AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ ಪ್ಲಾಟ್​ಫಾರ್ಮ್ಸ್ 30,213 ಕೋಟಿ ರೂ ಐಪಿಒ: ಭಾರತದ ಇತಿಹಾಸದಲ್ಲೇ ಅತಿದೊಡ್ಡದು; ಶೇರುಬೆಲೆ, ದಿನಾಂಕ, ಹೂಡಿಕೆ ಇತ್ಯಾದಿ ವಿವರ

ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ಜಿಯೋ ಪ್ಲಾಟ್​ಫಾರ್ಮ್ಸ್ ಸಂಸ್ಥೆಯ ಐಪಿಒ ಸುದ್ದಿ ಸದ್ದು ಮಾಡುತ್ತಿದೆ. 27 ಕೋಟಿ ಷೇರುಗಳನ್ನು ಈ ಐಪಿಒದಲ್ಲಿ ವಿತರಣೆ ಮಾಡಲಾಗುತ್ತಿದೆ. ಒಟ್ಟು 30,213 ಕೋಟಿ ರೂ ಗಾತ್ರದ ಐಪಿಒ ಇದಾಗಿದೆ. ಪ್ರತೀ ಷೇರಿಗೆ 1,065-1,119 ರೂ ಬೆಲೆ ನಿಗದಿ ಮಾಡಲಾಗಿದೆ. 2026ರ ಅಕ್ಟೋಬರ್ 21ರಿಂದ 23ರವರೆಗೆ ಐಪಿಒ ಚಾಲನೆಯಲ್ಲಿರುತ್ತದೆ.

ಜಿಯೋ ಪ್ಲಾಟ್​ಫಾರ್ಮ್ಸ್ 30,213 ಕೋಟಿ ರೂ ಐಪಿಒ: ಭಾರತದ ಇತಿಹಾಸದಲ್ಲೇ ಅತಿದೊಡ್ಡದು; ಶೇರುಬೆಲೆ, ದಿನಾಂಕ, ಹೂಡಿಕೆ ಇತ್ಯಾದಿ ವಿವರ
ಜಿಯೋ ಪ್ಲಾಟ್​ಫಾರ್ಮ್ಸ್ ಎಂಡಿ ಆಕಾಶ್ ಅಂಬಾನಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2026 | 3:16 PM

Share

ಮುಂಬೈ, ಅಕ್ಟೋಬರ್ 15: ರಿಲಯನ್ಸ್ ಇಂಡಸ್ಟ್ರೀಸ್​ನ ಡಿಜಿಟಲ್ ಮತ್ತು ಟೆಲಿಕಾಂ ವಿಭಾಗವಾದ ಜಿಯೋ ಪ್ಲಾಟ್​ಫಾರ್ಮ್ಸ್ ಲಿ ಸಂಸ್ಥೆಯ ಐಪಿಒದಲ್ಲಿ ಪ್ರೈಸ್ ಬ್ಯಾಂಡ್ ನಿಗದಿಯಾಗಿದೆ. ಸಾರ್ವಜನಿಕರಿಗೆ ಅಕ್ಟೋಬರ್ 21ರಿಂದ 23ರವರೆಗೆ ಐಪಿಒ ಸಬ್​ಸ್ಕ್ರಿಪ್ಷನ್ ತೆರೆಯಲಿದ್ದು, ಒಟ್ಟು 30,213 ಕೋಟಿ ರೂ ಬಂಡವಾಳ ಸಂಗ್ರಹಣೆಯ ನಿರೀಕ್ಷೆ ಇದೆ. ಪ್ರತೀ ಷೇರಿಗೆ 1,065 ರೂನಿಂದ 1,119 ರೂವರೆಗೆ ಪ್ರೈಸ್ ಬ್ಯಾಂಡ್ ನಿಗದಿ ಮಾಡಲಾಗಿದೆ. ಇದು ಎಲ್​ಐಸಿ, ಹ್ಯೂಂಡಾಯ್ ಸಂಸ್ಥೆಯದಕ್ಕಿಂತಲೂ ದೊಡ್ಡ ಐಪಿಒ ಆಗಿದೆ. ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನ್ನುವ ದಾಖಲೆ ಬರೆಯಲಿದೆ.

ಸಾರ್ವಜನಿಕರಿಗೆ ಅಕ್ಟೋಬರ್ 21ರಿಂದ 23ರವರೆಗೆ ಸಬ್​ಸ್ಕ್ರಿಪ್ಷನ್ ತೆರೆಯಲಿದೆಯಾದರೂ, ಆಂಕರ್ ಇನ್ವೆಸ್ಟರ್ ಅಥವಾ ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಅಕ್ಟೋಬರ್ 19ರಂದು ಬಿಡ್ಡಿಂಗ್ ಸಲ್ಲಿಸಲು ಅವಕಾಶ ಕೊಡಲಾಗಿದೆ.

27 ಕೋಟಿ ಹೊಸ ಈಕ್ವಿಟಿ ಶೇರುಗಳು ಮಾರಾಟಕ್ಕಿವೆ…

ಜಿಯೋ ಪ್ಲಾಟ್​ಫಾರ್ಮ್ಸ್​ನ ಐಪಿಒದಲ್ಲಿ 27 ಕೋಟಿ ಸಂಖ್ಯೆಯಷ್ಟು ಶೇರುಗಳು ವಿತರಣೆ ಆಗುತ್ತಿವೆ. ಎಲ್ಲವೂ ಕೂಡ ಹೊಸದಾಗಿ ವಿತರಿಸಲಾಗುತ್ತಿದೆ. ರೀಟೇಲ್ ಹೂಡಿಕೆದಾರರಿಗೆ ಕನಿಷ್ಠ ಶೇ. 35ರಷ್ಟು ಶೇರುಗಳು ಲಭ್ಯ ಇರುತ್ತವೆ. ಸಾಂಸ್ಥಿಕ ಹೂಡಿಕೆದಾರರಿಗೆ ಗರಿಷ್ಠ ಶೇ. 50ರವರೆಗೆ ಶೇರುಗಳು ಖರೀದಿಗೆ ಲಭ್ಯ ಇರುತ್ತವೆ.

ಇದನ್ನೂ ಓದಿ: ಅಂಬಾನಿ ಮತ್ತು ರಿಲಯನ್ಸ್​ನ ಮೂರು ತಲೆಮಾರಿನ ಕಥೆ; ಗುರಿ, ಛಲ, ಕನಸುಗಳೊಂದಿಗೆ ಹೆಜ್ಜೆ

ರೀಟೇಲ್ ಹೂಡಿಕೆದಾರರಿಗೆ 1.87 ಲಕ್ಷ ರೂವರೆಗೆ ಅವಕಾಶ

ರೀಟೇಲ್ ಹೂಡಿಕೆದಾರರು ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದಲ್ಲಿ ಪಾಲ್ಗೊಳ್ಳಬೇಕಾದರೆ ಕನಿಷ್ಠ 1 ಲಾಟ್ ಖರೀದಿಸಬೇಕು. ಒಂದು ಲಾಟ್​ನಲ್ಲಿ 12 ಶೇರುಗಳಿರುತ್ತವೆ. 13,428 ರೂ ಆಗುತ್ತದೆ. ಇದು ಕನಿಷ್ಠ ಹೂಡಿಕೆ.

ಒಬ್ಬ ರೀಟೇಲ್ ಹೂಡಿಕೆದಾರ ಗರಿಷ್ಠ 14 ಲಾಟ್ ಖರೀದಿಸಲು ಅವಕಾಶ ಇರುತ್ತದೆ. 14 ಲಾಟ್​ಗಳಲ್ಲಿ ಒಟ್ಟು 168 ಶೇರುಗಳಿರುತ್ತವೆ. ಒಟ್ಟು ಹೂಡಿಕೆ 1,87,992 ರೂ ಆಗುತ್ತದೆ. ಒಬ್ಬ ಹೂಡಿಕೆದಾರ 1ರಿಂದ 14ರವರೆಗೆ ಎಷ್ಟು ಲಾಟ್ ಬೇಕಾದರೂ ಖರೀದಿಸಬಹುದು.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ ವಿವರ

  • ಐಪಿಒ ಆರಂಭ: ಅಕ್ಟೋಬರ್ 21
  • ಐಪಿಒ ಮುಕ್ತಾಯ: ಅಕ್ಟೋಬರ್ 23
  • ಶೇರು ಬೆಲೆ: 1,065 ರೂನಿಂದ 1,119 ರೂವರೆಗೆ
  • ಒಟ್ಟು ಶೇರುಗಳ ವಿತರಣೆ: 27 ಕೋಟಿ
  • ಐಪಿಒ ಗಾತ್ರ: 30,213 ಕೋಟಿ ರೂ
  • ಲಿಸ್ಟಿಂಗ್ ದಿನಾಂಕ: ಅಕ್ಟೋಬರ್ 28

ಇದನ್ನೂ ಓದಿ: ಅಪ್ಪನ ಕನಸು ಸಾಕಾರಗೊಳಿಸಿದ ಮುಕೇಶ್ ಅಂಬಾನಿ; ಕೋಟ್ಯಂತರ ಕನಸುಗಳನ್ನು ಬೆಸೆದ ಜಿಯೋ

ಉದ್ಯೋಗಿಗಳಿಗೆ ಡಿಸ್ಕೌಂಟ್​​ನಲ್ಲಿ ಶೇರು ವಿತರಣೆ

ಜಿಯೋ ಪ್ಲಾಟ್​ಫಾರ್ಮ್ಸ್​ನ ಕೆಲ ಅರ್ಹ ಉದ್ಯೋಗಿಗಳಿಗೆ ಷೇರು ಖರೀದಿ ಸೌಲಭ್ಯ ನೀಡಲಾಗಿರುತ್ತದೆ. ಇವರಿಗೆಂದೇ 500 ಕೋಟಿ ರೂ ಮೊತ್ತದವರೆಗೆ ಷೇರುಗಳನ್ನು ರಿಸರ್ವ್ ಮಾಡಲಾಗಿರುತ್ತದೆ. ಪ್ರತೀ ಷೇರಿಗೆ ಇವರಿಗೆ 54 ರೂ ರಿಯಾಯಿತಿ ಇರುತ್ತದೆ.

ಇನ್ನು, ರಿಲಯನ್ಸ್ ಇಂಡಸ್ಟ್ರೀಸ್​ನ ಕೆಲ ಅರ್ಹ ಷೇರುದಾರರಿಗೂ ಡಿಸ್ಕೌಂಟ್ ದರದಲ್ಇ 2,500 ಕೋಟಿ ರೂವರೆಗೂ ರಿಸರ್ವೇಶನ್ ಕೊಡಲಾಗಿದೆ.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದಿಂದ ಬಂದ ಹಣ ಎಲ್ಲಿ ಬಳಕೆ?

ಜಿಯೋ ಪ್ಲಾಟ್​ಫಾರ್ಮ್ಸ್ ಸಂಸ್ಥೆ ಈ ಐಪಿಒದಿಂದ ಬರುವ ಬಂಡವಾಳವನ್ನು ತನ್ನ ಕೆಲ ಬಾಧ್ಯತೆಗಳಿಗೆ ಬಳಸಲಿದೆ. ತನ್ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ (ಆರ್​ಜೆಐಎಲ್) ಪಡೆದ ಸಾಲಗಳನ್ನು ತೀರಿಸಲು 27,500 ಕೋಟಿ ರೂ ಬಳಸಲಾಗುವುದು ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More