Nitin Gadkari: 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆಗೆ ಇರುವುದಿಲ್ಲ ಎಂದ ನಿತಿನ್ ಗಡ್ಕರಿ

| Updated By: Srinivas Mata

Updated on: Jul 09, 2022 | 7:38 PM

ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆಗೆ ಇರುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

Nitin Gadkari: 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆಗೆ ಇರುವುದಿಲ್ಲ ಎಂದ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
Follow us on

ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆಗೆ ಇರುವುದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಅವರಿಗೆ ಇತ್ತೀಚೆಗೆ ಡಾಕ್ಟರ್ ಆಫ್ ಸೈನ್ಸ್ (ಡಿಎಸ್‌ಸಿ) ಗೌರವ ಪದವಿಯನ್ನು ನೀಡಲಾಯಿತು ಮತ್ತು ಈ ಸಮಾರಂಭದಲ್ಲಿ ಕೇಂದ್ರ ಸಚಿವರು ಹೀಗೆ ಹೇಳಿದ್ದಾರೆ. ವರದಿಯೊಂದರ ಪ್ರಕಾರ, ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿನ ಎಲ್ಲ ಪೆಟ್ರೋಲ್ ಖಾಲಿಯಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಆ ನಂತರ ದೇಶದಲ್ಲಿ ಫಾಸಿಲ್ ಇಂಧನವನ್ನು ನಿಷೇಧಿಸಲಾಗುವುದು.

ಪೆಟ್ರೋಲ್‌ಗೆ ಪರ್ಯಾಯವಾಗಿ ದೇಶವು ಶೀಘ್ರದಲ್ಲೇ ಹಸಿರು ಇಂಧನಗಳಿಗೆ ಬದಲಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಮತ್ತು ಇದು ಜೈವಿಕ ಇಂಧನವನ್ನು ಸಹ ಒಳಗೊಂಡಿರುತ್ತದೆ ಎಂದು ವರದಿ ಹೇಳಿದೆ. ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ರೈತರಿಂದ ತಯಾರಿಸಲಾಗುತ್ತಿರುವ ಜೈವಿಕ ಎಥೆನಾಲ್‌ನ ಉದಾಹರಣೆಯನ್ನು ನೀಡಿದ ಗಡ್ಕರಿ, ರೈತರು ಕೇವಲ ಆಹಾರ ಪೂರೈಕೆದಾರರಾಗಿರದೆ ಇಂಧನ ಪೂರೈಕೆದಾರರಾಗಿ ಕೊಡುಗೆ ನೀಡಬಹುದು. ಹಸಿರು ಹೈಡ್ರೋಜನ್ ಅನ್ನು ಪರ್ಯಾಯ ಇಂಧನವಾಗಿಯೂ ಬಳಸಬಹುದು. ಮತ್ತು ಆಳವಾದ ಬಾವಿಯ ನೀರಿನಿಂದ ತಯಾರಿಸಿ, ಕೇಜಿಗೆ 70 ರೂ.ನಂತೆ ಮಾರಾಟ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಗಡ್ಕರಿ ಅವರು ವಿದ್ಯುತ್ ವಾಹನಗಳಿಗೆ ವಿದ್ಯುತ್ ಮತ್ತು ಪರ್ಯಾಯ ಇಂಧನಗಳನ್ನು ಬಳಸುವ ಮುಕ್ತ ಬೆಂಬಲಿಗರಾಗಿದ್ದಾರೆ. ಕೇಂದ್ರ ಸಚಿವರು ಇತ್ತೀಚೆಗೆ ಮಾತನಾಡಿ, ಎಲೆಕ್ಟ್ರಿಕ್ ವಾಹನಗಳ ಬೆಲೆಯು ಮುಂದಿನ ಎರಡು ವರ್ಷಗಳಲ್ಲಿ ಪೆಟ್ರೋಲ್ ಬಳೆಯಲ್ಲಿರುವ ಕಾರುಗಳಿಗೆ ಸಮನಾಗಿರುತ್ತದೆ ಎಂದಿದ್ದಾರೆ. ಟೊಯೋಟಾದ ಹೈಡ್ರೋಜನ್ ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ), ಮಿರಾಯ್ ಕುರಿತು ಪ್ರಾಯೋಗಿಕ ಅಧ್ಯಯನವನ್ನು ಪ್ರಾರಂಭಿಸಿದ್ದಕ್ಕೆ ಚಾಲನೆ ನೀಡಿದ್ದಾರೆ. ಇವುಗಳಲ್ಲಿ ಎಷ್ಟು ಕ್ಲೇಮ್​ಗಳು ಕಾರ್ಯರೂಪಕ್ಕೆ ಬರುತ್ತವೆ ಎಂಬುದನ್ನು ನೋಡಬೇಕಾಗಿದೆ.