ಕೇಂದ್ರದಿಂದ RDI ಸ್ಕೀಮ್; ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜಿಸಲು ಸರ್ಕಾರದಿಂದ ಭರ್ಜರಿ ಯೋಜನೆ
Cabinet approves RDI scheme with Rs 1 lakh crore outlay: ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜಿಸಲು ಸರ್ಕಾರವು ಆರ್ಡಿಐ ಸ್ಕೀಮ್ ತಂದಿದೆ. ಒಂದು ಲಕ್ಷ ಬಜೆಟ್ ಔಟ್ಲೇ ಇರುವ ಈ ಯೋಜನೆಗೆ ಕೇಂದ್ರ ಸಂಪುಟ ಜುಲೈ 1ರಂದು ಅನುಮೋದನೆ ನೀಡಿದೆ. ಆರ್ ಅಂಡ್ ಡಿಯಲ್ಲಿ ಖಾಸಗಿ ವಲಯದಿಂದ ಹೂಡಿಕೆ ಹೆಚ್ಚಾಗಲು ಈ ಸ್ಕೀಮ್ ಪ್ರೋತ್ಸಾಹಿಸುವ ಗುರಿ ಹೊಂದಿದೆ.

ನವದೆಹಲಿ, ಜುಲೈ 1: ಆರ್ ಅಂಡ್ ಡಿ ಚಟುವಟಿಕೆಯಲ್ಲಿ ಹಿಂದುಳಿದಿರುವ ದೇಶದಲ್ಲಿ ಅಂಥದ್ದೊಂದು ಪೂರಕ ವಾತಾವರಣ ನಿರ್ಮಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಆರ್ಡಿಐ ಸ್ಕೀಮ್ (RDI scheme) ಅನ್ನು ಸರ್ಕಾರ ರೂಪಿಸಿದೆ. ಒಂದು ಲಕ್ಷ ಕೋಟಿ ರೂ ಅನುದಾನದೊಂದಿಗೆ ಆರ್ಡಿಐ ಸ್ಕೀಮ್ ತರಲು ಕೇಂದ್ರ ಸಂಪುಟ ಇಂದು ಮಂಗಳವಾರ ಅನುಮೋದನೆ ನೀಡಿದೆ. ಸೋಲಾರ್ ಇತ್ಯಾದಿ ಉದಯೋನ್ಮುಖ ಕ್ಷೇತ್ರಗಳಲ್ಲಿ (sunrise sectors) ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜಿಸಲು ಈ ಸ್ಕೀಮ್ ನೆರವಾಗುವ ಉದ್ದೇಶ ಹೊಂದಿದೆ.
ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಪ್ರೋತ್ಸಾಹ ನೀಡಲು ಆರ್ಡಿಐ ಸ್ಕೀಮ್ ತರಲಾಗಿದೆ. ಖಾಸಗಿ ವಲಯದಲ್ಲಿ ಆರ್ಡಿಐಗೆ ಹೂಡಿಕೆ ಹೆಚ್ಚಿಸುವ ಗುರಿ ಇದೆ. ಬಡ್ಡಿರಹಿತವಾದ ಅಥವಾ ಅತ್ಯಲ್ಪ ಬಡ್ಡಿದರದಲ್ಲಿ ದೀರ್ಘಾವಧಿ ಸಾಲದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಇದನ್ನೂ ಓದಿ: ಇಎಲ್ಐ ಸ್ಕೀಮ್ಗೆ ಲಕ್ಷ ಕೋಟಿ ರೂ ಅನುದಾನ; ಕೇಂದ್ರ ಸಂಪುಟ ಅನುಮೋದನೆ; ಏನಿದು ಯೋಜನೆ?
ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಅಡಿಯಲ್ಲಿ ಆರ್ಡಿಐ ಸ್ಕೀಮ್ಗಾಗಿ ಆಡಳಿತ ಮಂಡಳಿ ರಚಿಸಲಾಗುತ್ತದೆ. ಒಂದು ವಿಶೇಷವಾದ ಸ್ಪೆಷಲ್ ಪರ್ಪೋಸ್ ಫಂಡ್ ಅನ್ನು ಸ್ಥಾಪಿಸಲಾಗುತ್ತದೆ. ಈ ಎಸ್ಪಿಎಫ್ ಮೂಲಕ ಆರ್ಡಿಐ ಸ್ಕೀಮ್ ಅನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಈ ಎಸ್ಪಿಎಫ್ ಮೊದಲ ಮಟ್ಟದ ಫಂಡ್ ಮ್ಯಾನೇಜರ್ ಆಗಲಿದ್ದು, ಸರ್ಕಾರದಿಂದ ಇದಕ್ಕೆ 50 ವರ್ಷದವರೆಗೆ ಬಡ್ಡಿರಹಿತವಾದ ಸಾಲವನ್ನು ನೀಡಲಾಗುತ್ತದೆ.
In a landmark move to strengthen India’s research and innovation ecosystem, the Union Cabinet, chaired by Prime Minister Shri @narendramodi Ji, has today approved the Research, Development and Innovation (RDI) Scheme, with an outlay of ₹1 lakh crore.
Acknowledging the pivotal… pic.twitter.com/tLjN8vKbtf
— Nitin Gadkari (@nitin_gadkari) July 1, 2025
ಆರ್ಡಿಐ ಸ್ಕೀಮ್ನ ಗುರಿ
ಭವಿಷ್ಯದಲ್ಲಿ ಬಹಳ ಅಗತ್ಯ ಇರುವ ಉದಯೋನ್ಮುಖ ಕ್ಷೇತ್ರಗಳು ಅಥವಾ ಸನ್ರೈಸರ್ ಸೆಕ್ಟರ್ಗಳಲ್ಲಿ ಆರ್ ಅಂಡ್ ಡಿ ಹೂಡಿಕೆಯನ್ನು ಉತ್ತೇಜಿಸುವುದು ಈ ಸ್ಕೀಮ್ನ ಪ್ರಮುಖ ಗುರಿಯಾಗಿದೆ.
ಇದನ್ನೂ ಓದಿ: AI in Banking: ಊಹೆಗೂ ನಿಲುಕದ ರೀತಿಯಲ್ಲಿ ಬದಲಾದ ಬ್ಯಾಂಕಿಂಗ್ ಸಿಸ್ಟಂ; ಎಐ ತಂದ ಬದಲಾವಣೆಗಳಿವು
ಬಹಳ ಅಗತ್ಯವಾಗಿರುವ ತಂತ್ರಜ್ಞಾನಗಳನ್ನು ಖರೀದಿಸಲು ಈ ಸ್ಕೀಮ್ ನೆರವು ನೀಡುತ್ತದೆ. ಡೀಪ್ ಟೆಕ್ ಫಂಡ್ ಸ್ಥಾಪಿಸಿ, ತಂತ್ರಜ್ಞಾನ ಅಭಿವೃದ್ಧಿಗೆ ಸಹಕಾರಿಯಾಗುವ ಗುರಿ ಈ ಸ್ಕೀಮ್ನದ್ದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Tue, 1 July 25