RailOne: ರೈಲ್ವೇಸ್​​ನಿಂದ ಸೂಪರ್ ಆ್ಯಪ್ ಬಿಡುಗಡೆ; ಐಆರ್​ಸಿಟಿಸಿ, ರೈಲ್​ಕನೆಕ್ಟ್, ರೈಲ್ ಮದದ್ ಇತ್ಯಾದಿ ಸೇವೆಗಳೆಲ್ಲವೂ ರೈಲ್​ಒನ್​​ನಲ್ಲಿ ಲಭ್ಯ

RailOne app by Indian Railways: ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಅವರು ರೈಲ್ ಒನ್ ಎನ್ನುವ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ. ಟ್ರೈನ್ ಟಿಕೆಟ್, ಆಹಾರ, ಪ್ಲಾಟ್​ಫಾರ್ಮ್ ಟಿಕೆಟ್, ಟ್​ರೈನ್ ಸ್ಟೇಟಸ್ ಇತ್ಯಾದಿ ಎಲ್ಲಾ ಸೇವೆಗಳು ಲಭ್ಯ ಇರುವ ಸೂಪರ್ ಆ್ಯಪ್ ಇದು. ಐಆರ್​ಸಿಟಿಸಿ, ರೈಲ್ ಕನೆಕ್ಟ್, ರೈಲ್ ಮದದ್ ಇತ್ಯಾದಿ ಬೇರೆ ಬೇರೆ ಆ್ಯಪ್​ಗಳ ಬದಲು ಈ ಒಂದೇ ಆ್ಯಪ್ ಬಳಸಬಹುದು.

RailOne: ರೈಲ್ವೇಸ್​​ನಿಂದ ಸೂಪರ್ ಆ್ಯಪ್ ಬಿಡುಗಡೆ; ಐಆರ್​ಸಿಟಿಸಿ, ರೈಲ್​ಕನೆಕ್ಟ್, ರೈಲ್ ಮದದ್ ಇತ್ಯಾದಿ ಸೇವೆಗಳೆಲ್ಲವೂ ರೈಲ್​ಒನ್​​ನಲ್ಲಿ ಲಭ್ಯ
ರೈಲ್ವೇಸ್

Updated on: Jul 01, 2025 | 6:51 PM

ನವದೆಹಲಿ, ಜುಲೈ 1: ಭಾರತೀಯ ರೈಲ್ವೆ ಇಲಾಖೆ (Indian railways) ಇಂದು ಗುರುವಾರ ರೈಲ್ ಒನ್ (RailOne) ಎನ್ನುವ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ರೈಲ್ವೆ ಪ್ರಯಾಣಿಕರ ಎಲ್ಲಾ ಅಗತ್ಯಗಳನ್ನು ಪೂರೈಸಬಲ್ಲ ಸೂಪರ್ ಆ್ಯಪ್ ಇದು. ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್​​ನ (CRIS) 40ನೇ ಸಂಸ್ಥಾಪನಾ ದಿನವಾದ ಇಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ ಒನ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ರಿಸ್ ಸಂಸ್ಥೆಯು ಭಾರತೀಯ ರೈಲ್ವೆ ಇಲಾಖೆಗೆ ಪ್ರಮುಖ ಇನ್ಫಾರ್ಮೇಶ್ ಸಿಸ್ಟಂಗಳ ವಿನ್ಯಾಸ, ಅಭಿವೃದ್ಧಿ ಮತ್ತು ಜಾರಿ ಮಾಡುತ್ತದೆ.

ರೈಲ್​ಒನ್ ಆ್ಯಪ್ ಆಂಡ್ರಾಯ್ಡ್ ಮತ್ತು ಆ್ಯಪಲ್ ಪ್ಲಾಟ್​​ಫಾರ್ಮ್ ಎರಡರಲ್ಲೂ ಲಭ್ಯ ಇದೆ. ರೈಲ್ವೆಗೆ ಸಂಬಂಧಿತ ಯಾವುದೇ ಮಾಹಿತಿಯನ್ನು ಪಡೆಯಲು ಹಾಗೂ ಪ್ರಯಾಣಿಕರಿಗೆ ಅಗತ್ಯವಾಗಿರುವ ಯಾವುದೇ ಸೇವೆಯನ್ನು ಪಡೆಯಲು ಈ ಹೊಸ ಆ್ಯಪ್ ಉಪಯುಕ್ತವಾಗಿದೆ. ಐಆರ್​​ಸಿಟಿಸಿ, ರೈಲ್​ಕನೆಕ್ಟ್, ಯುಟಿ ಸನ್ ಮೊಬೈಲ್, ರೈಲ್ ಮದದ್ ಇತ್ಯಾದಿ ವಿವಿಧ ಪೋರ್ಟಲ್​​ಗಳು ನೀಡುವ ಸೇವೆಗಳನ್ನು ರೈಲ್ ಒನ್ ಆ್ಯಪ್​ವೊಂದರಲ್ಲೇ ಪಡೆಯಬಹುದು.

ಇದನ್ನೂ ಓದಿ: GST: ಜೂನ್​​ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್​​ಟಿ; ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಿದ ವಾರ್ಷಿಕ ಟ್ಯಾಕ್ಸ್ ಸಂಗ್ರಹ

ರೈಲ್ವೆ ಟಿಕೆಟ್ ಬುಕ್ ಮಾಡಲು ರೈಲ್ ಕನೆಕ್ಟ್ ಇದೆ. ರೈಲು ಪ್ರಯಾಣದ ವೇಳೆ ಊಟಕ್ಕೆ ಐಆರ್​​ಸಿಟಿಸಿ ಮೂಲಕ ಆರ್ಡರ್ ಮಾಡಬಹುದು. ಫೀಡ್​ಬ್ಯಾಕ್ ನೀಡಲು ರೈಲ್ ಮದದ್ ಬಳಸಬಹುದು. ರಿಸರ್ವ್ ಅಲ್ಲ ಟಿಕೆಟ್ ಖರೀದಿಸಲು ಯುಟಿ ಸನ್ ಮೊಬೈಲ್ ಬಳಸಬಹುದು. ಟ್ರೈನುಗಳ ಸಂಚಾರವನ್ನು ಗಮನಿಸಲು ನ್ಯಾಷನಲ್ ಟ್ರೈನ್ ಎನ್​ಕ್ವೈರಿಯನ್ನು ಉಪಯೋಗಿಸಬಹುದು.

ಈಗ ಈ ಮೇಲಿನ ಸೇವೆಗಳೆಲ್ಲವೂ ರೈಲ್​ಒನ್ ಆ್ಯಪ್​​ನಲ್ಲಿ ಲಭ್ಯ ಇರುತ್ತದೆ. ರೈಲ್ ಕನೆಕ್ಟ್ ಮತ್ತು ಯುಟಿಎಸ್ ಆ್ಯಪ್ ಬಳಸುತ್ತಿರುವ ವ್ಯಕ್ತಿಗಳು ಅದೇ ಲಾಗಿನ್ ಹೆಸರು ಮತ್ತು ಪಾಸ್​ವರ್ಡ್ ಬಳಸಿ ರೈಲ್ ಒನ್ ಆ್ಯಪ್​​ಗೆ ಲಾಗಿನ್ ಆಗಬಹುದು.

ಇದನ್ನೂ ಓದಿ: ಕೇಂದ್ರದಿಂದ RDI ಸ್ಕೀಮ್; ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜಿಸಲು ಸರ್ಕಾರದಿಂದ ಭರ್ಜರಿ ಯೋಜನೆ

ರೈಲ್​ಒನ್ ಆ್ಯಪ್​​ನಲ್ಲಿ ಸಿಗುವ ಸೇವೆಗಳು

  • ಟ್ರೈನುಗಳ ರಿಸರ್ವ್ಡ್ ಮತ್ತು ಅನ್​ರಿಸರ್ವ್ಡ್ ಟಿಕೆಟ್​ಗಳನ್ನು ಬುಕ್ ಮಾಡಬಹುದು
  • ಪ್ಲಾಟ್​ಫಾರ್ಮ್ ಟಿಕೆಟ್ ಬುಕಿಂಗ್
  • ಟ್ರೈನ್ ಬಗ್ಗೆ ವಿಚಾರಣೆ
  • ಪಿಎನ್​ಆರ್ ಸ್ಟೇಟಸ್ ಪರಿಶೀಲಿಸಬಹುದು
  • ಪ್ರಯಾಣ ಯೋಜಿಸಲು ಸಹಾಯ
  • ರೇಲ್ ಮದದ್ ಸೇವೆಗಳು ಲಭ್ಯ
  • ಟ್ರೈನ್​​ನಲ್ಲಿ ಊಟಕ್ಕೆ ಆರ್ಡರ್ ಬುಕ್ ಮಾಡಬಹುದು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ