AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರು ಮತ್ತು ಚೀನೀ ಮಾರಾಟಗಾರರ ಮನೋಭಾವದಲ್ಲಿ ವ್ಯತ್ಯಾಸವೇನು? ಭಾರತೀಯ ಉದ್ಯಮಿಯ ನೇರ ಅನಿಸಿಕೆ

Chanakya Shah compares Indian and Chinese vendors: ಹೆಲ್ತ್ ಡ್ರಿಂಕ್ ಕಂಪನಿಯಾದ ಅಪ್ ಅಂಡ್ ರನ್​ನ ಸಂಸ್ಥಾಪಕ ಚಾಣಕ್ಯ ಷಾ ಅವರು ಎಕ್ಸ್​ನಲ್ಲಿ ಮೊನ್ನೆ ಹಾಕಿದ ಪೋಸ್ಟ್ ವೈರಲ್ ಆಗಿದೆ. ತಮ್ಮ ಈ ಪೋಸ್ಟ್​ನಲ್ಲಿ ಶಾ ಅವರು ಭಾರತ ಹಾಗೂ ಚೀನಾದ ಸಪ್ಲಯರ್​​ಗಳ ನಡುವಿನ ವ್ಯತ್ಯಾಸವನ್ನು ಎತ್ತಿತೋರಿಸಿದ್ದಾರೆ. ಚೀನೀಯರಿಗಿರುವ ಚುರುಕುತನ, ಶಿಸ್ತ ಮತ್ತು ಬದ್ಧತೆ ಭಾರತೀಯ ವೆಂಡರ್​​ಗಳಿಗೆ ಇಲ್ಲ ಎಂದು ಹೇಳಿದ್ದಾರೆ.

ಭಾರತೀಯರು ಮತ್ತು ಚೀನೀ ಮಾರಾಟಗಾರರ ಮನೋಭಾವದಲ್ಲಿ ವ್ಯತ್ಯಾಸವೇನು? ಭಾರತೀಯ ಉದ್ಯಮಿಯ ನೇರ ಅನಿಸಿಕೆ
ಚೀನಾ ಧ್ವಜ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 27, 2025 | 3:04 PM

Share

ನವದೆಹಲಿ, ನವೆಂಬರ್ 27: ಭಾರತ ಮತ್ತು ಚೀನಾ (China) ಸಾಂಸ್ಕೃತಿಕವಾಗಿ ಸಾಮೀಪ್ಯ ಇರುವ ದೇಶಗಳು. ಆದರೆ, ಉದ್ಯಮ ಕ್ಷೇತ್ರಕ್ಕೆ ಬಂದರೆ ಬಹಳ ಅಂತರ ಇದೆ. ಭಾರತದ ಉದ್ಯಮಿಯೊಬ್ಬರು ಎರಡೂ ದೇಶಗಳ ನಡುವೆ ಬ್ಯುಸಿನೆಸ್ ಕ್ಷೇತ್ರದಲ್ಲಿ ಎಂತಹ ವ್ಯತ್ಯಾಸ ಇದೆ ಎಂದು ನಿದರ್ಶನ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಅಪ್ ಅಂಡ್ ರನ್ ಎನ್ನುವ ಕಂಪನಿಯ ಸಂಸ್ಥಾಪಕರಾದ ಚಾಣಕ್ಯ ಶಾ (Chanakya Shah) ಅವರ ಪ್ರಕಾರ ಭಾರತೀಯರಿಗೆ ಹೋಲಿಸಿದರೆ ಚೀನೀಯರು ಹೆಚ್ಚು ಬದ್ಧತೆ ಇರುವ ಜನ. ವೇಗ, ಶಿಸ್ತು ಮತ್ತು ವೃತ್ತಿಪರತೆ ಉಳ್ಳವರು.

‘ಚೈನೀ ವೆಂಡರ್​ಗಳು (ಮಾರಾಟಗಾರರು) ಬಹಳ ಚುರುಕು, ಶಿಸ್ತು, ಹಾಗೂ ತಮ್ಮ ಬ್ಯುಸಿನೆಸ್ ಬಗ್ಗೆ ಗಂಭೀರವಾಗಿರುವವರು. ನೀವು ಅವರಿಗೆ ಯಾವುದೇ ದಿನ ಅಥವಾ ಸಮಯ ಮೆಸೇಜ್ ಮಾಡಿದರೂ ಕ್ಷಣಗಳಲ್ಲಿ ಉತ್ತರ ಕೊಡುತ್ತಾರೆ. ಅವರ ಈ ಧೋರಣೆಯು ಇತರ ಜನರಿಗಿಂತ ಅವರನ್ನು ವಿಶೇಷವಾಗಿಸುತ್ತದೆ’ ಎಂದು ಎನರ್ಜಿ ಡ್ರಿಂಕ್ಸ್ ಸೆಕ್ಟರ್​ನ ಅಪ್ ಅಂಡ್ ಗೋ ಕಂಪನಿಯ ಸಂಸ್ಥಾಪಕರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿರಳ ಭೂ ಖನಿಜ ಹಿಡಿದು ಅಮೆರಿಕವನ್ನೂ ಬಗ್ಗಿಸುತ್ತಿರುವ ಚೀನಾ; 7,280 ಕೋಟಿ ರೂನ ಭಾರತದ ಪ್ಲಾನ್ ಹಿಂದಿದೆ ದೂರದೃಷ್ಟಿ

‘ಚೀನೀ ಮಾರಾಟಗಾರರಿಂದ ನಿಮಗೆ ಒಳ್ಳೆಯ ಬೆಲೆ, ವೇಗದ ಬೆಂಬಲ ಸಿಗುತ್ತದೆ. ಅವರು ನಿಮ್ಮೊಂದಿಗೆ ಕೆಲಸ ಮಾಡಲು ನಿಜವಾಗಿಯೂ ಬಯಸುತ್ತಾರೆ. ಭಾರತದಲ್ಲಿ ಇದು ಉಲ್ಟಾ. ಇಲ್ಲಿ ಸ್ಪಂದನೆ ಸಿಗುವುದು ನಿಧಾನ. ಕೆಲವೊಮ್ಮೆ ನಿಮಗೆ ರಿಪ್ಲೈ ಬರೋದೇ ಇಲ್ಲ. ಅವರು ನೀಡುವ ಪಟ್ಟಿ ತೀರಾ ಅಸ್ಪಷ್ಟವಾಗಿರುತ್ತದೆ. ಈ ವಿಚಾರದಲ್ಲಿ ಭಾರತೀಯರು ಸುಧಾರಣೆ ಕಂಡರೆ ಬಹಳಷ್ಟು ಸ್ಟಾರ್ಟಪ್ ಸಂಸ್ಥಾಪಕರಿಗೆ ಸಹಾಯವಾಗುತ್ತದೆ. ಭಾರತವನ್ನು ನಿಜವಾಗಿಯೂ ಸ್ವಾವಂಬನೆ ಎಡೆಗೆ ಕೊಂಡೊಯ್ಯಬಹುದು’ ಎಂದು ಚಾಣಕ್ಯ ಶಾ ಅಭಿಪ್ರಾಯಪಟ್ಟಿದ್ದಾರೆ.

ಚಾಣಕ್ಯ ಶಾ ಅವರ ಎಕ್ಸ್ ಪೋಸ್ಟ್

ಅವರ ಈ ಎಕ್ಸ್ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿವೆ. ಹಲವು ಮಂದಿ ಇವರ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಭಾರತದ ಸರಬರಾಜುದಾರರ ಜೊತೆ ಡೀಲ್ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಕೆಲವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್

‘ತಂತ್ರಜ್ಞಾನದಲ್ಲಿ ನಾವು ಖಂಡಿತವಾಗಿ ಚೀನಾಗಿಂತ ಹಿಂದಿದ್ದೇವೆ. ಆದರೆ, ಧೋರಣೆ ಮತ್ತು ಮನೋಭಾವದಲ್ಲೂ ಹಿಂದಿದ್ದೇವೆ. ಯಾವ ಕ್ಲೈಂಟ್ ಆದರೂ ಸಣ್ಣವರೆಂದು ಚೀನೀಯರು ಭಾವಿಸುವುದಿಲ್ಲ. ಡೀಲ್ ಪೂರ್ಣಗೊಳಿಸಲು ಶ್ರಮಿಸುತ್ತಲೇ ಇರುತ್ತಾರೆ’ ಎಂದು ಒಬ್ಬರು ಉತ್ತರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Thu, 27 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ