ಪಿಎಂ ಇಂಟರ್ನ್​ಶಿಪ್ ಸ್ಕೀಮ್​ಗೆ ಭರ್ಜರಿ ಸ್ಪಂದನೆ; ಒಂದೇ ದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ನೊಂದಣಿ

PM Internship scheme gets great response: ಪ್ರಧಾನಮಂತ್ರಿ ಇಂಟರ್ನ್​ಶಿಪ್ ಯೋಜನೆಯಲ್ಲಿ ಒಂದೇ ದಿನದಲ್ಲಿ 1.55 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. 193 ಕಂಪನಿಗಳು ಇಂಟರ್ನ್​ಶಿಪ್ ಅವಕಾಶ ನೀಡಿವೆ. ಒಂದು ಕೋಟಿ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಸಲುವಾಗಿ ಆರಂಭವಾದ ಈ ಯೋಜನೆ ನಿರೀಕ್ಷಿತ ರೀತಿಯಲ್ಲಿ ಒಳ್ಳೆಯ ಸ್ಪಂದನೆ ಪಡೆದಿದೆ.

ಪಿಎಂ ಇಂಟರ್ನ್​ಶಿಪ್ ಸ್ಕೀಮ್​ಗೆ ಭರ್ಜರಿ ಸ್ಪಂದನೆ; ಒಂದೇ ದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ನೊಂದಣಿ
ಯುವಜನರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 14, 2024 | 11:08 AM

ನವದೆಹಲಿ, ಅಕ್ಟೋಬರ್ 14: ಒಂದು ಕೋಟಿ ಯುವಕ ಮತ್ತು ಯುವತಿಯರಿಗೆ ನೈಜ ಉದ್ಯೋಗ ತರಬೇತಿ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾದ ಪಿಎಂ ಇಂಟರ್ನ್​ಶಿಪ್ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಸ್ಕೀಮ್​ನ ಪೋರ್ಟಲ್ ಆರಂಭವಾದ ಒಂದೇ ದಿನಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಸರ್ಕಾರ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ಮಾಡಿರುವ ವರದಿ ಪ್ರಕಾರ ಪೋರ್ಟಲ್​ನಲ್ಲಿ ಒಂದು ದಿನದಲ್ಲಿ ನೊಂದಾಯಿಸಿಕೊಂಡವರ ಸಂಖ್ಯೆ 1,55,109 ಇದೆ. ಎಲ್ ಅಂಡ್ ಟಿ, ರಿಲಾಯನ್ಸ್ ಸೇರಿದಂತೆ 193 ಕಂಪನಿಗಳು ಇದೇ ಪ್ಲಾಟ್​ಫಾರ್ಮ್​ನಲ್ಲಿ ಇಂಟರ್ನ್​ಶಿಪ್ ಅವಕಾಶವನ್ನು ಒದಗಿಸಿವೆ.

ಮಾರುತಿ ಸುಜುಕಿ, ಎಲ್ ಅಂಡ್ ಟಿ, ರಿಲಾಯನ್ಸ್ ಇಂಡಸ್ಟ್ರೀಸ್, ಮುತ್ತೂಟ್ ಫೈನಾನ್ಸ್, ಜುಬಿಲೆಂಟ್ ಫೂಡ್​ವರ್ಕ್ಸ್ ಇತ್ಯಾದಿ ಪ್ರಮುಖ ಖಾಸಗಿ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ತೈಲ ಅನಿಲ, ಹೋಟೆಲ್, ವಾಹನ, ಬ್ಯಾಂಕಿಂಗ್ ಮೊದಲಾದ ವಿವಿಧ ವಲಯಗಳ ಕಂಪನಿಗಳು ಈ ಯೋಜನೆಯಲ್ಲಿ ಕೈಜೋಡಿಸಿವೆ.

ಇದನ್ನೂ ಓದಿ: ಭಾರತದ ‘ಮಹಾರತ್ನ’ ಪಟ್ಟ ಗಿಟ್ಟಿಸಿದ ಎಚ್​ಎಎಲ್; ಈ ಗೌರವ ಸಿಗಲು ಮಾನದಂಡಗಳೇನು..?

ಇಂಟರ್ನ್​ಶಿಪ್ ಸ್ಕೀಮ್​ನಿಂದ ಏನು ಉಪಯೋಗ?

ವಿದ್ಯಾಭ್ಯಾಸ ಮುಗಿಸಿ ಇನ್ನೂ ಕೆಲಸಕ್ಕೆ ಸೇರದ, ಮತ್ತು ಕೌಶಲ್ಯ ಕೊರತೆಯಿಂದ ಕೆಲಸ ದೊರಕದ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಸರ್ಕಾರ ಇಂಟರ್ನ್​ಶಿಪ್ ಯೋಜನೆ ಜಾರಿಗೊಳಿಸಿದೆ. ಇಂಟರ್ನ್​ಗಳಾಗುವ ಮೂಲಕ ಒಂದು ವರ್ಷ ಕೆಲಸದ ಅನುಭವ ಗಿಟ್ಟಿಸಿ, ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಬಹುದು. ಟಾಪ್ 500 ಕಂಪನಿಗಳಲ್ಲಿ ಸಿಕ್ಕ ಕೆಲಸ ಅನುಭವವು ಅಭ್ಯರ್ಥಿಗಳಿಗೆ ಅಗತ್ಯ ಕೌಶಲ್ಯ ಮತ್ತು ಆತ್ಮವಿಶ್ವಾಸ ತಂದುಕೊಡುವ ನಿರೀಕ್ಷೆ ಇದೆ. ಇದೇ ಉದ್ದೇಶದಿಂದ ಸರ್ಕಾರ ಪಿಎಂ ಇಂಟರ್ನ್​ಶಿಪ್ ಸ್ಕೀಮ್ ಆರಂಭಿಸಿದೆ.

ಇದರಲ್ಲಿ ಅಭ್ಯರ್ಥಿಗಳಿಗೆ ಆರಂಭದಲ್ಲಿ ಲಂಪ್ಸಮ್ ಆಗಿ 6,000 ರೂ ನೀಡಲಾಗುತ್ತದೆ. ಆ ಬಳಿಕ ಸರ್ಕಾರ ಪ್ರತೀ ತಿಂಗಳು 4,500 ರೂ ಸಹಾಯಧನ ಒದಗಿಸುತ್ತದೆ. ಕಂಪನಿ ವತಿಯಿಂದ ಮಾಸಿಕ 500 ರೂವರೆಗೆ ಹಣವನ್ನು ನೀಡಬಹುದು. ಈ ತರಬೇತಿ ಸ್ಕೀಮ್ ಒಂದು ವರ್ಷದ ಅವಧಿ ಇರಲಿದ್ದು, ಒಬ್ಬ ಅಭ್ಯರ್ಥಿಗೆ 66,000 ರೂ ಧನಸಹಾಯ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಟಾಪ್ ಕಂಪನಿಗಳಲ್ಲಿ ತರಬೇತಿ, ಜೊತೆಗೆ ವರ್ಷಕ್ಕೆ 66,000 ರೂ ಕೊಡುಗೆ; ಶಿಕ್ಷಣ, ವಯಸ್ಸು ಇತ್ಯಾದಿ ಅರ್ಹತೆಗಳ ವಿವರ

ಈ ಯೋಜನೆಗೆಂದು ನಿರ್ದಿಷ್ಟವಾದ ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಇದರಲ್ಲಿ ಆಸಕ್ತ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಬಹುದು. ತಮ್ಮ ವಿದ್ಯಾಭ್ಯಾಸ ಹಾಗೂ ಕೆಲಸ ಮಾಡಲು ಇಚ್ಛಿಸುವ ಕ್ಷೇತ್ರಗಳನ್ನು ಆಯ್ದುಕೊಳ್ಳಬಹುದು. ಅದೇ ವೇಳೆ ಪ್ರಮುಖ ಕಂಪನಿಗಳು ತಮ್ಮಲ್ಲಿ ಇಂಟರ್ನ್​ಶಿಪ್ ಅವಕಾಶ ಇದ್ದರೆ ಅದನ್ನು ನಮೂದಿಸಬಹುದು. ಯಾವ ಇಂಟರ್ನ್​ಶಿಪ್ ಹುದ್ದೆಗಳಿಗೆ ಯಾವ ಅಭ್ಯರ್ಥಿಗಳು ಸೂಕ್ತ ಎಂಬುದನ್ನು ಪೋರ್ಟಲ್​ನಲ್ಲೇ ನಿರ್ಧರಿಸಿ, ಶಾರ್ಟ್​ಲಿಸ್ಟ್ ಮಾಡಲಾಗುತ್ತದೆ. ಕಂಪನಿಗಳು ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ದುಕೊಳ್ಳಬಹುದು.

ದೇಶಾದ್ಯಂತ 737 ಜಿಲ್ಲೆಗಳಲ್ಲಿ ಇಂಟರ್ನ್​ಶಿಪ್ ಸ್ಕೀಮ್ ಅಡಿಯಲ್ಲಿ ತರಬೇತಿ ಅವಕಾಶ ಇರಲಿದೆ. ಈ ಸ್ಕೀಮ್​ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 21ರಿಂದ 24 ವರ್ಷದೊಳಗಿರಬೇಕು. ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಇದೆ. ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ ಪದವೀಧರರೂ ಅರ್ಜಿ ಸಲ್ಲಿಸಬಹುದು. ಯಾವುದೇ ಕಂಪನಿಯಲ್ಲಿ ಪೂರ್ಣಾವಧಿ ಕೆಲಸ ಮಾಡಿರಕೂಡದು. ಇವೇ ಮುಂತಾದ ಕೆಲ ಷರತ್ತುಗಳಿವೆ. ಈ ಸ್ಕೀಮ್​ನ ಪೋರ್ಟಲ್​ನ ವಿಳಾಸ ಇಂತಿದೆ: pminternship.mca.gov.in

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ