ಭಾರತೀಯ ರೈಲ್ವೆಯಿಂದ ರೈಲು ಬೋಗಿಗಳನ್ನು ಖಾಸಗಿಯವರಿಗೆ ಭೋಗ್ಯಕ್ಕೆ ನೀಡಲು ಮತ್ತು ಮಾರಾಟ ಮಾಡಲು ನಿರ್ಧರಿಸಿದ್ದು, ಯೋಜನೆ ಸಿದ್ಧಪಡಿಸಿದೆ. ಸಂಸ್ಕೃತಿ- ಧಾರ್ಮಿಕ ಮತ್ತು ಪ್ರವಾಸಿ ಸರ್ಕ್ಯೂಟ್ ರೈಲುಗಳ ಥೀಮ್ ಆಧಾರದಲ್ಲಿ ಈ ತೀರ್ಮಾನ ಕೈಗೊಳ್ಳಲಿದೆ. ಸೆಪ್ಟೆಂಬರ್ 11ರ ಶನಿವಾರದಂದು ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಕಾರ್ಯಕಾರಿ ನಿರ್ದೇಶಕ (ED) ಮಟ್ಟದ ಸಮಿತಿಯನ್ನು ರೈಲ್ವೆ ಸಚಿವಾಲಯದಿಂದ ರಚಿಸಲಾಗಿದ್ದು, ಈ ಯೋಜನೆಗಾಗಿ ನಿಯಮ ಹಾಗೂ ನಿಬಂಧನೆಗಳನ್ನು ರೂಪಿಸಲಾಗಿದೆ.
ಇದರೊಂದಿಗೆ ವಿವಿಧ ಸೇವೆಗಳನ್ನು ಸಮನ್ವಯಗೊಳಿಸಲು, ಮಾರ್ಕೆಟಿಂಗ್, ಆತಿಥ್ಯ, ಗ್ರಾಹಕರನ್ನು ತಲುಪುವುದು, ಪ್ರವಾಸಿ ಸರ್ಕ್ಯೂಟ್ಗಳನ್ನು ಗುರುತಿಸುವುದು ಮತ್ತು ಇತರ ಎಲ್ಲ ಪ್ರವಾಸಿ ಚಟುವಟಿಕೆಗಳ ವ್ಯಾಪ್ತಿಯನ್ನು ನಿಯಂತ್ರಣದಲ್ಲಿ ತೆಗೆದುಕೊಳ್ಳಲು ರೈಲ್ವೆ ಅಧಿಕಾರಿಗಳು ಕೇಳಿದ್ದಾರೆ.
ಭಾರತೀಯ ರೈಲ್ವೆ ಪ್ರಕಾರ ಪ್ರಸ್ತಾವಿತ ಮಾಡೆಲ್ನ ವೈಶಿಷ್ಟ್ಯಗಳು ಹೀಗಿವೆ:
– ಆಸಕ್ತಿಕರ ಪಾರ್ಟಿಗಳಿಗೆ ಇಷ್ಟಪಡುವ ರೀತಿಯಲ್ಲಿ ಕಾನ್ಫಿಗರೇಷನ್ನಂತೆ ರೈಲು ಬೋಗಿಯನ್ನು ಭೋಗ್ಯಕ್ಕೆ ನೀಡಲಾಗುವುದು. ಆಸಕ್ತರು ಇಡಿಯಾಗಿ ಬೋಗಿಯನ್ನು ಖರೀದಿಸಬಹುದು.
– ಬೋಗಿಗಳ ಸಣ್ಣಪುಟ್ಟ ಮರು ಅಭಿವೃದ್ಧಿ, ಜತೆಗೆ ರೈಲುಗಳ ಟ್ರೇಡಿಂಗ್ ಅಥವಾ ಥರ್ಡ್ ಪಾರ್ಟಿ ಜಾಹೀರಾತಿಗೆ ಬೋಗಿಯೊಳಗೆ ಅವಕಾಶ ನೀಡಲಾಗುವುದು.
– ಕನಿಷ್ಠ 5 ವರ್ಷಗಳ ಅವಧಿಗೆ ಭೋಗ್ಯಕ್ಕೆ ಹಾಕಿಕೊಳ್ಳಬೇಕು ಮತ್ತು ಆ ಭೋಗ್ಯದ ಅವಧಿ ಬೋಗಿಯ ಕೋಡಲ್ ಜೀವಿತಾವಧಿ (ಸಾಮಾನ್ಯವಾಗಿ 25 ವರ್ಷಗಳಿರುತ್ತದೆ) ತನಕ ವಿಸ್ತರಣೆ ಆಗುತ್ತದೆ.
– ಯೋಜನೆ ಬಗ್ಗೆ ಆಸಕ್ತಿ ಇರುವ ಖಾಸಗಿ ಪಾರ್ಟಿಗಳು ಬಿಜಿನೆಸ್ ಮಾಡೆಲ್, ಮಾರ್ಗಗಳು, ಸಮಯ, ದರ, ಇತ್ಯಾದಿಗಳನ್ನು ಅಭಿವೃದ್ಧಿಪಡಿಸಬೇಕು.
– ಭಾರತೀಯ ರೈಲ್ವೆಯಿಂದ ಸಾಗಾಣಿಕೆ ಶುಲ್ಕಗಳು, ನಾಮಿನಲ್ ಸ್ಥಿರತೆ ಶುಲ್ಕಗಳು ಮತ್ತು ಗುತ್ತಿಗೆ ಶುಲ್ಕಗಳನ್ನು ವಿಧಿಸುತ್ತದೆ. ನಿರ್ವಹಣೆಗೆ ಯಾವುದೇ ಸಾಗಾಟ ಅನುಮತಿಸುವುದಿಲ್ಲ.
– ಆಸಕ್ತ ಪಾರ್ಟಿಗಳಿಗೆ ಸರಳ ನೋಂದಣಿ ಪ್ರಕ್ರಿಯೆ ಇರಲಿದೆ. ಅರ್ಹತೆ ಆಧಾರದ ಮೇಲೆ ಇದು ಲಭ್ಯ ಇರಲಿದೆ ಎಂದು ರೈಲ್ವೆ ಸಚಿವಾಲಯದಿಂದ ಹೇಳಲಾಗಿದೆ.
ಇದನ್ನೂ ಓದಿ: Consumer Dispute: ರೈಲು ತಡವಾಗಿದ್ದರಿಂದ ರೂ. 30 ಸಾವಿರ ನಷ್ಟ ಪರಿಹಾರ ಕಟ್ಟಿಕೊಡುವಂತೆ ರೈಲ್ವೇಸ್ಗೆ ಸುಪ್ರೀಂ ನಿರ್ದೇಶನ
(Indian Railways Planning To Lease Or Sell Rail Coaches To Private Parties Here Is The Details)
Published On - 10:34 pm, Sat, 11 September 21