India vs China: ಚೀನಾ ಕಂಡಂತಹ ಆರ್ಥಿಕ ಬೆಳವಣಿಗೆಯ ವೇಗ ಭಾರತದಿಂದ ಅಸಾಧ್ಯ: ಮಾರ್ಗನ್ ಸ್ಟಾನ್ಲೀ

|

Updated on: Mar 19, 2024 | 10:14 AM

Morgan Stanley Chief Asia Economist Chetan Ahya: 1978ರ ಬಳಿಕ ಮೂರು ದಶಕಗಳ ಕಾಲ ಚೀನಾ ಸಾಧಿಸಿದ ಆರ್ಥಿಕ ಬೆಳವಣಿಗೆಯ ಮಟ್ಟವನ್ನು ಭಾರತ ಮುಟ್ಟುವುದು ಕಷ್ಟ ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ಆರ್ಥಿಕ ತಜ್ಞ ಚೇತನ್ ಆಹ್ಯಾ ಅಭಿಪ್ರಾಯಪಟ್ಟಿದ್ದಾರೆ. ಆ ಮೂರು ದಶಕದಲ್ಲಿ ಚೀನಾದ ಆರ್ಥಿಕ ಬೆಳವಣಿಗೆ ಸರಾಸರಿ ಶೇ. 10ರಷ್ಟು ಇತ್ತು. ಭಾರತ ಆ ಮಟ್ಟದಲ್ಲಿ ಬೆಳೆಯಲು ಆಗುವುದಿಲ್ಲ. ಆದರೆ, ಭಾರತ ಶೇ. 6.5ರಿಂದ ಶೇ. 7ರಷ್ಟು ಜಿಡಿಪಿ ಬೆಳೆಯಬಹುದು ಎಂದು ಹೇಳಿದ್ದಾರೆ.

India vs China: ಚೀನಾ ಕಂಡಂತಹ ಆರ್ಥಿಕ ಬೆಳವಣಿಗೆಯ ವೇಗ ಭಾರತದಿಂದ ಅಸಾಧ್ಯ: ಮಾರ್ಗನ್ ಸ್ಟಾನ್ಲೀ
ಚೀನಾದ ಜಿಡಿಪಿ
Follow us on

ನವದೆಹಲಿ, ಮಾರ್ಚ್ 19: ಚೀನಾದ ದೇಶ ದಶಕಗಳ ಕಾಲ ಸಾಧಿಸಿದ ಶೇ. 8ರಿಂದ 10ರ ಆರ್ಥಿಕ ಬೆಳವಣಿಗೆಯನ್ನು (China economic growth) ಭಾರತ ಸರಿಗಟ್ಟಲು ಆಗುವುದಿಲ್ಲ ಎಂದು ಜಾಗತಿಕ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್ ದೈತ್ಯ ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ಆರ್ಥಿಕ ತಜ್ಞ ಚೇತನ್ ಆಹ್ಯಾ (Chetan Ahya) ಅಭಿಪ್ರಾಯಪಟ್ಟಿದ್ದಾರೆ. 1978ರಲ್ಲಿ ಚೀನಾ ತನ್ನ ಆರ್ಥಿಕತೆಯಲ್ಲಿ ಸುಧಾರಣೆಗಳನ್ನು ತಂದಿತು. ಅದಾದ ಬಳಿಕ ಮೂರು ದಶಕಗಳ ಕಾಲ ಚೀನಾದ ಸರಾಸರಿ ಜಿಡಿಪಿ ಬೆಳವಣಿಗೆ ಶೇ. 10ರಷ್ಟು ಇದೆ. ಇಷ್ಟು ಮಟ್ಟದಲ್ಲಿ ಭಾರತ ಬೆಳೆಯುವುದು ಕಷ್ಟ ಎಂಬುದು ಇವರ ಅನಿಸಿಕೆ. ಆದರೆ, ಚೀನಾದ ಆ ಮಟ್ಟದಲ್ಲಿ ಅಲ್ಲದಿದ್ದರೂ ಭಾರತ ದೀರ್ಘಾವಧಿಯಲ್ಲಿ ಉತ್ತಮ ಎನಿಸಬಹುದಾದ ಶೇ. 6.5ರಿಂದ 7ರಷ್ಟು ಬೆಳವಣಿಗೆ ಹೊಂದಬಹುದು ಎಂದು ಅವರು ಹೇಳುತ್ತಾರೆ.

ಭಾರತಕ್ಕೆ ಶೇ. 10ರ ಬೆಳವಣಿಗೆ ಯಾಕೆ ಸಾಧ್ಯವಿಲ್ಲ?

ಮಾರ್ಗನ್ ಸ್ಟಾನ್ಲೀಯ ಚೀಫ್ ಏಷ್ಯಾ ಇಕನಾಮಿಸ್ಟ್ ಆಗಿರುವ ಚೇತನ್ ಆಹ್ಯಾ, ಚೀನಾದ ಮಟ್ಟಕ್ಕೆ ಭಾರತ ಸದ್ಯಕ್ಕೆ ಯಾಕೆ ಬೆಳವಣಿಗೆ ಹೊಂದಲು ಸಾಧ್ಯ ಇಲ್ಲ ಎಂಬುದಕ್ಕೆ ಎರಡು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಒಂದು, ಮೂಲಸೌಕರ್ಯ ಅಥವಾ ಇನ್​ಫ್ರಾಸ್ಟ್ರಕ್ಚರ್ ಕೊರತೆ. ಮತ್ತೊಂದು ಕೌಶಲ್ಯವಂತ ಉದ್ಯೋಗಿಗಳ ಕೊರತೆ. ಈ ಎರಡು ಅಂಶಗಳು ಭಾರತದ ಆರ್ಥಿಕ ಬೆಳವಣಿಗೆಯ ಓಟಕ್ಕೆ ತೊಡರುಗಾಲಾಗಬಹುದು. ಶೇ. 8ರಿಂದ 10ರ ಬದಲು ಶೇ. 6.5ರಿಂದ ಶೇ. 7ಕ್ಕೆ ಜಿಡಿಪಿ ದರ ದೀರ್ಘಾವಧಿಯಲ್ಲಿ ಸಾಗಬಹುದು ಎಂದಿದ್ದಾರೆ.

ಆದರೆ, ಈಗ ಭಾರತ ಕಳೆದ ಎರಡು ವರ್ಷದಿಂದ ಸಾಧಿಸುತ್ತಿರುವ ಆರ್ಥಿಕ ಬೆಳವಣಿಗೆ ಬಹಳ ಜನರ ಗಮನ ಸೆಳೆದಿದೆ. ಶೇ. 7ರಿಂದ 8ರ ದರದಲ್ಲಿ ಜಿಡಿಪಿ ಹೆಚ್ಚುತ್ತಿದೆ. ಇಪತ್ತು ವರ್ಷದ ಹಿಂದೆ (2000ರ ದಶಕದ ಮಧ್ಯಭಾಗದ ಸಂದರ್ಭ) ಇದ್ದಂತಹ ಆರ್ಥಿಕ ಬೆಳವಣಿಗೆಗೆ ಈಗಿನದ್ದನ್ನು ಇವರು ಹೋಲಿಸಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ನೇರ ಫ್ಲೈಟ್; ಮಾರ್ಚ್ 31ರಿಂದ ಇಂಡಿಗೋದಿಂದ ವಿಮಾನ ಹಾರಾಟ

ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲು ಸಾಧ್ಯವಿಲ್ಲ

ಜಾಗತಿಕ ಉತ್ಪಾದನಾ ಕೇಂದ್ರವಾಗುವ ಪೈಪೋಟಿಯಲ್ಲಿ ಚೀನಾವನ್ನು ಭಾರತ ಹಿಂದಿಕ್ಕುವ ಸಾಧ್ಯತೆ ಬಹಳ ಕಡಿಮೆ ಎಂದೂ ಮಾರ್ಗನ್ ಸ್ಟಾನ್ಲೀಯ ಆರ್ಥಿಕ ತಜ್ಞ ಚೇತನ್ ಆಹ್ಯಾ ಹೇಳಿದ್ದಾರೆ. ಭಾರತಕ್ಕೆ ತನ್ನದೇ ಸ್ಥಾನ ಸಿಗುತ್ತದೆ. ಬಂಡವಾಳ ಒಳಹರಿವು ಹೆಚ್ಚಇರುವುದು, ಎಫ್​ಡಿಐ ಹೆಚ್ಚು ಬರುತ್ತಿರುವುದು ಇವೆಲ್ಲವೂ ಆರ್ಥಿಕ ಬೆಳವಣಿಗೆ ಹೆಚ್ಚುತ್ತಿರುವುದರ ಸೂಚನೆ. ಆದರೆ, ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನಲ್ಲಿ ಚೀನಾವನ್ನು ಭಾರತ ಹಿಂದಿಕ್ಕುತ್ತದೆ ಅಥವಾ ಪ್ರಬಲ ಪೈಪೋಟಿ ನೀಡುತ್ತದೆ ಎನ್ನುವುದು, ಹಾಗಾಗುವುದಿಲ್ಲ,’ ಎಂಬುದು ಚೇತನ್ ಆಹ್ಯಾ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ