ಭಾರತದಿಂದ ಹೊಸ ಮೈಲಿಗಲ್ಲು; 200 ಗಿಗಾವ್ಯಾಟ್ ಗಡಿದಾಟಿದ ಮರುಬಳಕೆ ಇಂಧನ ಸಾಮರ್ಥ್ಯ

India renewable energy capacity crosses 200 GW mark: ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಮರುಬಳಕೆ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಭಾರತದಲ್ಲಿ ಮೊದಲ ಬಾರಿಗೆ 200 ಗಿ.ವ್ಯಾ. ಗಡಿ ದಾಟಿದೆ. 2047ರಷ್ಟರಲ್ಲಿ ಸಂಪೂರ್ಣ ಪರಿಸರಸ್ನೇಹಿ ವಿದ್ಯುತ್ ಉತ್ಪಾದಿಸುವ ಗುರಿ ಈಡೇರಿಕೆ ನಿಟ್ಟಿನಲ್ಲಿ ಇದು ಮಹತ್ವದ ಸಂಗತಿಯಾಗಿದೆ. ಭಾರತದಲ್ಲಿ ರಿನಿವಬಲ್ ಎನರ್ಜಿ ಉತ್ಪಾದನೆ ಹೆಚ್ಚುತ್ತಿದೆಯಾದರೂ ಜಾಗತಿಕವಾಗಿ ನಿರೀಕ್ಷಿತ ರೀತಿಯಲ್ಲಿ ಪ್ರಗತಿಯಾಗಿಲ್ಲ.

ಭಾರತದಿಂದ ಹೊಸ ಮೈಲಿಗಲ್ಲು; 200 ಗಿಗಾವ್ಯಾಟ್ ಗಡಿದಾಟಿದ ಮರುಬಳಕೆ ಇಂಧನ ಸಾಮರ್ಥ್ಯ
ಮರುಬಳಕೆ ಇಂಧನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 14, 2024 | 12:06 PM

ನವದೆಹಲಿ, ಅಕ್ಟೋಬರ್ 14: ಪರಿಸರಕ್ಕೆ ಹಾನಿ ಮಾಡುವ ಕಲ್ಲಿದ್ದಲು ಇತ್ಯಾದಿ ಪಳೆಯುಳಿಕೆ ಇಂಧನ ಆಧಾರಿತ ವಿದ್ಯುತ್ ಬಳಕೆ ಕಡಿಮೆ ಮಾಡಿ ಮರುಬಳಕೆ ಇಂಧನಕ್ಕೆ ಆದ್ಯತೆ ಹೆಚ್ಚಿಸುತ್ತಿರುವ ಭಾರತ ಈ ನಿಟ್ಟಿನಲ್ಲಿ ಹೊಸ ಮೈಲಿಗಲ್ಲು ದಾಟಿದೆ. ಮರುಬಳಕೆ ಇಂಧನ ಅಥವಾ ರಿನಿವಬಲ್ ಎನರ್ಜಿ ಆಧಾರಿತವಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಭಾರತದಲ್ಲಿ ಮೊದಲ ಬಾರಿಗೆ 200 ಗಿಗಾ ವ್ಯಾಟ್ ಗಡಿ ದಾಟಿದೆ. ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ) ಒದಗಿಸಿದ ದತ್ತಾಂಶದ ಪ್ರಕಾರ ನವೀಕರಣ ಇಂಧನ ಉತ್ಪಾದನಾ ಸಾಮರ್ಥ್ಯ 2,01,457.91 ಮೆಗಾವ್ಯಾಟ್​ನಷ್ಟಿದೆ. ಇಂಥ ಪರಿಸರಸ್ನೇಹಿ ಇಂಧನ ಉತ್ಪಾದನೆಯಲ್ಲಿ ಅಗ್ರ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕವೂ ಇರುವುದು ವಿಶೇಷ.

ಗಮನಾರ್ಹ ಸಂಗತಿ ಎಂದರೆ, ಭಾರತದಲ್ಲಿರುವ ಒಟ್ಟಾರೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಪರಿಸರಸ್ನೇಹಿ ಇಂಧನ ಉತ್ಪಾದನೆಯ ಪಾಲು ಶೇ. 46.3ರಷ್ಟಿದೆ. ಇದರಲ್ಲಿ ಸೌರಶಕ್ತಿ ಮೂಲಕ ಅತಿಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ. 90,762 ಮೆಗಾವ್ಯಾಟ್​ನಷ್ಟು ಸೌರಶಕ್ತಿ ಬಳಕೆ ಸಾಮರ್ಥ್ಯ ಇದೆ. ವಾಯುಶಕ್ತಿ ಮೂಲಕ 47,363 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಇನ್ನು, ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 8180 ಮೆಗಾವ್ಯಾಟ್ ಇದೆ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್​ಗೆ ಭರ್ಜರಿ ಸ್ಪಂದನೆ; ಒಂದೇ ದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ನೊಂದಣಿ

ಅತಿಹೆಚ್ಚು ಮರುಬಳಕೆ ಇಂಧನ ಉತ್ಪಾದಿಸುವ ಟಾಪ್-4 ರಾಜ್ಯಗಳಲ್ಲಿ ಕರ್ನಾಟಕ ಇದೆ. ರಾಜಸ್ಥಾನದಲ್ಲಿ 31.5 ಗಿಗಾವ್ಯಾಟ್, ಗುಜರಾತ್​ನಲ್ಲಿ 28.3 ಗಿಗಾವ್ಯಾಟ್, ತಮಿಳುನಾಡಿನಲ್ಲಿ 23.7 ಗಿಗಾವ್ಯಾಟ್, ಕರ್ನಾಟಕದಲ್ಲಿ 22.3 ಗಿಗಾವ್ಯಾಟ್ ವಿದ್ಯುತ್ ಅನ್ನು ಮರುಬಳಕೆ ಇಂಧನದ ಮೂಲಕ ಉತ್ಪಾದಿಸುವ ವ್ಯವಸ್ಥೆ ಇದೆ.

ಈ ದತ್ತಾಂಶವನ್ನು ಬಹಿರಂಗಪಡಿಸಿರುವ ಕೇಂದ್ರೀಯ ವಿದ್ಯುತ್ ಪ್ರಾಧಿಕಾರಕ್ಕೆ ಇವತ್ತು (ಅ. 14) 50ನೇ ವರ್ಷದ ಸಂಭ್ರಮ. ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳಿಗೂ ಈ ಪ್ರಾಧಿಕಾರವು ತಾಂತ್ರಿಕ ನೆರವು ಒದಗಿಸುತ್ತದೆ. 1974ರಲ್ಲಿ ಆರಂಭವಾದ ಈ ಸಂಸ್ಥೆ ತನ್ನ ಸ್ವರ್ಣಮಹೋತ್ಸವದ ಸಂಭ್ರಮಾಚರಣೆ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2047ರಷ್ಟರಲ್ಲಿ ಸಂಪೂರ್ಣವಾಗಿ ಪರಿಸರಸ್ನೇಹಿ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದುವ ಗುರಿ ಇಟ್ಟಿದೆ.

ಜಾಗತಿಕವಾಗಿ ಮಂದ ವೇಗದಲ್ಲಿ ಸಾಗುತ್ತಿರುವ ರಿನಿವಬಲ್ ಎನರ್ಜಿ ಯೋಜನೆಗಳು

2030ರೊಳಗೆ ಜಾಗತಿಕವಾಗಿ ಮರುಬಳಕೆ ಇಂಧನ ಉತ್ಪಾದನಾ ಸಾಮರ್ಥ್ಯ 11,000 ಗಿಗಾವ್ಯಾಟ್ ತಲುಪುವ ಗುರಿ ಇಡಲಾಗಿದೆ. ಆದರೆ, ಈಗ ಜಾಗತಿಕವಾಗಿ ಇರುವ ರಿನಿವಬಲ್ ಎನರ್ಜಿ ಪ್ರಾಜೆಕ್ಟ್​ಗಳ ಗತಿ ಗಮನಿಸಿದರೆ 2030ರಲ್ಲಿ 9,760 ಗಿಗಾವ್ಯಾಟ್ ಮಾತ್ರವೇ ಸಾಧ್ಯವಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಮತ್ತು ವಿಶ್ವದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು? ಇಲ್ಲಿದೆ ಪಟ್ಟಿ

ಆದರೆ, ಸಮಸ್ಯೆ ಇರುವುದು ಮರುಬಳಕೆ ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತಿದ್ದರೂ ಆ ವಿದ್ಯುತ್ ಅನ್ನು ಸಾಗಿಸುವ ಗ್ರಿಡ್ ಕನೆಕ್ಷನ್ ಸಾಕಷ್ಟು ಇಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ