
ಭಾರತ ಕೃಷಿ ಪ್ರಧಾನ ದೇಶ. ಕಳೆದ ಕೆಲವು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇತರ ವಲಯಗಳಂತೆ, ಈ ಕ್ಷೇತ್ರವೂ ಡಿಜಿಟಲೀಕರಣಗೊಳ್ಳುತ್ತಿದೆ. ಬೆಳೆಗಳ ಖರೀದಿ ಮತ್ತು ಮಾರಾಟದಿಂದ ಹಿಡಿದು ವಿವಿಧ ರೀತಿಯ ಮಾಹಿತಿಯನ್ನು ಸಂಗ್ರಹಿಸಲು ಡಿಜಿಟಲ್ ಮತ್ತು ಡೇಟಾವನ್ನು ಬಳಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ಮಹತ್ವದ ಕುರಿತು ಪತಂಜಲಿ ಸಂಶೋಧನಾ ಸಂಸ್ಥೆ (Patanjali Research) ಸಂಶೋಧನೆ ಮಾಡಿದೆ. ಕೃಷಿಯಲ್ಲಿ ಡಿಜಿಟಲ್ ಮತ್ತು ಡೇಟಾ ಆಧಾರಿತ ತಂತ್ರಜ್ಞಾನಗಳನ್ನು (Digital technology) ಹೇಗೆ ಬಳಸುವುದು ಮತ್ತು ಅದರಿಂದ ಪ್ರಯೋಜನಗಳೇನು, ಡಾಟಾ ವಿಶ್ಲೇಷಣೆಯ ನೆರವು ಪಡೆಯುವುದು ಹೇಗೆ ಎಂದು ಸಂಶೋಧನೆ ತೋರಿಸಿದೆ.
ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಬಹಳ ಅನುಕೂಲ ಮಾಡಿಕೊಡುತ್ತದೆ. ಇದು ಉತ್ಪಾದಕತೆಯನ್ನು ಹೆಚ್ಚಿಸಬಹುದು. AI/ML ಅಲ್ಗಾರಿದಮ್‌ಗಳ ಮೇಲೆ ನಿರ್ಮಿಸಲಾದ ರಿಮೋಟ್ ಸೆನ್ಸಿಂಗ್, ಸ್ಮಾರ್ಟ್ ಸೆನ್ಸರ್‌ಗಳು ಮತ್ತು IoT-ಆಧಾರಿತ ಸಾಧನಗಳಂತಹ ಡೇಟಾ-ಚಾಲಿತ ತಂತ್ರಜ್ಞಾನಗಳು ಕೃಷಿಯ ಮೂಲಭೂತ ಅಂಶವಾಗಿ ಮಾರ್ಪಟ್ಟಿವೆ. ಇದು ರೈತರಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಡಿಜಿಟಲ್ ಕೃಷಿಯಿಂದ ನಿರ್ಧಾರ ತೆಗೆದುಕೊಳ್ಳುವಿಕೆಯು ಸುಲಭಗೊಳ್ಳುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಇದರ ಪ್ರಯೋಜನಗಳನ್ನು ಗಮನಿಸಿದರೆ, ಭವಿಷ್ಯದಲ್ಲಿ ಇದರ ಪಾತ್ರ ಮುಖ್ಯವಾಗಿರಬಹುದು ಎಂದನಿಸುತ್ತದೆ.
ಇದನ್ನೂ ಓದಿ: ಹಣ್ಣು, ತರಕಾರಿಯಲ್ಲಿ ಕೀಟನಾಶಕ ಪತ್ತೆ ಮಾಡಲು ಬಯೋಸೆನ್ಸರ್ಗಳ ಪಾತ್ರ ಎಷ್ಟು? ಪತಂಜಲಿ ಕುತೂಹಲಕಾರಿ ಸಂಶೋಧನೆ
ಭಾರತೀಯ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಯು ಇನ್ನೂ ಆರಂಭಿಕ ಹಂತದಲ್ಲಿದೆ. ಅಂತರರಾಷ್ಟ್ರೀಯವಾಗಿ ಲಭ್ಯವಿರುವ ತಂತ್ರಜ್ಞಾನ ಆವಿಷ್ಕಾರಗಳಿಗೆ ಹೋಲಿಸಿದರೆ ಭಾರತ ಇನ್ನೂ ಕಡಿಮೆ ವಿಕಸಿತ ಸ್ಥಿತಿಯಲ್ಲಿದೆ. ಆದರೂ ಕೂಡ ಭಾರತದ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಟೆಕ್ನಾಲಜಿ ಬಹಳ ವೇಗದಲ್ಲಿ ಬೆಳೆಯುತ್ತಿರುವುದು ಹೌದು. ಭಾರತೀಯ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಪಾತ್ರ ಮುಂಬರುವ ದಿನಗಳಲ್ಲಿ ಗಮನೀಯವಾಗಿರುತ್ತದೆ. ಕ್ಷೇತ್ರದ ಮತ್ತು ಕೃಷಿಕರ ಯಶಸ್ಸಿಗೆ ಇದು ಎಡೆ ಮಾಡಿಕೊಡಬಹುದು. ಡಿಜಿಟಲ್ ತಂತ್ರಜ್ಞಾನದ ಭಾಗವಾದ ಡೇಟಾ ಅನಾಲಿಟಿಕ್ಸ್ ಅನ್ನು ಬಳಸಿಕೊಂಡು ಸಂಪನ್ಮೂಲಗಳನ್ನು ಸಮರ್ಪಕವಾಗಿ ನಿರ್ವಹಿಸಬಹುದು.
ಸಂಶೋಧನೆಯ ಪ್ರಕಾರ, ಕೃಷಿಯಲ್ಲಿ ಡಾಟಾ ಅನಾಲಿಟಿಕ್ಸ್ ಅಥವಾ ದತ್ತಾಂಶ ವಿಶ್ಲೇಷಣೆಯನ್ನು ಸರಿಯಾಗಿ ಬಳಕೆ ಮಾಡಿದರೆ ಹಲವು ಪ್ರಯೋಜನಗಳಿವೆ. ಇದು ಈ ವಲಯದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಜೊತೆಗೆ ಆರ್ಥಿಕ ಯಶಸ್ಸಿಗೂ ಅವಕಾಶ ಕೊಡುತ್ತದೆ. ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಕೃಷಿ ಉದ್ಯಮದಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಬಳಸುವುದು ಅವಶ್ಯಕ.
ಇದನ್ನೂ ಓದಿ: ಪತಂಜಲಿಯಿಂದ ನ್ಯಾನೋಟೆಕ್ನಾಲಜಿ ಮತ್ತು ಕೋವಿಡ್ ಬಗ್ಗೆ ಸಂಶೋಧನೆ; ಅಚ್ಚರಿ ಫಲಿತಾಂಶ ಬಹಿರಂಗ
ನಾಲ್ಕನೇ ಕೈಗಾರಿಕಾ ಕ್ರಾಂತಿ ಅಥವಾ ‘ಇಂಡಸ್ಟ್ರಿ 4.0’ ಜೊತೆಗೆ ಡಿಜಿಟಲ್ ಕೃಷಿ ಕ್ರಾಂತಿಯೂ ಆಗುತ್ತಿದೆ. ಹಸಿರು ಕ್ರಾಂತಿ ಬಳಿಕ ಈ ಡಿಜಿಟಲ್ ಕ್ರಾಂತಿಯು ಭಾರತೀಯ ಕೃಷಿಗೆ ಮಹತ್ವದ್ದೆನಿಸಿದೆ. ಈ ಡಿಜಿಟಲ್ ತಂತ್ರಜ್ಞಾನಗಳು ಸಣ್ಣ ರೈತರನ್ನು ಡಿಜಿಟಲ್ ಚಾಲಿತ ಕೃಷಿ-ಆಹಾರ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲು ಹೊಸ ಅವಕಾಶಗಳನ್ನು ನೀಡುತ್ತವೆ. ಇದರಲ್ಲಿ ಡೇಟಾ-ಚಾಲಿತ ವ್ಯವಸ್ಥೆಗಳಿಂದ ಡೇಟಾ ವಿಶ್ಲೇಷಣೆಯನ್ನು ಬಳಸಿಕೊಂಡು ಜಮೀನುಗಳಿಗೆ ನೀರು, ಪೋಷಕಾಂಶ, ರಸಗೊಬ್ಬರ ಇತ್ಯಾದಿ ಇನ್ಪುಟ್ಗಳನ್ನು ಸೂಕ್ತ ಕಾಲಕ್ಕೆ ನೀಡಲು ನೆರವಾಗಬಲ್ಲುದು
ಡಿಜಿಟಲ್ ಕೃಷಿಯು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಬಹುದು. ಸಂಪನ್ಮೂಲಗಳ ಉತ್ತಮ ಬಳಕೆಗೆ ಸಹಾಯ ಮಾಡಬಹುದು. ಇದು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡಬಹುದು.
ಇದನ್ನೂ ಓದಿ: ಮಲ್ಲಿಗೆ ಹೂವೇ ನಿನ್ನ ಔಷಧದ ಗುಣ ಎಂಥ ಚೆನ್ನ..! ಪತಂಜಲಿ ಸಂಶೋಧನೆಯಲ್ಲಿ ಅಚ್ಚರಿ ಫಲಿತಾಂಶ
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ರೈತರ ಆದಾಯವನ್ನು ಹೆಚ್ಚಿಸುವಂತಹ ಡಿಜಿಟಲ್ ಕೃಷಿಯ ಹಲವು ಅವಕಾಶಗಳಿವೆ. ಹಾಗೆಯೇ, ಹಲವು ಸವಾಲುಗಳನ್ನು ಸಹ ಹೊಂದಿದೆ. ತಾಂತ್ರಿಕ ಜ್ಞಾನದ ಕೊರತೆ ಮತ್ತು ಮೂಲಸೌಕರ್ಯದ ಕೊರತೆ ಇದೆ. ಆದರೆ ನಾವು ಈ ಸವಾಲುಗಳನ್ನು ದಾಟಿದರೆ, ಭವಿಷ್ಯದಲ್ಲಿ ಸಾಕಷ್ಟು ಸಕಾರಾತ್ಮಕ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Tue, 29 April 25