AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ; 8,100 ಕೋಟಿ ರೂ ಆಂಕರ್ ಬುಕ್​ಗೆ 2.5 ಲಕ್ಷ ಕೋಟಿ ರೂ ಬಿಡ್ಡಿಂಗ್

ಮುಕೇಶ್ ಅಂಬಾನಿ ಮಾಲಕತ್ವದ ಜಿಯೋ ಪ್ಲಾಟ್​ಫಾರ್ಮ್ಸ್​ನ ಐಪಿಒ ಆಫರ್​ಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾಗಿರುವ 8,110 ಕೋಟಿ ರೂ ಹೂಡಿಕೆಗೆ 2.5 ಲಕ್ಷ ಕೋಟಿ ರೂನಷ್ಟು ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಅಂದರೆ, ಮೂವತ್ತು ಪಟ್ಟು ಹೆಚ್ಚು ಬೇಡಿಕೆ ಇದೆ. ರೀಟೇಲ್ ಹೂಡಿಕೆದಾರರಿಗೆ ಬಿಡ್ಡಿಂಗ್ ಸಲ್ಲಿಸಲು ಅಕ್ಟೋಬರ್ 21ರಿಂದ 23ರವರೆಗೆ ಅವಕಾಶ ಇದೆ.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ; 8,100 ಕೋಟಿ ರೂ ಆಂಕರ್ ಬುಕ್​ಗೆ 2.5 ಲಕ್ಷ ಕೋಟಿ ರೂ ಬಿಡ್ಡಿಂಗ್
ಷೇರು ಮಾರುಕಟ್ಟೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 19, 2026 | 7:07 PM

Share

ನವದೆಹಲಿ, ಅಕ್ಟೋಬರ್ 19: ರಿಲಯನ್ಸ್ ಇಂಡಸ್ಟ್ರೀಸ್​ನ ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒಗೆ ಸಾಂಸ್ಥಿಕ ಹೂಡಿಕೆದಾರರಿಂದ ನಿರೀಕ್ಷೆಮೀರಿದ ಸ್ಪಂದನೆ ಸಿಕ್ಕಿದೆ. 8,110 ಕೋಟಿ ರೂ ಆಂಕರ್ ಬುಕ್​ಗೆ ದಾಖಲೆಯ ಎರಡೂವರೆ ಲಕ್ಷ ಕೋಟಿ ರೂ ಮೊತ್ತದಷ್ಟು ಬಿಡ್ಡಿಂಗ್ ಬಂದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ. ಅಂದರೆ, ಲಭ್ಯ ಇರುವ ಅವಕಾಶಕ್ಕೆ 30 ಪಟ್ಟು ಹೆಚ್ಚು ಬೇಡಿಕೆ ವ್ಯಕ್ತವಾಗಿದೆ.

ಐಪಿಒದಲ್ಲಿ ಆಂಕರ್ ಬುಕ್ ಎಂದರೇನು?

ಐಪಿಒದಲ್ಲಿ ಆಂಕರ್ ಬುಕ್ ಎಂದರೆ ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾಗಿರುವ ಷೇರುಗಳು. ಸಾಂಸ್ಥಿಕ ಹೂಡಿಕೆದಾರರೆಂದರೆ ಮ್ಯೂಚುವಲ್ ಫಂಡ್​ಗಳು, ಇಪಿಎಫ್ ಫಂಡ್​ಗಳು, ಇನ್ಷೂರೆನ್ಸ್ ಸಂಸ್ಥೆಗಳು, ಜಾಗತಿಕ ಹೂಡಿಕೆದಾರ ಸಂಸ್ಥೆಗಳು, ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು ಇತ್ಯಾದಿ ಹೂಡಿಕೆ ಸಂಸ್ಥೆಗಳು.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒಗೆ ಭರ್ಜರಿ ಸ್ಪಂದನೆ…

ಜಿಯೋ ಪ್ಲಾಟ್​ಫಾರ್ಮ್ಸ್​ನದ್ದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಆಗಿದೆ. ಇವತ್ತ, ಅಂದರೆ ಅಕ್ಟೋಬರ್ 19ರಂದು ಸಾಂಸ್ಥಿಕ ಹೂಡಿಕೆದಾರರಿಗೆ ಬಿಡ್ ಸಲ್ಲಿಸಲು ಇದ್ದ ದಿನಾಂಕ. ದೇಶ ವಿದೇಶಗಳಿಂದ ಹಲವಾರು ಸಾಂಸ್ಥಿಕ ಹೂಡಿಕೆದಾರರು ಬಿಡ್ ಸಲ್ಲಿಸಿವೆ. ಬಿಡ್ ಸಲ್ಲಿಸಿದ ಜಾಗತಿಕ ಹೂಡಿಕೆ ಸಂಸ್ಥೆಗಳಲ್ಲಿ ಬ್ಲ್ಯಾಕ್​ರಾಕ್, ಕ್ಯಾಪಿಟಲ್ ಗ್ರೂಪ್, ಫಿಡೆಲಿಟಿ ಇನ್ವೆಸ್ಟ್​ಮೆಂಟ್ಸ್, ಟಿ ರೋವ್ ಪ್ರೈಸ್, ಶ್ರೋಡರ್ಸ್, ಜೆಪಿ ಮಾರ್ಗನ್ ಅಸೆಟ್ ಮ್ಯಾನೇಜ್ಮೆಂಟ್, ಫ್ರಾಂಕ್ಲಿನ್ ಟೆಂಪಲ್ಟನ್, ಇನ್ವೆಸ್ಟೋ, ಜೇನಸ್ ಹೆಂಡರ್ಸನ್ ಸಂಸ್ಥೆಗಳು ಸೇರಿವೆ.

ಇದನ್ನೂ ಓದಿ: ಜಿಯೋ ಐಪಿಒ: 2ಜಿ ಗ್ರಾಹಕರನ್ನು ಸೆಳೆಯುವುದರಿಂದ ಹಿಡಿದು ಎಐವರೆಗೆ ವ್ಯವಹಾರ ವೃದ್ಧಿಸಲು ಜಿಯೋಗೆ ವಿಫುಲ ಅವಕಾಶ

ವಿದೇಶಗಳ ಸರ್ಕಾರಿ ಹೂಡಿಕೆ ಸಂಸ್ಥೆಗಳ ಪೈಕಿ ಸಿಂಗಾಪುರ್ ಜಿಐಸಿ, ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ, ಕತಾರ್ ಇನ್ವೆಸ್ಟ್​ಮೆಂಟ್ ಅಥಾರಿಟಿ, ನಾರ್ವೆಯ ನಾರ್ಗೆಸ್ ಬ್ಯಾಂಕ್ ಇನ್ವೆಸ್ಟ್​ಮೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಸೇರಿವೆ.

ಭಾರತದ ಸಾಂಸ್ಥಿಕ ಹೂಡಿಕೆದಾರರಲ್ಲಿ ಎಸ್​ಬಿಐ ಮ್ಯೂಚುವಲ್ ಫಂಡ್, ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್, ಎಚ್​ಡಿಎಫ್​ಸಿ ಮ್ಯೂಚುವಲ್ ಫಂಡ್, ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್, ನಿಪ್ಪಾನ್ ಮ್ಯೂಚುವಲ್ ಫಂಡ್, ಕೋಟಕ್ ಮಹೀಂದ್ರ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಕಂಪನಿಗಳಿವೆ.

ಹಾಗೆಯೇ, ಎಲ್​ಐಸಿ, ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್, ಎಸ್​ಬಿಐ ಲೈಫ್, ಎಸ್​ಬಿಐ ಪೆನ್ಷನ್ ಫಂಡ್ಸ್, ಎಚ್​ಡಿಎಫ್​ಸಿ ಪೆನ್ಷನ್, ಐಸಿಐಸಿಐ ಪ್ರುಡೆನ್ಷಿಯಲ್ ಇತ್ಯಾದಿ ಇನ್ಷೂರೆನ್ಸ್ ಮತ್ತು ಪೆನ್ಷನ್ ಫಂಡ್​ಗಳೂ ಕೂಡ ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದಲ್ಲಿ ಬಿಡ್ ಸಲ್ಲಿಸಿವೆ.

ಇದನ್ನೂ ಓದಿ: ಜಿಯೋ ಪ್ಲಾಟ್​ಫಾರ್ಮ್ಸ್ 30,213 ಕೋಟಿ ರೂ ಐಪಿಒ: ಭಾರತದ ಇತಿಹಾಸದಲ್ಲೇ ಅತಿದೊಡ್ಡದು; ಶೇರುಬೆಲೆ, ದಿನಾಂಕ, ಹೂಡಿಕೆ ಇತ್ಯಾದಿ ವಿವರ

ಅಕ್ಟೋಬರ್ 21ರಿಂದ ಸಾರ್ವಜನಿಕರ ಹೂಡಿಕೆಗೆ ಅವಕಾಶ

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದಲ್ಲಿ ಸಾರ್ವಜನಿಕರು ಅಥವಾ ರೀಟೇಲ್ ಹೂಡಿಕೆದಾರರಿಗೆ ಅಕ್ಟೋಬರ್ 21ರಿಂದ 23ರವರೆಗೆ ಅವಕಾಶ ಕೊಡಲಾಗಿದೆ. ಪ್ರತಿ ಷೇರಿಗೆ 1,065-1,119 ರೂ ಬೆಲೆ ನಿಗದಿ ಮಾಡಲಾಗಿದೆ. ಜಿಯೋ ಪ್ಲಾಟ್​ಫಾರ್ಮ್ಸ್ ಈ ಐಪಿಒದಿಂದ ಒಟ್ಟಾರೆ 30,123 ಕೋಟಿ ರೂ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದೆ. ಈ ಹಣವನ್ನು ಜಿಯೋದ ಸಾಲಗಳನ್ನು ತೀರಿಸಲು ಹೆಚ್ಚಾಗಿ ಬಳಕೆಯಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಇಲ್ಲಿ ಇಂದಿಗೂ ಹಚ್ಚಲ್ಲ ದೀಪ, ಸಿಡಿಸಲ್ಲ ಪಟಾಕಿ
ಇಲ್ಲಿ ಇಂದಿಗೂ ಹಚ್ಚಲ್ಲ ದೀಪ, ಸಿಡಿಸಲ್ಲ ಪಟಾಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂದ ಬಂಗಾಳದ ಬಿಜೆಪಿ ಶಾಸಕಿ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಮಗುವಿನ ಪ್ರಾಣಾಪಾಯ ತಪ್ಪಿದೆ, ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಲಕ್ಷ್ಮಣ್ ಗಂಭೀರ ಆರೋಪ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ನಿರ್ದೇಶಕನ ಮೇಲೆ ಕಾನೂನು ಕ್ರಮ ಕೈಗೋಳ್ಳುತ್ತೇವೆ: ಪ್ರಿಯಾಂಕಾ ಎಚ್ಚರಿಕೆ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಮರಿ ನೀರಾನೆಗೆ 'ಡಾ. ಸಮೀಕ್ಷಾ ರೆಡ್ಡಿ' ಹೆಸರು ನಾಮಕರಣ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಬಿಜೆಪಿ ಡಿಕ್ಷನರಿ ಓದಲಿ; ಖರ್ಗೆಯ ದೀಪಾವಳಿ ಶುಭಾಶಯಕ್ಕೆ ಕಾಂಗ್ರೆಸ್ ಸಮರ್ಥನೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?