ಅಮೆರಿಕ 2, ಭಾರತ 6; ಟಾಂಟ್ ಕೊಟ್ಟ ಪೀಯೂಶ್ ಗೋಯಲ್; ಯಾರದ್ದು ಸತ್ತ ಆರ್ಥಿಕತೆ?
Piyush Goyal once again shows data of Indian economic resilience: ಭಾರತವನ್ನು ಸತ್ತ ಆರ್ಥಿಕತೆ ಎಂದು ಕರೆದಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಸಚಿವ ಪೀಯೂಶ್ ಗೋಯಲ್ ಮತ್ತೊಮ್ಮೆ ಟಾಂಟ್ ಕೊಟ್ಟಿದ್ದಾರೆ. ಭಾರತ ಬಹಳ ವೇಗದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂದು ಹೇಳಿದ್ದ ಅವರು ಈಗ ಐಎಂಎಫ್ ದತ್ತಾಂಶ ಮುಂದಿಟ್ಟಿದ್ದಾರೆ. ಈ ದತ್ತಾಂಶದ ಪ್ರಕಾರ 2026ರಲ್ಲಿ ಅಮೆರಿಕದ ಆರ್ಥಿಕತೆ ಶೇ. 2, ಭಾರತದ ಆರ್ಥಿಕತೆ ಶೇ. 6.4 ಬೆಳೆಯುತ್ತದೆ ಎಂದಿದೆ.

ನವದೆಹಲಿ, ಆಗಸ್ಟ್ 3: ಭಾರತವನ್ನು ಸತ್ತ ಆರ್ಥಿಕತೆ ಎಂದು ಹಂಗಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಅವರ ಹೆಸರೆತ್ತದೆಯೇ ಸಚಿವ ಪೀಯುಶ್ ಗೋಯಲ್ (Piyush Goyal) ತಿರುಗೇಟು ನೀಡಿದ್ದಾರೆ. ಭಾರತದ ಆರ್ಥಿಕತೆ ಎಷ್ಟು ಜೀವಂತವಾಗಿದೆ, ಎಷ್ಟು ವೇಗವಾಗಿ ಸಾಗುತ್ತಿದೆ ಎನ್ನುವುದನ್ನು ಹಾಗು ಇದಕ್ಕೆ ಹೋಲಿಸಿದರೆ ಅಮೆರಿಕದ ಆರ್ಥಿಕತೆ ಎಷ್ಟು ಮಂದದಲ್ಲಿ ಸಾಗುತ್ತಿದೆ ಎನ್ನುವುದನ್ನು ಐಎಂಎಫ್ನ ದತ್ತಾಂಶದ ಉಲ್ಲೇಖಿಸಿ ಗೋಯಲ್ ಎತ್ತಿ ತೋರಿಸಿದ್ದಾರೆ.
‘ಭಾರತದ ಆರ್ಥಿಕತೆ ಹುಲುಸಾಗಿ ಬೆಳೆಯುತ್ತಿದೆ’ ಎಂದು ಎಕ್ಸ್ ಪೋಸ್ಟ್ನಲ್ಲಿ ವಾಣಿಜ್ಯ ಸಚಿವರು ಬರೆದಿದ್ದಾರೆ. ಅದೇ ಪೋಸ್ಟ್ನಲ್ಲಿ ಅವರು ಐಎಂಎಫ್ನ ಜಾಗತಿಕ ಆರ್ಥಿಕ ಬೆಳವಣಿಗೆಯ ಅಂದಾಜು ಮಾಡಲಾಗಿರುವ ದತ್ತಾಂಶವನ್ನೂ ಹಂಚಿಕೊಂಡಿದ್ದಾರೆ.
ಪಿಯೂಶ್ ಗೋಯಲ್ ಅವರ ಎಕ್ಸ್ ಪೋಸ್ಟ್
India’s economy is THRIVING 🇮🇳 pic.twitter.com/HhO9eJisPr
— Piyush Goyal (@PiyushGoyal) August 3, 2025
ಆ ದತ್ತಾಂಶದಲ್ಲಿ 2026ರವರೆಗಿನ ಆರ್ಥಿಕ ಮುನ್ನೋಟ ಅಥವಾ ಅಂದಾಜನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಾಡಿದೆ. ಅದರ ಪ್ರಕಾರ 2026ರಲ್ಲಿ ಭಾರತದ ಜಿಡಿಪಿ ಶೇ. 6.4ರಷ್ಟು ಬೆಳೆಯಬಹುದು ಎಂದಿದೆ. ವಿಶ್ವದ ಯಾವುದೇ ಇತರ ಪ್ರಮುಖ ಆರ್ಥಿಕತೆಯ ದೇಶಗಳು ಈ ವೇಗದಲ್ಲಿ ಬೆಳೆಯುವ ಸಾಧ್ಯತೆ ಇಲ್ಲ.
ಇದನ್ನೂ ಓದಿ: ಭಾರತದಲ್ಲಿ ಅನುಮೋದಿತ ಸೆಮಿಕಂಡಕ್ಟರ್ ಯೋಜನೆಗಳಿಂದ 2,400 ಕೋಟಿ ಚಿಪ್ ತಯಾರಿಕೆ ಸಾಧ್ಯ; ಬೇರೆ ದೇಶಗಳಿಗೆ ಹೋಲಿಸಿದರೆ?
ಚೀನಾ ಶೇ. 4.2ರ ಬೆಳವಣಿಗೆಯೊಂದಿಗೆ ಭಾರತದ ಸಮೀಪದಲ್ಲೇ ಇದೆ. ಏಷ್ಯಾದ ಉದಯೋನ್ಮುಖ ಆರ್ಥಿಕತೆಗಳು ಶೇ. 5ರ ಸಮೀಪದಷ್ಟು ಬೆಳವಣಿಗೆ ಹೊಂದಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.
ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಹಾಗು ರಷ್ಯಾ ದೇಶಗಳನ್ನು ಸತ್ತ ಆರ್ಥಿಕತೆಗಳೆಂದು ಕುಹಕವಾಡಿದ್ದರು. ಇವೆರಡು ಸತ್ತ ಆರ್ಥಿಕತೆಗಳು ಒಂದಾಗಿ ನೆಲಕಚ್ಚಲಿ ಎಂದು ಶಪಿಸಿದ್ದರು.
ಇದನ್ನೂ ಓದಿ: ಅಂದು ದುರ್ಬಲ ಐದು, ಇಂದು ಪ್ರಬಲ ಐದು: ಟ್ರಂಪ್ರ ‘ಸತ್ತ’ ಆರ್ಥಿಕತೆಯ ಟಾಂಟ್ಗೆ ಭಾರತ ತಿರುಗೇಟು
ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾದೊಂದಿಗೆ ಭಾರತ ಬ್ಯುಸಿನೆಸ್ ಮಾಡುತ್ತಿದೆ ಎಂಬುದು ಡೊನಾಲ್ಡ್ ಟ್ರಂಪ್ ಅವರಿಗಿರುವ ಕೆಂಗಣ್ಣು. ಭಾರತ ತನ್ನ ಕೆಲ ಮಾರುಕಟ್ಟೆಗಳನ್ನು ರಕ್ಷಿಸುತ್ತಿದೆ ಎನ್ನುವ ಅಸಮಾಧಾನವೂ ಅಮೆರಿಕಕ್ಕೆ ಇದೆ. ಇದೇ ಕಾರಣಕ್ಕೆ ಭಾರತದ ಮೇಲೆ ಟ್ರಂಪ್ ಶೇ. 25ರಷ್ಟು ಆಮದು ಸುಂಕವನ್ನು ಪ್ರಕಟಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








