಹಣ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಸಾಧ್ಯತೆ
ರೈತರುImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 19, 2026 | 3:56 PM

Share

ನವದೆಹಲಿ, ಅಕ್ಟೋಬರ್ 19: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ಫಲಾನುಭವಿ ರೈತರು ಈವರೆಗೆ 23 ಕಂತುಗಳು ಧನಸಹಾಯ ಪಡೆದಿದ್ದಾರೆ. ಈಗ 24ನೇ ಕಂತಿನ ಬಿಡುಗಡೆಯ ನಿರೀಕ್ಷೆ ಇದೆ. ವರ್ಷಕ್ಕೆ 6,000 ರೂಗಳನ್ನು ಮೂರು ಕಂತುಗಳಲ್ಲಿ ಸರ್ಕಾರ ನೀಡುತ್ತದೆ. 23ನೇ ಕಂತಿನ ಹಣವನ್ನು ಜೂನ್ 20ರಂದು ನೀಡಲಾಗಿತ್ತು. ನಾಲ್ಕು ತಿಂಗಳಿಗೊಮ್ಮೆ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡುವುದರಿಂದ ಅಕ್ಟೋಬರ್ ತಿಂಗಳಲ್ಲಿ 24ನೇ ಕಂತಿನ ಹಣ ಬಿಡುಗಡೆ ಆಗಬಹುದು. ಆದರೆ, ಖಚಿತವಿಲ್ಲ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಥವಾ ಅದಕ್ಕೂ ಮುನ್ನ ರೈತರಿಗೆ ಹಣ ಸಿಗುವ ಸಾಧ್ಯತೆ ಇದೆ.

2026ರ ನವೆಂಬರ್ 7ಕ್ಕೆ ಬಿಡುಗಡೆಯಾಗುತ್ತಾ ಪಿಎಂ ಕಿಸಾನ್ 24ನೇ ಕಂತಿನ ಹಣ?

ಕಳೆದ ವರ್ಷದ ಇದೇ ಅವಧಿಯಲ್ಲಿ ಪಿಎಂ ಕಿಸಾನ್​ನ ಒಂದು ಕಂತಿನ ಹಣ 2025ರ ನವೆಂಬರ್ 19ರಂದು ಬಿಡುಗಡೆ ಆಗಿತ್ತು. ಅದು 21ನೇ ಕಂತಿನ ಹಣ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಅವರು ಹಣ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಜಾಗತಿಕ ಹಣಕಾಸು ಲೋಕಕ್ಕೆ ನಾವೇ ಕಿಂಗ್ ಎಂದು ಬೀಗುತ್ತಿರುವ ಪಾಕಿಸ್ತಾನ; ಮಾಜಿ ಐಎಂಎಫ್ ನಿರ್ದೇಶಕರಿಂದ ಸತ್ಯಾಂಶ ಬಹಿರಂಗ

ನವೆಂಬರ್ 19, 2025ರಲ್ಲಿ ದೀಪಾವಳಿ ನರಕ ಚತುರ್ದಶಿ ದಿನ. ಈ ವರ್ಷ ದೀಪಾವಳಿ ಹಬ್ಬ ನವೆಂಬರ್ 6ರಿಂದ 11ರವರೆಗೂ ಇದೆ. ನರಕ ಚತುರ್ದಶಿ ಈ ಬಾರಿ ನವೆಂಬರ್ 7ಕ್ಕೆ ಬಂದಿದೆ. ಹಾಗಂದ ಮಾತ್ರಕ್ಕೆ ಅದೇ ದಿನಕ್ಕೆ ಬರುತ್ತದೆ ಎನ್ನುವುದು ಖಾತ್ರಿ ಇಲ್ಲ.

2024ರಲ್ಲಿ ದೀಪಾವಳಿ ಹಬ್ಬ ಅಕ್ಟೋಬರ್ ಕೊನೆಯಲ್ಲಿ ಆರಂಭಗೊಂಡು ನವೆಂಬರ್ ಮೊದಲ ವಾರಕ್ಕೆ ಮುಕ್ತಾಯವಾಗಿತ್ತು. ಪಿಎಂ ಕಿಸಾನ್ 18ನೇ ಕಂತಿನ ಹಣ ಅಕ್ಟೋಬರ್ 5ರಂದೇ ಬಿಡುಗಡೆ ಆಗಿತ್ತು. ಹೀಗಾಗಿ, 24ನೇ ಕಂತಿನ ಹಣ 2026ರ ಅಕ್ಟೋಬರ್ ತಿಂಗಳಲ್ಲೇ ಬಿಡುಗಡೆ ಆದರೂ ಅಚ್ಚರಿ ಇಲ್ಲ.

ಏನಿದು ಪಿಎಂ ಕಿಸಾನ್ ಯೋಜನೆ?

ಉಳುಮೆ ಮಾಡುವ ಕೃಷಿ ಭೂಮಿ ಹೊಂದಿರುವ ರೈತರಿಗೆ ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುತ್ತದೆ. ವರ್ಷದಲ್ಲಿ 2,000 ರೂಗಳ ಮೂರು ಕಂತುಗಳಲ್ಲಿ ಈ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. 2019ರಲ್ಲಿ ಶುರುವಾದ ಈ ಸ್ಕೀಮ್​ನಲ್ಲಿ ಈವರೆಗೆ 23 ಕಂತುಗಳ ಹಣವನ್ನು ಅರ್ಹ ರೈತರಿಗೆ ನೀಡಲಾಗಿದೆ. ಪ್ರತೀ ಕಂತಿನಲ್ಲಿ ಸರ್ಕಾರ 20,000 ಕೋಟಿ ರೂ ಆಸುಪಾಸಿನ ಹಣ ಕಳುಹಿಸುತ್ತದೆ.

ಇದನ್ನೂ ಓದಿ: ಅಮೆರಿಕ ಷರತ್ತು ಒಪ್ಪಿದರೆ 7 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಮುಕ್ತ: ಇರಾನ್‌ನಿಂದ ಹೊಸ ಪ್ರಸ್ತಾವನೆ

ಈ ಸ್ಕೀಮ್​ನಲ್ಲಿ ರೈತರು ಅರ್ಹತೆ ಪಡೆಯಬೇಕಾದರೆ ಕೃಷಿ ಜಮೀನು ಹೊಂದಿರಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗಷ್ಟೇ ನೀಡಲಾಗುತ್ತದೆ. ಕುಟುಂಬದಲ್ಲಿ ಯಾವುದೇ ಸದಸ್ಯ ಸರ್ಕಾರಿ ಸೇವೆಯಲ್ಲಿದ್ದರೆ, ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದರೆ, ಶಾಸಕರು, ಸಂಸದರು ಇತ್ಯಾದಿ ಹುದ್ದೆ ಹೊಂದಿದ್ದವರಾಗಿದ್ದರೆ, ವೃತ್ತಿಪರ ಕೆಲಸ ಮಾಡುತ್ತಿರುವವರಾಗಿದ್ದರೆ ಈ ಸ್ಕೀಮ್ನಲ್ಲಿ ಫಲಾನುಭವಿಯಾಗಲು ಅರ್ಹರಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಇಲ್ಲಿ ಇಂದಿಗೂ ಹಚ್ಚಲ್ಲ ದೀಪ, ಸಿಡಿಸಲ್ಲ ಪಟಾಕಿ
ಇಲ್ಲಿ ಇಂದಿಗೂ ಹಚ್ಚಲ್ಲ ದೀಪ, ಸಿಡಿಸಲ್ಲ ಪಟಾಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?