ವಿಶ್ವದ ಟಾಪ್ ಕಂಪನಿಗಳಲ್ಲಿ ಎಕ್ಸಿಕ್ಯೂಟಿವ್ ಹುದ್ದೆ (Executive Job) ಅಲಂಕರಿಸಿದ ಭಾರತೀಯರ ಪಟ್ಟಿಗೆ ಈಗ ಮತ್ತೊಬ್ಬರ ಸೇರ್ಪಡೆಯಾಗಿದ್ದಾರೆ. ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ ಅವರ ಮಾಲಕತ್ವದ ಟೆಸ್ಲಾ ಸಂಸ್ಥೆಗೆ (Tesla) ಭಾರತ ಮೂಲದ ವೈಭವ್ ತನೇಜಾ ಮುಖ್ಯ ಹಣಕಾಸು ಅಧಿಕಾರಿ (CFO- Chief Finance Officer) ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಿಎಫ್ಒ ಆಗಿದ್ದ ಜಚಾರಿ ಕಿರ್ಕ್ಹಾರ್ನ್ (Zachary Kirkhorn) ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ವೈಭವ್ ತನೇಜಾರನ್ನು ನೇಮಕ ಮಾಡಲಾಗಿದೆ. 45 ವರ್ಷದ ವೈಭವ್ ಅವರು ಇದಕ್ಕೂ ಮೊದಲು ಟೆಸ್ಲಾದ ಮುಖ್ಯ ಲೆಕ್ಕ ಅಧಿಕಾರಿ (CAO- Chief Accounting Officer) ಆಗಿದ್ದರು. ಈಗ ಸಿಎಒ ಜೊತೆಗೆ ಸಿಎಫ್ಒ ಹುದ್ದೆಯನ್ನೂ ಹೆಚ್ಚುವರಿಯಾಗಿ ಅವರು ನಿಭಾಯಿಸಲಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ವೈಭವ್ ತನೇಜಾ ಸಿಎಫ್ಒ ಹುದ್ದೆ ಪಡೆದಿರುವುದು ತಾತ್ಕಾಲಿಕವಾಗಿ ಮಾತ್ರವಾ ಎಂಬುದು ಗೊತ್ತಾಗಿಲ್ಲ.
ವೈಭವ್ ತನೇಜಾ ಅವರು ಅಕೌಂಟಿಂಗ್ ಕ್ಷೇತ್ರದಲ್ಲಿ ಎರಡು ದಶಕಗಳಷ್ಟು ಅನುಭವ ಹೊಂದಿದ್ದಾರೆ. ಟೆಸ್ಲಾದ ಹಿಂದಿನ ಸಿಎಫ್ಒಗಳಾಗಿದ್ದ ದೀಪಕ್ ಅಹುಜಾ ಮತ್ತು ಜಚಾರಿ ಕಿರ್ಕ್ಹಾರ್ನ್ ಅವರ ಜೊತೆ ನಿಕಟವಾಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಮುಕೇಶ್ ಅಂಬಾನಿ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ? ಅಚ್ಚರಿ ಮೂಡಿಸುತ್ತದೆ ವಿಶ್ವಶ್ರೀಮಂತನ ಸಂಬಳ ವಿಚಾರ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ